ಏಳು ತಿಂಗಳ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

ಇಡುಕ್ಕಿ: ಏಳು ತಿಂಗಳ ಮಗುವನ್ನು ಕೊಲೆಗೈದ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಇಡುಕ್ಕಿ ತೋಪ್ರಾಂಕುಡಿ ಎಂಬಲ್ಲಿ ನಡೆದಿದೆ. ಸ್ಕೂಲ್ ಸಿಟಿ ಪುತ್ತನ್ ಪುರಯ್ಕಲ್‌ನ ಡೀನು ಲೂಯಿಸ್ (೩೫) ಎಂಬಾಕೆ ಸಾವಿಗೀಡಾದ ಯುವತಿ.  ಡೀನುವಿನ ಪತಿ ಲೂಯಿಸ್ ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನ್ನಲಾಗಿದೆ. ಇಂದು ಬೆಳಿಗ್ಗೆ ಡೀನು ಹಾಗೂ ಮಗು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಸಂಬಂಧಿಕರು ಇಡುಕ್ಕಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ತ್ಯಾಜ್ಯ ಉಪೇಕ್ಷೆ: ಕುಂಬಳೆ ಪಂ.ಗೆ ೧೦,೦೦೦ ರೂ. ದಂಡ

ಕುಂಬಳೆ: ಪಂಚಾಯತ್‌ನ ತ್ಯಾಜ್ಯ ಸಂಗ್ರಹ ಕೇಂದ್ರವಾದ ಎಂಸಿಎಫ್‌ನ ಹೊರಗೆ ನಿರ್ಲಕ್ಷ್ಯವಾಗಿ ತ್ಯಾಜ್ಯವನ್ನು ರಾಶಿ ಹಾಕಿರುವುದಕ್ಕೆ ಸಂಬಂಧಿಸಿ ಕುಂಬಳೆ ಪಂಚಾಯತ್‌ಗೆ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ೧೦,೦೦೦ ರೂ. ದಂಡ ವಿಧಿಸಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪೇಕ್ಷಿಸಿದ ಬಗ್ಗೆ ಕುಂಬಳೆಯ ಮುಹಮ್ಮದ್ ರಿಫಾಯಿ ಎಂಬವರ ಮಾಲಕತ್ವದ ಕಟ್ಟಡಕ್ಕೊ, ಬಿ.ಎಸ್. ಅಬ್ದುಲ್ ರಜಾಕ್ ಎಂಬವರ ಬಾಡಿಗೆ ಕ್ವಾರ್ಟರ್ಸ್‌ಗೂ, ಆಯಿಷಾ ಬಿ ಎಂಬವರ ಬಾಡಿಕೆ ಕಟ್ಟಡಕ್ಕೂ, ಪರಿಸರ ಶುಚೀಕರಿಸದ ಹಿನ್ನೆಲೆಯಲ್ಲಿ ಎಂ. ಪ್ರಶಾಂತ್ ಎಂಬವರಿಗೂ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ದಂಡ ಹೇರಿದೆ. ಈ ಬಗ್ಗೆ ಕ್ರಮ …

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿ) ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಮತ್ತೆ ಹೆಚ್ಚಿಸಿದೆ. ಇದರಂತೆ ೧೯ ಕೆ.ಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ೧೪ ರೂ.ನಂತೆ ಹೆಚ್ಚಿಸಲಾಗಿದೆ. ಈ ಹೊಸದರ ಇಂದಿನಿಂದಲೇ ಜ್ಯಾರಿಗೊಳಿಸಲಾಗಿದೆ. ಬೆಲೆಯೇರಿಕೆ ನಂತರ ದಿಲ್ಲಿಯಲ್ಲಿ ೧೯ ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ ೧,೭೫೯.೫೦ ರೂ.ಗೇರಿದೆ. ಇತರ ರಾಜ್ಯಗಳಲ್ಲಿ ಸಾಗಾಣಿಕೆ ವೆಚ್ಚ ಸೇರಿ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಆದರೆ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳ ದರದಲ್ಲಿ ಯಾವುದೇ ರೀತಿಯ …

ಮೂರನೇ ಸೀಟಿಗಾಗಿ ಒತ್ತಡ ತಂತ್ರ ಹೇರಲ್ಲ- ಮು.ಲೀಗ್

ಮಲಪುರಂ: ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಯುಡಿಎಫ್‌ನೊಳಗಿನ ಸೀಟು ಹಂಚಿಕೆಯಲ್ಲಿ ನಮಗೆ ಮೂರು ಸೀಟು ಲಭಿಸಿಯೇ ಸಿದ್ಧ ಎಂಬ ಬಿಗಿ ನಿಲುವು ನಾವು ಹೊಂದಿಲ್ಲವೆಂದು ಮುಸ್ಲಿಂ ಲೀಗ್ ಹೇಳಿದೆ.ಮಾತ್ರವಲ್ಲ ಅದಕ್ಕಾಗಿ ಒತ್ತಡ ತಂತ್ರವನ್ನು ಹೇರುವುದಿಲ್ಲ. ಮೂರನೇ ಸೀಟಿಗಾಗಿರುವ ಬೇಡಿಕೆಯನ್ನು ನಾವು ಯುಡಿಎಫ್ ಸಭೆಯಲ್ಲಿ ಮುಂದಿರಿಸಲಿದ್ದೇವೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್‌ನ್ನು  ಒತ್ತಡಕ್ಕೆ ಸಿಲುಕಿಸುವಂತೆ ಮಾಡುವ ಕ್ರಮ ಮುಸ್ಲಿಂ ಲೀಗ್‌ನಿಂದ ಉಂಟಾಗದು. ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸದೆ ಇದ್ದಲ್ಲಿ ಆ ಸೀಟನ್ನು ನಮಗೆ ನೀಡಬೇಕೆಂದು ಲೀಗ್ ಹೇಳಿದೆ. ಆದರೆ ವಯನಾಡಿನಲ್ಲಿ  …

ಬಾವಿಕ್ಕೆರೆ ಅಣೆಕಟ್ಟಿನಲ್ಲಿ ನೀರಿನ ಹರಿದುಬರುವಿಕೆ ಕುಸಿತ : ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಕ್ಷಾಮ ತಲೆದೋರುವ ಆತಂಕ

ಕಾಸರಗೋಡು: ಕಾಸರಗೋಡು ನಗರಸಭೆ ಮತ್ತು ಪರಿಸರದ ಪಂಚಾಯತ್‌ಗಳ ಸುಮಾರು ಒಂದೂವರೆ ಲಕ್ಷ ಮನೆಗಳಿಗೆ ನಳ್ಳಿ ನೀರು ಪೂರೈಕೆ ಯಾಗುತ್ತಿರುವ ಬಾವಿಕ್ಕೆರೆ ರೆಗ್ಯುಲೇಟರ್ (ಅಣೆಕಟ್ಟು)ನಲ್ಲಿ ನೀರಿನ ಹರಿವು ಕುಸಿಯತೊಡಗಿದೆ. ಇದು ಬೇಸಿಗೆ ಗಾಲದಲ್ಲಿ ಈ ಪ್ರದೇಶಗಳಲ್ಲಿ ನಳ್ಳಿ ನೀರು ಪೂರೈಕೆ ಸಮಸ್ಯೆ ಸೃಷ್ಟಿಗೆ ದಾರಿ ಮಾಡಿ ಕೊಡಬಹುದೆಂಬ ಆತಂಕವನ್ನೂ ಇನ್ನೊಂದೆಡೆ ಸೃಷ್ಟಿಸತೊಡಗಿದೆ. ಬಾವಿಕ್ಕೆರೆ ನೀರಾವರಿ ಯೋ ಜನೆಗೆ ಉಪ್ಪುನೀರು ಹರಿದು ಬಹುವುದನ್ನು ತಡೆ ಗಟ್ಟಲು ಮೂರು ವರ್ಷಗಳ ಹಿಂದೆ ಇಲ್ಲಿ ರೆಗ್ಯು ಲೇಟರ್- ಕಮ್ ಅಣೆಕಟ್ಟು ನಿರ್ಮಿಸಲಾಗಿತ್ತು. ಪಯಸ್ವಿನಿ- …

ಬಿಜೆಪಿಯಲ್ಲಿ ವಿಲೀನಗೊಂಡ ಕೇರಳ ಜನಪಕ್ಷ ಸೆಕ್ಯುಲರ್: ಪಿ.ಸಿ. ಜೋರ್ಜ್ ಸಹಿತ ಹಲವರು ಸದಸ್ಯತನ ಸ್ವೀಕಾರ

ಹೊಸದಿಲ್ಲಿ: ಮಾಜಿ ಶಾಸಕ ಪಿ.ಸಿ. ಜೋರ್ಜ್‌ರ ನೇತೃತ್ವದ ಕೇರಳ ಜನಪಕ್ಷಂ ಸೆಕ್ಯುಲರ್ ಪಕ್ಷ ದಿಲ್ಲಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಬಿಜೆಪಿಯೊಂದಿಗೆ ವಿದ್ಯುಕ್ತವಾಗಿ ವಿಲೀನಗೊಂಡಿದೆ. ಮಾತ್ರವಲ್ಲ ಪಿ.ಸಿ. ಜೋರ್ಜ್ ಮತ್ತು ಅವರ ಪುತ್ರ ಕೋಟಯಂ ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿರುವ ನ್ಯಾಯವಾದಿ ಶೋನ್ ಜೋರ್ಜ್, ಕೇರಳ ಜನಪಕ್ಷ ಸೆಕ್ಯುಲರ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಜೋರ್ಜ್ ಜೋಸೆಫ್ ಕಾಕಾನಾಡ್ ಸೇರಿದಂತೆ ಹಲವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರಿಂದ ಬಿಜೆಪಿಯ ಸದಸ್ಯತನ ತಡೆದು ಬಿಜೆಪಿಗೆ ವಿದ್ಯುಕ್ತವಾಗಿ ಸೇರ್ಪಡೆಗೊಂಡಿದ್ದಾರೆ. ಪತ್ತನಂತಿಟ್ಟ ಲೋಕಸಭಾ …

ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ವಿದ್ಯುತ್ ಸಂಪರ್ಕ: ಬಳಕೆದಾರರ ಹಕ್ಕು ಕಾನೂನಿನಲ್ಲಿ ಶೀಘ್ರ ತಿದ್ದುಪಡಿ

ಕಾಸರಗೋಡು: ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಇನ್ನು ವಿದ್ಯುತ್ ಸಂಪರ್ಕ ಲಭಿಸಲಿದೆ. ಇದಕ್ಕಾಗಿ ವಿದ್ಯುತ್ ಬಳಕೆದಾರರ ಹಕ್ಕು ಕಾನೂನಿನಲ್ಲಿ  ಅಗತ್ಯದ ತಿದ್ದುಪಡಿ ತಂದು ಕರಡು ಮಸೂದೆಯನ್ನು ಕೇಂದ್ರ ಇಂಧನ ಸಚಿವಾಲಯ ಪ್ರಕಟಿಸಿದೆ. ಈ ತಿದ್ದುಪಡಿ ಕಾನೂನು ಜ್ಯಾರಿಗೊಳ್ಳುವ ಮೂಲಕ ಮೆಟ್ರೋ ನಗರಗಳಲ್ಲಿ ಅರ್ಜಿ ಸಲ್ಲಿಸಿದ ಕೇವಲ ಮೂರು ದಿನಗಳೊಳಗೆ, ನಗರಸಭೆಗಳಲ್ಲಿ ಏಳು ದಿನಗಳೊಳಗೆ ಹಾಗೂ ಪಂಚಾಯತ್‌ಗಳಲ್ಲಿ ೧೫ ದಿನಗಳೊಳಗಾಗಿ ವಿದ್ಯುತ್ ಸಂಪರ್ಕ ಲಭಿಸಲಿದೆ. ಕೇರಳದಲ್ಲಿ ಜ್ಯಾರಿಯಲ್ಲಿ ವಿದ್ಯುತ್ ಕಂಬಗಳು ಅಗತ್ಯವಿಲ್ಲದ ವಿದ್ಯುತ್ ಸಂಪರ್ಕವನ್ನು ಅರ್ಜಿ ಸಲ್ಲಿಸಿದ ೩೦ …

ಪ್ರತಿಭಾ ಕೇಂದ್ರಗಳ ಪ್ರತಿಭೋತ್ಸವ, ವಿಜಯೋತ್ಸವ

ಬಂದ್ಯೋಡು: ಎಸ್ ಎಸ್ ಕೆ ಕಾಸರಗೋಡು ಇದರ ನೇತೃತ್ವದಲ್ಲಿ ಬಿ ಆರ್‌ಸಿ ಮಂಜೇಶ್ವರ ವತಿಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರತಿಭೋತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮ ಬಂದ್ಯೋಡು ಪ್ರತಿಭಾ ಕೇಂದ್ರದಲ್ಲಿ ಜರಗಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕೆÀ್ಷ ಶಮೀನಾ ಟೀಚರ್ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ಕಿಶೋರ್ ಅಧ್ಯಕ್ಷತೆ ವಹಿಸಿ ದರು. ಬಿ ಪಿ ಸಿ ವಿಜಯ್ ಕುಮಾರ್ ಪಾವಳ, ಜೋಯ್, ವಾರ್ಡ್ ಪ್ರತಿನಿಧಿ ಬಾಬು ಬಂದ್ಯೋಡು, ಅಶೋಕ್ ಕೊಡ್ಲಮೊಗರು, ನೆಟ್ಟೋನಿ ಬಂದ್ಯೋಡು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಜಿಲ್ಲಾ, ಜಿಲ್ಲಾ …

ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ, ದೇವರ ಬಲಿ ಉತ್ಸವ ಫೆ.೧೧ರಿಂದ

ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಶ್ರೀ ವೀರಭದ್ರ ದೇವರ ಬಲಿ ಉತ್ಸವ ಫೆ.11ರಿಂದ 14ರ ತನಕ ವಿವಿಧ ಕಾರ್ಯಕ್ರಮಗಳೊಂ ದಿಗೆ ಜರಗಲಿದೆ. 11ರಂದು ಸಂಜೆ 3.45ಕ್ಕೆ ಸಾಮೂ ಹಿಕ ಪ್ರಾರ್ಥನೆ, ರಾತ್ರಿ 7ಕ್ಕೆ ಶ್ರೀ ವೀರ ಮಹಾಗಣಪತಿ ದೇವರಿಗೆ ರಂಗಪೂಜೆ, 7.30ಕ್ಕೆ ಶ್ರೀ ವೀರಭದ್ರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, 12ರಂದು ಬೆಳಿಗ್ಗೆ 7ಕ್ಕೆ ಪೂಜೆ, 7.30ಕ್ಕೆ ದೈವಗಳ ಭಂಡಾರ ಆರೋಹಣ, 8ಕ್ಕೆ ಕಲಶಾಭಿಷೇಕ, ಗಣ ಹೋಮ, 8.30ಕ್ಕೆ ಕಲಶಾಭಿಷೇಕ …

ಕೇರಳ ವಿಜ್ಞಾನ ಕಾಂಗ್ರೆಸ್ ಫೆ.೮ರಿಂದ :ಮುಖ್ಯಮಂತ್ರಿ ಉದ್ಘಾಟನೆ

ಕಾಸರಗೋಡು: ೩೬ನೇ ಕೇರಳ ಸಯನ್ಸ್ ಕಾಂಗ್ರೆಸ್ ಈ ತಿಂಗಳ ೮ರಿಂದ ೧೧ರ ತನಕ ಕಾಸರಗೋಡು ಸರಕಾರಿ  ಕಾಲೇಜಿನಲ್ಲಿ ನಡೆಯಲಿದೆ. ೯ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಔಪಚಾರಿಕ ಉದ್ಘಾಟನೆ ನಿರ್ವಹಿಸುವರು. ‘ಏಕಾರೋಗ್ಯ ದೃಷ್ಟಿಕೋನದ ಮೂಲಕ ಕೇರಳದ ಆರ್ಥಿಕ ವ್ಯವಸ್ಥೆಯ ರೂಪಾಂತರ’ ಎಂಬುದಾಗಿದೆ ಈ ವರ್ಷದ ಸಯನ್ಸ್ ಕಾಂಗ್ರೆಸ್‌ನ ಪ್ರಮುಖ ವಿಷಯ. ಯುವ ಸಂಶೋಧಕರಿಗೆ, ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಸಂವಾದ ನಡೆಸಲು, ಅವರ ಅರಿವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ ಕೇರಳ ಸಯನ್ಸ್ ಕಾಂಗ್ರೆಸ್. ೪೨೪ ಯುವ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ನೋಬಲ್ ಪ್ರಶಸ್ತಿ …