ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯನ್ನು ಹೋಟೆಲ್ ಕೊಠಡಿಯಲ್ಲಿ ಗುಂಡಿಕ್ಕಿ ಕೊಲೆ

ಪುಣೆ: ಸಾಫ್ಟ್ ವೇರ್ ಇಂ ಜಿನಿಯರ್ ಆಗಿರುವ ಯುವತಿ ಹೋಟೆಲ್ ಕೊಠಡಿಯಲ್ಲಿ ಗುಂಡೇಟು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಲಕ್ನೋ ನಿವಾಸಿ ವಂದನಾ ದ್ವಿವೇದಿ (೨೬) ಕೊಲೆಗೀಡಾದ ಯುವತಿ.  ಲಕ್ಷ್ಮೀನಗರ ವಲಯದ ಹೋಟೆಲ್‌ನ ಕೊಠಡಿಯಲ್ಲಿ ಘಟನೆ ನಡೆದಿದೆ.  ಯುವತಿಯ ಸ್ನೇಹಿತನೇ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದೆರಡು ವರ್ಷ ಗಳಿಂದ ಪುಣೆ ಬಳಿಯ  ರಾಜೀವ್ ಗಾಂಧಿ ಪಾರ್ಕ್ ನಲ್ಲಿರುವ ಇನ್ಫೋಸಿಸ್ ಕಂಪೆನಿ ಯಲ್ಲಿ ಯುವತಿ ಕೆಲಸ ನಿರ್ವ ಹಿಸುತ್ತಿದ್ದಳು. ಘಟನೆಗೆ ಸಂಬಂ ಧಿಸಿ ಲಕ್ನೋ ನಿವಾಸಿ ಯಾದ  …

ರಾಜ್ಯಪಾಲರಿಗೆ ಝೆಡ್ ಕೆಟಗರಿ ಭದ್ರತೆ: ತಮಗೆ ಮಾಹಿತಿ ಲಭಿಸಿಲ್ಲವೆಂದು ಕೇರಳ

ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ರಿಗೆ ಝೆಡ್ ಕೆಟಗರಿ ನೀಡಿರುವ ವಿಷಯವನ್ನು ತಮಗೆ ತಿಳಿಸಿಲ್ಲವೆಂದು ರಾಜ್ಯ ಸರಕಾರ ಇನ್ನೊಂದೆಡೆ ಹೇಳಿದೆ. ಕಳೆದ ಶನಿವಾರದಂದು ಕೊಲ್ಲಂನಲ್ಲಿ ರಾಜ್ಯಪಾಲರ ವಿರುದ್ಧ ಎಸ್‌ಎಫ್‌ಐ ಕಾರ್ಯಕರ್ತರು ಕರಿಪತಾಕೆ ಪ್ರದರ್ಶಿಸಿ ಅವರನ್ನು ತಡೆಯಲೆತ್ನಿಸಿದ್ದ ವಿರುದ್ಧ ಗರಂಗೊಂಡ ರಾಜ್ಯಪಾಲರು ಎರಡು ತಾಸುಗಳ ತನಕ ರಸ್ತೆಬದಿಯ ಅಂಗಡಿಯೊಂದರ ಮುಂದೆ ಕುಳಿದು ಭದ್ರತೆ ಒದಗಿಸುವಲ್ಲಿ ಪೊಲೀಸರ ವೈಫಲ್ಯ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ತನ್ನನ್ನು ತಡೆದ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ ಬಳಿಕವಷ್ಟೇ ರಾಜ್ಯಪಾಲರು ಅಲ್ಲಿಂದ ತೆರಳಿದ್ದರು. …

