ಬಂದಡ್ಕದಲ್ಲಿ ಸೆರೆಗೀಡಾದ ತಂಡ ಉತ್ತರಕೊರಿಯಕ್ಕೆ ಸಾಗಿಸಿದ್ದು ೮ ಮಂದಿಯನ್ನು: ಪ್ರತಿಫಲವಾಗಿ ಪಡೆದದ್ದು ೩೨ ಲಕ್ಷ ರೂ.

ಕಾಸರಗೋಡು: ಬಂದಡ್ಕದಲ್ಲಿ ಮೊನ್ನೆ ರಾತ್ರಿ ಸೆರೆಗೀಡಾದ ಮೂರು ಮಂದಿಯ ತಂಡ ಉತ್ತರ ಕೊರಿಯಕ್ಕೆ ೮ ಮಂದಿಯನ್ನು ಸಾಗಿಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಇದಕ್ಕಿಂತಲೂ ಹೆಚ್ಚು ಮಂದಿಯನ್ನು ಸಾಗಿಸಲಾಗಿದೆಯೇ ಎಂದು ತಿಳಿಯಲು ರಿಮಾಂಡ್‌ನಲ್ಲಿರುವ ಆರೋಪಿಗಳನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲು ಬೇಡಗಂ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ತೃಕ್ಕರಿಪುರ ಉಡುಂಬಂತಲದ ಎಂ.ಎ. ಅಹಮ್ಮದ್ ಅಬ್ರಾನ್ (೨೬), ಎಂ.ಎ. ಸಾಬಿತ್ (೨೫), ಪಡನ್ನ ಕ್ಕಾಡ್ ಕರುವಳದ ಮುಹಮ್ಮದ್ ಸಫ್ವಾನ್ (೨೫) ಎಂಬಿವರನ್ನು ಮೊನ್ನೆ ರಾತ್ರಿ ೯.೩೦ಕ್ಕೆ ಬಂದಡ್ಕ ಕಣ್ಣಾಡಿತ್ತೋಡ್ ಎಂಬಲ್ಲಿ ಬೇಡಗಂ ಎಸ್‌ಐ …

ಮನೆಯ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಿ.ಎಂ.ಎಸ್ ನೇತಾರ, ಆಟೋ ರಿಕ್ಷಾ ಚಾಲಕ ಮೃತ್ಯು

ಉಪ್ಪಳ: ಮನೆಯ ಮಹಡಿ ಯಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು  ಚಿಕಿತ್ಸೆಯಲ್ಲಿದ್ದ ಆಟೋ ರಿಕ್ಷಾ ಚಾಲಕ  ಮೃತ ಪಟ್ಟರು. ಕುಬಣೂರು ನಿವಾಸಿ ಬಂ ದ್ಯೋಡಿನಲ್ಲಿ ಕಳೆದ ೩೦ ವರ್ಷ ಗಳಿಂದ ಆಟೋ ರಿಕ್ಷಾ ಚಾಲಕನಾ ಗಿದ್ದ ಪದ್ಮನಾಭ (೫೦) ಮೃತಪಟ್ಟ ದುರ್ದೈವಿ. ಇವರು ಗುರುವಾರ ಸಂಜೆ ಕುಬಣೂರು ಪರಿಸರದ ನಿರ್ಮಾಣ ಹಂತದಲ್ಲಿರುವ ಮನೆಗೆ ಗ್ರಿಲ್ಸ್ ನಿರ್ಮಾಣಕ್ಕೆ ಕಾರ್ಮಿಕರನ್ನು ಕರೆದೊಯ್ದಿದ್ದರು.  ಅಲ್ಲಿ ಮೇಲಂತಸ್ತಿನಲ್ಲಿ ಕಾರ್ಮಿಕರ ಜೊತೆ ಅಳತೆ ತೆಗೆಯಲು ಸಹಕರಿಸುತ್ತಿದ್ದ ವೇಳೆ  ಪದ್ಮನಾಭ ಆಯತಪ್ಪಿ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು …

ಸ್ನೇಹಿತನನ್ನು ಕಾಣಲೆಂದು ತಿಳಿಸಿ ಹೋದ ವ್ಯಕ್ತಿ ನಿಗೂಢ ನಾಪತ್ತೆ

ಉಪ್ಪಳ: ಸ್ನೇಹಿತನನ್ನು ಭೇಟಿಯಾಗಲೆಂದು ತಿಳಿಸಿಹೋದ ವ್ಯಕ್ತಿ ಬಳಿಕ ಮನೆಗೆ ಮರಳದೆ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ. ಧರ್ಮತ್ತಡ್ಕ ನಿವಾಸಿ ಜೋನ್ ಡಿಸೋಜ (೬೦) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಜೋನ್ ಡಿಸೋಜಾ ನಿನ್ನೆ ಬೆಳಿಗ್ಗೆ ೬ ಗಂಟೆಗೆ ಪೆರ್ಮುದೆಯಲ್ಲಿರುವ ಸ್ನೇಹಿತ ಜೋಸೆಫ್ ಎಂಬವರನ್ನು ಭೇಟಿಯಾಗಲೆಂದು ತಿಳಿಸಿ ಸ್ಕೂಟರ್‌ನಲ್ಲಿ ತೆರಳಿದ್ದಾರೆನ್ನಲಾಗಿದೆ. ಆದರೆ ಅನಂತರ ಮನೆಗೆ ಮರಳಿ ಬಂದಿಲ್ಲ. ಈ ಬಗ್ಗೆ ಪೆರ್ಮುದೆಯ ಸ್ನೇಹಿತನಿಗೆ …

ಪೋಕ್ಸೋ ಪ್ರಕರಣ: ಆರೋಪಿಗೆ ೩೦ ವರ್ಷ ಕಠಿಣ ಸಜೆ

ಕಾಸರಗೋಡು: ಹದಿನಾಲ್ಕು ವರ್ಷದ ವಿದ್ಯಾರ್ಥಿನಿಯನ್ನು ಕ್ವಾರ್ಟರ್ಸ್‌ಗೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ. ದೀಪು ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೩೦ ವರ್ಷ ಕಠಿಣ ಸಜೆ ಹಾಗೂ ಆರು ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಇದರ ಹೊರತಾಗಿ ಆರೋಪಿಗೆ ೧,೮೦,೦೦೦ ರೂ. ಜುಲ್ಮಾನೆಯನ್ನೂ ನ್ಯಾಯಾಲಯ ವಿಧಿಸಿದೆ. ಉಳಿಯತ್ತಡ್ಕದ ಎ.ಕೆ. ಮೊಹಮ್ಮದ್ ಹನೀಫಾ (೬೧) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ …

ಅಭಿವೃದ್ಧಿಗೊಳ್ಳುತ್ತಿರುವ ಮಂಜೇಶ್ವರ ರೈಲು ನಿಲ್ದಾಣ:  ಹೆಚ್ಚಿನ ರೈಲುಗಳ ನಿಲುಗಡೆಗೆ ಸ್ಥಳೀಯರ ಬೇಡಿಕೆ

ಮಂಜೇಶ್ವರ: ಕಳೆದ ಹಲವು ವರ್ಷಗಳಿಂದ ಅವ್ಯವಸ್ಥೆಯಲ್ಲಿ ಮುಂದುವರಿಯುತ್ತಿದ್ದ ಮಂಜೇಶ್ವರ ರೈಲು ನಿಲ್ದಾಣ ಈಗ ಅಭಿವೃದ್ಧಿಯತ್ತ ಮುಖ ಮಾಡಿದೆ. ಹೊಸತಾಗಿ ಟಿಕೆಟ್ ಕೌಂಟರ್ ಕಟ್ಟಡ, ಮೇಲ್ಸೇತುವೆ ನಿರ್ಮಾಣವಾಗಿದೆ. ಪ್ಲಾಟ್ ಫಾರ್ಮ್‌ನ ನೆಲಕ್ಕೆ ಕಾಂಕ್ರೀಟ್ ಹಾಗೂ ಕಲ್ಲು ಹಾಸುವ ಕೆಲಸ ಈಗ ನಡೆಯುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಸಮತಟ್ಟುಗೊಳಿ ಸುವ ಕೆಲಸ ನಡೆಸಲಾಗುತ್ತಿದೆ. ಮಂಜೇಶ್ವರ ರೈಲು ನಿಲ್ದಾಣ ಅಭಿವೃದ್ಧಿಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಸಂತಸ ಉಂಟು ಮಾಡಿದೆ. ಆದರೆ ಇದರ ಪ್ರಯೋಜನ ಸ್ಥಳೀಯರಿಗೆ ಲಭಿಸಬೇ ಕಿದ್ದರೆ ಈ ನಿಲ್ದಾಣದಲ್ಲಿ ಹೆಚ್ಚಿನ ರೈಲು …

ಮಾಜಿ ನಗರಸಭಾ ಅಧ್ಯಕ್ಷರ ವಿರುದ್ಧ ಮುಸ್ಲಿಂಲೀಗ್ ಶಿಸ್ತುಕ್ರಮ: ಪಕ್ಷದ ಸ್ಥಾನಗಳಿಂದ ಹೊರಕ್ಕೆ

ಕಾಸರಗೋಡು: ಪಕ್ಷದ ಅನುಮತಿ ಇಲ್ಲದೆ ಕಾಸರಗೋಡು ನಗರಸಭಾ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಸರಗೋಡು ನಗರಸಭೆಯ ಮಾಜಿ ಅಧ್ಯಕ್ಷ ವಿ.ಎಂ. ಮುನೀರ್‌ರನ್ನು ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯತನ ಸೇರಿದಂತೆ ಪಕ್ಷದ ಇತರ ಎಲ್ಲಾ ಸ್ಥಾನ ಗಳಿಂದ ಮುಸ್ಲಿಂ ಲೀಗ್ ಹೊರತುಪಡಿಸಿದೆ. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಲ್ಲೆಟ್ರ ಮಾಹಿನ್ ಹಾಜಿ ತಿಳಿಸಿ ದ್ದಾರೆ. ಈ ಹಿಂದೆ ಮಾಡಿಕೊಳ್ಳ ಲಾದ  ತೀರ್ಮಾನ ಪ್ರಕಾರ ನಗರಸಭಾ …

ಪೈವಳಿಕೆಯ ಒಂದೇ ಕುಟುಂಬದ ನಾಲ್ವರನ್ನು  ಕೊಲೆಗೈದ ಪ್ರಕರಣ: ತೀರ್ಪು ಫೆ. ೨೭ರಂದು

ಕಾಸರಗೋಡು: ಪೈವಳಿಕೆಯಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಕಡಿದು ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲ ಯ (೩)ರಲ್ಲಿ ಪೂರ್ಣಗೊಂಡಿದ್ದು, ಇದರ ತೀರ್ಪನ್ನು ನ್ಯಾಯಾಲಯ ಫೆಬ್ರವರಿ ೨೭ಕ್ಕೆ ಮೀಸಲಿರಿಸಿದೆ. ಪೈವಳಿಕೆ ಸುದೆಂಬಳದ ರೇವತಿ (೬೦), ಇವರ ಸಹೋದರರಾದ ವಿಠಲ (೭೫), ಬಾಬು (೬೮) ಮತ್ತು ಸದಾಶಿವ (೫೦) ಎಂಬವರನ್ನು ಕೊಲೆಗೈದ ಪ್ರಕರಣವಾಗಿದೆ ಇದು. ಸುದೆಂಬಳದ ಉದಯ (೪೫) ಈ ಕೊಲೆ ಪ್ರಕರಣದ ಆರೋಪಿಯಾ ಗಿದ್ದಾನೆ. ೨೦೨೦ ಅಗೋಸ್ತ್ ೩ರಂದು ಸಂಜೆ ಈ ಸಾಮೂಹಿಕ …

