ರಾಜಗೋಪುರ ದೇವಾಲಯಕ್ಕೆ ಶೋಭೆ- ಎಡನೀರು ಶ್ರೀ

ಬದಿಯಡ್ಕ: ರಾಜಗೋಪುರ ದೇವಸ್ಥಾನಕ್ಕೆ ಹಾಗೂ ಊರಿಗೆ ಶೋಭೆಯನ್ನು ತರುತ್ತದೆ. ದೇವಾಲಯಗಳು ಊರಿನ ಔನತ್ಯದ ಪ್ರತೀಕವಾಗಿದೆ. ದೇವಮಂದಿರಗಳು, ವಿದ್ಯಾಲಯಗಳು ಉಚ್ಚಸ್ಥಾನದಲ್ಲಿದ್ದರೆ ಆ ಊರು ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು  ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು, ದೇವಾಲಯದ ಮುಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ರಾಜಗೋಪುರಕ್ಕೆ ಶಿಲಾನ್ಯಾಸಗೈದು ಅವರು ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ ವರನ್ನು ಈ …

ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರ ಕಳಿಯಾಟ ಮಹೋತ್ಸವ ಮಾ.೧ರಿಂದ

ಸೀತಾಂಗೋಳಿ: ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಮಾರ್ಚ್ ೧ರಿಂದ ೭ರವರೆಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಕೇರಳದ ಪ್ರಧಾನ ೧೮ ಮುಚ್ಚಿ ಲೋಟ್ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ೨೦೨೦ರ ಮಾರ್ಚ್‌ನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದೆ. ಈ ವೇಳೆ ನಡೆಸಲು ಉದ್ದೇಶಿಸಿದ್ದ ಕಳಿಯಾಟ ಮಹೋತ್ಸವ ಮಾರ್ಚ್ ೧ರಿಂದ ನಡೆಸಲಾಗುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಲಾ ಗಿದೆ. ಈ ಮೊದಲು ೨೦೦೪ರಲ್ಲಿ ಇಲ್ಲಿ ಕಳಿಯಾಟ ಮಹೋತ್ಸವ ನಡೆದಿದೆ. ಮಾ.೧ರಂದು …

ನರೇಂದ್ರಮೋದಿಯವರು ನೀಡುವುದು ಯಶಸ್ವಿ ಗ್ಯಾರೆಂಟಿ-ಸದಾನಂದ ಗೌಡ

ಕಲ್ಲಿಕೋಟೆ: ಪ್ರಧಾನಮಂತ್ರಿ ನರೇಂದ್ರಮೋದಿ ಜನರಿಗೆ ನೀಡುವ ಅಭಿವೃದ್ಧಿಯ ಗ್ಯಾರೆಂಟಿ ಭಾರತದ ಇತರೆಡೆಗಳಲ್ಲಿ ಯಶಸ್ವಿಯಾದ ಮಾದರಿ ಯೋಜನೆಗ ಳಾಗಿವೆಯೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ರೈಲ್ವೇ ಸಚಿವ ಡಿ.ವಿ. ಸದಾನಂದ  ಗೌಡ ನುಡಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಎನ್‌ಡಿಎ ಕೇರಳ ಪಾದಯಾತ್ರೆಯನ್ನು ವಡಗರದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರ ಕೇರಳವನ್ನು ಅವಗಣಿಸುತ್ತಿದೆಯೆಂಬ ರಾಜ್ಯ ಆಡಳಿತ ಪಕ್ಷದ ಆರೋಪ ಸುಳ್ಳು. ಕೇಂದ್ರ ಸರಕಾರ ಕೇರಳಕ್ಕೆ ೫೭,೦೦ ಕೋಟಿ ರೂಪಾಯಿ ನೀಡಲು ಬಾಕಿಯಿದೆಯೆಂಬ …

ರಾಜ್ಯದ ಮತದಾರರಲ್ಲಿ ಶೇ. ೫೨ರಷ್ಟು ಮಹಿಳೆಯರು ಆದರೆ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇ. ೮.೫ ಮಾತ್ರ

ಕಾಸರಗೋಡು: ಕೇರಳದ ಒಟ್ಟು ಮತದಾರರ ಪೈಕಿ ಶೇ. ೫೨ರಷ್ಟು ಮಹಿಳೆಯರೇ ಆಗಿದ್ದು,  ಅಂದರೆ ರಾಜ್ಯ ವಿಧಾನಸಭೆಯಲ್ಲಿ ಅವರ ಪ್ರಾತಿನಿಧ್ಯ ಕೇವಲ ೮.೫ ಮಾತ್ರವೇ ಆಗಿದೆ. ಮಹಿಳೆಯರಿಗೆ ಶೇ. ೩೩ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಎಡರಂಗ, ಐಕ್ಯರಂಗ ಮತ್ತು ಎನ್‌ಡಿಎ ಹೇಳುತ್ತಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ೪೭ ಮಹಿಳೆಯ ರನ್ನು  ಮಾತ್ರವೇ ಈ ಮೂರು ಒಕ್ಕೂ ಟಗಳು ಚುನಾವಣಾ ರಂಗಕ್ಕಿಳಿಸಿದ್ದವು. ಇದರಲ್ಲಾದರೋ ಗೆಲುವು ಸಾಧಿಸಿದ್ದು ೧೨ ಮಂದಿ ಮಾತ್ರವಿರುವ ಕೇರಳ ಅಂದರೆ ಒಟ್ಟು ೧೪೦ ವಿಧಾನಸಭಾ ಕ್ಷೇತ್ರಗಳು ಹಾಗೂ ಮತದಾರರಲ್ಲಿ …

