ಕೆ.ಪಿ.ಸಿ.ಸಿ ಯ ‘ಸಮರಾಗ್ನಿ’ ಆಂದೋಲನ ಯಾತ್ರೆ ನಾಳೆ ಆರಂಭ
ಕಾಸರಗೋಡು: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಕೆ.ಪಿ.ಸಿ.ಸಿ ಅಧ್ಯಕ್ಷ ಕೆ. ಸುಧಾಕರನ್ ಹಾಗೂ ವಿಪಕ್ಷ ನೇತಾರ ವಿ.ಡಿ. ಸತೀಶನ್ ನೇತೃತ್ವದಲ್ಲಿ ಹಮ್ಮಿಕೊಂಡ ಆಂದೋಲನ ಯಾತ್ರೆ ‘ಸಮರಾಗ್ನಿ’ ನಾಳೆ ಕಾಸರಗೋಡಿನಿಂದ ಆರಂಭಗೊಳ್ಳಲಿದೆ. ವಿದ್ಯಾನಗರದ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಾಳೆ ಅಪರಾಹ್ನ ೩ ಗಂಟೆಗೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲನ್ ಉದ್ಘಾಟಿಸು ವರು. ಕೇರಳದ ಹೊಣೆಗಾರಿಕೆಯುಳ್ಳ ಎಐಸಿಸಿ ಸೆಕ್ರೆಟರಿ ದೀಪಾದಾಸ್ ಮುನ್ಶಿ, ರಮೇಶ್ ಚೆನ್ನಿತ್ತಲ, ಸಂಸದ ರಾದ ಶಶಿ ತರೂರ್, ಕೊಡಿಕುನ್ನಿಲ್ ಸುರೇಶ್ ಮೊದಲಾದವರು ಭಾಗವಹಿಸುವರು. …
Read more “ಕೆ.ಪಿ.ಸಿ.ಸಿ ಯ ‘ಸಮರಾಗ್ನಿ’ ಆಂದೋಲನ ಯಾತ್ರೆ ನಾಳೆ ಆರಂಭ”