ಕೇರಳ ವಿಜ್ಞಾನ ಕಾಂಗ್ರೆಸ್ ನಾಳೆಯಿಂದ

ಕಾಸರಗೋಡು: ಕೇರಳ ವಿಜ್ಞಾನ ಕಾಂಗ್ರೆಸ್ ನಾಳೆ ಬೆಳಿಗ್ಗೆ ೧೧ ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಆರಂಭಗೊಳ್ಳಲಿದೆ. ಇದು ಫೆ. ೧೧ರ ತನಕ ಮುಂದುವರಿಯಲಿದೆ. ನಾಳೆ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು.  ವಿಜ್ಞಾನ ಕಾಂಗ್ರೆಸ್‌ನ್ನು ೯ರಂದು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಮಾತ್ರವಲ್ಲ ಐಸಿಸಿಎಸ್ ತಯಾರಿಸಿದ ಕ್ಲೈಮೆಟ್ ಸ್ಟೇಟ್‌ಮೆಂಟ್-೨೦೨೩ನ್ನು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಪ್ರಕಾಶನಗೈಯ್ಯುವರು. ಅತ್ಯುತ್ತಮ ಯುವ ವಿಜ್ಞಾನಿಗಳಿಗಿರುವ ಪುರಸ್ಕಾರ ಮತ್ತು ವಿಜ್ಞಾನ ಸಾಹಿತ್ಯ ಪುರಸ್ಕಾರಗಳ ವಿತರಣೆಯನ್ನು ಮುಖ್ಯಮಂತ್ರಿ ನಡೆಸುವರು. …

ದೈಹಿಕ ಶಿಕ್ಷಕ ಸಂಘಟನೆಯ ಜಿಲ್ಲಾ ಸಮ್ಮೇಳನ

ಕಾಸರಗೋಡು: ಜಿಲ್ಲಾ ಶಾಲಾ ದೈಹಿಕ  ಶಿಕ್ಷಕ ಸಂಘಟನೆಯ ಜಿಲ್ಲಾ ಸಮ್ಮೇಳನ ಕಾಸರಗೋಡಿನಲ್ಲಿ  ಜರಗಿತು. ಎಲ್ಲಾ ಶಾಲೆಗಳಲ್ಲಿ ಶಾರೀರಿಕ ಶಿಕ್ಷಕರನ್ನು ನೇಮಿಸಬೇಕು, ಹೈಸ್ಕೂಲ್ ವೇತನವನ್ನು ನೀಡಬೇಕು. ಸರಕಾರಕ್ಕೆ ನೀಡಿರುವ ಖಾದರ್  ಸಮಿತಿಯ ವರದಿಯನ್ನು ಮರುಪರಿಶೀಲನೆ ಮಾಡಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.   ಕಾಸರಗೋಡು  ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಖಜಾಂಚಿ ಕೆ. ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಶಶಿಕಾಂತ ಜಿ ಆರ್, ಮಧುಸೂದನ, ಪ್ರೀತಿ ಮೋಳ್, ಅಬ್ದುಲ್ ಶುಕೂರ್, ಶಫೀಲ್ ಶುಭಕೋರಿದರು. ಸೇವೆಯಿಂದ ನಿವೃತ್ತರಾಗಲಿರುವ ಕೆ. ಸೂರ್ಯನಾರಾಯಣ ಭಟ್, …

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ ವಿಧಿವಶ

ಬಂದ್ಯೋಡು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆ ಯೊಂದರಲ್ಲಿ ದೈವಾಧೀನರಾಗಿದ್ದಾರೆ. ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್, ಕರ್ನಾಟಕ ದಕ್ಷಿಣ ಪ್ರಾಂತ್ಯ ಸೇವಾ ಪ್ರಮುಖ್ ಹಾಗೂ ಮಂಗಳೂರು ವಿಭಾಗ ಸಂಘ ಚಾಲಕರಾಗಿಯೂ ಸೇವೆ ಸಲ್ಲಿಸಿರುವ ಗೋಪಾಲ ಚೆಟ್ಟಿಯಾರ್ ಅವರಿಗೆ  ೭೭ ವರ್ಷ ವಯಸ್ಸಾಗಿತ್ತು. ಮೂಲತಃ ಪೆರ್ಲ  ನಿವಾಸಿ ಯಾಗಿರುವ ಗೋಪಾಲ ಚೆಟ್ಟಿಯಾರ್ ಅವರು ಕೃಷ್ಣ ಚೆಟ್ಟಿಯಾರ್- ಶ್ರೀದೇವಿ ದಂಪತಿಯ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಮತಿ, ಮಕ್ಕಳಾದ …

ಗಲ್ಫ್‌ನಿಂದ ತಂದೆ ಊರಿಗೆ ತಲುಪುವ ಗಂಟೆಗಳ ಮುಂಚೆ ಪುತ್ರ ನಾಪತ್ತೆ

ಕುಂಬಳೆ: ತಂದೆ ಗಲ್ಫ್‌ನಿಂದ ಊರಿಗೆ ತಲುಪಲು ಗಂಟೆಗಳು ಮಾತ್ರ ಬಾಕಿಯಿರುವಂತೆ ಹತ್ತನೇ ತರಗತಿ ವಿದ್ಯಾರ್ಥಿಯಾದ ಪುತ್ರ ನಾಪತ್ತೆಯಾದ ಬಗ್ಗೆ ದೂರ ಲಾಗಿದೆ. ಘಟನೆ ಬಗ್ಗೆ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕುಂಬಳೆ ಬಳಿಯ ಮಾವಿನಕಟ್ಟೆ ಪಿ.ವಿ.ಎಸ್ ಕಂಪೌಂಡ್‌ನ ಸಾಜುದ್ದೀನ್‌ರ ಪುತ್ರ, ಮುಟ್ಟಂನ ಖಾಸಗಿ ಶಾಲೆ ವಿದ್ಯಾರ್ಥಿಯಾದ ಮುಹಮ್ಮದ್ ಶಾಕಿಬ್ (೧೫) ನಾಪತ್ತೆಯಾದ ಬಾಲಕನಾಗಿದ್ದಾನೆ. ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿ ನಿನ್ನೆ ಸಂಜೆ ೫.೪೫ರ ವೇಳೆ ಆಟವಾಡಲು ಹೋಗುವು …

೩೭ ಬಾರಿ ಮುಂದೂಡಲ್ಪಟ್ಟ ಲಾವ್ಲಿನ್ ಹಗರಣದ ವಾದ ಇಂದು ಸುಪ್ರೀಂಕೋರ್ಟ್‌ನ ಪರಿಗಣನೆಗೆ

ಕೊಚ್ಚಿ: ಸತತವಾಗಿ ೩೭ನೇ ಬಾರಿ ಮುಂದೂಡಲ್ಪಟ್ಟಿದ್ದ, ಕೇರಳದಲ್ಲಿ ಬಾರೀ ರಾಜಕೀಯ  ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಎಸ್‌ಎನ್‌ಸಿ ಲಾವ್ಲಿನ್ ಹಗರಣದ ಕುರಿತಾದ ವಾದ ೩೮ನೇ ಬಾರಿ ಎಂಬಂತೆ ಇಂದು ಮತ್ತೆ ಸುಪ್ರೀಂಕೋರ್ಟ್  ಪರಿಶೀಲಿಸಲಿದೆ. ಕೊನೆಯದಾಗಿ ಕಳೆದ ಅಕ್ಟೋ ಬರ್ ೩೧ರಂದು ಈ ಹಗರಣದ ವಾದ ಸುಪ್ರೀಂಕೋರ್ಟ್‌ನ ಪರಿಗಣನೆಗೆ ಬಂದಿದ್ದರೂ, ಬಳಿಕ ಕಾರಣಾಂತರದಿಂದಾಗಿ ವಾದ ಆಲಿಸುವಿಕೆಯನ್ನು ನ್ಯಾಯಾಲಯ ಮತ್ತೆ ಇಂದಿಗೆ ಮುಂದೂಡಿತ್ತು. ಎಸ್‌ಎನ್‌ಸಿ ಲಾವ್ಲಿನ್ ಹಗರಣ ದಲ್ಲಿ ಆರೋಪಿಗಳನ್ನಾಗಿ ಹೆಸರಿ ಸಲಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿ ಇತರ ಕೆಲವರನ್ನು …

ಕಾರಿನಲ್ಲಿ ಸಾಗಿಸಿದ ೭.೩೧೦ ಗ್ರಾಂ ಎಂಡಿಎಂಎ ಸಹಿತ ಮೂವರು ಸೆರೆ

ಹೊಸದುರ್ಗ: ಕಾರಿನಲ್ಲಿ ಸಾಗಿಸಿದ ೭.೩೧೦ ಗ್ರಾಂ ಎಂಡಿಎಂಎ ಸಹಿತ ಮೂವರು ಯುವಕರನ್ನು ಹೊಸದುರ್ಗ ಪೊಲೀಸರು ಸೆರೆಹಿ ಡಿದರು. ನೀಲೇಶರ ತೈಕಡಪ್ಪುರಂ ಐಸ್ ಪ್ಲಾಂಟ್ ಸಮೀಪ ವಾಸಿಸುವ ಕೆ.ಎಸ್. ಶಾರೋನ್ (೨೮), ಚೆರ್ವತ್ತೂರು ಕೈದಕ್ಕಾಡ್ ಟಿ.ಸಿ. ಸಿರಾಜ್ (೨೮), ಕಳಿಂಞಡಿಯ ಪಿ.ಎಸ್. ಶುರೈಫ್ (೨೮) ಎಂಬಿವರನ್ನು ಹೊಸದುರ್ಗ ಎಸ್‌ಐ ವಿ.ಪಿ. ಅಖಿಲ್ ಬಂಧಿಸಿದ್ದಾರೆ. ನಿನ್ನೆ ಮಧ್ಯಾಹ್ನ ಕಾಞಂಗಾಡ್ ಮೀನಾಫೀ ಸ್ ಬಳಿ ವಾಹನ ತಪಾಸಣೆ ವೇಳೆ  ಆಲ್ಟೋ ಕಾರಿನಲ್ಲಿ ಎಂಡಿಎಂಎ ಸಾಗಿಸಿರುವುದು ಪತ್ತೆಯಾಗಿದೆ. ಇವರಿಂದ ಒಂದು  ಇಲೆಕ್ಟ್ರಾನಿಕ್ ತಕ್ಕಡಿ, …

ಗಗನಕ್ಕೇರುತ್ತಿರುವ ಬೆಳ್ಳುಳ್ಳಿ ಬೆಲೆ

ಕಾಸರಗೋಡು: ರಾಜ್ಯದಲ್ಲಿ ಬೆಳ್ಳುಳ್ಳಿ ಬೆಲೆ ಅನಿಯಂತ್ರಿತ ರೀತಿಯಲ್ಲಿ ಹೆಚ್ಚುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇದೀಗ ಒಂದು ಕಿಲೋ ಬೆಳ್ಳುಳ್ಳಿ ಬೆಲೆ ೪೪೦ರಿಂದ ೪೮೦ ರೂ. ವರೆಗೆ ತಲುಪಿದೆ. ಒಂದು ತಿಂಗಳ ಹಿಂದೆ ೩೦೦ ರಿಂದ ೩೫೦ ರೂ. ವರೆಗಿದ್ದ ಬೆಳ್ಳುಳ್ಳಿ ಬೆಲೆ    ಕೆಲವೇ ದಿನಗಳಲ್ಲಿ ಕಿಲೋಗೆ ೧೦೦ರಿಂದ ೧೫೦ ರೂ. ವರೆಗೆ ಹೆಚ್ಚಳವಾಗಿದೆ.  ಇದೇ ವೇಳೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳ್ಳುಳ್ಳಿಗೆ ವ್ಯತ್ಯಸ್ಥ ಬೆಲೆಯಿದೆಯೆಂದು ತಿಳಿದುಬಂದಿದೆ. ಕುಂಬಳಯಲ್ಲಿ ಒಂದು ಕಿಲೋ ಬೆಳ್ಳುಳ್ಳಿಗೆ ೪೩೦ ರೂ. ಬೆಲೆಯಿದೆ. ಇದೇ …

ನಾಪತ್ತೆಯಾಗಿದ್ದ ಪತ್ರಕರ್ತ ನ್ಯಾಯಾಲಯದಲ್ಲಿ ಶರಣು: ಸಂಬಂಧಿಕರ ವಿರುದ್ಧ ನ್ಯಾಯಾಲಯ ನಿರ್ದೇಶದಂತೆ ಕೇಸು ದಾಖಲು

ಉಪ್ಪಳ: ನಿಗೂಢ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಪ್ರಾದೇಶಿಕ ಪತ್ರಕರ್ತ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಇದೇ ವೇಳೆ ಸಹೋದರನ ಬೆದರಿಕೆ ಯಿದೆಯೆಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ  ನ್ಯಾಯಾಲಯದ ನಿರ್ದೇಶ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಧರ್ಮತ್ತಡ್ಕದ ಜೋನ್ ಡಿ’ಸೋಜ (೬೦) ನಿನ್ನೆ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ  ಹಾಜರಾಗಿದ್ದಾರೆ. ಸೊತ್ತು ತರ್ಕದ ಹಿನ್ನೆಲೆಯಲ್ಲಿ ಸಹೋದರ ಜೋರ್ಜ್ ಹಾಗೂ ಚಿಕ್ಕಪ್ಪನ ಮಗ ಥೋಮಸ್ ಎಂಬಿವರಿಂದ ತನಗೆ ಬೆದರಿಕೆಯಿರುವು ದಾಗಿಯೂ ಇದ ರಿಂದ ಭಯ ಗೊಂಡು ತಾನು …

ಅಕ್ರಮ ಹಣ ವರ್ಗಾವಣೆ; ದೆಹಲಿಯಲ್ಲಿ ಎಎಪಿ  ನೇತಾರನ  ವಸತಿಯಲ್ಲಿ ಇ.ಡಿ ದಾಳಿ

ದೆಹಲಿ: ಅಕ್ರಮ ಹಣ ವರ್ಗಾವಣೆ ತನಿಖೆಯಂಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯ ದರ್ಶಿಯ ನಿವಾಸ ಸೇರಿದಂತೆ ಸುಮಾರು ಹತ್ತು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.  ಕಾರ್ಯಾಚರಣೆಯಲ್ಲಿ ಮಹತ್ವದ ದಾಖಲೆಪತ್ರಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ ಮದ್ಯ ನೀತಿ  ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಗೆ ಹಾಜರಾಗದ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ವಿರುದ್ಧ ಇ.ಡಿ ನ್ಯಾಯಾಲಯವನ್ನು ಸಮೀಪಿಸಿರುತ್ತದೆ.

ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಆರೋಪಿಗಳಿಬ್ಬರ ಸೆರೆ

ಕಾಸರಗೋಡು: ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಇಬ್ಬರು ಆರೋಪಿಗಳನ್ನು ವಿದ್ಯಾನಗರ  ಪೊಲೀಸರು ಬಂಧಿಸಿದ್ದಾರೆ. ಪನಿಯಲ್ ಚೆರುಂಬ ನಿವಾಸಿ ಗಳಾದ ಬಷೀರ್ (೫೧) ಮತ್ತು ಅಬ್ದುಲ್ ರಹಿಮಾನ್ (೩೮) ಬಂಧಿತರಾದ ಆರೋಪಿಗಳು. ಇವರಿ ಬ್ಬರು ನೇರವಾಗಿ ನ್ಯಾಯಾಲಯದಲ್ಲಿ ಶರಣಾಗಿದ್ದರು. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಜನವರಿಯಲ್ಲಿ ಚೆರುಂಬದಲ್ಲಿ  ಪುಟ್ಭಾಲ್ ಪಂದ್ಯಾಟ ನಡೆಸುತ್ತಿದ್ದ ವೇಳೆ ಅದರ ಆಟಗಾರರು ಪರಸ್ಪರ ಹೊಡೆದಾಡಿಕೊಂಡಿದ್ದರು.  ಅದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ಬೇಕಲ ಪೊಲೀಸರು ಬಶೀರ್ ಮತ್ತು ಅಬ್ದುಲ್ ರಹಿಮಾನ್‌ರನ್ನು ವಶಕ್ಕೆ ತೆಗೆದುಕೊಂಡು …