ಐದು ವರ್ಷಗಳ ಹಿಂದೆ ನಡೆದ ಯುವತಿಯ ಕೊಲೆ: ಕೊಚ್ಚಿಯಿಂದ ಬಂದ ವಿಶೇಷ ಪರಿಣಿತ ಜೋಡಿ

ಪೊಲೀಸ್ ಶ್ವಾನ ಬಳಸಿ ಮೃತದೇಹ ಶೋಧ ಆರಂಭ ಕಾಸರಗೋಡು: ಐದು ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಯುವತಿಯ ಮೃತದೇಹ ಪತ್ತೆಹಚ್ಚಲು ಈ ಹಿಂದೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ಗಳೆಲ್ಲಾ ವಿಫಲಗೊಂಡ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬದಿಗಿರಿಸಲಾಗಿದ್ದ ಅದರ ಶೋಧ ಕಾರ್ಯಾ ಚರಣೆಯನ್ನು ಪೊಲೀಸರು ಮತ್ತೆ ಆರಂಭಿಸಿದ್ದಾರೆ. ಮೂಲತಃ ಕೊಲ್ಲಂ ಇರವಿಪುರಂ ವಾಳತ್ತಿಂಗಲ್ ವೇಳಿ ವೀಟಿಲ್‌ನ  ಪ್ರಮೀಳ (೩೦) ಎಂಬಾಕೆಯ ಮೃತದೇಹದ ಪತ್ತೆಗಾಗಿರುವ ಕಾರ್ಯಾಚರಣೆಗೆ ಈಗ ಮರುಜೀವ ನೀಡಲಾಗಿದೆ. ಪ್ರಮೀಳ ಪತಿ ಮೂಲತಃ ತಳಿಪರಂಬ ಆಲಕ್ಕೋಡು ನಿವಾಸಿ ಸೆಲ್ವರಾಜ್‌ನೊಂದಿಗೆ  ಕಾಸರ …

ಅನ್ಯಜಾತಿ ಯುವಕನನ್ನು ಪ್ರೀತಿಸಿದ ದ್ವೇಷ ಯುವತಿ, ಯುವಕನನ್ನು ಇರಿದು ಕೊಲೆ

ಚೆನ್ನೈ: ಅನ್ಯಜಾತಿಗೊಳಪಟ್ಟ ಯುವಕನನ್ನು ಪ್ರೀತಿಸಿದ ದ್ವೇಷದಿಂದ ಯುವತಿಯನ್ನು ಹಾಗೂ ಯುವಕನನ್ನು ಇರಿದು ಕೊಲೆಗೈದ ಘಟನೆ ತಮಿಳು ನಾಡಿನ ಮಧುg ಯಲ್ಲಿ ನಡೆದಿದೆ. ಮಹಾಲಕ್ಷ್ಮಿ ಹಾಗೂ ಸತೀಶ್ ಎಂಬಿವರು ಕೊಲೆಗೀಡಾದವರಾಗಿದ್ದಾರೆ. ಸತೀಶ್‌ನ ತಲೆಯನ್ನು ಕಡಿದು ಬೇರ್ಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಧುರೆ ತಿರು ಮಂಗಲದಲ್ಲಿ ಈ ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ. ಯುವತಿಯ ಹತ್ತಿರದ ಸಂಬಂಧಿಕನೇ ಈ ಕೃತ್ಯ ನಡೆಸಿರುವುದಾಗಿ ಹೇಳಲಾಗುತ್ತಿದೆ. ಮಹಾಲಕ್ಷ್ಮಿ ಹಾಗೂ ಸತೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ವಿರೋಧಿಸಿದ ಕುಟುಂಬ ಮಹಾಲಕ್ಷ್ಮಿಯನ್ನು ಬೇರೊಬ್ಬನಿಗೆ …

ಹನಿಟ್ರಾಪ್‌ನಲ್ಲಿ ಸಿಲುಕಿಸಿ ೫ ಲಕ್ಷ ರೂ. ಲಪಟಾವಣೆ: ಆರೋಪಿಗಳನ್ನು ಕಸ್ಟಡಿಗೆ ತೆಗೆದು ಹೆಚ್ಚಿನ ತನಿಖೆಗೊಳಪಡಿಸಲು ಪೊಲೀಸ್ ನಿರ್ಧಾರ