ಯುವಕನಿಗೆ ಇರಿತ:  ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ಯುವಕನಿಗೆ ಇರಿದು ಗಾಯಗೊಳಿಸಿದ ದೂರಿನಂತೆ ಕಾಸರಗೋಡು ಕಡಪುರದ ಬಿಜೆಪಿ ಕೌನ್ಸಿಲರ್, ಕಾಸರಗೋಡು ಕಸಬಾದ ಅಜಿತ್ (೩೯)ರ ವಿರುದ್ಧ ಕಾಸರಗೋಡು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ಕಸಬಾ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಬಳಿ ನಿವಾಸಿ ಜಿಜು ಸುರೇಶ್ (೩೬) ಎಂಬವರು ನೀಡಿದ ದೂರಿ ನಂತೆ ಈ ಪ್ರಕರಣ ದಾಖಲಿಸ ಲಾಗಿದೆ. ಜನವರಿ ೩೧ರಂದು ರಾತ್ರಿ ನೆಲ್ಲಿಕುಂಜೆಯಲ್ಲಿ ಆರೋಪಿ ತನಗೆ ಇರಿದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಜಿಜು ಸುರೇಶ್ ಆರೋಪಿಸಿದ್ದಾರೆ. ಗಾಯಗೊಂಡ ಜಿಜುವನ್ನು ಮಂಗಳೂರಿನ …

ರೈಲಿನಿಂದ ಬಿದ್ದು ಅದೃಷ್ಟವಶಾತ್ ಪಾರಾದ ಯುವಕ

ಕಾಸರಗೋಡು: ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಹೊರಕ್ಕೆಸೆಯಲ್ಪಟ್ಟು ಅದೃಷ್ಟವಶಾತ್ ಭಾರೀ ಸಂಭಾವ್ಯ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಕೊಲ್ಲಂ ಕೊಯಿಳ್ಳಾ ನಿವಾಸಿ ಡಿಜೋ ಫೆರ್ನಾಂಡಿಸ್ ಅಪಾಯದಿಂದ ಪಾರಾದ ಯುವಕ. ಇಂದು ಮುಂಜಾನೆ ಉದಿನೂರಿನ   ಪೊದೆಯಲ್ಲಿ ಯುವಕ ಬಿದ್ದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಆತನ ಕೈ, ಕಾಲಿಗೆ ಗಾಯವುಂಟಾಗಿದೆ. ಆತನನ್ನು ಬಳಿಕ  ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ. ನಿನ್ನೆ ಸಂಜೆ ೭ ಗಂಟೆಗೆ ಈತ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ದಿಢೀರ್ ಆಗಿ ಚೆರ್ವತ್ತೂರು-ಪಯ್ಯನ್ನೂರು ಮಧ್ಯೆ ರೈಲಿನಿಂದ ಹೊರಕ್ಕೆಸೆಯಲ್ಪಟ್ಟಿದ್ದನು. …

ಏಷ್ಯಾಕಪ್ ಅಂತಾರಾಷ್ಟ್ರೀಯ ಕರಾಟೆ ಚಾಂಪ್ಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಗಡಿನಾಡಿನ ಬಾಲಕ ನಿಹಾಲ್

ಮಂಜೇಶ್ವರ: ಮುಂಬೈನಲ್ಲಿ ನಡೆದ ಏಷ್ಯಾಕಪ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕುಂಜತ್ತೂರು ತೂಮಿನಾಡಿನ ಅಬ್ದುಲ್ಲಾ ನಿಹಾಲ್ ನೌಶಾದ್ ಎರಡು ಚಿನ್ನ ಗೆದ್ದು ನಾಡಿಗೆ ಕೀರ್ತಿ ತಂದಿದ್ದಾನೆ. ಭಾರತ, ಶ್ರೀಲಂಕಾ, ಜಪಾನ್, ಭೂತಾನ್, ಬಾಂಗ್ಲಾದೇಶ ಮತ್ತು ನೇಪಾಳದ ಸ್ಪರ್ಧಿಗಳನ್ನು ಸೋಲಿಸಿ ಮಿಂಚಿದ ನಿಹಾಲ್ ಕಟ್ಟಾ ಮತ್ತು ಕುಮಿಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿದ್ದಾನೆ. ಈಗಾಗಲೇ ಜಿಲ್ಲಾ ಮತ್ತು ರಾಜ್ಯ ಕರಾಟೆ ಚಾಂಪಿಯನ್ ಶಿಪ್‌ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ನಿಹಾಲ್ ೨೦೧೯ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲೂ …