ಕಣಿಪುರ ಕ್ಷೇತ್ರ ಬ್ರಹ್ಮಕಲಶೋತ್ಸವ: ಕುಂಬಳೆ ಪೇಟೆಯಲ್ಲಿ ಮೂಲಭೂತ ಸೌಕರ್ಯ ಶೀಘ್ರ ಏರ್ಪಡಿಸಲು ಬಿಜೆಪಿ ಆಗ್ರಹ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೆ ಹಿನ್ನೆಲೆಯಲ್ಲಿ ಕುಂಬಳೆ ಪೇಟೆಯಲ್ಲಿ ಮೂಲಭೂತ ಸೌಕರ್ಯ ತಕ್ಷಣ ಒದಗಿಸಬೇಕೆಂದು ಬಿಜೆಪಿ ಪಂ. ಸಮಿತಿ ಆಗ್ರಹಿಸಿದೆ. ಬ್ರಹ್ಮಕಲಶೋತ್ಸವ, ಜಾತ್ರೆ ಹಿನ್ನೆಲೆಯಲ್ಲಿ ಇಲ್ಲಿಗೆ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಬೀದಿ ದೀಪ, ಚರಂಡಿ, ಪಾರ್ಕಿಂಗ್ ವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಬಿಜೆಪಿ ತಿಳಿಸಿದೆ. ಕುಂಬಳೆ ಪೇಟೆಯ ಐಎಚ್‌ಆರ್‌ಡಿ ಕಾಲೇಜಿನ ಹಳೆಯ ಕಟ್ಟಡದ ಸಮೀಪ ಇರುವ …

ಪೆರಡಾಲ: ಶ್ರೀ ಉದನೇಶ್ವರ ಕುಣಿತ ಭಜನಾ ಸಂಘ ಉದ್ಘಾಟನೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಭಜನಾ ಸಂಘ ಇದರ ಆಶ್ರಯದಲ್ಲಿ ಆರÀಂ¨sಸಿದ ಶ್ರೀ ಉದನೇಶ್ವರ ಕುಣಿತ ಭಜನೆ ಸಂಘವನ್ನೂ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು. ಮೊಕ್ತೇಸರ ಶ್ರೀ ಪಿಜಿ.ಜಗನ್ನಾಥ ರೈ, ಸೀತಾರಾಮ ನವಕಾನ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಯುವ ಸಮಿತಿ ಅಧ್ಯಕ್ಷ ಶ್ರೀಶ ಕುಮಾರ್ ಪಂಜಿತ್ತಡ್ಕ, ಕಾರ್ಯದರ್ಶಿ ಭಾಸ್ಕರ. ಪಿ. ಭಜನಾ ಸಂಘದ ಸದ್ಯಸರು, ಶಿವ ಶಕ್ತಿ ಕ್ಲಬ್ ಸದಸ್ಯರು ಉಪಸ್ಥಿತ ರಿದ್ದರು.

ನೆಕ್ಕರ: ಧೂಮಾವತಿ ದೈವದ ನೇಮೋತ್ಸವ ನಾಳೆ

ಬದಿಯಡ್ಕ: ನೆಕ್ರಾಜೆ ಬಳಿಯ ನೆಕ್ಕರ ಪಡಿಞ್ಞಾರ್ ವೀಡು ಪುದಿಯೋಡನ್ ತರವಾಡಿನಲ್ಲಿ  ಶ್ರೀ ಪಳ್ಳತ್ತ ಧೂಮಾವತಿ ದೈವದ ನೇಮೋತ್ಸವ ನಾಳೆ ನಡೆಯಲಿದೆ. ಇದರ ಅಂಗವಾಗಿ ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮ ನಡೆಯಲಿದೆ. ಇಂದು ಬೆಳಿಗ್ಗೆ ಗಣಪತಿ ಹೋಮ, ತರವಾಡು ದೈವಗಳಿಗೆ ತಂಬಿಲ, ಶ್ರೀ ವೆಂಕಟರಮಣ ದೇವರ ಪಾನಕ ಪೂಜೆ ನಡೆಯಿತು. ಮಧ್ಯಾಹ್ನ ೧ ಗಂಟೆಗೆ ಅನ್ನದಾನ, ರಾತ್ರಿ ೭ಕ್ಕೆ ಭಜನೆ, ೮ಕ್ಕೆ ಶ್ರೀ ದೈವದ ಭಂಡಾರ ತೆಗೆಯುವುದು, ೮.೩೦ಕ್ಕೆ ಅನ್ನದಾನ, ನಾಳೆ ಬೆಳಿಗ್ಗೆ  ೮ಕ್ಕೆ ಶ್ರೀ ಪಳ್ಳತ್ತು …

ಕುಂಬಳೆ: ಸಿಡಿಎಸ್‌ನಿಂದ ಕೃಷಿ ಉತ್ಸವ

ಕುಂಬಳೆ: ಪಂಚಾಯತ್ ಕುಟುಂಬಶ್ರೀ ಸಿಡಿಎಸ್‌ನ ಪ್ರಥಮ ಕೃಷಿ ಉತ್ಸವವನ್ನು ಬಂಬ್ರಾಣ ಭಗವತಿ ಜೆಎಲ್‌ಜಿ ಮೋಡೆಲ್ ಪ್ಲಾಟ್‌ನಲ್ಲಿ ಪಂ. ಅಧ್ಯಕ್ಷೆ ಯು.ಪಿ ತಾಹಿರ ಯೂಸಫ್ ಹರಿವೆ ಬೀಜ ಬಿತ್ತಿ ಉದ್ಘಾಟಿಸಿದರು. ಪಂ. ಕ್ಷೇಮ ಕಾರ್ಯಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಎ. ರಹ್‌ಮಾನ್, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ನಸೀಮ, ಸಿಡಿಎಸ್ ಚೆಯರ್ ಪರ್ಸನ್ ಖದೀಜ ಪಿ.ಕೆ. ಪಂ. ಸದಸ್ಯರಾದ ರವಿರಾಜ್, ಮೋಹನನ್  ಸಹಿತ ಹಲವರು ಭಾಗವಹಿಸಿದರು.

ದೇಶದ ಮೊದಲ ಡಿಜಿಟಲ್ ಸಾಕ್ಷರತಾ ಜಿಲ್ಲೆಯಾಗಿ ಕಾಸರಗೋಡು: ಘೋಷಣೆ ಮುಂದಿನ ತಿಂಗಳು

ಕಾಸರಗೋಡು: ಸ್ಮಾರ್ಟ್ ಫೋನ್‌ನ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಜಿಲ್ಲಾ ಪಂಚಾಯತ್ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಜ್ಯಾರಿಗೊಳಿಸಿರುವ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆ ಕೊನೆಯ ಹಂತದಲ್ಲಿದೆ. ೩೮ ಗ್ರಾಮ ಪಂಚಾಯತ್‌ಗಳಲ್ಲೂ, ೩ ನಗರಸಭೆಗಳಲ್ಲಾಗಿ ಜ್ಯಾರಿಗೊಳಿಸುವ ಯೋಜನೆಯ ೮೦ ಶೇಕಡಾಕ್ಕೂ ಹೆಚ್ಚು ತರಗತಿಗಳನ್ನು ಪೂರ್ತಿಗೊಳಿಸಲಾಗಿದೆ. ೧೦೧೨೭೨ ಮಂದಿ ಯೋಜನೆಯ ಮೂಲಕ ಡಿಜಿಟಲ್ ಸಾಕ್ಷರತೆ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಸ್ಮಾರ್ಟ್ ಫೋನ್ ಉಪಯೋಗಿಸುವ ೩೦ರಿಂದ ೬೦ರ ಮಧ್ಯೆ ಪ್ರಾಯದವರಿಗೆ ಇ-ಮೇಲ್ ಐಡಿ,  ಖಾಸಗಿತನ ಹಾಗೂ ಸುರಕ್ಷಿತತೆ, ಬಿಲ್ ಪಾವತಿ ವ್ಯವಹಾರ, ಕ್ಯೂಆರ್ …

ಚಿಕನ್‌ಫಾಕ್ಸ್: ಬಾಲಕ ಮೃತ್ಯು

ಕಾಸರಗೋಡು: ಚಿಕನ್‌ಫಾಕ್ಸ್  (ಸಿಡುಬು ರೋಗ) ತಗಲಿ ಚಿಕಿತ್ಸೆಯಲ್ಲಿದ್ದ ಬಾಲಕ ಸಾವನ್ನಪ್ಪಿದ್ದಾನೆ. ತೃಕ್ಕರಿಪುರ ಕೊಯಂಕರದ ಬಿ. ಮಹೇಂದ್ರನ್- ಎಂ. ಸೆಲ್ವಿ ದಂಪತಿ ಪುತ್ರ ತೃಕ್ಕರಿಪುರ ಸೈಂಟ್ ಪೋಲ್ಸ್ ಎಯುಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮಕುಲ್ (೯) ಸಾವನ್ನಪ್ಪಿದ ಬಾಲಕ. ಈತನ ಹೆತ್ತವರು ಮೂಲತಃ ತಮಿಳುನಾಡು ನಿವಾಸಿಗಳಾಗಿದ್ದಾರೆ. ಮೃತನು ಹೆತ್ತವರ ಹೊರತಾಗಿ ಸಹೋದರ ಕಾಶ್ವಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ

ಮುಸ್ಲಿಂ ಲೀಗ್ ಜಿಲ್ಲಾ ಕಚೇರಿ ಕಟ್ಟಡ ಶಿಲಾನ್ಯಾಸ ೮ರಂದು

ಕಾಸರಗೋಡು: ಮುಸ್ಲಿಂಲೀಗ್ ಜಿಲ್ಲಾ ಸಮಿತಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಿರ್ಮಿಸುವ ಕಚೇರಿ ಕಟ್ಟಡಕ್ಕೆ ಈ ತಿಂಗಳ ೮ರಂದು ಸಂಜೆ ೪ ಗಂಟೆಗೆ ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಖಲಿ ಶಿಹಾಬ್ ತಂಙಳ್ ಶಿಲಾನ್ಯಾಸ ನೆರವೇರಿಸುವರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ, ಸಿಟಿ ಅಹಮ್ಮದಲಿ ಸಹಿತ ಹಲವರು ಭಾಗವಹಿಸುವರು.

ಕೇರಳ ಅರಬಿಕ್ ಮುಂಶೀಸ್ ಅಸೋಸಿಯೇಶನ್ ರಾಜ್ಯ ಸಮ್ಮೇಳನ ನಾಳೆಯಿಂದ

ಕಾಸರಗೋಡು: ಕೇರಳ ಅರಬಿಕ್ ಮುಂಶೀಸ್ ಅಸೋಸಿಯೇಶನ್ (ಕೆ.ಎ.ಎಂ.ಎ) ರಾಜ್ಯ ಸಮ್ಮೇಳನ ೬, ೭ ಮತ್ತು ೮ರಂದು ಕಾಸರಗೋಡು ಪುರಭವನದಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ ೯ ಗಂಟೆಗೆ ರಾಜ್ಯಾ ಧ್ಯಕ್ಷ ಎ.ಎ. ಜಾಫರ್ ಧ್ವಜಾರೋಹಣ ನೆರವೇರಿಸುವರು. ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸುವರು. ಸ್ವಾಗತ ಸಂಘದ ಅಧ್ಯಕ್ಷ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಾಸಕರಾದ ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್ ಉಪಸ್ಥಿತರಿರುವರು. ಇಬ್ರಾಹಿಂ ಪಳ್ಳಂಗೋಡ್ ಮುಖ್ಯ ಭಾಷಣ ಮಾಡುವರು. ಮಾಜಿ …

ಮಂಜೇಶ್ವರ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಮಂಜೇಶ್ವರ: ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಕೋಟೇಶ್ವರ, ಶ್ರೀಮದ್ ಅನಂತೇಶ್ವರ ದೇವಸ್ಥಾನ ಹಾಗೂ ಜಿ.ಎಸ್.ಬಿ ಸಂಘ ಮಂಜೇಶ್ವರ ಇವರ ಸಹಕಾರದೊಂದಿಗೆ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಹಾಗೂ ಫಿಜಿಯೋಥೆರಪಿ ಶಿಬಿರ ನಿನ್ನೆ ಮಂಜೇಶ್ವರ ಶ್ರೀ ವಿಭುದೇಂದ್ರ ಕಲಾ ಮಂಟಪದಲ್ಲಿ ನಡೆಯಿತು. ಕ್ಷೇತ್ರದ ಮಾಜಿ ಅಧ್ಯಕ್ಷ ಕೆ.ದಿನೇಶ್ ಜಿ.ಕಾಮತ್ ಕೋಟೇಶ್ವರ ದೀಪಪ್ರಜ್ವಲನೆಗೊಳಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಅಧ್ಯಕ್ಷ ಟಿ.ಗಣಪತಿ ಪೈ ಅಧ್ಯಕ್ಷತೆ ವಹಿಸಿದರು. ಡಾ| ಎಂ.ಎಸ್ ಕಾಮತ್, ಡಾ| ಸದಾನಂದ ಭಟ್, …

ಮವ್ವಾರು ಪಾಂಚಜನ್ಯ ಮಿತ್ರ ವೃಂದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಮವ್ವಾರು: ಇಲ್ಲಿನ ಪಾಂಚಜನ್ಯ ಮಿತ್ರ ವೃಂದ ಕ್ಲಬ್‌ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಕ್ಲಬ್ ಅಧ್ಯಕ್ಷ ಉದಯ ಕುಮಾರ್ ಸಿ.ಎಚ್ ಮವ್ವಾರು ಅಧ್ಯಕ್ಷತೆ ವಹಿಸಿದರು. ವರದಿ ವಾಚನ ಲೆಕ್ಕ ಪತ್ರಗಳನ್ನು ಮಂಡಿಸಲಾಯಿತು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾ ಯಿತು. ಗೌರವ ಸಲಹೆಗಾರರಾಗಿ ಡಾ| ಕೇಶವ ಕೆ. ಮವ್ವಾರು, ಗೌರವಾ ಧ್ಯಕ್ಷರಾಗಿ ಶಂಕರ ರೈ ಮವ್ವಾರು ಅವರನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ಉದಯ ಕುಮಾರ್ ಸಿ.ಎಚ್ ಮವ್ವಾರು, ಉಪಾಧ್ಯಕ್ಷರಾಗಿ ವಿಜಯ ಕುಮಾರ್ ಮವ್ವಾರು, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಎಂ …