ಕಾರು- ಬೈಕ್ ಢಿಕ್ಕಿ :ಯುವಕನಿಗೆ ಗಂಭೀರ ಗಾಯ

ಕುಂಬಳೆ: ಕಾರು ಹಾಗೂ ಬೈಕ್ ಢಿಕ್ಕಿ ಹೊಡೆದು ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಚೇವಾರು ಕುಡಾಲು ಮೇರ್ಕಳದ ಬಾತಿಷ ಪಿ.ಎಚ್ (೨೪) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಂದ್ಯೋಡು ಅಡ್ಕದಲ್ಲಿ ಮೊನ್ನೆ ರಾತ್ರಿ ಈ ಅಪಘಾತ ಸಂಭವಿಸಿದೆ. ಬಾತಿಷ ಬೈಕ್‌ನಲ್ಲಿ ಚೇವಾರು ಭಾಗದಿಂದ ಬಂದ್ಯೋಡಿನತ್ತ ಬರುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕೇಂದ್ರ ಸರಕಾರದ ವಿರುದ್ಧ ದಿಲ್ಲಿಯಲ್ಲಿ ಸಿ.ಎಂ. ನೇತೃತ್ವದಲ್ಲಿ ಪ್ರತಿಭಟನೆ

ನವದೆಹಲಿ: ಕೇಂದ್ರ ನಿಧಿ ಹಂಚಿಕೆ ಯಲ್ಲಿ ಕೇಂದ್ರ ಸರಕಾರ ಕೇರಳದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಹಾಗೂ ಕೇಂದ್ರದ ಹಣಕಾಸು ನೀತಿಗಳು ಕೇರಳವನ್ನು ಆರ್ಥಿಕವಾಗಿ ಕುಗ್ಗಿಸುತ್ತಿವೆ ಎಂದು ಆರೋಪಿಸಿ ಮತ್ತು ಅಂತಹ ನೀತಿಗಳನ್ನು ಪ್ರತಿಭಟಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನವದೆಹಲಿಯಲ್ಲಿ ಜಂತರ್-ಮಂತರ್ ನಲ್ಲಿ ಪ್ರತಿಭಟನಾ ಆಂದೋಲನ ಆರಂಭಿಸಲಾಗಿದೆ. ಇಂದು ಬೆಳಿಗ್ಗೆ ಆರಂಭಗೊಂಡ ಈ ಪ್ರತಿಭಟನೆಯಲ್ಲಿ ಕೇರಳ ಸಚಿವ ಸಂಪುಟದ ಸಹೋದ್ಯೋ ಗಿಗಳು, ಎಡರಂಗದ ಸಂಸದರು ಮತ್ತು ಶಾಸಕರು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಡಿಎಂಕೆ, ಆರ್‌ಜೆಡಿ ನ್ಯಾಷನಲ್ ಕಾನ್ಫರೆನ್ಸ್, ಜೆ.ಎಂ.ಎಂ, …

ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರ ಸೆರೆ

ಉಪ್ಪಳ: ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರನ್ನು ಮಂಜೇಶ್ವರ ಠಾಣೆ ಎಸ್‌ಐ ದಿನೇಶ್ ಬಂಧಿಸಿ ದ್ದಾರೆ. ಕರ್ನಾಟಕದ ಪುತ್ತೂರು ಚಾಮುಂಡಿಮೂಲೆ ನಿವಾಸಿಗಳಾದ ಅಬು ಹನೀಫ್ (೩೨), ಮೊಹ ಮ್ಮದ್ ಜಾಬಿರ್ (೩೨) ಎಂಬಿ ವರು ಬಂಧಿತ ವ್ಯಕ್ತಿಗಳು. ಇವರು ನಿನ್ನೆ ರಾತ್ರಿ ಬಾಯಿಕಟ್ಟೆಯಲ್ಲಿ ಗಾಂಜಾ ಬೀಡಿ ಸೇದುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

‘ಕೇರಳ ವಿಜ್ಞಾನ ಕಾಂಗ್ರೆಸ್’ಗೆ ಚಾಲನೆ: ನಾಳೆ ಮುಖ್ಯಮಂತ್ರಿಯಿಂದ ಉದ್ಘಾಟನೆ

ಕಾಸರಗೋಡು: ಯುವ ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಪರಸ್ಪರ ಸಂವಾದ ನಡೆಸಿ ಅದರಿಂದಇನ್ನಷ್ಟು ಹೆಚ್ಚಿನ  ಜ್ಞಾನಾರ್ಜನೆ ಪಡೆಯುವ ಅತೀ ಮಹತ್ತರವಾದ ಉದ್ದೇಶದಿಂದ ನಡೆಸಲಾಗುವ ‘ಕೇರಳ ವಿಜ್ಞಾನ ಕಾಂಗ್ರೆಸ್’ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ಇದು ಫೆ.೧೧ರ ತನಕ ಮುಂದುವರಿಯಲಿದೆ. ಇದರ ಔದ್ಯೋಗಿಕ ಉದ್ಘಾಟನೆಯನ್ನು ನಾಳೆ ಬೆಳಿಗ್ಗೆ ೧೦ ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸುವರು. ಇಂದಿನಿಂದ ಮುಂದಿನ ನಾಲ್ಕು ದಿನಗಳ ತನಕ  ಮುಂದುವರಿಯುವ ವಿಜ್ಞಾನ ಅರಿವು ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತವಾಗಿ ೪೨೪ ಯುವ ವಿಜ್ಞಾನಿಗಳು ಭಾಗವಹಿಸುತ್ತಿದ್ದಾರೆ. …

ಮೊಗ್ರಾಲ್‌ನಲ್ಲಿ ರೈಲ್ವೇಯಿಂದ ದಾರಿಮೊಟಕು: ಸ್ಥಳೀಯರ ಸಂಚಾರಕ್ಕೆ ತಡೆ

ಮೊಗ್ರಾಲ್: ಜನವಾಸ ವಲಯಗಳಲ್ಲಿ ದಾರಿಯನ್ನು ಮುಚ್ಚಿ ರೈಲ್ವೇ ಅಧಿಕಾರಿಗಳು ವಿದ್ಯಾರ್ಥಿಗಳ ಮದ್ರಸ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿ ಪಡಿಸುತ್ತಿರುವುದಾಗಿ ದೂರಲಾಗಿದೆ. ಮಂಗಳೂರು- ಕಲ್ಲಿಕೋಟೆ ಮಧ್ಯೆ ಹೆಚ್ಚುವರಿ ರೈಲು ಗಾಡಿಗಳನ್ನು ಓಡಿಸುವ ವಿಷಯ ರೈಲ್ವೇ ಸಚಿವಾಲಯ ಪರಿಗಣಿಸುತ್ತಿರುವ ಮಧ್ಯೆ ರೈಲು ಹಳಿಗಳಲ್ಲಿ ಸುರಕ್ಷಿತತೆ ಹೆಚ್ಚಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಇದರಂತೆ ಮೊಗ್ರಾಲ್ ಕೊಪ್ಪಳಂ ಜುಮಾ ಮಸೀದಿ ರಸ್ತೆ ಮುಚ್ಚಿದ ಬೆನ್ನಲ್ಲೇ ಮೊಗ್ರಾಲ್ ಮಿಲಾದ್ ನಗರದಲ್ಲಿ ಹಳಿ ದಾಟುವುದನ್ನು ತಡೆದಿದ್ದಾರೆ. ಇದರಿಂದಾಗಿ  ನಾಂಗಿ ಕಡಪ್ಪುರ, ಗಾಂಧಿನಗರ ಎಸ್.ಸಿ. ಕಾಲನಿಯ …

೨.೭ಲೀಟರ್ ಕರ್ನಾಟಕ ಮದ್ಯ ವಶ ಸ್ಕೂಟರ್ ಕಸ್ಟಡಿಗೆ

ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ.ರ ನೇತೃತ್ವದ ತಂಡ ಚೆಂಗಳ ವಿ.ಕೆ. ಪಾರದಲ್ಲಿ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ೨.೭ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ವಿ.ಕೆ. ಪಾರದ ಮನೋಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಆತ ಆ ವೇಳೆ ಪರಾರಿ ಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡಗಳು ಎಇಐ ಗ್ರೇಡ್ ರಾಜೀವನ್ ಎ.ವಿ, ಸಿಇಒಗಳಾದ ರಾಜೇಶ್ ಪಿ, …

ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಮುಂಬೈ: ಹಣದುಬ್ಬರದ ಮೇಲೆ ಬಿಗಿಯಾದ ಜಾಗರೂ ಕತೆಯನ್ನು ಕಾಯ್ದುಕೊಳ್ಳು ತ್ತಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೋದರವನ್ನು ಯಥಾಸ್ಥಿತಿಯಲ್ಲಿ ಮುಂ ದುವರಿಸಲು ನಿರ್ಧರಿಸಿದೆ. ಮೇ ೨೦೨೨ರಿಂದ ಸತತ ಆರು ದರ ಏರಿಕೆಗಳ ನಂತರ ೨೫೦ ಬೇಸಿಸ್ ಪಾಯಿಂಟ್‌ಗಳಿಗೆ ಒಟ್ಟುಗೂಡಿದ ನಂತರ ಕಳೆದ ವರ್ಷ ಎಪ್ರಿಲ್‌ನಲ್ಲಿ  ದರ ಹೆಚ್ಚಳ ಚಕ್ರವನ್ನು ವಿರಾಮಗೊಳಿ ಸಲಾಗಿದೆ. ದ್ವೈ ಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು  ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ …

ಹೊಸಂಗಡಿಯಲ್ಲಿ ಹೊಸ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಿದ್ಧತೆ: ಪೇಟೆಯ ದಟ್ಟಣೆಗೆ ನೆಮ್ಮದಿ ನಿರೀಕ್ಷೆ

ಹೊಸಂಗಡಿ: ಪೇಟೆಯಲ್ಲಿ ಕಂಡು ಬರುವ ವಾಹನ ದಟ್ಟಣೆಗೆ ಅಲ್ಪ ಶಮನವಾಗುವ ಸಾಧ್ಯತೆ ಕಂಡು ಬರುತ್ತಿದೆ. ಹೊಸಂಗಡಿಯಲ್ಲಿ ಕೆಳಸ್ತರದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಶೀಘ್ರ ತೆರೆದುಕೊಡಲಾಗುವುದೆಂದು ತಿಳಿದು ಬಂದಿದೆ. ಹೀಗಾದರೆ ಮಂಗಳೂರು ಭಾಗದಿಂದ ಕಾಸರಗೋಡು ಭಾಗದತ್ತ ತೆರಳುವ ವಾಹನಗಳು ಇನ್ನು ಕೆಳಗಿನ ರಸ್ತೆಯಲ್ಲಿ ಸಂಚರಿಸಲಿದೆ. ಪ್ರಸ್ತುತ ಅಗಲ ಕಿರಿದಾದ ರಸ್ತೆಯಲ್ಲಿ ಎರಡೂ ಕಡೆಗಳಿಗೆ ವಾಹನ ಸಂಚರಿಸುತ್ತಿದ್ದು ಇದರಿಂದ ವಾಹನ ದಟ್ಟಣೆ ಉಂಟಾಗಿ ರಸ್ತೆ ತಡೆ ಸೃಷ್ಟಿಯಾಗುತ್ತಿತ್ತು. ಕಳೆದ ಹಲವಾರು ತಿಂಗಳಿಂದ ಇಲ್ಲಿ ಕಾಮಗಾರಿ ನಡೆದು ಬರುತ್ತಿದೆ. ಈ ಮಧ್ಯೆ …

ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಕಟ್ಟಡ ಲೋಕಾರ್ಪಣೆ ನಾಳೆ

ಉಪ್ಪಳ : ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ನಯಾ ಬಝಾರ್‌ನ ಅಂಬಾರು ಚೆರು ಗೋಳಿ ರಸ್ತೆ ಸಮೀಪ ನಿರ್ಮಿಸಿದ ನೂತನ ಕಟ್ಟಡ ಲೋಕಾರ್ಪಣೆ ನಾಳೆ ಬೆಳಿಗ್ಗೆ 9.30ಕ್ಕೆ ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಉದ್ಘಾಟಿಸುವರು. ಶಾಸಕ ಎಕೆಎಂ ಆಶ್ರಫ್ ಅಧ್ಯಕ್ಷತೆವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಭದ್ರತಾ ಕೊಠಡಿಯನ್ನು ಉದ್ಘಾಟಿಸು ವರು. ಶಾಸಕರಾದ ಸಿ.ಎಚ್. ಕುಂಞAಬು, ಎನ್.ಎ.ನೆಲ್ಲಿಕುನ್ನು, ರಾಜ್ಯ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸಿ.ಕೆ.ಶಾಜಿ ಮೋಹನ್ ಮುಖ್ಯ …

ಕಾನೂನು ಉಲ್ಲಂಘಿಸಿ ವಾಹನ ಚಾಲನೆ ವ್ಯಾಪಕ: ಕಠಿಣ ಕ್ರಮಗಳತ್ತ ಪೊಲೀಸ್

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ.   ಪ್ರಾಯಪೂರ್ತಿಯಾಗದವರು ಹಾಗೂ ಪ್ರಾಯ ಪೂರ್ತಿ ಯಾದರೂ ಲೈಸನ್ಸ್ ಪಡೆಯದೆ ವಾಹನ ಚಲಾಯಿಸುತ್ತಿರುವುದು ವ್ಯಾಪಕಗೊಂ ಡಿದೆಯೆಂದು ಪೊಲೀಸರು ತಿಳಿಸಿ ದ್ದಾರೆ. ನಿನ್ನೆ ಸಂಜೆ ಎಸ್‌ಐ ನಿಖಿಲ್ ನೇತೃತ್ವದಲ್ಲಿ ಬಾಯಿಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಪ್ರಾಯಪೂರ್ತಿಯಾಗದ ಬಾಲಕ ಸ್ಕೂಟರ್ ಚಲಾಯಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಈ ಸಂಬಂಧ ಸ್ಕೂಟರ್‌ನ ಆರ್‌ಸಿ ಮಾಲಕನಾದ ಪೈವಳಿಕೆ ಪಾಕ ಹೌಸ್‌ನ ಅಬ್ದುಲ್ ರಹಿಮಾನ್ ವಿರುದ್ಧ ಕೇಸು ದಾಖಲಿಸಲಾಗಿದೆ. ಅಲ್ಲದೆ ಸ್ಕೂಟರ್ ಕಸ್ಟಡಿಗೆ …