ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ನಿನ್ನೆ ಆರಂಭಗೊಂಡಿದೆ. ಇದರಂಗವಾಗಿ ನಿನ್ನೆ ಬೆಳಿಗ್ಗೆ ಶ್ರೀ ನಾಗಸನ್ನಿಧಿಯಲ್ಲಿ ನಾಗತಂಬಿಲ, ಭಜನೆ, ಭಂಡಾರ ಆಗಮನದೊಂದಿಗೆ ನಡಾವಳಿ ಉತ್ಸವ ನಡೆಯಿತು. ಇಂದು ಮೊದಲ ಕಳಿಯಾಟ ನಡೆಯಲಿದ್ದು, ಫೆ. ೧ರಂದು ಕಳಿಯಾಟ ಸಮಾಪ್ತಿಗೊಳ್ಳಲಿದೆ.

 ನಿತೀಶ್ ಕುಮಾರ್ ನಾಳೆ ರಾಜೀನಾಮೆ?  ಹೊಸ ಸರಕಾರ ರಚನೆ ಸಾಧ್ಯತೆ

ಪಾಟ್ನಾ: ಬಿಜೆಪಿ ನೇತೃತ್ವದ ಎನ್‌ಡಿಯೇತರ ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸಿ ಅದಕ್ಕೆ ಪರ‍್ಯಾಯವಾಗಿ ‘ಇಂಡಿಯಾ’ ನೇತೃತ್ವದಲ್ಲಿ ಬಲಿಷ್ಠ ವಿಪಕ್ಷ ಒಕ್ಕೂಟ ರಚಿಸುವ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳು ಒಂದೆಡೆ ಶತ ಪ್ರಯತ್ನದಲ್ಲಿ ತೊಡಗಿರುವಂತೆಯೇ ಅದಕ್ಕೆ ಮಾರಕ ಆಘಾತ ನೀಡಿ ‘ಇಂಡಿಯ’ ಒಕ್ಕೂಟದ ಸಂಚಾಲಕರೇ ಆಗಿರುವ ಜೆ.ಡಿ.ಯು ನೇತಾರ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಆ ಒಕ್ಕೂಟವನ್ನೇ  ತೊರೆದು ತನ್ನ ಹಳೇ ಗೂಡು ಆಗಿರುವ ಎನ್‌ಡಿಎಗೆ ಸೇರ್ಪಡೆಗೊಳ್ಳುವ ತಯಾರಿಕೆಯಲ್ಲಿ ತೊಡಗಿದ್ದಾರೆ. ನಿತೀಶ್ ಕುಮಾರ್ ಎನ್‌ಡಿಎಗೆ ಮರು …

ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಗೆ ಕೇರಳದ ಜನತೆಯಿಂದ ಅನುಕೂಲ ನಿಲುವು ಉಂಟಾಗಿದೆ-ಕೆ. ಸುರೇಂದ್ರನ್

ಕಾಸರಗೋಡು: ಅಯೋಧ್ಯೆ  ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕೇರಳದ ಜನತೆಯಿಂದ ಅನುಕೂಲಕರ ನಿಲುವು ಉಂಟಾಗಿ ದೆಯೆಂದು  ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು   ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಭಾಗವ ಹಿಸಿ ಅವರು ಮಾತನಾಡುತ್ತಿದ್ದರು. ಆಡಳಿತ ಒಕ್ಕೂಟವಾದ ಎಡರಂಗ ಮತ್ತು ಐಕ್ಯರಂಗ ಅಯೋಧ್ಯೆ ವಿಷಯದಲ್ಲಿ ತಳೆದ ನಿಲುವುಗಳು ಎಲ್ಲಾ ಹಿಂದೂ ಸಂಘಟನೆಗಳು ಸಾರಾಸಗಟಾಗಿ ತಿರಸ್ಕರಿಸಿವ. ಎಸ್‌ಎನ್‌ಡಿಪಿ, ನಾಯರ್ಸ್ ಸರ್ವೀಸ್ ಸೊಸೈಟಿ, ಕೇರಳ ಧೀವರ ಸಭಾ, ವಿಶ್ವಕರ್ಮ ಸಂಘಗಳು, ಪರಿಶಿಷ್ಟ ಜಾತಿ ಮತ್ತು …

ಎನ್‌ಡಿಎ ನೇತೃತ್ವದ ಕೇರಳ ಪಾದಯಾತ್ರೆಗೆ ಕ್ಷಣಗಣನೆ ಆರಂಭ

ಕಾಸರಗೋಡು:? ಎನ್.ಡಿ.ಎ ಕೇರಳ ಘಟಕದ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೆ. ಸುರೇಂದ್ರನ್‌ರ ನೇತೃತ್ವದಲ್ಲಿ ಕಾಸರಗೋಡಿನಿಂದ  ಆರಂಭಗೊ ಳ್ಳುವ ಕೇರಳ ಪಾದಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿದೆ. ನಿಗದಿತ ತೀರ್ಮಾನದಂತೆ ಇಂದಿನ ಈ ಯಾತ್ರೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ   ಉದ್ಘಾಟಿ ಸಬೇಕಾಗಿತ್ತು. ಆದರೆ  ಬಿಹಾರದಲ್ಲಿ ದಿಢೀರ್ ಆಗಿ ಉಂಟಾದ ರಾಜಕೀಯ ಹೈಡ್ರಾಮಾ  ಬೆಳವಣಿಗೆ ಹಿನ್ನೆಲೆಯಲ್ಲಿ  ಜೆ.ಪಿ. ನಡ್ಡಾ   ತಮ್ಮ ಕಾಸರಗೋಡು ಯಾತ್ರೆಯನ್ನು ದಿಢೀರ್ ರದ್ದುಪಡಿಸಿ ಅವರಿಗೆ ದಿಲ್ಲಿಯಲ್ಲೇ ಉಳಿದುಕೊಳ್ಳ ಬೇಕಾದ ಅನಿವಾರ್ಯತೆಯುಂಟಾಗಿದೆ. ಅದರಿಂದಾಗಿ …

ಆಡು ವ್ಯಾಪಾರಿಯನ್ನು ಆಕ್ರಮಿಸಿ ಪಿಕಪ್, ಫೋನ್ ಅಪಹರಿಸಿದ ಪ್ರಕರಣ: ವಿದೇಶಕ್ಕೆ ಪರಾರಿಯಾದ ಆರೋಪಿ ಬಂಧನ

ಕುಂಬಳೆ: ಆಡು ವ್ಯಾಪಾರಿಯನ್ನು ಆಕ್ರಮಿಸಿ ಪಿಕಪ್ ವಾಹನ ಹಾಗೂ ಮೊಬೈಲ್ ಫೋನ್ ಅಪಹರಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಪೈವಳಿಕೆ ಪಾಕ ಅಲಾಮಿಲ್ಲತ್ತ್ ಕೋಟೇರ್ಜ್‌ನ ಅಬ್ದುಲ್ ರಹ್ಮಾನ್ ಯಾನೆ ಪಾಪು ರಹೀಂ (೪೦) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಆರೋಪಿ ಯಾಗುವುದರೊಂದಿಗೆ ಮಸ್ಕತ್‌ಗೆ ಪರಾರಿಯಾದ ಈತ ಮರಳಿ ಬರುತ್ತಿದ್ದಾಗ ನೆಡುಂಬಾಶೇರಿ ವಿಮಾನ ನಿಲ್ದಾಣದಿಂದ ಸೆರೆಗೀಡಾಗಿದ್ದಾನೆ. ೨೦೨೩ ಜೂನ್ ೨೪ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ರಾಜಸ್ಥಾನ ನಿವಾಸಿಯೂ ಆಡು ವ್ಯಾಪಾರಿಯಾದ ಕಾಯರಾಂ ಎಂಬವರು ಹಲ್ಲೆಗೊಳಗಾದ …

