ಡಿಫಿಯಿಂದ ಮಹಾತ್ಮ ಗಾಂಧಿ ಹುತಾತ್ಮ ದಿನಾಚರಣೆ

ಬಾಯಾರು: ಡಿವೈಎಫ್‌ಐ ಹಾಗೂ ಬಾಯಾರು ಯೂನಿಟ್ ಸಮಿತಿಗಳ ನೇತೃತ್ವದಲ್ಲಿ ಮಹಾತ್ಮ ಗಾಂಧಿ ೭೬ನೇ ಹುತಾತ್ಮ ದಿನಾಚರಣೆಯನ್ನು ಬಾಯಾರುಪದವಿನಲ್ಲಿ  ನಡೆಸಲಾಯಿತು.  ಮಂಜೇಶ್ವರ ಬ್ಲೋಕ್ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಬಾಯಾರು ಉದ್ಘಾಟಿಸಿದರು. ಯೂನಿಟ್ ಕಾರ್ಯದರ್ಶಿ ಕಾರ್ತಿಕ್ ಬಾಯಾರು ಅಧ್ಯಕ್ಷತೆ ವಹಿಸಿದ್ದರು. ಡಿಫಿ ನೇತಾರರಾದ ಆಸಿಫ್ ಬಾಯಾರು, ಶರೀಫ್ ಆವಳ, ನಾಸಿರ್  ಮಾತನಾಡಿದರು. ಬಿತೇಶ್ ಕುಮಾರ್ ಸ್ವಾಗತಿಸಿದರು.

ಜಿಲ್ಲಾ ಪಂಚಾಯತ್ ಬಜೆಟ್ ಫೆ.೧೨ರಂದು ಮಂಡನೆ

ಕಾಸರಗೋಡು:  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್‌ರ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಆಡಳಿತ ಸಮಿತಿ ಸಭೆಯಲ್ಲಿ ವಾರ್ಷಿಕ ಯೋಜನೆಯಲ್ಲ್ಲಿ ಸೇರಿಸಬೇಕಾದ ಯೋಜನೆ ನಿರ್ದೇಶಗಳಿಗೆ ಅಂತಿಮ ರೂಪು ನೀಡಲಾಯಿತು. ಮುಂದಿನ ವರ್ಷದ ಬಜೆಟ್ ಮಂಡನೆ ಈ ತಿಂಗಳ ೧೨ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂ. ಅಧ್ಯಕ್ಷೆ ತಿಳಿಸಿದರು. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಪ್ರಕಾರ ಜಿಲ್ಲೆಯಲ್ಲಿ ಮುಂದಿನ ಆರ್ಥಿಕ ವರ್ಷದ ಲೇಬರ್ ಬಜೆಟ್‌ಗೆ ಸಭೆ ಅಂಗೀಕಾರ ನೀಡಿತು. ಜಿಲ್ಲಾ ಪಂಚಾಯತ್ ಈ …

ಕುಂಟಿಕಾನ ಶಾಲೆಯಲ್ಲಿ ‘ಬಡ್ಡಿಂಗ್ ರೈಟರ್ಸ್’ಗೆ ಚಾಲನೆ

ಬದಿಯಡ್ಕ: ಸಾಹಿತ್ಯವೆಂಬ ಕೃಷಿಯಲ್ಲಿ ಅನೇಕ ಪ್ರಾಕಾರಗಳಿವೆ. ನಮ್ಮ ಆಯ್ಕೆಗೆ ಹೊಂದಿಕೊAಡು ಕಥೆ, ಕವನ, ಸಾಹಿತ್ಯಗಳು ರೂಪುಗೊಳ್ಳುತ್ತವೆ. ಬಾಲ್ಯದಲ್ಲಿಯೇ ಸದಾ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಂ ಡಾಗ ನಮ್ಮೊಳಗಿರುವ ಸಾಹಿತ್ಯದ ಬೀಜ ಮೊಳಕೆಯೊಡೆಯುತ್ತದೆ. ಪುಸ್ತಕವು ಮಸ್ತಕದ ವಿಕಾಸಕ್ಕೆ ಪೂರಕವಾಗಿದೆ ಎಂದು ಧನ್ಯಶ್ರೀ ಸರಳಿ ಅಭಿಪ್ರಾಯಪಟ್ಟರು.ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಜರಗಿದ `ಬಡ್ಡಿಂಗ್ ರೈರ‍್ಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊAದು ಪ್ರತಿಭೆ ಇರುತ್ತದೆ. ಅದನ್ನು ನಾವು ಮನಗಂಡು ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮುಂದುವರಿಸಿಕೊAಡು ಹೋದಾಗ …

ವ್ಯಕ್ತಿಯನ್ನು ಹನಿಟ್ರಾಪ್‌ನಲ್ಲಿ ಸಿಲುಕಿಸಿ ೫ ಲಕ್ಷ ರೂ. ಲಪಟಾವಣೆ: ಯುವತಿ ಸಹಿತ ೭ ಮಂದಿ ಸೆರೆ

ಕಾಸರಗೋಡು: ಮಾಂಙಾಡ್ ನಿವಾಸಿಯನ್ನು ಹನಿ ಟ್ರಾಪ್‌ನಲ್ಲಿ ಸಿಲುಕಿಸಿ ೫ ಲಕ್ಷ ರೂಪಾಯಿ ಲಪಟಾಯಿಸಲಾಯಿ ತೆಂಬ  ಪ್ರಕರಣದಲ್ಲಿ ಯುವತಿ ಸಹಿತ ೭ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ. ಫೈಸಲ್ (೩೭), ಪತ್ನಿ ಕುಟ್ಟಿಕ್ಕಾ ಟೂರ್ ನಿವಾಸಿ ಎಂ.ಪಿ. ಲುಬ್ನಾ (೨೯), ಕಾಸರಗೋಡು ಶಿರಿಬಾ ಗಿಲು ನಿವಾಸಿ ಎನ್. ಸಿದ್ದಿಕ್ (೪೮), ಮಾಂಙಾಡ್‌ನ ದಿಲ್ಶಾದ್ (೪೦),ಮುಟ್ಟತ್ತೋಡಿಯ ನಫೀಸತ್ ಮಿಸ್ರಿಯ (೪೦), ಮಾಂಙಾಡ್‌ನ ಅಬ್ದುಲ್ಲ ಕುಂಞಿ (೩೨), ಪಡನ್ನಕ್ಕಾಡ್‌ನ ರಫೀಕ್ (೪೨) ಎಂಬಿವರನ್ನು ಮೇಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ …

ಲೋಕಸಭೆಯ ಕೊನೆಯ ಅಧಿವೇಶನ ಆರಂಭ: ಮಧ್ಯಂತರ ಬಜೆಟ್ ನಾಳೆ ಮಂಡನೆ

ದೆಹಲಿ: ನರೇಂದ್ರಮೋದಿ ನೇತೃತ್ವದ ಸರಕಾರದ ಎರಡನೇ ಅವಧಿಯ ಕೊನೆಯ ಅಧಿವೇಶನ ಇಂದು  ಬೆಳಿಗ್ಗೆ ಆರಂಭಗೊಂಡಿದೆ. ಇದು ೧೭ನೇ ಲೋಕಸಭೆಯ ಕೊನೆಯ ಅಧಿವೇಶನವೂ ಆಗಿದೆ. ಇಂದು ಆರಂಭಗೊಂಡ ಅಧಿವೇಶನ ಫೆ. ೯ರ ತನಕ ಮುಂದುವರಿಯಲಿದೆ. ಹೊಸದಾಗಿ ನಿರ್ಮಿಸಲಾದ ಸಂಸತ್ ಭವನ್ ಕಟ್ಟಡದಲ್ಲಿ ಸಂಸತ್ ನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡುವ ಮೂಲಕ  ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಿದರು. ಕಳೆದ  ಲೋಕಸಭಾ ಅಧಿವೇಶನದ ವೇಳೆ ಸಂಸತ್‌ನ ಒಳಗೆ ಮತ್ತು ಹೊರಗೆ ದುಷ್ಕರ್ಮಿಗಳು ಹೊಗೆ …

ವ್ಯಾಪಾರಿ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಕಾಸರಗೋ ಡಿನ ಯುವ ವ್ಯಾಪಾರಿ ಕುಸಿದು ಬದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ನಾಯಕ್ಸ್ ರಸ್ತೆ ಬಳಿಯ ಬ್ರಾಂಡ್ ಮೆನ್ಸ್ ಸಂಸ್ಥೆಯ ಮಾಲಕ ಮೊಗ್ರಾಲ್ ಕೆ.ಎಂ. ಹೌಸಿನ  ನಿವಾಸಿ  ಮಹಮ್ಮೂದ್ (೪೧) ಸಾವನ್ನಪ್ಪಿದ ವ್ಯಾಪಾರಿ. ಇವರು ನಿನ್ನೆ ಸಂಜೆ ತಮ್ಮ ಅಂಗಡಿಯಲ್ಲಿ ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ  ಅದು ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಮೊಗ್ರಾಲ್ ಯುನಾನಿ ಆಸ್ಪತ್ರೆ ಬಳಿಯ ದಿ| ಸೈನುದ್ದೀನ್- ಆಸ್ಯಮ್ಮ ದಂಪತಿ ಪುತ್ರನಾಗಿರುವ …

ಸಿಮ್‌ಗಳನ್ನು ಕಳಚಿಟ್ಟು ಮನೆಯೊಡೆಯನ ಮೊಬೈಲ್ ದೋಚಿದ ಕಳ್ಳರು

ಕುಂಬಳೆ: ಮನೆಯ ಸಿಟೌಟ್‌ನಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಫೋನ್ ಸಹಿತ ವಿವಿಧ ಸಾಮಗ್ರಿಗಳನ್ನು ಕಳ್ಳರು ದೋಚಿದ ಘಟನೆ ನಡೆದಿದೆ. ಕೊಡ್ಯಮ್ಮೆ ಪೂಕಟ್ಟೆಯ ಅಬ್ದುಲ್ ರಹಮಾನ್ ಯಾನೆ ಅಂದ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಈ ಕಳವು ನಡೆದಿದೆ. ಮೊಬೈಲ್ ಫೋನ್, ಸಿಟೌಟ್‌ನಲ್ಲಿರಿಸಿದ್ದು ಒಂದು ಸೈಕಲ್, ಹುಲ್ಲು ಕತ್ತರಿಸುವ ಯಂತ್ರ ಹಾಗೂ ೫೦ ತೆಂಗಿನ ಕಾಯಿಗಳನ್ನು ಕಳ್ಳರು ಕಳವು ನಡೆಸಿರುವುದಾಗಿ ದೂರಲಾಗಿದೆ. ಅಬ್ದುಲ್ ರಹಮಾನ್ ನಿನ್ನೆ ರಾತ್ರಿ ಮನೆಯ ಸಿಟೌಟ್‌ನಲ್ಲಿ ಮಲಗಿದ್ದರು. ಇಂದು ಬೆಳಿಗ್ಗೆ ಅವರು ಎಚ್ಚೆತ್ತಾಗಲೇ ಕಳವು …

ಪ್ರಸಿದ್ಧ ಭಜನೆಗಾರ, ನಾಟಕ ಕಲಾವಿದ ಜನಾರ್ಧನ ರಾವ್ ನಿಧನ

ಉಪ್ಪಳ: ಸುಬ್ಬಯ್ಯಕಟ್ಟೆ ಸಮೀಪದ ನೀರ್ಪಂತಿ ನಿವಾಸಿ ಬೋವಿಕ್ಕಾನ ಬಳಿ ವಾಸಿಸುತ್ತಿದ್ದ ಪ್ರಸಿದ್ದ ಭಜನೆಗಾರ ಜನಾರ್ಧನ ರಾವ್ (79) ನಿಧನರಾ ದರು. ಉಸಿರಾಟ ಸಂಬAಧಿ ಖಾಯಿಲೆಯಿಂದ ಬಳಲುತ್ತಿದ್ದ ಇವರು ಮಂಗಳೂರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು. ಸುಬ್ಬಯಕಟ್ಟೆಯಲ್ಲಿ ತರಂಗಿಣಿ ಫ್ರೆಂಡ್ಸ್ ಕ್ಲಬ್‌ನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮೀ ಪದ ಎಲ್ಲಾ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಜನೆ ಸಂಕೀರ್ತನೆಯಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗಳಿಸಿ ದ್ದರು. ಹವ್ಯಾಸಿ ನಾಟಕ ಕಲಾವಿ ದರಾಗಿದ್ದ ಇವರು, ಸುಬ್ಬಯ್ಯಕಟ್ಟೆಯಲ್ಲಿ ಸುಮಾರು 20 …

ರೈಲು ಹಳಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಇನ್ನೋರ್ವ ಯುವಕ ಬದಿಯಡ್ಕ ನಿವಾಸಿ

ಕಾಸರಗೋಡು: ನಗರದ ಪಳ್ಳ ರೈಲು ಹಳಿಯಲ್ಲಿ ನಿನ್ನೆ ಮುಂಜಾನೆ ರೈಲುಗಾಡಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಯುವಕರ ಪೈಕಿ ಇನ್ನೋರ್ವನ ಗುರುತು  ಪತ್ತೆಹಚ್ಚಲಾಗಿದೆ. ಬದಿಯಡ್ಕ ಬೀಜಂತ್ತಡ್ಕದಲ್ಲಿ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ಇಬ್ರಾಹಿಂ-ಸಮೀರಾ ದಂಪತಿ ಪುತ್ರ  ನಿಹಾಲ್ (೨೦) ಸಾವನ್ನಪ್ಪಿದ ಯುವಕನಲ್ಲೋರ್ವನಾಗಿದ್ದಾನೆ. ಇನ್ನೋರ್ವ  ನೆಕ್ರಾಜೆ ಚೂರಿಪಳ್ಳ ಪೈಕಮೂಲೆಯ ಆಮಿನಾ ಎಂಬವರ ಪುತ್ರ ಮೊಹಮ್ಮದ್ ಸಾಹೀರ್ (೧೯) ಆಗಿರುವುದಾಗಿ ನಿನ್ನೆಯೇ ಪೊಲೀಸರು ಗುರುತುಹಚ್ಚಿದ್ದರು. ಈ ಇಬ್ಬರಪೈಕಿ ಓರ್ವನ ಮೃತದೇಹ ರೈಲು ಹಳಿ ಯಲ್ಲೂ, ಇನ್ನೋರ್ವನ ಮೃತದೇಹ  …

ಕಾಸರಗೋಡು ನಗರಸಭಾ ಅಧ್ಯಕ್ಷ ಚುನಾವಣೆ ನಾಳೆ: ಅಬ್ಬಾಸ್ ಬೀಗಂ ಮುಸ್ಲಿಂ ಲೀಗ್ ಉಮೇದ್ವಾರ

ಕಾಸರಗೋಡು: ಕಾಸರಗೋಡು ನಗರಸಾ ಅಧ್ಯಕ್ಷರ ಆಯ್ಕೆಗಾಗಿರುವ  ಚುನಾವಣೆ ನಾಳೆ ನಡೆಯಲಿದೆ. ಚೇರಂಗೈ ಈಸ್ಟ್ ವಾರ್ಡ್‌ನ ಮುಸ್ಲಿಂ ಲೀಗ್ ಕೌನ್ಸಿಲರ್ ಅಬ್ಬಾಸ್ ಬೀಗಂರನ್ನು ಉಮೇದ್ವಾರರನ್ನಾಗಿ ಕಣಕ್ಕಿಳಿಸಲು ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಅಬ್ಬಾಸ್ ಬೀಗಂ ಈಗ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ನಗರಸಭಾ ಅಧ್ಯಕ್ಷರಾಗಿ ಕಳೆದ ಎರಡೂವರೆ ವರ್ಷ ಪೂರೈಸಿದ ತಳಂಗರೆ ಖಾಸಿಲೆನ್‌ನ ಮುಸ್ಲಿಂ ಲೀಗ್ ಕೌನ್ಸಿಲರ್ ನ್ಯಾ. ವಿ.ಎಂ. ಮುನೀರ್ ಅವರು ಆ ಸ್ಥಾನಕ್ಕೆ ಮಾತ್ರವಲ್ಲ ತಮ್ಮ ಕೌನ್ಸಿಲರ್ ಸ್ಥಾನಕ್ಕೂ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಅದರಿಂದಾಗಿ …