ಬಿ.ಎಂ.ಎಸ್ ಬದಿಯಡ್ಕ ಯೂನಿಟ್ ಸಮ್ಮೇಳನ

ಉಪ್ಪಳ: ಬಿ.ಎಂ.ಎಸ್ ನಿರ್ಮಾ ಣ ಕಾರ್ಮಿಕರ ಬದಿಯಡ್ಕ ಯೂನಿ ಟ್ ಸಮ್ಮೇಳನ ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ಶ್ರೀಕಾಂತ್.ಬಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಟ್ಟಡ ನಿರ್ಮಣ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಐತ್ತಪ್ಪ ನಾರಾಯಣ ಮಂಗಲ ದೀಪ ಬೆಳಗಿಸಿ ಉದ್ಘಾಟಿಸಿದರು. ಯೂನಿ ಯನ್ ಜಿಲ್ಲಾ ಉಪಾಧ್ಯಕ್ಷ ರಾಜಮೋ ಹನ್ ಸಮಾರೋಪ ಭಾಷಣ ಮಾಡಿ ದರು. ಯೂನಿಟ್ ಕಾರ್ಯ ದರ್ಶಿ ಶಿವರಾಮ ಕೆ. ಸ್ವಾಗತಿಸಿ, ನೂತನ ಅಧ್ಯಕ್ಷ ಕೃಷ್ಣ.ಕೆ ವಂದಿಸಿದರು. ಸಮಿತಿಗೆ ಅಧ್ಯಕ್ಷರಾಗಿ ಕೃಷ್ಣ .ಕೆ, …

ಎಂಡೋಸಲ್ಫಾನ್ ಅನಿರ್ಧಿಷ್ಟಾವಧಿ ಚಳವಳಿ

ಕಾಸರಗೋಡು:  ವಿವಿಧ ಬೇಡಿಕೆ ಗಳನ್ನು ಮುಂದಿರಿಸಿಕೊಂಡು ಎಂಡೋಸ ಲ್ಫಾನ್ ಸಂತ್ರಸ್ತರ ಜನಪರ ಒಕ್ಕೂಟ ಅನಿರ್ದಿಷ್ಠಾವಧಿ ಚಳವಳಿ ಆರಂಭಿಸಿದೆ. ಕಾಞಂಗಾಡ್ ಮಿನಿ ಸಿವಿಲ್ ಸ್ಟೇಶನ್ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಚಳವಳಿ ಆರಂಭಗೊಂಡಿದೆ. ಪ್ರತೀದಿನ ಬೆಳಿಗ್ಗೆ ೧೦ರಿಂದ ಸಂಜೆ ೫ ಗಂಟೆವರೆಗೆ ನಡೆಯುವ ಚಳವಳಿಯಲ್ಲಿ ಹಲವರು ಭಾಗವಹಿ ಸಲಿದ್ದಾರೆ. ೨೦೧೭ರಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ಸಂತ್ರಸ್ತರೆಂದು ಪತ್ತೆಹಚ್ಚಿದ್ದರೂ  ಬಳಿಕ ಪಟ್ಟಿಯಿಂದ ಹೊರತುಪಡಿಸಲಾದ ೧೦೩೧ ಮಂದಿ ಯನ್ನು ಸಂತ್ರಸ್ತರ ಯಾದಿಯಲ್ಲಿ ಸೇರಿಸಿ ಅವರಿಗೆ ಸೌಲಭ್ಯಗಳನ್ನು ನೀಡಬೇಕು ಎಂಬುವುದು ಚಳವಳಿನಿರತರ ಪ್ರಧಾನ …

ನಿವೃತ್ತ ಸೇನಾಧಿಕಾರಿಯಿಂದ ಪದ್ಮಶ್ರೀ ಬೆಳೇರಿಗೆ ಗೌರವ

ಮುಳ್ಳೇರಿಯ: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ, ವೈವಿಧ್ಯಮಯ ಭತ್ತದ ತಳಿಗಳ ಸಂರಕ್ಷಕ ಸತ್ಯನಾರಾ ಯಣ ಬೆಳೇರಿ ಅವರನ್ನು ನಿವೃತ್ತ ವಾಯುಸೇನಾ ಅಧಿಕಾರಿ, ಮಾನವಹಕ್ಕು ಆಯೋಗದ ಜಿಲ್ಲಾಧ್ಯಕ್ಷ ತಿರುಮ ಲೇಶ್ವರ ಭಜ್ ಪಜ್ಜ  ಗೌರವಿಸಿದರು. ಸತ್ಯನಾರಾಯಣರ ಬೆಳೇರಿಯಲ್ಲಿರುವ ಸ್ವಗೃಹಕ್ಕೆ ಭೇಟಿ ನೀಡಿ ಗೌರವಿಸಲಾ ಯಿತು. ಭತ್ತ ಕೃಷಿಗೆ, ತಳಿ ಸಂರಕ್ಷಣೆಗೆ ಜೀವನವನ್ನು ಮುಡಿಪಾಗಿಟ್ಟಿರುವ ಸತ್ಯನಾರಾಯಣ ಬೆಳೇರಿ ಅವರ ಯಶೋಗಾಥೆ ಜಗತ್ತಿಗೆ ಮಾದರಿಯಾಗಿದ್ದು, ಅವರಿಗೆ ಒಲಿದು ಬಂದಿರುವ ಪದ್ಮಶ್ರೀ ಪ್ರಶಸ್ತಿ ಯುವ ಸಮೂಹಕ್ಕೆ ಪ್ರೇರಣದಾಯಿ ಎಂದು ತಿರುಮಲೇಶ್ವರ ಭಟ್ ನುಡಿದಿದ್ದಾರೆ.

ಇಲಿ ವಿಷ ಸೇವಿಸಿದ ವಿದ್ಯಾರ್ಥಿನಿ ಸಾವಿಗೆ ಶರಣು

ಬದಿಯಡ್ಕ: ಯುವಕನಿಂದ ಉಂಟಾದ ನಿರಂತರ ಉಪಟಳ ಹಾಗೂ ಬೆದರಿಕೆಯನ್ನು ಸಹಿಸ ಲಾಗದೆ ಇಲಿ ವಿಷ ಸೇವಿಸಿ ಆತ್ಮ ಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿ ಮೃತ ಪಟ್ಟಳು. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿನಿಯೂ ಕುಂಬ್ಡಾಜೆ ನಿವಾಸಿಯಾದ ಹದಿನಾ ರರ ಹರೆಯದ ಬಾಲಕಿ ದೇರಳಕಟ್ಟೆ ಯ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಕಳೆದ ಮಂಗಳವಾರ ಸಂಜೆ ಬಾಲಕಿ ಮನೆಯೊಳಗೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿತ್ತು. ವಿಷಯ ತಿಳಿದು ಬದಿಯಡ್ಕ ಪೊಲೀಸರು ಆಸ್ಪತ್ರೆಗೆ ತಲುಪಿ …

ವ್ಯಾಪಾರ ಸಂರಕ್ಷಣಾ ಯಾತ್ರೆಗೆ ಚಾಲನೆ

ಕಾಸರಗೋಡು: ಕಿರುವ್ಯಾಪಾರ ವಲಯಗಳಲ್ಲಿ ಅನಗತ್ಯ ನಿಯಂತ್ರಣ ಹೇರಿಕೆ ಮತ್ತು ಕಾನೂನುಗಳನ್ನು ಬಡಿದೇರಿಸುವಿಕೆ ನೀತಿಯನ್ನು ಪ್ರತಿಭಟಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ರಾಜ್ಯ ಅಧ್ಯಕ್ಷ ರಾಜು ಅಪ್ಸರಾರ ನೇತೃತ್ವದ ವ್ಯಾಪಾರ ಸಂರಕ್ಷಣಾ ಯಾತ್ರೆಗೆ ಕಾಸರಗೋಡಿನಲ್ಲಿ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ನಗರದ ಚಂದ್ರಗಿರಿ ಚಾಲ ಜಂಕ್ಷನ್ ಬಳಿ ಇಂದು ಬೆಳಿಗ್ಗೆ ಆರಂಭಗೊಂಡ ಯಾತ್ರೆಯನ್ನು ಸಂಘಟನೆಯ ತಿರುವನಂತಪುರ ಜಿಲ್ಲಾ ಘಟಕದ ಅಧ್ಯಕ್ಷ ಪೆರಿಂಙಮಲ ರಾಮಚಂದ್ರನ್ ಉದ್ಘಾಟಿಸಿದರು. ಸಂಘಟನೆಯ ಕಾಸರಗೋಡು ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. …

ಉಳುವಾರ್ ಶಾಲಾ ಕೊಠಡಿಯಲ್ಲಿ ಹೆಡೆ ಎತ್ತಿದ ನಾಗರಹಾವು….!

ಕುಂಬಳೆ: ಉಜಾರು, ಉಳುವಾರು ಜಿ.ಎಲ್.ಪಿ ಶಾಲೆಯ  ತರಗತಿಕೊಠಡಿ ಯಲ್ಲಿ  ನಾಗರಹಾವು ಕಂಡು ಬಂದಿದೆ. ಇದನ್ನು ಸೆರೆ ಹಿಡಿಯಲು ಯತ್ನಿಸಿದಾಗ ಅದು ತಪ್ಪಿಸಿದೆ. ಹಾವು ಮತ್ತೆ ಇಲ್ಲಿಗೆ ಬರಲು ಸಾಧ್ಯತೆ ಇದೆ ಎಂಬುದರಿಂದಾಗಿ ತರಗತಿಯನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಮಕ್ಕಳನ್ನು ಈ ಕೊಠಡಿಗೆ ಪ್ರವೇಶಿಸಿದರೆ ಸಾಕೆಂದು ಮುಖ್ಯೋಪಾ ಧ್ಯಾಯಿನಿ ಸೂಚಿಸಿದ್ದಾರೆ. ಮೊನ್ನೆ ತರಗತಿ ಕೊಠಡಿಯಲ್ಲಿ ಹಾವು ಪ್ರತ್ಯಕ್ಷಗೊಂಡಿದೆ. ಹೊಸತಾಗಿ ನೇಮಕಾತಿ ಲಭಿಸಿದ ತಿರುವನಂತಪುರ ನಿವಾಸಿ ಅಧ್ಯಾಪಕ ತರಗತಿ ಕೊಠಡಿಯಲ್ಲಿ ಕುಳಿತು ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿರು ವಾಗ ಹೆಡೆ ಎತ್ತಿದ …

ತೆಂಗಾಶಿಯಲ್ಲಿ ವಾಹನ ಅಪಘಾತ: ಆರು ಮಂದಿ ಸಾವು

ಚೆನ್ನೈ: ತಮಿಳುನಾಡಿನ ತೆಂಗಾಶಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ವಾಹನ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಕಾರಿನಲ್ಲಿ ಆರು ಮಂದಿ ಯುವಕರಿದ್ದರು. ಅವರೆಲ್ಲರೂ ಅಪಘಾತದಲ್ಲಿ ಮೃತ್ಯುಗೀಡಾಗಿದ್ದಾರೆ. ಸ್ನೇಹಿತರಾದ ಆರು ಮಂದಿ ಸೇರಿ ಕಾರು ಬಾಡಿಗೆಗೆ ಪಡೆದು ಕುಟ್ಟಾಲ ಜಲಪಾತ ಕಾಣಲು ತೆರಲಿದ್ದರು. ಅಲ್ಲಿಂದ ಮರಳಿ ಬರುತ್ತಿದ್ದಾಗ ಇಂದು ಮುಂಜಾನೆ ೩ ಗಂಟೆಗೆ ಅಪಘಾತವುಂಟಾಗಿದೆ. ಸಿಮೆಂಟ್ ಹೇರಿ ಬಂದ ಲಾರಿ ಹಾಗೂ ಕಾರು ಢಿಕ್ಕಿ ಹೊಡೆದಿದೆ. ಮೃತಪಟ್ಟವರು ತೆಂಗಾಶಿ ಚಿಂತಾಮಣಿ ನಿವಾಸಿಗಳಾದ …

ಮದುವೆ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಂತೆ ಯುವಕ ಕುಸಿದು ಬಿದ್ದು ಮೃತ್ಯು

ಕುಂಬಳೆ: ಮದುವೆ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಂತೆ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಾಯಾರು ಬದಿಯೂರು ಸಾರ್ಕಾಜೆ ನಿವಾಸಿ ಮೋಣು ಎಂಬವರ ಪುತ್ರ ಮೊಹಮ್ಮದ್ ಅನ್ಸಾರ್ (೩೪) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬಾಯಾರು ಸಮೀಪ ನಿನ್ನೆ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಮೊಹಮ್ಮದ್ ಅನ್ಸಾರ್ ಪಾಲ್ಗೊಂಡಿದ್ದರು. ಮದುವೆ ಅಂಗವಾಗಿ ನಡೆದ ಗಾನಮೇಳದಲ್ಲಿ ಹಾಡುತ್ತಿದ್ದಂತೆ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಉಪ್ಪಳ ಹಾಗೂ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಖತ್ತರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೊಹಮ್ಮದ್ ಅನ್ಸಾರ್ ೨ ತಿಂಗಳ …

ಜಿಲ್ಲೆಯ ಇನ್‌ಸ್ಪೆಕ್ಟರ್, ಎಸ್‌ಐಗಳಿಗೆ ವರ್ಗಾವಣೆ

ಕಾಸರಗೋಡು: ಲೋಕಸಭಾ ಚುನಾವಣೆಯ ಪೂರ್ವಭಾವಿ ಕ್ರಮ ಎಂಬಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಮತ್ತು ಎಸ್‌ಐಗಳನ್ನು ಇಂದ ಬೇರೆಡೆಗೆ ವರ್ಗಾಯಿಸಿ ಆದೇಶ ಜ್ಯಾರಿಗೊಳಿಸಿದೆ. ಇದರಂತೆ ಕಾಸರಗೋಡು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್‌ರನ್ನು  (ಸ್ಟೇಟ್ ಸ್ಪೆಷಲ್ ಬ್ರಾಂಚ್-ಎಸ್‌ಎಸ್‌ಬಿ) ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಪ್ರಮೋದ್‌ರನ್ನು ಕಣ್ಣೂರು ಸಿಟಿಗೆ ವರ್ಗಾಯಿಸಲಾಗಿದೆ. ಇದೇ ರೀತಿ ಮೇಲ್ಪರಂಬ ಠಾಣೆಯ ಇನ್‌ಸ್ಪೆಕ್ಟರ್ ಟಿ. ಉತ್ತಮ್‌ದಾಸ್‌ರನ್ನು ವಿಜಿಲೆನ್ಸ್‌ಗೂ, ಕಾಸರಗೋಡು ಸೈಬರ್ ಸೆಲ್ ಸ್ಟೇಶನ್‌ನ ಪಿ. ನಾರಾಯಣನ್‌ರನ್ನು ಕಲ್ಲಿಕೋಟೆ ಸಿಟಿ …

ಅಯೋಧ್ಯೆ, ವಾರಣಾಸಿ, ಮಥುರಾ ಕ್ಷೇತ್ರಗಳಿಗೆ ಇಸ್ರೇಲ್ ಆಂಟಿ ಡ್ರೋನ್ ಭದ್ರತೆ

ಅಯೋಧ್ಯೆ: ಅಯೋಧ್ಯೆಗೆ ಪ್ರವಹಿಸುತ್ತಿರುವ ಭಕ್ತರ ನಿಬಿಡತೆ ದಿನೇ ದಿನೇ ಹೆಚ್ಚುತ್ತಿರುವಂತೆಯೇ ಅದರ ಜತೆಗೆ ಇನ್ನೊಂದೆಡೆ ಉಗ್ರಗಾಮಿಗಳ ದಾಳಿ ಬೆದರಿಕೆಯೂ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಇಸ್ರೇಲ್ ನಿರ್ಮಿತ ಅಯೋಧ್ಯೆಯಲ್ಲಿ ಆಂಟಿ ಡ್ರೋನ್ ಭದ್ರತೆ ಏರ್ಪಡಿಸಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ.  ಅಯೋಧ್ಯೆ ದೇವಾಲಯದ ಭದ್ರತೆಗಾಗಿ ಈಗಾಗಲೇ ವಿಶೇಷ ಕಮಾಂಡರ್‌ಗಳನ್ನು ನಿಯೋಜಿಸಲಾಗಿದೆ. ಇನ್ನು ಇಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿರುವ ವಿಶೇಷ ಡ್ರೋನ್‌ಗಳನ್ನು ಇಸ್ರೇಲ್‌ನಿಂದ ಖರೀದಿಸಲು ತೀರ್ಮಾನಿಸಲಾಗಿದ್ದು, ಆ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ಮಾಹಿತಿ ಪ್ರಕಾರ ಯುಪಿ …