ಜ್ಯುವೆಲ್ಲರಿ ವರ್ಕ್‌ಶಾಪ್ ಮಾಲಕ ನಿಧನ

ಮುಳ್ಳೇರಿಯ: ಪೇಟೆಯಲ್ಲಿ ಜ್ಯುವೆಲ್ಲರಿ ಕೆಲಸದ ಅಂಗಡಿ ಹೊಂದಿದ್ದ ಮುಳ್ಳೇರಿಯ ಶ್ರೀ ಶಾರದ ನಿಲಯ ನಿವಾಸಿ ದಿ| ಕುಂಞಂಣ್ಣ ಆಚಾರ್ಯರ ಪುತ್ರ ಟಿ. ರಾಧಾಕೃಷ್ಣ ಆಚಾರ್ಯ (೬೫) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಇವರು ಚಿನ್ನದ ಕೆಲಸಗಾರರಾಗಿದ್ದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ರಂಜಿತ್, ಶ್ರುತಿ, ಅಳಿಯ ನಿರಂಜನ್, ಸೊಸೆ ಸ್ವಾತಿ, ಸಹೋದರಿಯರಾದ ಸುನಂದ, ಶಶಿಕಲಾ, ವಿಶಾಲಾಕ್ಷಿ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬದಿಯಡ್ಕದಲ್ಲಿ ಅಧ್ಯಾಪಿಕೆಯ ಸರ ಎಗರಿಸಿದ ಆರೋಪಿಗಾಗಿ ಶೋಧ ತೀವ್ರ

ಬದಿಯಡ್ಕ: ಬದಿಯಡ್ಕದಲ್ಲಿ ಅಧ್ಯಾಪಿಕೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಆರೋಪಿಗಾಗಿ ಪೊಲೀ ಸರು ಶೋಧ ತೀವ್ರಗೊಳಿಸಿದ್ದಾರೆ.  ಪೆರಡಾಲ ಶಾಲಾ ಅಧ್ಯಾಪಿಕೆಯಾ ಗಿರುವ ಅಶ್ವತಿ ಎಂಬವರ ಕುತ್ತಿಗೆಯಿಂದ ದುಷ್ಕರ್ಮಿಗಳು ಸರ ಎಗರಿಸಿ ಪರಾರಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ  ಬೋಳುಕಟ್ಟೆಯ ಕ್ವಾರ್ಟರ್ಸ್ ನಿಂದ ಅಧ್ಯಾಪಿಕೆ ಪೆರಡಾಲ ಜಿಎಚ್‌ಎಸ್‌ಗೆ  ಒಲದಾರಿ ಮೂಲಕ ನಡೆದುಹೋಗುತ್ತಿದ್ದಾಗ ಬಿಳಿ ಬಣ್ಣ್ಣದ ಸ್ಕೂಟರ್ ಆಗಮಿಸಿದೆ.  ಆ ವೇಳೆ ಅಧ್ಯಾಪಿಕೆ ರಸ್ತೆ ಬದಿಗೆ ಸರಿದು ನಿಂತಿದ್ದರು. ಈ ವೇಳೆ ಸಮೀಪಕ್ಕೆ ತಲುಪಿದ ದುಷ್ಕರ್ಮಿ ಅಧ್ಯಾಪಿಕೆಯ ಕುತ್ತಿಗೆಯಿಂದ ಸರ ಎಗರಿಸಲು ಯತ್ನಿಸಿದ್ದಾನೆ. …

ಪ್ರಮೀಳಾ ಮೃತದೇಹ ಪತ್ತೆ ಕಾರ್ಯಾಚರಣೆ ವಿಫಲ : ಕೊಚ್ಚಿಗೆ ಹಿಂತಿರುಗಿದ ಕಡಾವರ್ ಶ್ವಾನಗಳು

ಕಾಸರಗೋಡು: ಐದು ವರ್ಷಗಳ ಹಿಂದೆ ಕಾಸರಗೋಡು ವಿದ್ಯಾನಗರ ಪನ್ನಿಪ್ಪಾರೆಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಕೊಲೆಗೈಯ್ಯಲ್ಪಟ್ಟ ಎರಡು ಮಕ್ಕಳ ತಾಯಿ ಮೂಲತಃ ಕೊಲ್ಲಂ ಇರವಿಪರಂ ವಾಳತ್ತಿಂಗಲ್  ವೇಳಿ ವೀಟಿಲ್‌ನ ಪ್ರಮೀಳ (೩೦)ಳ ಮೃತದೇಹ ಪತ್ತೆಹಚ್ಚುವ ಕಾರ್ಯ ವಿಫಲಗೊಂಡಿದೆ. ಮಣ್ಣಿನ ಅಡಿಭಾಗದಲ್ಲಿರುವ ಮನುಷ್ಯರ ಮೃತದೇಹಗಳನ್ನು ವಾಸನೆ ಮೂಲಕ ಪತ್ತೆಹಚ್ಚುವ ವಿಶೇಷ ರೀತಿಯ ತರಬೇತಿ ಲಭಿಸಿದ ಕೇರಳ ಪೊಲೀಸ್  ಇಲಾಖೆಯ ಕೊಚ್ಚಿ ಕೇಂದ್ರದಲ್ಲಿರುವ ಬಲ್‌ಜಿಯಾನ್ ಮೆಲಿನೋಯ್ಸ್ ತಳಿಗೆ ಸೇರಿದ ಮರ್ಫಿ ಮತ್ತು ಮಾಯಾ ಎಂಬ ಎರಡು ಕಡಾವರ್  ಪೊಲೀಸ್ ಶ್ವಾನಗಳನ್ನು ಕಾಸರಗೋಡಿಗೆ ತಂದು …

ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣ: ತೀರ್ಪು ನೀಡಿದ ನ್ಯಾಯಾಧೀಶರಿಗೆ ಬೆದರಿಕೆ; ನಾಲ್ಕು ಮಂದಿ ಸೆರೆ

ಆಲಪ್ಪುಳ: ಒಬಿಸಿ ಮೋರ್ಚಾ ರಾಜ್ಯಕಾರ್ಯದರ್ಶಿ ನ್ಯಾಯವಾದಿ ರಂಜಿತ್ ಶ್ರೀನಿವಾಸನ್‌ರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಘೋಷಿಸಿದ ಮಾವೇಲಿಕ್ಕರ ಅಡಿಶನಲ್ ಸೆಶನ್ಸ್ ನ್ಯಾಯಾಧೀಶರಾದ ಶ್ರೀದೇವಿಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಹಾಗೂ ಬೆದರಿಕೆಯೊಡ್ಡಿದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಣ್ಣಂಚೇರಿ ಪಂಚಾಯತ್ ವ್ಯಾಪ್ತಿಯ ಕುಂಬಳತ್ತು ವೆಳಿ ವೀಟಿಲ್‌ನ ನಸೀರ್ ಮೋನ್ (೪೭), ತಿರುವನಂತಪುರದ ಮಂಗಲಪುರಂ ಸಕೀರ್ ಮಂಜಿಲ್‌ನ ರಾಫಿ (೩೮), ಮಣ್ಣಂಚೇರಿ ಪೊನ್ನಾಡ್ ತೇವರಂಶೇರಿ ನವಾಸ್ ನೈನ (೪೨), ಅಂಬಲಪ್ಪುಳ ವಡಕ್ಕ್ ವಿಲ್ಲೇಜ್‌ನಲ್ಲಿ ವಡಾನಂ ಪುದುವಲ್ ವೀಟಿಲ್ ಶಾಜಹಾನ್ …

ಅಬ್ಬಾಸ್ ಬೀಗಂ ಕಾಸರಗೋಡು ನಗರಸಭೆಯ ಹೊಸ ಅಧ್ಯಕ್ಷ

ಕಾಸರಗೋಡು: ಕಾಸರಗೋಡು ನಗರಸಭೆಯ ಹೊಸ ಅಧ್ಯಕ್ಷರಾಗಿ ಚೇರಂಗೈ ಈಸ್ಟ್ ವಾರ್ಡ್‌ನ ಮುಸ್ಲಿಂ ಲೀಗ್ ಕೌನ್ಸಿಲರ್ ಅಬ್ಬಾಸ್ ಬೀಗಂ ವಿದ್ಯುಕ್ತವಾಗಿ ಆಯ್ಕೆಗೊಂಡಿದ್ದಾರೆ. ಕಾಸರಗೋಡು ನಗರಸಭಾ ಕೌನ್ಸಿಲ್ ಹಾಲ್‌ನಲ್ಲಿ ನಿನ್ನೆ ನಡೆದ ಚುನಾವಣೆಯಲ್ಲಿ ನಗರಸಭೆಯ ಎಲ್ಲಾ ೩೭ ಕೌನ್ಸಿಲರ್‌ಗಳೂ ಭಾಗವಹಿಸಿದ್ದರು. ಇದರಲ್ಲಿ ಅಬ್ಬಾಸ್ ಬೀಗಂ ರಿಗೆ ೨೦ ಮತ್ತು ಪ್ರತಿಸ್ಪರ್ಧಿ ಅಣಂಗೂರು ವಾರ್ಡ್‌ನ ಬಿಜೆಪಿ ಕೌನ್ಸಿಲರ್ ಪಿ. ರಮೇಶ್‌ರಿಗೆ ೧೪ ಮತಗಳು ಲಭಿಸಿ ದುವು. ಆ ಮೂಲಕ ಅಬ್ಬಾಸ್ ಬೀಗಂ ರನ್ನು ವಿಜಯಿಯಾಗಿ ಘೋಷಿಸಲಾ ಯಿತು. ಅದಾದ ಕೂಡಲೇ ಅಬ್ಬಾಸ್ …

ಪೋಕ್ಸೋ ಪ್ರಕರಣದ ಸಂತ್ರಸ್ತೆಯ ಫೋಟೋ ಪ್ರಕಟಿಸಿದುದರ ವಿರುದ್ಧ ಕೇಸು ದಾಖಲು

ಬದಿಯಡ್ಕ: ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾದ ಬಾಲಕಿಯ ಭಾವಚಿತ್ರ ಹಾಗೂ ಪೂರ್ಣ ಮಾಹಿತಿಗಳನ್ನು ಪ್ರಕಟಿಸಿದ ಸಂಜೆ ಪತ್ರಿಕೆ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಕಾಸರಗೋಡಿನಿಂದ ಪ್ರಕಟವಾಗುವ ಪತ್ರಿಕೆಯ (ಕಾರವಲ್ ಅಲ್ಲ) ವಿರುದ್ಧ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸಂತ್ರಸ್ತೆಯಾದ ಬಾಲಕಿಯ ಭಾವಚಿತ್ರ ಹಾಗೂ ಆಕೆಯನ್ನು  ಗುರುತು ಹಚ್ಚಬಹುದಾದ ಮಾಹಿತಿಗಳನ್ನು ಪ್ರಕಟಿಸಲಾಯಿತೆಂಬುದಕ್ಕೆ ಸಂಬಂಧಿಸಿ ಗುಪ್ತಚರ ವಿಭಾಗ ನೀಡಿದ ವರದಿಯ ಆಧಾರದಲ್ಲಿ ಕೇಸು ದಾಖಲಿಸಲಾಗಿದೆ.

ರಸ್ತೆ ಕುಸಿದ ಸ್ಥಳದಲ್ಲಿ ಹಗ್ಗಕಟ್ಟಿದ ಲೋಕೋಪಯೋಗಿ ಇಲಾಖೆ: ವಾಹನ ಸಂಚಾರಕ್ಕೆ ಭೀತಿ

ಪೈವಳಿಕೆ: ರಸ್ತೆ ಕುಸಿದು ಅಪಾಯ ಸಂಭವಿಸಲು ಸಾಧ್ಯತೆ ಇದೆಯೆಂದು ಅಧಿಕಾರಿಗಳಿಗೆ ತಿಳಿಸಿದಾಗ ಅವರು ತಲುಪಿ  ಹಗ್ಗ ಕಟ್ಟಿ ಎಚ್ಚರಿಕೆ ಬೋರ್ಡ್ ಸ್ಥಾಪಿಸಿ ತೆರಳಿದ್ದಾರೆಂದು ಸ್ಥಳೀಯರು  ತಿಳಿಸುತ್ತಾರೆ. ಹಗ್ಗ ಕಟ್ಟಿದರೆ ಅಪಾಯ ತಪ್ಪಿಸಬಹುದೇ ಎಂಬ ಚಿಂತೆ ಈಗ ಸ್ಥಳೀಯ ರಲ್ಲಿದ್ದು, ಇದು ರೋಷಕ್ಕೆ ಕಾರಣವಾಗಿದೆ. ಮುಳಿಗದ್ದೆ-ಬಳ್ಳೂರು ರಸ್ತೆಯ ಪೆರ್ವೋಡಿಯಲ್ಲಿ ರಸ್ತೆ ಕುಸಿದು ಏಳು ತಿಂಗಳು ಕಳದಿದೆ. ಆದರೂ  ದುರಸ್ತಿಯಾಗದೆ ಲೋಕೋಪಯೋಗಿ ಇಲಾಖೆಯ ಈ ರಸ್ತೆಯ ಬಗ್ಗೆ ವಾರ್ಡ್ ಪ್ರತಿನಿಧಿ ಜಯಲಕ್ಷ್ಮಿ ಭಟ್‌ರ ನೇತೃತ್ವದಲ್ಲಿ ಸ್ಥಳೀಯರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ …

ಕಾಸರಗೋಡು ಮೆಡಿಕಲ್ ಕಾಲೇಜು ಎರಡು ವರ್ಷದೊಳಗೆ ಕಾರ್ಯಾರಂಭ-ಸಚಿವೆ

ತಿರುವನಂತಪುರ: ಕಾಸರಗೋಡು ಮೆಡಿಕಲ್ ಕಾಲೇಜಿನ ಚಟುವಟಿಕೆ ಎರಡು ವರ್ಷದೊಳಗೆ ಆರಂಭಿಸುವ ಗುರಿಯಿರಿಸಲಾಗಿ ದೆಯೆಂದು ಸಚಿವೆ ವೀಣಾ ಜೋರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ೫೦ ಸೀಟುಗಳೊಂದಿಗೆ ಎಂ.ಬಿ.ಬಿ.ಎಸ್ ಕೋರ್ಸ್ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಎರಡು ವರ್ಷಗಳಿಂದ ಕಾರ್ಯಾಚರಿಸುವ ಆಸ್ಪತ್ರೆ ಬೇಕೆಂದು ರಾಷ್ಟ್ರೀಯ ಮೆಡಿಕಲ್ ಕಮಿಶನ್‌ನ ನಿಬಂಧನೆ ಯಾಗಿದೆ. ಆಸ್ಪತ್ರೆ ಕಟ್ಟಡ ಪೂರ್ತಿಗೊಳಿ ಸಲು ಕಿಫ್‌ಬಿ ೧೬೦ ಕೋಟಿ ರೂಪಾಯಿ ಮಂಜೂರು ಮಾಡಿದೆ. ಅಕಾಡೆಮಿಕ್ ಬ್ಲಾಕ್ ಪೂರ್ಣಗೊಂ ಡಿದೆ. ಹಾಸ್ಟೆಲ್ ಕಟ್ಟಡಗಳ ಸಹಿತ ೭೫ ಶೇ. ಪೂರ್ತಿಯಾಗಿದೆ. ೨೭೩ ಅಧ್ಯಾಪಕ, ಅನಧ್ಯಾಪಕ …

ಆರಿಕ್ಕಾಡಿ ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡಾವಳಿ ಮಹೋತ್ಸವ ಸಮಾಪ್ತಿ

ಉಪ್ಪಳ: ಕುಂಬಳೆ ಆರಿಕ್ಕಾಡಿ ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡಾ ವಳಿ ಮಹೋತ್ಸವ ವಿವಿಧ ಕಾರ್ಯ zಕ್ರಮಗಳೊಂದಿಗೆ ಸಮÁಪ್ತಿಗೊಂ ಡಿದೆ. ಅಂದು ಬೆಳಿಗ್ಗೆ ಗಣಪತಿ ಹೋಮ, ಮೂಲಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟೆಗೆ ಶುದ್ದಿ ಕಲಶ ಮತ್ತು ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ಹೂವಿನ ಪೂಜೆ, ತುಲಾಭಾರ ಸೇವೆ, ಭಗವತೀ ದರ್ಶನ, ಕೆಂಡಸೇವೆ, ಬಿಂಬ ಬಲಿ ದರ್ಶನ ಮೊದಲಾದ ಕಾರ್ಯಕ್ರಮ ನಡೆಯಿತು.

ಮೊಬೈಲ್‌ನಲ್ಲಿ ಸಿನಿಮಾ ವೀಕ್ಷಣೆ: ಪುತ್ರನನ್ನು ಕೊಲೆಗೈದ ತಂದೆ

ಮುಂಬಯಿ: ಮೊಬೈಲ್‌ನಲ್ಲಿ ನಿರಂತರ ಅಶ್ಲೀಲ ಸಿನಿಮಾ ವೀಕ್ಷಿಸುತ್ತಿದ್ದ ೧೪ರ ಹರೆಯದ ಮಗನನ್ನು ತಂದೆ ವಿಷ ಕುಡಿಸಿ ಕೊಲೆಗೈದ ಘಟನೆ ಮಹಾರಾಷ್ಟ್ರದ ಸೋಲಾಪುರ್‌ನಲ್ಲಿ ನಡೆದಿದೆ. ಈ ಸಂಬಂಧ ಸೋಲಾಪುರ್ ನಗರದಲ್ಲಿ ವಾಸಿಸುವ ವಿಜಯ್ ಬಟ್ಟು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಾಲಾ ತರಗತಿಗಳಲ್ಲಿ ಬಾಲಕ ನಿರಂತರವಾಗಿ ಮೊಬೈಲ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾನೆಂಬ ಬಗ್ಗೆ ದೂರು ಲಭಿಸಿದುದರಿಂದ ಕಂಗೆಟ್ಟ ವಿಜಯ್ ಬಟ್ಟು ಈ  ಕೃತ್ಯಕ್ಕೆ ಮುಂದಾಗಿದ್ದಾರೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ. ಜನವರಿ ೧೩ರಂದು ಪುತ್ರ ನಾಪತ್ತೆಯಾಗಿ ರುವುದಾಗಿ ತಿಳಿಸಿ ವಿಜಯ್ …