ಕಾಂಗ್ರೆಸ್ ಮುಖಂಡ ಜಿ. ರಾಮ್ ಭಟ್‌ರಿಗೆ ಅಂತಿಮ ನಮನ

ಮಂಜೇಶ್ವರ: ಅಗಲಿದ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಜಿ. ರಾಮ್ ಭಟ್‌ರಿಗೆ  ನೂರಾರು ಮಂದಿ ಅಂತಿಮ ನಮನ ಸಲ್ಲಿಸಿ ದರು. ಮೀಯಪದವಿನಲ್ಲಿ ಸಾರ್ವ ಜನಿಕ ದರ್ಶನದ ಬಳಿಕ, ಬೋರ್ಕಳದ ಸ್ವ-ಗೃಹದ ಸಮೀಪ  ಅಂತ್ಯಕ್ರಿಯೆ ನಡೆಯಿತು.  ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮೀಂಜ ಪಂ. ಉಪಾಧ್ಯಕ್ಷ ಜಯರಾಮ ಬಲ್ಲಂ ಗುಡೇಲು, ಬ್ಲಾಕ್ ಪಂ. ಸದಸ್ಯ ರಾಧಾಕೃಷ್ಣ ಕೆ. ವಿ., ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಘುನಾಥ ಕೋಮ್ಮಂಗಳ, ಹರ್ಷಾದ್ ವರ್ಕಾಡಿ, …

ಕುಂಬಳೆಯಲ್ಲಿ ಶಾಲಾ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ: ವಿದ್ಯಾರ್ಥಿಗಳಲ್ಲದವರೂ ಭಾಗಿ; ಓರ್ವ ಬಂಧನ, ಹಲವರಿಗಾಗಿ ಶೋಧ

ಕುಂಬಳೆ: ಶಾಲೆ ಆರಂಭಗೊಂಡ ಬೆನ್ನಲ್ಲೇ ಕುಂಬಳೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಘರ್ಷಣೆ ಆರಂಭಗೊಂಡಿದೆ. ಇದೇ ವೇಳೆ ವಿದ್ಯಾರ್ಥಿಗಳಲ್ಲದ ಇತರರು ಕೂಡಾ ಹೊಡೆದಾಟದಲ್ಲಿ ಸೇರಿಕೊಂಡಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಉಪ್ಪಳ ನಿವಾಸಿಯಾದ ಇಸ್ಮಾಯಿಲ್ ರಿಯಾಸ್ (20) ಎಂಬಾತನನ್ನು ಕುಂಬಳೆ ಎಸ್‌ಐ ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಹತ್ತರಷ್ಟು ಮಂದಿಯ ಗುರುತು ಹಚ್ಚಲಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಹದಿನೈದರಷ್ಟು ವಿದ್ಯಾರ್ಥಿಗಳ ಗುರುತು ಹಚ್ಚಲಾಗಿದ್ದು ಅವರ ವಿರುದ್ಧ ಎಸ್‌ಬಿಆರ್ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ …

ಕೋಳಿ ಸಾಕಣೆ ಕೇಂದ್ರಕ್ಕೆ ದಾಳಿ ನಡೆಸಿದ ಬೀದಿ ನಾಯಿಗಳು: 50ರಷ್ಟು ಕೋಳಿಗಳು ಸಾವು

ಕಾಸರಗೋಡು: ಕೋಳಿ ಸಾಕಣೆ ಕೇಂದ್ರಕ್ಕೆ ನುಗ್ಗಿದ ಬೀದಿ ನಾಯಿಗಳು 50ರಷ್ಟು ಕೋಳಿಗಳನ್ನು ಕೊಂದು ಹಾಕಿದ ಘಟನೆ ನಡೆದಿದೆ. ಮಧೂರು ಪಟ್ಲ ಬಳಿಯ ಚನ್ನಿಕುಡೇಲ್ ಎಂಬಲ್ಲಿ  ಬೀದಿ ನಾಯಿಗಳ ಉಪಟಳಕ್ಕೆ ಕೋಳಿಗಳು ಬಲಿಯಾಗಿವೆ. ಇಂದು ಮುಂಜಾನೆ 5.30ರ ವೇಳೆ ಕೋಳಿಗಳು ಜೋರಾಗಿ ಕೂಗುವುದನ್ನು ಕೇಳಿದ ಸ್ಥಳೀಯರು ಅಲ್ಲಿಗೆ ತೆರಳಿ ನೋಡಿದಾಗ ನಾಲ್ಕು ಬೀದಿ ನಾಯಿಗಳು ಕಟ್ಟಡದೊಳ ಗಿನಿಂದ ಓಡಿ ಹೋಗುವುದು ಕಾಣಿಸಿದೆ. ಬಳಿಕ ಕಟ್ಟಡದೊಳಗೆ ಪ್ರವೇಶಿಸಿ ನೋಡಿದಾಗ  50ರಷ್ಟು ಕೋಳಿಗಳು ಸಾವಿಗೀಡಾಗಿ ಬಿದ್ದಿರುವುದು ಕಂಡುಬಂದಿದೆ. ಕಲ್ಲಕಟ್ಟ ನಿವಾಸಿಯಾದ ಸಫ್ವಾನ್ …

ಭಾರತಾಂಬೆ ಚಿತ್ರ: ನಿಲುವಿನಲ್ಲಿ ಅಚಲವಾಗಿ ಉಳಿದ ರಾಜ್ಯಪಾಲ

ತಿರುವನಂತಪುರ: ರಾಜ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಇರಿಸಲಾಗಿರುವ ಭಾರತಾಂಬೆಯ ಚಿತ್ರವನ್ನು ಯಾವುದೇ ಕಾರಣಕ್ಕೂ ಅಲ್ಲ್ಲಿಂದ ತೆರವುಗೊಳಿಸುವು ದಿಲ್ಲವೆಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸ್ಪಷ್ಟಪಡಿಸಿದ್ದಾರೆ. ರಾಜ್ ಭವನದಲ್ಲಿ ಭಾರತಾಂ ಬೆಯ ಚಿತ್ರ ಇರಿಸಿದ ರಾಜ್ಯಪಾಲರ ನಿಲುವನ್ನು ಪ್ರಶ್ನಿಸಿ ಸರಕಾರ ರಂಗಕ್ಕಿಳಿ ದಿರುವ ವೇಳೆಯಲ್ಲೇ ರಾಜ್ಯಪಾಲರು ತಮ್ಮ ಅಚಲ ನಿರ್ಧಾರವನ್ನು ಪ್ರಕಟಿಸಿ ದ್ದಾರೆ. ಇದರಿಂದಾಗಿ ರಾಜ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಇನ್ನು ಸರಕಾರಿ ಕಾರ್ಯಕ್ರಮ ನಡೆಸಬೇಕೇ ಎಂಬ ಆಲೋಚನೆಯಲ್ಲಿ ಸರಕಾರ ತೊಡಗಿದೆ. ಇದೇ ಸಂದರ್ಭದಲ್ಲಿ ಈ ವಿಷಯದಲ್ಲಿ ಸರಕಾರದ ಸ್ಪಷ್ಟ …

ಕಾರ್ಮಿಕ ನಾಪತ್ತೆ

ಬದಿಯಡ್ಕ: ಕೆಲಸಕ್ಕೆಂದು ಮನೆಯಿಂದ   ಹೋದ ಯುವಕ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ನೀರ್ಚಾಲು ಪೆರಡಾಲ ಇಕ್ಕೇರಿಯ ಅಪ್ಪ ವಿ.ವಿ ಎಂಬವರ ಮಗ ಪ್ರಕಾಶನ್ ವಿ.ವಿ (41) ನಾಪತ್ತೆಯಾಗಿ ರುವುದಾಗಿ ಪತ್ನಿ ಊರ್ವಶಿ ದೂರು ನೀಡಿದ್ದು ಅದರಂತೆ ಬದಿಯಡ್ಕ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ ೧೮ರಂದು ಮಧ್ಯಾಹ್ನ ಮನೆ ಪಕ್ಕದ ಹಿತ್ತಿಲಿಗೆ ತೆಂಗಿನಕಾಯಿ ಕೊಯ್ಯಲೆಂದು  ಹೋದ ಪ್ರಕಾಶನ್ ನಂತರ ಮನೆಗೆ ಹಿಂತಿರುಗಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲ್ಲಿ ಪತ್ನಿ ತಿಳಿಸಿದ್ದಾರೆ.

ಹಳದಿಕಾಮಾಲೆ ಬಾಧಿಸಿ ಯುವತಿ ಮೃತ್ಯು

ಕಾಸರಗೋಡು: ಹಳದಿ ಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕೋ ಡೋಂಬೇಳೂರು ಪಂಚಾಯತ್ ಮಾಜಿ ಸಿಡಿಎಸ್ ಚೆಯರ್ ಪರ್ಸನ್ ಚುಳ್ಳಿಕೆರೆ ವೆಳ್ಳರಿಕುಂಡ್‌ನ ಲಲಿತ (40) ಮೃತಪಟ್ಟವರು. ಒಂದು ವಾರ ಹಿಂದೆ ಇವರಿಗೆ ಹಳದಿ ಕಾಮಾಲೆ ಬಾಧಿಸಿತ್ತು. ಅಸೌಖ್ಯ ಉಲ್ಭಣಗೊಂಡು ಚಿಕಿತ್ಸೆಗೆ ಭಾರೀ ಮೊತ್ತ ಅನಿವಾರ್ಯವಾ ದುದರಿಂದ ನಾಗರಿಕರು ಚಿಕಿತ್ಸಾ ಸಮಿತಿ ರೂಪೀಕರಿಸಿ ಹಣ ಸಂಗ್ರ ಹಿಸುವ ಕಾರ್ಯ ಆರಂಭಿಸಿದ್ದರು. ಮೃತರು ಪತಿ ಸುಕುಮಾರನ್, ಮಕ್ಕಳಾದ ದಿಲ್ಶಾ, ದೇವಾನಂದ, ಸಹೋದರಿಯರಾದ ಲತಾ, ಬಿಂದು  ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಗಾಂಜಾ ವಶ: ಎರಡು ಪ್ರಕರಣಗಳಲ್ಲಾಗಿ ಮೂವರ ಸೆರೆ

ಕುಂಬಳೆ: ಕುಂಬಳೆಯಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 20 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋ ಪದಂತೆ ಇಬ್ಬರನ್ನು ಸೆರೆಹಿಡಿದಿದೆ. ಕುಂಬಳೆ ನಿತ್ಯಾನಂದ ಮಠ ಬಳಿ ನಿವಾಸಿ ಕೇತನ್ ಸಿ.ಕೆ (26) ಮತ್ತು ದೇವೀನಗರದ ಹರಿಕೃಷ್ಣನ್ (19) ಎಂಬಿವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ   ನೇತೃತ್ವದ ತಂಡ ಈ ಅಬಕಾರಿ ಕಾರ್ಯಾಚರಣೆ ನಡೆಸಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್), ಮುರಳಿ ಕೆ.ವಿ, ಗ್ರೇಡ್ ಪ್ರಿವೆಂಟೀವ್ ಆಫೀಸರ್ ಪ್ರಜಿತ್ …

ವಿಮಾನ ಅಪಘಾತ ಮೃತಪಟ್ಟ  215 ಮಂದಿಯ ಗುರುತು ಪತ್ತೆ

ಅಹಮ್ಮದಾಬಾದ್: ಅಹಮ್ಮದಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ 215 ಮಂದಿಯ ಡಿಎನ್‌ಎ ಸ್ಯಾಂಪಲ್ ಪರಿಶೀಲಿಸಿ ವ್ಯಕ್ತಿಗಳ ಗುರುತು ಹಚ್ಚಲಾಗಿದೆ. ಇದೇ ವೇಳೆ 198 ಮಂದಿಯ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.  ಇದರಲ್ಲಿ 149 ಮಂದಿ ಭಾರತೀಯರಾಗಿದ್ದಾರೆ. 7 ಮಂದಿ ಪೋರ್ಚುಗೀಸಿನವರು, 32 ಮಂದಿ ಬ್ರಿಟೀಷರು ಹಾಗೂ ಓರ್ವ ಕೆನಡಾ ಪ್ರಜೆಯೂ ಮೃತಪಟ್ಟವರಲ್ಲಿ ಒಳಗೊಂಡಿದ್ದಾರೆ.

ಬೃಹತ್ ಪ್ರಮಾಣದ ತಂಬಾಕು ಉತ್ಪನ್ನ ವಶ: ಇಬ್ಬರ ಸೆರೆ

ಕಾಸರಗೋಡು: ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಉಳಿಯತ್ತಡ್ಕದ ಸಮೀರ್ ಎ.ವೈ.(40) ಮತ್ತು ಕುಂಬಳೆಗೆ ಸಮೀಪದ ಆರಿಕ್ಕಾಡಿ ಕುನ್ನಿಲ್ ಹೌಸ್‌ನ ಸಿದ್ದೀಕ್ ಬಿ. (38) ಎಂಬವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಎರಡು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಾಗಿ ಕೇರಳದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳನ್ನು ತುಂಬಿಸಿಡಲಾಗಿತ್ತು. ಚಂದೇರಕ್ಕೆ ಸಮೀಪದ ಮಚ್ಚಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂದೇರಾ ಪೊಲೀಸ್ ಠಾಣೆಯ ಎಸ್‌ಐ ಸತೀಶ್ ವರ್ಮಾರ ನೇತೃತ್ವದ ಪೊಲೀಸರ ತಂಡ ನಿನ್ನೆ …

ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ: ಜಿಲ್ಲೆಯಲ್ಲಿ 23,546 ಮಂದಿ ಚಿಕಿತ್ಸೆಯಲ್ಲಿ

ಕಾಸರಗೋಡು: ಮಳೆಗಾಲ ಆರಂಭಗೊAಡಿರುವAತೆಯೇ ಜಿಲ್ಲೆಯಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗತೊಡಗಿದೆ.ಜನವರಿ 1ರಿಂದ ಎಪ್ರಿಲ್ 30ರ ತನಕದ ನಾಲ್ಕುತಿಂಗಳಲ್ಲಿ ಜಿಲ್ಲೆಯಲ್ಲಿ ದೈನಂದಿನ ಸರಾಸರಿ ತಲಾ 200ರಷ್ಟು ಮಂದಿ ಜ್ವರ ತಗಲಿ ಆಸ್ಪತ್ರೆಗೆ ಸಾಗುತ್ತಿದ್ದರೆ, ಮೇ ತಿಂಗಳಲ್ಲಿ ಆ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಅಂದರೆ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 23,546 ಮಂದಿ ವಿವಿಧ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಡೆಂಗ್ಯೂ ಜ್ವರ ತಗಲಿರುವವರ ಸಂಖ್ಯೆ ಈ ಒಂದು ತಿಂಗಳಲ್ಲಿ 6ರಿಂದ ಈಗ 91ಕ್ಕೇರಿದೆ. 159 ಮಂದಿ …