ಕಾಸರಗೋಡು: ಮಾಂಗಾಡ್ ನಿವಾಸಿಯಾದ ೫೯ರ ಹರೆಯದ ವ್ಯಕ್ತಿಯನ್ನು ಹನಿಟ್ರಾಪ್‌ನಲ್ಲಿ ಸಿಲುಕಿಸಿ ೫ ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಸೆರೆಗೀಡಾದ ಇಬ್ಬರು ಯುವತಿಯರ ಸಹಿತ ಏಳು ಮಂದಿಯನ್ನು ಹೆಚ್ಚಿನ ತನಿಖೆಗೊಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಇದೀಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಕಸ್ಟಡಿಗೆ ತೆಗೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ. ಫೈಸಲ್ (೩೭), ಪತ್ನಿ ಕುಟ್ಟಿಕಾ ಟೂರ್ ನಿವಾಸಿ ಎಂ.ಪಿ. ಲುಬ್ನಾ (೨೯), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್. ಸಿದ್ದಿಕ್ (೪೮), …

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗಪೂಜೆ ಆರಂಭ

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಇಂದು ಬೆಳಿಗ್ಗೆಯಿಂದ ಪೂಜಾ ಕ್ರಮಗಳು ಆರಂಭಗೊಂಡಿದೆ. ಮಸೀದಿ ಸಂಕೀರ್ಣದ ನೆಲಮಾಳಿಗೆ ಯಲ್ಲಿ ಪೂಜಿಸುವ ಹಕ್ಕನ್ನು  ವಾರಣಾಸಿ ಜಿಲ್ಲಾ ನ್ಯಾಯಾಲಯ ಹಿಂದೂಗಳಿಗೆ ನೀಡುವ ಮಹತ್ತರ ತೀರ್ಪುನ್ನು ನಿನ್ನೆ ನೀಡಿತ್ತು. ಈ ತೀರ್ಪು ಹೊರಬಂದ ಬೆನ್ನಲ್ಲೇ ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲಮಾಳಿಗೆಗೆ ನಿನ್ನೆಯಿಂದಲೇ ಹಿಂದೂ ಭಕ್ತರು ಹರಿದುಬರತೊಡಗಿದ್ದಾರೆ.  ಭಕ್ತರ ಹರಿದುಬರುವಿಕೆ ಇಂದು ಬೆಳಿಗ್ಗಿನಿಂದ ಹೆಚ್ಚಾಗುತ್ತಾ ಸಾಗತೊಡಗಿದ್ದು ಅದರ ಜತೆಗೆ  ಪೂಜೆಯೂ   ಆರಂಭಗೊಂಡಿದೆ. ವಾರಣಾಸಿ ಮೆಜಿಸ್ಟ್ರೇಟ್ ಮತ್ತು ಶ್ರೀ ಕಾಶೀ ವಿಶ್ವನಾಥ ದೇವಸ್ಥಾನ …

೪೦ ಲೀಟರ್ ಕರ್ನಾಟಕ ಮದ್ಯ ಪತ್ತೆ: ಓರ್ವ ಸೆರೆ

ಕಾಸರಗೋಡು: ಕೂಡ್ಲಿನಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೪೦.೬೮ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಕೂಡ್ಲು ಶಿವಶಕ್ತಿ ನಗರದ ಅಶೋಕ್ ಕುಮಾರ್ (೫೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಸಾಜನ್ ಎ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಜಿತ್ ಕೆ.ಆರ್, ಮಂಜುನಾಥ ವಿ, …

ಬಸ್ ಮಾಲಕ ನಿಧನ

ಕಾಸರಗೋಡು: ಬಸ್ ಮಾಲಕ ಸೀತಾಂಗೋಳಿಯ ನಾರಾಯ ಣನ್ (೬೦) ನಿಧನಹೊಂದಿದರು. ಬಸ್ ಮಾಲಕರ ಸಂಘದ ತಾಲೂಕು ಸಮಿತಿ ಸದಸ್ಯರಾದ ಇವರು ಅಡೂರು-ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ದುರ್ಗಾ ಬಸ್‌ನ ಮಾಲಕರಾಗಿದ್ದರು.  ಕೆಎಸ್‌ಆರ್‌ಟಿಸಿ ನೌಕರನೂ ಆಗಿದ್ದರು.  ಮೃತರು ಪತ್ನಿ ಸುಮಲತ, ಮಕ್ಕಳಾದ ಶ್ರುತಿ, ಅಕ್ಷಯ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಾರಾಣಯನ್‌ರ ನಿಧನಕ್ಕೆ ಬಸ್ ಆನರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳು ಸಂತಾಪ ಸೂಚಿಸಿವೆ. ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದರು.