ಡಾ| ವಂದನಾದಾಸ್ ಕೊಲೆ ಪ್ರಕರಣ :ಸಿಬಿಐ ತನಿಖೆ ಇಲ್ಲ: ಜಾಮೀನುಕೋರಿ ಆರೋಪಿ ಸಲ್ಲಿಸಿದ ಅರ್ಜಿ ವಜಾ

ಕೊಚ್ಚಿ: ಕೊಟ್ಟಾರಕರೆ ತಾಲೂಕು ಆಸ್ಪತ್ರೆಯ ಹೌಸ್ ಸರ್ಜನ್ ಡಾ| ವಂದನಾದಾಸ್ ಕೊಲೆ ಪ್ರಕರಣ ತನಿಖೆಯನ್ನು ಸಿಬಿಐಗೆ ಹಸ್ತಂತರಿ ಬೇಕೆಂದು ಕೋರಿ  ಅವರ ಕುಟುಂ ಬದವರು ಸಲ್ಲಿಸಿದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಇಂದು ಬೆಳಿಗ್ಗೆ ತಳ್ಳಿಹಾಕಿದೆ. ಪ್ರಸ್ತುತ ಕೊಲೆ ಪ್ರಕರಣದ ಪೊಲೀಸ್ ತನಿಖೆ ಈಗ ಸರಿಯಾದ ರೀತಿಯಲ್ಲೇ ಮುಂದುವರಿಯುತ್ತಿದೆ. ಆದ್ದರಿಂದ ಈ ಪ್ರಕರಣದ ತನಿಖೆ ಯನ್ನು ಸಿಬಿಐಗೆ ಹಸ್ತಾಂತರಿಸುವ ಅಗತ್ಯವಿಲ್ಲವೆಂದು ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಾ ಮೂರ್ತಿ  ಕುgನ್ ಥೋಮಸ್ ಅವರು ಇಂದು ಬೆಳಿಗ್ಗೆ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ. …

ಕುಂಬಳೆಯಲ್ಲಿ ದಿ| ಶಂಕರ ಆಳ್ವ ಸಂಸ್ಮರಣೆ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಶಂಕರ ಆಳ್ವ ಹೇರೂರು ಇವರ ೨೯ನೇ ವರ್ಷದ ಸಂಸ್ಮರಣೆ ಪಕ್ಷದ  ಕಚೇರಿಯಲ್ಲಿ ಜರಗಿತು. ಬಿಜೆಪಿ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೌನ್ಸಿಲ್ ಸದಸ್ಯ ರವೀಂದ್ರನ್ ಶಂಕರ ಆಳ್ವರ ಬಗ್ಗೆ ಮಾತನಾಡಿದರು. ಬಿಜೆಪಿ ಮಂಡಲ ಉಪಾಧ್ಯಕ್ಷೆ ಪ್ರೇಮಲತಾ, ಮುಖಂಡರಾದ ಶಶಿಕುಮಾರ್, ಗೋಪಾಲಣ್ಣ, ಪ್ರೇಮಾ ಶೆಟ್ಟಿ ಕುಂಬಳೆ, ಮೋಹನ್ ಕೆ. ಬಂಬ್ರಾಣ, ಪ್ರೇಮಾವತಿ, ವಿದ್ಯಾ ಎನ್ ಪೈ, ಸುಲೋಚನಾ, ಅಜಿತ್ ಕುಮಾರ್, ಪ್ರೇಮಾವತಿ ಸಹಿತ ಹಲವರು …

ಬಿಎಂಎಸ್ ರಾಜ್ಯ ಸಮ್ಮೇಳನ ಮುಳ್ಳೇರಿಯದಲ್ಲಿ ಡಂಗುರ ಜಾಥಾ

ಮುಳ್ಳೇರಿಯ: ಈ ತಿಂಗಳ ೯, ೧೦,೧೧ರಂದು ಪಾಲಕ್ಕಾಡ್‌ನಲ್ಲಿ ನಡೆಯಲಿರುವ ಬಿಎಂಎಸ್ ೨೦ನೇ ರಾಜ್ಯ ಸಮ್ಮೇಳನದ ಅಂಗವಾಗಿ ಮುಳ್ಳೇರಿಯ ವಲಯ ಸಮಿತಿಯ ನೇತೃತ್ವದಲ್ಲಿ ಮುಳ್ಳೇರಿಯ ಪೇಟೆಯಲ್ಲಿ ಡಂಗುರ ಜಾಥಾ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ನೇತಾರರಾದ ಎಂ.ಕೆ. ರಾಘವನ್, ಗೀತಾ ಬಾಲಕೃಷ್ಣನ್, ಲೀಲಾ ಕೃಷ್ಣನ್, ವಲಯ ಅಧ್ಯಕ್ಷ ಆನಂದ ಸಿ.ಎಚ್, ಕಾರ್ಯದರ್ಶಿ ಭಾಸ್ಕರನ್, ವಲಯ ಪದಾಧಿಕಾರಿಗಳಾದ ಪುರುಷೋತ್ತಮ, ಸದಾಶಿವ, ವಿನೋದ್ ಸಿ.ಎಚ್, ಹರಿಪ್ರಸಾದ್, ದುರ್ಗಾ ಪ್ರಸಾದ್, ಶೋಭಾ ಭಾಸ್ಕರನ್, ರಾಮಕೃಷ್ಣನ್, ಕುಸುಮ ಮಣಿಯೂರು ಮೊದಲಾದವರು ನೇತೃತ್ವ ನೀಡಿದರು.

ಎಂಡೋಸಲ್ಫಾನ್ ಹೂತಿಡಲಾಗಿದೆಯೇನ  ಎಂಬುದನ್ನು ಪತ್ತೆಹಚ್ಚಲು ಮುಚ್ಚಲಾದ  ಐದು ಬಾವಿಗಳನ್ನು ಅಗೆದು ಪರಿಶೀಲಿಸಲು ಕೇಂದ್ರ ತಂಡ ನಿರ್ದೇಶ

ಕಾಸರಗೋಡು: ಮಾರಕ ಕೀಟ ನಾಶಕವಾದ ಎಂಡೋಸಲ್ಫಾನ್‌ನ್ನು ಹೂತಿಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ರಾಜ್ಯ ತೋಟಗಾರಿಕಾ ನಿಗಮದ ಕಾಸರಗೋಡು (ಪಿ.ಸಿ.ಕೆ.) ಎಸ್ಟೇಟ್‌ಗೊಳಪಟ್ಟ ಪ್ರದೇಶದಲ್ಲಿ ಮುಚ್ಚಲಾಗಿರುವ ಐದು ಬಾವಿಗಳನ್ನು ೧೦೦ ಮೀಟರ್ ಆಳದ ತನಕ ಅಗೆದು ಪರಿಶೀಲಿಸುವಂತೆ ಕೇಂದ್ರ ಸರಕಾರೀ ತಂಡ ನಿರ್ದೇಶ ನೀಡಿದೆ. ತೋಟಗಾರಿಕಾ ಇಲಾಖೆಯ ಕಾಸರಗೋಡು ಎಸ್ಟೇಟ್‌ಗೊಳಪಟ್ಟ ಮಿಂಚಿಪದವಿನ ಬಾವಿಯಲ್ಲಿ ಎಂಡೋ ಸಲ್ಫಾನ್ ಹಾಕಿ ಅದನ್ನು ಮುಚ್ಚಲಾಗಿದೆ ಎಂಬ ದೂರೊಂದು ರಾಷ್ಟ್ರೀಯ ಹಸಿರು ಟ್ರಿಬ್ಯುನಲ್‌ಗೆ ಲಭಿಸಿತ್ತು. ಅದರಂತೆ ಟ್ರಿಬ್ಯೂನಲ್ ನೀಡಿದ  ನಿರ್ದೇಶದಂತೆ ಕೇಂದ್ರ ಮಲೀನೀಕರಣ ಮಂಡಳಿಯ ದಕ್ಷಿಣ ವಲಯ …

ಬಂಬ್ರಾಣ ಕೊಟ್ಯದ ಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಧರ್ಮನೇಮ ಇಂದಿನಿಂದ

ಉಪ್ಪಳ: ಕುಂಬಳೆ ಬಳಿಯ ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದೈವದ ವಾರ್ಷಿಕ ನೇಮೋತ್ಸವ ಇಂದು ಮತ್ತು ನಾಳೆ ನಡೆಯಲಿದೆ. ಇಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಸಂಜೆ 6ಕ್ಕೆ ಭಜನೆ, ದುರ್ಗಾಪೂಜೆ, ರಾತ್ರಿ 8ಕ್ಕೆ ರಾಹು ಗುಳಿಗ ಬನದಲ್ಲಿ ತಂಬಿಲ, 8.30ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು, 9ಕ್ಕೆ ಸಹ ದೈವಗಳಿಗೆ ಮತ್ತು ಕಲಾಲ್ತ ಗುಳಿಗನ ಕೋಲ, ಅನ್ನಸಂತರ್ಪಣೆ, ನಾಳೆ ಬೆಳಿಗ್ಗೆ 11ರಿಂದ ಶ್ರೀ …

ಮಣವಾಟಿ ಬೀವಿ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವ ಸಂಭ್ರಮ

ಮಂಜೇಶ್ವರ: ಗಡಿನಾಡಿನ ಕನ್ನಡ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಕೋಳಿಯೂರು ಗ್ರಾಮದ ಧರ್ಮನಗರದಲ್ಲಿ ಕಳೆದ ಮೂವತ್ತು ವರ್ಷಗಳ ಹಿಂದೆ ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸಬೇಕೆಂಬ ಮಹದಾಸೆಯಿಂದ ಪೊಯತ್ತಬೈಲ್ ಜಮಾಯತ್‌ನ ಮೂಲಕ ಅಂದಿನ ಆಡಳಿತ ಕಮಿಟಿಯ ಮುಂದೆ ಡಾ.ಇಬ್ರಾಹಿಂ ಹಾಜಿ ಕಲ್ಲೂರುರವರು ಶಾಲೆಯ ಪ್ರಸ್ತಾವನೆ ಮುಂದಿಟಿದ್ದರು.ಆದರೆ ಆ ಕಾಲದಲ್ಲಿ ಹಣದ ಕೊರತೆ ಬಹಳಷ್ಟು ಇತ್ತು. 1998-99ರಲ್ಲಿ ಇಬ್ರಾಹಿಂ ಹಾಜಿ ಜಮಾಯತ್‌ನ ಉಪಾಧ್ಯಕ್ಷರಾಗಿದ್ದಾಗ ಅಂದಿನ ಅಧ್ಯಕ್ಷರಾಗಿದ್ದ ಜನಾಬ್ ಓ. ಅಹಮದ್ ಕುಂಞಯವರ ಜೊತೆ ಮಾತುಕತೆ ನಡೆಸಿದ್ದರು. 1999-2000ರಲ್ಲಿ 23 …

ಮುಂಗಡಪತ್ರದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ಮೊತ್ತ ಮೀಸಲು

ಕಾಸರಗೋಡು: ನಿನ್ನೆ ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯ ಮುಂಗಡಪತ್ರದಲ್ಲಿ ಜಿಲ್ಲೆಗೆ ಕೆಲವೊಂದು ಯೋಜನೆಗಳನ್ನು ಘೋಷಿಸಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗೆ ೭೫ ಕೋಟಿ ರೂ, ಎಂಡೋಸಲ್ಫಾನ್ ಸಂತ್ರಸ್ತರಿಗೆ ೧೭ ಕೋಟಿ ರೂ. ಮೀಸಲಿಡಲಾಗಿದೆ. ಕಾಸರಗೋಡು ವಿಧಾನಸಭಾ ಮಂಡಲದಲ್ಲಿ ಕವಿ ಟಿ ಉಬೈರ್ ಮಾಪಿಳ ಕಲಾ ಅಕಾಡೆಮಿಗೆ ಒಂದು ಕೋಟಿ ರೂ. ಮೀಸಲಿಡಲಾಗಿದೆ. ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ೮ ಯೋಜನೆಗಳಿಗೆ ಮೊತ್ತ ಮೀಸಲಿಡಲಾಗಿದೆ. ಮುಟ್ಟಂ ಬೇರಿಕೆ ಬೀಚ್ ಟೂರಿಸಂ ಯೋಜನೆ, ಅಡ್ಕ- ಇಚ್ಲಂಗೋಡ್ ರಸ್ತೆ ಪುನರುದ್ಧಾರ, ನಯಾಬಜಾರ್- ಐಲ ಶಾಲೆ ರಸ್ತೆ …

ಪುತ್ರಕಳದಲ್ಲಿ ಮಿನಿಮಾಸ್ಟ್ ದೀಪ ಉದ್ಘಾಟನೆ

ಮಾರ್ಪನಡ್ಕ: ಕುಂಬ್ಡಾಜೆ ಪಂ.ನ ಪುತ್ರಕಳದಲ್ಲಿ ಸ್ಥಾಪಿಸಿದ ಮಿನಿಮಾಸ್ಟ್ ದೀಪವನ್ನು ಪಂ. ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ ಉದ್ಘಾಟಿಸಿದರು. ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದರು ಜೋನ್ ಕ್ರಾಸ್ತಾ, ಸಿದ್ಧಿಖ್ ಮುನಿಯೂರು, ಸದಾಶಿವ ವಿ, ಇಬ್ರಾಹಿಂ ಪಿ, ಗುಣಕರ ಆಳ್ವ, ದೇರಣ್ಣ ರೈ, ಮೊಹಮ್ಮದ್ ಕುಂಞಿ ಪಿ.ಕೆ, ಪ್ರಜ್ವಲ್ ಪಿ, ಶರೀಫ್ ಪುತ್ರಕಳ, ಪೀಟರ್ ಡಿಸೋಜಾ ಭಾಗವಹಿಸಿದರು.

ಬಿ.ಎಂ.ಎಸ್. ಕಟ್ಟಡ ನಿರ್ಮಾಣ ನಾರಾಯಣಮಂಗಲ ಯೂನಿಟ್ ಸಮ್ಮೇಳನ

ಕುಂಬಳೆ: ಬಿ.ಎಂ.ಎಸ್ ನಿರ್ಮಾ ಣ ಕಾರ್ಮಿಕರ ಯೂನಿಟ್ ಸಮ್ಮೇಳನ ನಾರಾಯಣ ಮಂಗಲದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ವಸಂತ ಆಚಾರ್ಯ ಅಧ್ಯಕ್ಷತೆ ವಹಿಸಿದರು ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಬಿ ನಾಯರ್ ಉದ್ಘಾಟಿ ಸಿ ದರು. ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಐತ್ತಪ್ಪ ನಾರಾಯಣ ಮಂಗಲ ಸಮಾ ರೋಪ ಭಾಷಣ ಮಾಡಿದರು. ಗೋ ಪಾಲಕೃಷ್ಣ ಕೆ. ಸ್ವಾಗತಿಸಿ, ಗೋಪಾಲ ಕೃಷ್ಣ. ಎಂ. ವಂದಿಸಿದರು. ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ವಸಂತ ಆಚಾರ್ಯ . ಉಪಾಧ್ಯಕ್ಷರಾಗಿ ರಾಧಾಕೃಷ್ಣ. ಕೆ, ಉಷಾ …

ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದಲ್ಲಿ ಬಲಿವಾಡು ಕೂಟ, ಶತರುದ್ರಾಭಿಷೇಕ, ರಂಗಪೂಜೆ ೧೦ರಂದು

ಉಪ್ಪಳ: ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಬಲಿವಾಡು ಕೂಟ, ಶತರುದ್ರಾಭಿಷೇಕ ಹಾಗೂ ರಂಗಪೂಜೆ ಫೆ.10ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಇದರಂಗವಾಗಿ ಫೆ.9ರಂದು ಬೆಳಿಗ್ಗೆ 9ಕ್ಕೆ ಗಣಹೋಮ, ಸಂಜೆ 4ರಿಂದ ವಿವಿಧ ತಂಡಗಳಿAದ ಭಜನೆ, 10ರಂದು ಬೆಳಿಗ್ಗೆ 8ರಿಂದ ಕಲಶ ಮತ್ತು ಶತರುದ್ರಾಭಿಷೇಕ, ಮಧ್ಯಾಹ್ನ 12ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 3ರಿಂದ ವಿವಿಧ ತಂಡಗಳಿAದ ಭಜನೆ, ರಾತ್ರಿ 7ರಿಂದ ಪ್ರಣೀತ್ ಬಳ್ಳಕ್ಕುರಾಯ ಮತ್ತು ಬಳಗ, ಕಾನ ಕುಬಣೂರು ಇವರಿಂದ ಸಂಗೀತ ಕಾರ್ಯಕ್ರಮ, 8.30ಕ್ಕೆ ರಂಗಪೂಜೆ, …