ಸ್ಕೂಟರ್ ಹೊಂಡಕ್ಕೆ ಬಿದ್ದು ಆಟೋಚಾಲಕ ಮೃತ್ಯು

ಉಪ್ಪಳ: ಸ್ಕೂಟರ್ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಂಡಕ್ಕೆ ಬಿದ್ದು ಓರ್ವ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಉಪ್ಪಳ ಮೂಸೋಡಿ ನಿವಾಸಿ ಸರ್ಫುದ್ದೀನ್‌ರ ಪುತ್ರ ಉಪ್ಪಳ ಗೇಟ್‌ನಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಮೊಹಮ್ಮದ್ ಸಫ್ರಾಜ್ (೪೦) ಮೃತಪಟ್ಟರು. ಮುಸೋಡಿ ನಿವಾಸಿ ಮೊಹಮ್ಮದ್ ಮುಸ್ತಫ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಶನಿವಾರ ರಾತ್ರಿ ಇವರಿಬ್ಬರು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಮಂ ಜೇಶ್ವರ ಅಂಡರ್‌ಪಾಸ್ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಸ್ಥಳೀಯರು ಇವರನ್ನು ಆಸ್ಪತ್ರೆಗೆ …

ಭೂಮಿ ಅತಿಕ್ರಮಣ: ಶಾಸಕ ಮಾಥ್ಯು : ಕುಳಲ್‌ನಾಡನ್ ವಿರುದ್ಧ ಕೇಸು ದಾಖಲು

ಇಡುಕ್ಕಿ: ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿ ಶಾಸಕ ಮ್ಯಾಥ್ಯು ಕುಳಲ್  ನಾಡನ್ ವಿರುದ್ಧ ಕಂದಾಯ ಇಲಾಖೆ ಕೇಸು ದಾಖಲಿಸಿಕೊಂಡಿದೆ. ಚಿನ್ನಕ್ಕನಾಲ್‌ನಲ್ಲಿ ೫೦ ಸೆಂಟ್ ಪುರಂಬೋಕ್ ಭೂಮಿಯನ್ನು ಕೈವಶವಿರಿಸಿಕೊಂಡಿರುವುದಾಗಿ ತಿಳಿಸಿ ಕಂದಾಯ ಇಲಾಖೆ  ಈ ಕ್ರಮ ಕೈಗೊಂಡಿದೆ.  ಹಿಯರಿಂಗ್‌ಗೆ ಹಾಜರಾಗಬೇಕೆಂದು ತಿಳಿಸಿ ಕಂದಾಯ ಇಲಾಖೆ ನೋಟೀಸ್ ನೀಡಿರುತ್ತದೆ. ಚಿನ್ನಕ್ಕನಾಲ್‌ನ ಪುರಂಬೋಕ್ ಸ್ಥಳವನ್ನು ವಶಪಡಿಸಲು ಜಿಲ್ಲಾಧಿಕಾರಿ ಶೀಬಾ ಜೋರ್ಜ್ ಉಡುಂಬನ್ ಚೋಲ ತಹಶೀಲ್ದಾರ್‌ಗೆ ಈ ಹಿಂದೆಯೇ ಅನುಮತಿ ನೀಡಿದ್ದರು. ಶಾಸಕನ ಹೆಸರಲ್ಲಿ ‘ಕಪ್ಪಿತ್ತಾನ್ಸ್’ ರಿಸೋರ್ಟ್ ಸಹಿತ ೧ ಎಕರೆ ೨೦ ಸೆಂಟ್ …

ನೆಲ್ಲಿಕುಂಜೆ ನಿವಾಸಿ ಸೌದಿಯಲ್ಲಿ ಮೃತ್ಯು

ಕಾಸರಗೋಡು: ನೆಲ್ಲಿಕುಂಜೆ ನಿವಾಸಿ ಸೌದಿಯಲ್ಲಿ ಮೃತಪಟ್ಟರು. ನೆಲ್ಲಿಕುಂಜೆಯ ದಿ| ಬಿ.ಎಂ. ಮೊಯ್ದೀನ್ ಕುಟ್ಟಿ- ಫಾತಿಮ ದಂಪತಿ ಪುತ್ರ ಅಬ್ದುಲ್ ಹಮೀದ್ (೫೪) ಮೃತಪಟ್ಟವರು. ನಿನ್ನೆ ರಾತ್ರಿ ಕೆಲಸದ ಸ್ಥಳದಲ್ಲಿ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡುಹೋಗಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಸುಬೈದ ಮೊಗ್ರಾಲ್ ಪುತ್ತೂರು, ಮಕ್ಕಳಾದ ಆಬಿದ್, ಅಸಿತ, ಅಫಿತ, ಸಹೋದರರಾದ ರಾಬಿಯ, ಅಬ್ದುಲ್ ಅಸೀಸ್, ಅಬ್ದುಲ್ ರಶೀದ್, ಅಬ್ದುಲ್ ಜಲೀಲ್, ಖಲೀಲ್, ಅಬ್ದುಲ್ ಸತ್ತಾರ್, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ನಿರ್ಮಾಣ ಹಂತದಲ್ಲಿರುವ ಮನೆಯೊಳಗೆ ಯುವಕ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಞಂಗಾಡ್ ರಾವಣೇಶ್ವರ ಮಾಕಿಯ ಕುಂಞಿರಾಮನ್- ಲಲಿತ ದಂಪತಿಯ ಪುತ್ರ ಎಂ. ಸುರೇಶ್ (೨೧) ಮೃತಪಟ್ಟ ಯುವಕ. ನಿರ್ಮಾಣ ನಡೆಯುತ್ತಿರುವ ಎರಡಂತಸ್ತಿನ ಮನೆಯ ಮೇಲಿನ ಮಹಡಿಯ ಹಾಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಮಾವುಂಗಲ್‌ನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸುರೇಶ್ ಕಾಞಂಗಾಡ್ ಅಂಗಡಿಯೊಂದರಲ್ಲಿ  ನೌಕರನಾಗಿದ್ದರು. ಮೃತರು ಸಹೋದರ ಸಹೋದರಿಯರಾದ ಸತೀಶ್ ಕುಮಾರ್, ಸುಮೇಶ್, (ಇಬ್ಬರೂ ಗಲ್ಫ್), ಹಾಗೂ ಅಪಾರ …

ಕಾಂಗ್ರೆಸ್ ನೇತಾರ ನಿಧನ

ಹೊಸದುರ್ಗ: ಕಾಂಗ್ರೆಸ್ ನೇತಾರ ರಾವಣೇಶ್ವರ ತಣ್ಣೋಟ್‌ನ ಕೆ.ಕುಂಞಂಬು (೮೪) ನಿಧನಹೊಂ ದಿದರು. ದೀರ್ಘಕಾಲ ಅಜಾನೂರು ಮಂಡಲ ಕಾಂಗ್ರೆಸ್ ಅಧ್ಯಕ್ಷರಾಗಿ ದ್ದರು. ಕೋಟಚ್ಚೇರಿ ಕೋ-ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ಡೈರೆಕ್ಟರ್, ಉದುಮ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ನಾರಾಯಣಿ, ಮಕ್ಕಳಾದ ರಾಜನ್, ಲೀನ, ಎ.ವಿ. ಮಧು, ಬೇಬಿ ಉಷ, ಸುನಿಲ್, ಸೊಸೆಯಂದಿರಾದ ಅನಿತ, ಸರಿತ, ವಾಣಿ, ಸಹೋದರ-ಸಹೋದರಿ ಯರಾದ ಕೋಮನ್, ಕಣ್ಣನ್, ಕೆ.ವಿ.ಕುಂಞಿರಾಮನ್, ಮಾಣಿ,  ಜಾನಕಿ, ನಾರಾಯಣಿ, ಲಕ್ಷ್ಮಿ, ತಂಬಾನ್ ಮೊದಲಾದ ವರನ್ನು ಅಗಲಿದ್ದಾರೆ.

ರಾಜ್ಯದಲ್ಲಿ ೭ ಲಕ್ಷ ಕುಟುಂಬಗಳಿಗೆ ಸ್ವಂತವಾಗಿ ಮನೆ ಇಲ್ಲ

ಕಾಸರಗೋಡು: ರಾಜ್ಯದಲ್ಲಿ ಸುಮಾರು ಏಳು ಲಕ್ಷ ಕುಟುಂಬಗಳು ಸ್ವಂತವಾಗಿ ಇನ್ನೂ ಮನೆ ಹೊಂದಿಲ್ಲವೆಂದು ಲೆಕ್ಕ ಹಾಕಲಾಗಿದೆ ಎಂದು ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ. ೨೦೧೭ರಿಂದ ಈ ವರ್ಷ ಅಕ್ಟೋಬರ್ ೩೧ರ ತನಕದ ಸ್ಥಳೀಯಾಡಳಿತ ಸಂಸ್ಥೆಗಳ ಲೆಕ್ಕಾಚಾರ ಪ್ರಕಾರ ಸ್ವಂತವಾಗಿ ಮನೆ ಇಲ್ಲದ ೩,೫೬,೧೦೮ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ೧.೨೬ ಲಕ್ಷ ಮನೆ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಳ್ಳದೆ ಈಗ ಅರ್ಧದಲ್ಲೇ ಉಳಿದುಕೊಂಡಿದೆ. ಅದನ್ನು ಪೂರ್ತೀ ಕರಿಸುವ ಯತ್ನ ನಡೆಸಲಾ ಗುತ್ತಿದೆ. ಸ್ವಂತವಾಗಿ ನಿವೇಶನ ಹೊಂದದ …

ಕಾಸರಗೋಡು ಟೌನ್ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕ್‌ನಿಂದ ಮನ್ನಣೆ

ಕಾಸರಗೋಡು: ಭಾರತೀಯ ರೀಸರ್ವ್ ಬ್ಯಾಂಕ್‌ನ ಮಾನದಂಡಕ್ಕ ನುಗುಣವಾಗಿ 2022-23 ನೇ ಸಾಲಿನ ಎಫ್. ಎಸ್ ಆಂಡ್ ಡಬ್ಲ್ಯೂ. ಎಂ. ಫೈನಾನ್ಸಿಲಿ ಸೌಂಡ್ ಆಂಡ್ ವೆಲ್ ಮ್ಯಾನೇಜಡ್ ಬ್ಯಾಂಕ್ ಎಂದು ಕಾಸರಗೋಡು ಕೆÀÆÃ-ಆಪರೇಟಿವ್ ಟೌನ್ ಬ್ಯಾಂಕ್ ಗೆ ಅಂಗೀಕಾರ ದೊರಕಿದೆ. ಇದರ ಅಂಗವಾಗಿ ಟೌನ್ ಬ್ಯಾಂಕ್ ಸೆಂಟಿನರಿ ಹಾಲ್ ನಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಕಾರ ಭಾರತೀಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ, ಡಾ ಉದಯ ಜೋಶಿ ಟೌನ್ ಬ್ಯಾಂಕ್‌ನ ಈ ಸಾಧನೆಯ ಬಗ್ಗೆ …

ಕ.ಸಾ.ಪ ಕೇರಳ ಗಡಿನಾಡ ಘಟಕದಿಂದ ಕನ್ನಡ ಮೈತ್ರಿ ಸಂಗಮ ನಾಳೆ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಇದರ ಆಶ್ರಯದಲ್ಲಿ ಕನ್ನಡ ಮೈತ್ರಿ ಸಂ ಗಮ 30ರಂದು ಸಂಜೆ 4 ಗಂಟೆಗೆ ಕಾಸರಗೋಡು ತಾಳಿಪಡ್ಪು ನಲ್ಲಿರುವ ಉಡುಪಿ ಗಾರ್ಡನ್ ಸಭಾಂಗಣ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಮಾರ್ಗದರ್ಶಕರ, ಯುವ ಕಾರ್ಯಕರ್ತರ, ಕನ್ನಡ ಪರ ಸಂಘಟ ನೆಗಳ ಸಾರಥಿಗಳ ,ಮತ್ತು ಕನ್ನಡ ಪತ್ರಕರ್ತರ ಈ ಸ್ನೇಹಕೂಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷ, ನ್ಯಾಯವಾದಿ ಐ ವಿ ಭಟ್ ರಿಗೆ ಅಭಿನಂದನೆ …