ನಾಪತ್ತೆಯಾಗಿದ್ದ ಬಾಲಕ ಪತ್ತೆ

ಕುಂಬಳೆ: ಮೊನ್ನೆ ಸಂಜೆ ಯಿಂದ ನಾಪತ್ತೆಯಾಗಿದ್ದ ಬಾಲಕ ನಿನ್ನೆ ಕುಂಬಳೆಯಲ್ಲಿ ಪತ್ತೆಯಾಗಿದ್ದಾನೆ. ಕುಂಬಳೆ ಬಳಿಯ ಮಾವಿನ ಕಟ್ಟೆ ಪಿ.ವಿ.ಎಸ್ ಕಂಪೌಂಡ್‌ನ ನಿವಾಸಿ ಮುಹಮ್ಮದ್ ಶಾಕಿಬ್ (೧೫) ಮೊನ್ನೆ ಸಂಜೆಯಿಂದ ನಾಪತ್ತೆಯಾಗಿದ್ದನು. ಈ ಬಗ್ಗೆ ದೂರು ಲಭಿಸಿದ ಪೊಲೀಸರು ಹುಡುಕಾಡುತ್ತಿದ್ದಂತೆ ನಿನ್ನೆ ಕುಂಬಳೆಯಲ್ಲಿ ಪತ್ತೆಯಾಗಿದ್ದಾನೆ. ಈತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಮನೆ ಯವರೊಂದಿಗೆ ಕಳುಹಿಸಿ ಕೊಡಲಾಯಿತು.

ಕೇರಳದ ಮೂರು ಕ್ಷೇತ್ರಗಳ ಬಿಜೆಪಿ ಉಮೇದ್ವಾರರ ಘೋಷಣೆ ಮುಂದಿನ ವಾರ

ತೃಶೂರು: ಕೇರಳದ ಒಟ್ಟು ೨೦ ಲೋಕಸಭಾ ಕ್ಷೇತ್ರಗಳ ಪೈಕಿ ತೃಶೂರು ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳ ಉಮೇದ್ವಾರರನ್ನು ಬಿಜೆಪಿ ಮುಂದಿನವಾರ ಪ್ರಕಟಿಸುವ ಸಾಧ್ಯತೆಯಿದೆ. ತೃಶೂರಿನಲ್ಲಿ ನಟ ಸುರೇಶ್ ಗೋಪಿ ಸ್ಪರ್ಧಿಸುವರೆಂದು ಈಗಾಗಲೇ ಖಚಿತಗೊಂಡಿದೆ. ತಿರುವನಂತಪುರ ಮತ್ತು ಪತ್ತನಂತಿಟ್ಟ ಲೋಕಸಭಾ ಕ್ಷೇತ್ರಗಳು ಬಿಜೆಪಿ ಪ್ರಧಾನವಾಗಿ ತನ್ನ ಗುರಿಯನ್ನಾಗಿಸಿದೆ. ಮುಂದಿನ ಲೋಕಸಭಾ ಚನಾವಣೆಯಲ್ಲಿ ಐದು ಸೀಟುಗಳನ್ನು ಗೆಲ್ಲುವ ತುಂಬು ನಿರೀಕ್ಷೆಯನ್ನು ಬಿಜೆಪಿ ವ್ಯಕ್ತಪಡಿಸಿದೆ.

ಟ್ಯಾಂಕರ್ ಲಾರಿ ೩ ವಾಹನಗಳಿಗೆ ಢಿಕ್ಕಿ ಹೊಡೆದು ಪಲ್ಟಿ: ೮ ಮಂದಿಗೆ ಗಾಯ

ಕಣ್ಣೂರು: ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಲಾರಿ ಇತರ ವಾಹನಗಳಿಗೆ ಢಿಕ್ಕಿ ಹೊಡೆದು ಮಗುಚಿಬಿದ್ದು ಚಾಲಕ ಸಹಿತ ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ. ಪಿಲಾತ್ತರ-ಪಯ್ಯನ್ನೂರು ಮಧ್ಯೆ ಪಳಯಂಗಾಡಿ ಸೇತುವೆಯಲ್ಲಿ ಇಂದು ಮುಂಜಾನೆ ೧.೩೦ರ ವೇಳೆ ಅಪಘಾತವುಂಟಾಗಿದೆ. ಮಂಗಳೂರಿನಿಂದ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದೆ.  ಟ್ರಾವಲರ್ ಸಹಿತ ಮೂರು ವಾಹನಗಳಿಗೆ ಢಿಕ್ಕಿ ಹೊಡೆದು ಟ್ಯಾಂಕರ್ ಲಾರಿ ಮಗುಚಿ ಬಿದ್ದಿದೆ. ಅನಿಲ ಸೋರಿಕೆಯಾಗ ದಿರುವುದರಿಂದ ಭಾರೀ ದುರಂತ ತಪ್ಪಿದೆ. ಅಪರಿಮಿತ ವೇಗದಲ್ಲಿ ಸಂಚರಿಸಿದ ಟ್ಯಾಂಕರ್ ಲಾರಿ  ಮೊದಲು …

ಆದಿವಾಸಿ ಕ್ಷೇಮಸಮಿತಿಯಿಂದ ಬಾಯಾರು ವಿಲ್ಲೇಜ್ ಕಚೇರಿಗೆ ಮಾರ್ಚ್

ಪೈವಳಿಕೆ: ಒಂದೇ ಸ್ಥಳವನ್ನು ಇಬ್ಬರಿಗೆ ನೀಡಿದ ಬಾಯಾರ್ ವಿಲ್ಲೇಜ್‌ನ ಪಾದೆಕಲ್ಲು ಆರ್‌ಎಸ್.ನಂ.೧೧೩ರ ಸ್ಥಳದ ಬಗ್ಗೆ ತನಿಖೆ ನಡೆಸಬೇಕು, ಎಸ್‌ಟಿಯವರಿಗೆ ನೀಡಿದ ಸ್ಥಳವನ್ನು ಅತಿಕ್ರಮಿಸಿ ಬೇಲಿ ಹಾಕಿರುವುದನ್ನು ತೆಗೆದು ಎಸ್‌ಟಿಯವರ ಸ್ಥಳವನ್ನು ಅಳತೆ ಮಾಡಿ ನೀಡಬೇಕು, ಕರ್ನಾಟಕದಿಂದ ಮದುವೆಯಾಗಿ ಬಂದವರಿಗೆ ಕೇರಳದಲ್ಲಿ ಜಾತಿ ಪ್ರಮಾಣಪತ್ರ ಲಭಿಸುವುದಿಲ್ಲ. ಇದನ್ನು ಲಭ್ಯಗೊಳಿಸಬೇಕು, ಎಸ್‌ಟಿ ವಿಭಾಗದವರ ಮೇಲೆ ನಡೆಯುವ ದೌರ್ಜನ್ಯ, ಅವಗಣನೆಯನ್ನು ಕೊನೆಗೊಳಿಸಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟು ಆದಿವಾಸಿ ಕ್ಷೇಮ ಸಮಿತಿ ಬಾಯಾರು ವಿಲ್ಲೇಜ್ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ಎ.ಕೆ.ಎಸ್. ಬಾಯಾರು …

ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ: ನಾಳೆ ೩೬೦೦೩೫ ಮಕ್ಕಳಿಗೆ ಮಾತ್ರೆ ವಿತರಣೆ

