ಕೇರಳ ಬಜೆಡ್ ೨೦೨೪-೨೦೨೫: ೨೦೨೫ರಲ್ಲಿ ೫ ಲಕ್ಷ ಮನೆ ನಿರ್ಮಾಣ, ಕಾಸರಗೋಡಿನಲ್ಲಿ    ನರ್ಸಿಂಗ್ ತರಬೇತಿ ಕೇಂದ್ರ ಸ್ಥಾಪನೆ

ತಿರುವನಂತಪುರ: ಕೇರಳ ಸರಕಾರದ ೨೦೨೪-೨೫ನೇ ವಿತ್ತೀಯ ವರ್ಷದ ಮುಂಗಡಪತ್ರ (ಬಜೆಟ್)ವನ್ನು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮಂಡಿಸಿದರು. ಸ್ವಂತವಾಗಿ ಜಮೀನು  ಮತ್ತು ಮನೆಗಳಿಲ್ಲದ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡಲು ಲೈಫ್ ಮಿಶನ್ ಯೋಜನೆ-೨೫ಕ್ಕೆ ರೂಪು ನೀಡಲಾ ಗಿದ್ದು, ಇದರಂತೆ  ದೀರ್ಘಕಾಲದ ಸಾಲಗಳನ್ನು ಒಳಪಡಿಸಿ ೫ ಲಕ್ಷದಷ್ಟು ಮನೆಗಳನ್ನು ನಿರ್ಮಿಸಿಕೊಡಲಾಗು ವುದೆಂದು ಸಚಿವರು ತಿಳಿಸಿದ್ದಾರೆ. ಕಾಸರಗೋಡು ಸೇರಿದಂತೆ ರಾಜ್ಯದ ಐದು  ಜಿಲ್ಲೆಗಳಲ್ಲಿ ನರ್ಸಿಂಗ್ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಮಾತ್ರವಲ್ಲ ಕಾಸರಗೋಡು, ಇಡುಕ್ಕಿ ಮತ್ತು …

ಮಾಸಿಕುಮೇರಿ- ಕುರುಡಪದವು ರಸ್ತೆ ಶೋಚನೀಯಾವಸ್ಥೆಯಲ್ಲಿ

ಪೈವಳಿಕೆ: ನಾಲ್ಕೂವರೆ ಕೋಟಿ ರೂ. ರಸ್ತೆ ಮರು ಡಾಮರೀಕರಣಕ್ಕೆ ಮಂಜೂರಾಗಿದೆ ಎಂದು ಅಧಿಕಾರಿ ಗಳು ತಿಳಿಸಿ ನಾಲ್ಕು ತಿಂಗಳಾದರೂ ರಸ್ತೆ ದುರಸ್ತಿಗೆ ಯಾವುದೇ ಕ್ರಮ ಉಂಟಾಗಲಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಲೋಕೋಪಯೋಗಿ ಇಲಾಖೆಯ ಮಾಸಿಕುಮೇರಿ- ಕುರುಡಪದವು ರಸ್ತೆ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನ ಸೆಳೆದಾಗ ದುರಸ್ತಿಗೆ ಹಣ ಮಂಜೂರಾಗಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ಆದರೆ ಇದುವರೆಗೂ ದುರಸ್ತಿಗೆ ಕ್ರಮವುಂಟಾಗಲಿಲ್ಲ. ಪೈವಳಿಕೆ ಪಂ.ನ ಮಾಸಿಕುಮೇರಿಯಿಂದ ಕುರುಡಪದವು ವರೆಗಿನ  ೮ ಕಿಲೋ ಮೀಟರ್ ರಸ್ತೆ ಶೋಚನೀಯ …

ಮಸೀದಿಗಳ ಕಾಣಿಕೆ ಡಬ್ಬಿಯಿಂದ ಹಣ ಕಳವುಗೈದ ಆರೋಪಿ ಸೆರೆ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿರುವ ಮಸೀದಿಗಳ ಕಾಣಿಕೆ ಡಬ್ಬಿಗಳಿಂದ ಹಣ ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಪುತ್ತೂರು ತಾರಿಗುಡ್ಡೆ ನಿವಾಸಿ ಅಬೂಬಕರ್ (೫೦) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಪೆರ್ಲ, ಪಳ್ಳತ್ತಡ್ಕ, ನೀರ್ಚಾಲು ಎಂಬಿಡೆಗಳಲ್ಲಿರುವ ಮಸೀದಿಗಳ ಕಾಣಿಕೆ ಹುಂಡಿಯಿಂದ ಹಣ ಕಳವುಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಜನವರಿ ೩೧ರಂದು ರಾತ್ರಿ  ಈ ಮೂರು ಮಸೀದಿಗಳ ಕಾಣಿಕೆ ಡಬ್ಬಿಯಿಂದ ಹಣ ಕಳವಿಗೀಡಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು …

ಮರದ ರೆಂಬೆ ದೇಹದ ಮೇಲೆ ಬಿದ್ದು ಕಾರ್ಮಿಕ ಮೃತ್ಯು

ಹೊಸದುರ್ಗ: ಮರ ತುಂಡರಿಸುತ್ತಿದ್ದಾಗ ರೆಂಬೆ ದೇಹದ ಮೇಲೆ ಬಿದ್ದು ಗಾಯಗೊಂಡ ಕಾರ್ಮಿಕ ಮೃತಪಟ್ಟರು. ಅಂಬಲತ್ತರ ಇರಿಯ ಮಂಡೆಂಙನದ ಕೆ. ಮಾಧವನ್ (೪೦) ಎಂಬವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ  ಮಧ್ಯೆ ಮೃತಪಟ್ಟಿದ್ದಾರೆ. ಲಾಲೂರ್ ವಲಿಯಕಡವ್ ಕಾನದ ಕಿಣಿ-ಮೀನಾಕ್ಷಿ ದಂಪತಿಯ ಪುತ್ರನಾದ ಮೃತರು ಪತ್ನಿ ರುಕ್ಮಿಣಿ, ಮಕ್ಕಳದ ದಿಯ ಮಾಧವನ್, ದೀಕ್ಷಿತ್ ಮಾಧವನ್, ಸಹೋದರಿ ಶ್ರೀಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಂಗಡಿಯಿಂದ ಚಾಕ್ಲೆಟ್ ಕಳವು:  ಬಾಲಕ ಸೇರಿದಂತೆ ಮೂವರ ಸೆರೆ

ಕಾಸರಗೋಡು: ಅಂಗಡಿಯ ಬೀಗ ಮುರಿದು ಒಳನುಗ್ಗಿ ೪೨,೪೩೦ ರೂ. ಮೌಲ್ಯದ ಚಾಕ್ಲೆಟ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ೧೭ ವರ್ಷದ ಬಾಲಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಕುಶಾಲನಗರ ನಿವಾಸಿಗಳಾದ ಫೈಸಲ್ ರಹ್ಮಾನ್ (೧೯), ಬಿ. ವಿವಿಶ್ (೧೯) ಮತ್ತು ೧೭ ವರ್ಷದ ಬಾಲಕ ಬಂಧಿತರಾದ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ಅಶ್ರಫ್ (೨೩) ಎಂಬಾತ ತಲೆಮರೆಸಿಕೊಂಡು ಗೋವಾಕ್ಕೆ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜನವರಿ ೧೪ರಂದು ಹೊಸದುರ್ಗ ಕೋಟಚ್ಚೇರಿಯಲ್ಲಿ ಕಾರ್ಯವೆಸಗುತಿ ರುವ ಕೊನಾರ್ಕ್‌ರ ಎಂಟರ್ ಪ್ರೈಸಸ್ …

ಮಂಜೇಶ್ವರದ ಮೀನು ಕಾರ್ಮಿಕ ನಾಪತ್ತೆಯಾಗಿ ೩ ತಿಂಗಳು ಕಳೆದರೂ ಮಾಹಿತಿ ಅಲಭ್ಯ: ಕುಟುಂಬ ಆತಂಕದಲ್ಲಿ

ಮಂಜೇಶ್ವರ: ಮೀನು ಕಾರ್ಮಿಕನಾದ ಯುವಕನೋರ್ವ ನಿಗೂಢ ನಾಪತ್ತೆಯಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಅವರು ಪತ್ತೆಯಾಗದಿರುವುದು ಕುಟುಂಬ ಹಾಗೂ ಸ್ನೇಹಿತರಲ್ಲಿ ಆತಂಕ ಮೂಡಿಸಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಯ ನಿವಾಸಿ ರೋಷನ್ ಮೊಂತೆರೋ (೪೨) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಇವರು ನವಂಬರ್ ೧೮ರಂದು ರಾತ್ರಿಯಿಂದ ನಾಪತ್ತೆಯಾಗಿದ್ದಾರೆ. ಅಂದು  ರಾತ್ರಿ ಸುಮಾರು ೧೧.೪೫ರವರೆಗೆ ಮನೆಯಲ್ಲಿದ್ದ ರೋಷನ್ ಮೊಂತೆರೋ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನಾಪತ್ತೆ ಬಗ್ಗೆ ಪತ್ನಿ ರೇಖಾ ಮೊಂತೆರೋ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿಕೊಂಡ …

ಧರ್ಮತ್ತಡ್ಕದ ಜೋನ್ ಡಿ’ಸೋಜಾರಿಗಾಗಿ ಮುಂದುವರಿದ ಶೋಧ

ಉಪ್ಪಳ: ಸ್ನೇಹಿತನನ್ನು ಭೇಟಿಯಾಗಲೆಂದು ತಿಳಿಸಿ ಹೋದ ಬಳಿಕ ನಿಗೂಢವಾಗಿ ನಾಪತ್ತೆಯಾದ ಧರ್ಮತ್ತಡ್ಕ ನಿವಾಸಿ ಜೋನ್ ಡಿ’ಸೋಜಾ (೬೦)ರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿ ಯುತ್ತಿದೆಯೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಜೋನ್ ಡಿ’ಸೋಜಾ ಈ ತಿಂಗಳ ೨ರಂದು ಬೆಳಿಗ್ಗೆ ೬ ಗಂಟೆಗೆ ಪೆರ್ಮುದೆಯಲ್ಲಿರುವ ಸ್ನೇಹಿತ ಜೋಸೆಫ್ ಎಂಬವರನ್ನು ಭೇಟಿಯಾಗಲೆಂದು ತಿಳಿಸಿ ಸ್ಕೂಟರ್‌ನಲ್ಲಿ ತೆರಳಿದ್ದರು. ಆದರೆ ಅನಂತರ ಮನೆಗೆ ಮರಳಿ ಬಂದಿಲ್ಲ. ಈ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಎಸ್‌ಐ ರುಮೇಶ್ ನೇತೃತ್ವದ  ಪೊಲೀಸರು ಹುಡುಕಾಟ ನಡೆಸಿದಾಗ ಅವರ ಸ್ಕೂಟರ್ …

ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಕಾಪಾ ಹೇರಿ ಜೈಲಿಗೆ

ಹೊಸದುರ್ಗ: ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಕಾಪಾ ಪ್ರಕಾರ ಬಂಧಿಸಿ ಜೈಲಿನಲ್ಲಿರಿಸಲಾಗಿದೆ. ವೆಳ್ಳಿಕೋತ್ ಕುಂಞಿಪ್ಪುರದ ವಿಶಾಖ್ ಯಾನೆ ಜಿತ್ತು (೨೪) ಎಂಬಾತನನ್ನು ಜಿಲ್ಲಾಧಿಕಾರಿ ಕೆ. ಇಂಭಶೆಖರ್‌ರ ನಿರ್ದೇಶ ಪ್ರಕಾರ ಡಿವೈಎಸ್ಪಿ ಎಂ.ಪಿ. ವಿನೋದ್ ಕುಮಾರ್‌ರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎಂ.ಪಿ. ಆಜಾದ್ ಬಂಧಿಸಿದ್ದಾರೆ. ಚಂದೇರ, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹತ್ಯೆಯತ್ನ, ಹಣಕಳವು, ಹೊಡೆದಾಟ, ಗಾಂಜಾ ಮೊದಲಾದ ಆರು  ಪ್ರಕರಣಗಳಲ್ಲಿ ವಿಶಾಖ್ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ: ಯುವಕ ಸೆರೆ

ಹೊಸದುರ್ಗ:  ಕಾರಿನಲ್ಲಿ ಸಾಗಿಸುತ್ತಿದ್ದ ೩.೪೧೦ ಗ್ರಾಂ ಎಂಡಿ ಎಂಎ ಸಹಿತ ಯುವಕ ಸೆರೆಗೀ ಡಾಗಿದ್ದಾನೆ. ರಾವಣೇಶ್ವರ ಕೊಟ್ಟಿಲಂ ಗಾಡ್ ನಿವಾಸಿ ಸಿ.ಕೆ. ರಶೀದ್ (೨೪) ಎಂಬಾತನನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಈತನ ಜೊತೆಗಿದ್ದ ಸಮೀರ್ ಎಂಬಾತ ಓಡಿ ಪರಾರಿಯಾಗಿದ್ದಾನೆ.  ಪಾಣತ್ತೂರು ಭಾಗದಿಂದ ರಾಜಪುರಂ ಭಾಗಕ್ಕೆ  ಬರುತ್ತಿದ್ದ ಆಲ್ಟೋ ಕಾರನ್ನು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ.

ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್‌ಗೆ ಚಾಲನೆ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಹಸ್ರತ್ ಬಾವ ಫಖೀರ್ ವಲಿಯುಲ್ಲಾಗಿ ಹಳ್‌ರಮಿ ಮಖಾಂ ಉರೂಸ್‌ಗೆ ಚಾಲನೆ ನೀಡಲಾಯಿತು. ಕೆ.ಎಸ್. ಮಖ್ತಾರ್ ತಂಙಳ್ ಕುಂಬೋಳ್ ಮಖಾಂ ಸಿಯಾರತ್‌ಗೆ ನೇತೃತ್ವ ನೀಡಿದರು. ಅನ್ಸಾರ್ ಶೆರುಲ್ ಧ್ವಜಾರೋಹಣಗೈದರು. ಉರೂಸ್ ಕಾರ್ಯಕ್ರಮವನ್ನು ನಿನ್ನೆ ಖತೀಬ್ ಮಜೀದ್ ಬಾಖವಿ ಉದ್ಘಾಟಿಸಿದರು. ಕಾರಿಹ ಸಖಾಫಿ ಪ್ರಧಾನ ಭಾಷಣ ಮಾಡಿದರು. ಹಲವರು ಭಾಗ ವಹಿಸಿದರು. ಇಂದು ರಾತ್ರಿ ನೌಷಾದ್ ಬಾಖವಿ ಚಿರಯಿನ್ ಕೀಳ್ ಪ್ರವಚನ ನಡೆಸುವರು.