ಕಾಸರಗೋಡು: ನಾಳೆ ರಾಷ್ಟ್ರೀಯ ಜಂತುಹುಳು ವಿಮುಕ್ತ ದಿನವಾಗಿ ಆಚರಿಸಲಾಗುವುದು. ದಿನಾಚರಣೆಯಂಗ ವಾಗಿ ೧ರಿಂದ ೧೯ ವರ್ಷದವರೆಗಿನ ಮಕ್ಕಳಿಗೆ ಹುಳುನಾಶಕ ಆಲ್‌ಬೆಂಡ್ ಜೋಲ್ ಮಾತ್ರೆಗಳನ್ನು ನೀಡಲಾಗು ವುದು. ಮಣ್ಣಿನ ಮೂಲಕ ಹರಡುವ ಜಂತು ಹುಳುಗಳು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದುಕೊಂ ಡಿದೆ. ೬೫ ಶೇ. ಮಕ್ಕಳಿಗೂ ಜಂತು ಹುಳು ಬಾಧೆ ಇದೆ ಎಂದು ವರದಿಗಳು ತಿಳಿಸುತ್ತಿವೆ. ಆಯಾಸ, ಪೌಷ್ಠಿಕತೆಯ ಕೊರತೆ, ಹಸಿವಿಲ್ಲದಿರುವುದು, ವಾಂತಿ, ಬೇಧಿ, ಮಲದಲ್ಲಿ ರಕ್ತ ಇದೆಲ್ಲ ಜಂತು ಹುಳದಿಂದಾಗಿ ಉಂಟಾಗುವ ಲಕ್ಷಣಗಳು. ಹಣ್ಣು ಹಾಗೂ ತರಕಾರಿಗಳನ್ನು …

ಗೋಪಾಲ ಚೆಟ್ಟಿಯಾರ್ ನಿಧನಕ್ಕೆ ನುಡಿನಮನ

ಉಪ್ಪಳ: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಜೇಷ್ಟ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ [78] ನಿಧನಕ್ಕೆ ನುಡಿನಮನ ಕಾರ್ಯಕ್ರಮ ನಿನ್ನೆ ಅವರ ಮನೆಯಲ್ಲಿ ನಡೆಯಿತು. ಕೇರಳ ಪ್ರಾಂತ ಸಂಘ ಚಾಲಕ್ ಕೆ.ಕೆ ಬಲರಾಂ, ಕರ್ನಾಟಕ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ನುಡಿನಮನ ಸಲ್ಲಿಸಿದರು. ಕರ್ನಾಟಕದ ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಾಜಿ ಶಾಸಕ ಎಸ್.ಅಂಗಾರ, ಕಣ್ಣೂರು ವಿಭಾಗ ಸಹ ಸಂಘಚಾಲಕ್ ಎನ್.ಸಿ.ಟಿ ರಾಜಗೋಪಾಲ್, ಕರ್ನಾಟಕದ ಹಿರಿಯ ಪ್ರಚಾರಕ ದಾ.ಮ ರವೀಂದ್ರ, ಪ್ರಾಂತ ಸಹ ಪ್ರಚಾರಕ್, …

ಬಿ.ಎಂ.ಎಸ್ ಪುತ್ತಿಗೆ ಪಂಚಾಯತ್ ನಿರ್ಮಾಣ ಯೂನಿಯನ್ ಸಮ್ಮೇಳನ

ಉಪ್ಪಳ: ಬಿಎಂಎಸ್‌ನ ಪುತ್ತಿಗೆ ಪಂಚಾಯತ್ ನಿರ್ಮಾಣ ಘಟಕ ಸಮ್ಮೇಳನ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಜರಗಿತು. ಸೀತಾಂಗೋಳಿ ಯೂನಿಟ್ ಅಧ್ಯಕ್ಷ ನಾಗೇಶ್ ಆಚಾರ್ಯ ಬಿ ಅಧ್ಯಕ್ಷತೆ ವಹಿಸಿದರು. ಯೂನಿಯನ್ ಜಿಲ್ಲಾಧ್ಯಕ್ಷ ಅನಿಲ್ ಬಿ ನಾಯರ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಐತ್ತಪ್ಪ ನಾರಾಯಣಮಂಗಲ ಮಾತನಾಡಿದರು. ರಾಜಮೋಹನ್ ಪಿ, ರಾಮಚಂದ್ರ ಕುಲಾಲ್, ರಾಜು ಬಿ ಭಾಗವಹಿಸಿದರು.

ಮಧೂರು-ಕೊಲ್ಲಂಗಾನ ರಸ್ತೆಯಲ್ಲಿ ವಾಹನ ನಿಯಂತ್ರಣ

ಕಾಸರಗೋಡು: ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಮಧೂರು ಪಟ್ಲ ಕೊಲ್ಲಂಗಾನ ರಸ್ತ್ತೆಯಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ತಿಂಗಳ ೯ರಿಂದ ಮಾರ್ಚ್ ೨೫ರ ವರೆಗೆ ವಾಹನ ಸಂಚಾರಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ. ಈ ಸಮಯದಲ್ಲಿ ಚರ್ಲಡ್ಕದಿಂದ ಕಾಸರಗೋಡಿಗೆ ತೆರಳಬೇಕಾದ ವಾಹನಗಳು ಮಾನ್ಯ ಬಿಲಾಲ್ ಮಸೀದಿ ಸಮೀಪದಲ್ಲಾಗಿ ಮೇಘನಡ್ಕ ದೇವರಕೆರೆ ಮೂಲಕ ವಿದ್ಯಾನಗರ ಮುಂಡ್ಯತ್ತಡ್ಕ ರಸ್ತೆ ಮೂಲಕ ಹಾಗೂ ಹಿಂತಿರುಗಿ ತೆರಳಬೇಕೆಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್: ರಾತ್ರಿ ವೇಳೆ ಬಸ್ ಸೌಕರ್ಯ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್‌ಗೆ ವಿವಿಧೆಡೆಗಳಿಂದ ಜನ ಆಗಮಿ ಸುತ್ತಿದ್ದು, ಇವರ ಸೌಕರ್ಯಾರ್ಥ ಸೀತಾಂಗೋಳಿ, ಅಂಗಡಿಮೊಗರು, ಧರ್ಮತ್ತಡ್ಕ, ಪೆರ್ಮುದೆ, ಬಂದ್ಯೋಡು, ಉಪ್ಪಳ, ಕೊಡ್ಯಮೆ, ಬಂಬ್ರಾಣಗಳಿಂದ ರಾತ್ರಿ ವೇಳೆ ಬಸ್ ಸಂಚಾರ ಏರ್ಪಡಿಸಲಾಗಿದೆ. ನಿನ್ನೆ ರಾತ್ರಿ ಮುಳ್ಳೂರ್‌ಕರ ಮುಹಮ್ಮದಲಿ ಸಖಾಫಿ ಪ್ರವಚನ ನೀಡಿದರು. ಇಂದು ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಪ್ರವಚನ ನೀಡುವರು.

ಬಿಎಂಎಸ್ ಟೈಲರಿಂಗ್ ಯೂನಿಟ್ ಸಮ್ಮೇಳನ

ಉಪ್ಪಳ: ಬಿ.ಎಂ.ಎಸ್ ಟೈಲ ರಿಂಗ್ ಕಾರ್ಮಿಕರ ಸಂಘ ನಾರಾ ಯಣ ಮಂಗಲ ಘಟಕದ ಸಮ್ಮೇಳನ. ನಾರಾಯಣ ಮಂಗಲದಲ್ಲಿ ಜರಗಿತು .ಅಧ್ಯಕ್ಷತೆಯನ್ನು ಯೂನಿಟ್ ಅಧ್ಯಕ್ಷೆ ನಾಗವೇಣಿ ದಿನೇಶ್ ವಹಿಸಿದರು. ಬಿ. ಎಂ .ಎಸ್ . ಜಿಲ್ಲಾ ಉಪಾಧ್ಯÀ್ಯಕ್ಷ ಶ್ರೀನಿವಾಸನ್ ಉದ್ಘಾಟಿಸಿದರು. ಕುಂ ಬಳೆ ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಮುಂದಿನ ಕಾರ್ಯಕ್ರಮಗಳನ್ನು ವಿವರಿಸಿದರು. ಯೂನಿಟಿನ ಕಾರ್ಯದರ್ಶಿ ವಿಶಾಲಾಕ್ಷಿ ಗಣೇಶ್ ಸ್ವಾಗತಿಸಿ, ಸುಹಾಸಿನಿ ಗೋಪಾಲಕೃಷ್ಣ ವಂದಿಸಿದರು.