ಅನಂತಪುರದಲ್ಲಿ ಭಾರೀ ಬೆಂಕಿ ಆಕಸ್ಮಿಕ: ತಪ್ಪಿದ ದುರಂತ

ಕುಂಬಳೆ: ಅನಂತಪುರದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಅನಂತಪುರ ಕ್ಷೇತ್ರ ಸಮೀಪದ ೨೦ ಎಕರೆಯಷ್ಟು ಸ್ಥಳದಲ್ಲಿ ಬೆಂಕಿ ಹತ್ತಿಕೊಂಡಿದೆ. ಬಹುಬೇಗನೆ ಹರಡಿದ ಬೆಂಕಿಯಿಂದ ನಾಗರಿಕರು ಆತಂಕಗೊಂಡರು. ಅನಂತಪುರ ಕ್ಷೇತ್ರ ಸಂದರ್ಶನಕ್ಕಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಲುಪಲಿರುವಂತೆಯೇ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಗೋವಾ ಮುಖ್ಯಮಂತ್ರಿಯ ಭದ್ರತೆಗೆ ತಲುಪಿದ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಸಹಿತ ನಾಗರಿಕರು ಬೆಂಕಿ ನಂದಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಅಗ್ನಿಶಾಮಕದಳವೂ ಸ್ಥಳಕ್ಕೆ ತಲುಪಿದೆ. ಇಂದು ಮಧ್ಯಾಹ್ನ ವೇಳೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. …

ಪ್ರಧಾನಿಯನ್ನು ಅವಹೇಳನಗೈದ ಬಗ್ಗೆ ದೂರು: ಹೈಕೋರ್ಟ್‌ನ ಇಬ್ಬರು ಸಿಬ್ಬಂದಿಗಳ ಅಮಾನತು

ಕೊಚ್ಚಿ: ಗಣರಾಜ್ಯೋತ್ಸವ ದಿನ ವಾದ ನಿನ್ನೆ ರಾಜ್ಯ ಹೈಕೋರ್ಟ್‌ನಲ್ಲಿ ಪ್ರದರ್ಶಿಸಲ್ಪಟ್ಟ ನಾಟಕದಲ್ಲಿ ಭಾರತ ಮತ್ತು ಪ್ರಧಾನಮಂತ್ರಿಯವರು ಅವಹೇಳನಗೈಯ್ಯಲಾಗಿದೆ ಎಂದು ಆರೋಪಿಸಿ ನೀಡಲಾದ ದೂರಿನಂತೆ  ಹೈಕೋರ್ಟ್‌ನ ಅಸಿಸ್ಟೆಂಟ್ ರಿಜಿಸ್ಟ್ರಾರ್ ಟಿ.ಎ. ಸುಧೀಶ್ ಮತ್ತು ಕೋರ್ಟ್ ಕೀಪರ್ ಪಿ.ಎಂ. ಸುಧೀಶ್ ಎಂಬವರನ್ನು ತನಿಖಾ ವಿಧೇಯಗೊಳಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಇಬ್ಬರು ಸೇರಿ ಈ ನಾಟಕ ರಚಿಸಿದ್ದರು. ನಾಟಕದ ವಿರುದ್ಧ ಲೀಗಲ್ ಸೆಲ್ ಮತ್ತು ಭಾರತೀಯ ಅಭಿಅಭಾಷಕ (ನ್ಯಾಯವಾದಿ) ಪರಿಷತ್  ದೂರು ನೀಡಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಇಬ್ಬರು …

ಸತ್ಯನಾರಾಯಣ ಬೆಳೇರಿಗೆ ಪದ್ಮಶ್ರೀ: ನಾಡಿನಲ್ಲಿ ಸಂತಸ; ಹರಿದುಬರತೊಡಗಿದ ಅಭಿನಂದನೆಗಳ ಮಹಾಪೂರ

ಮುಳ್ಳೇರಿಯ: ಭತ್ತದ ತಳಿ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ ನಡೆಸಿದ ಅತ್ಯುತ್ತಮ ಸಾಧನೆಗಾಗಿ ೨೦೨೪ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡ ಬೆಳ್ಳೂರು ಪಂಚಾಯತ್‌ನ ನೆಟ್ಟಣಿಗೆ ಗ್ರಾಮದ ಸತ್ಯನಾರಾಯಣ ಬೆಳೇರಿ  ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಜಿಲ್ಲೆಯ ಕೃಷಿಕನೋರ್ವರಿಗೆ ಇದೇ ಮೊದಲ  ಬಾರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ನಾಡಿನಲ್ಲಿ ಭಾರೀ ಸಂತಸ ಮೂಡಿಸಿದೆ. ಕಳೆದ ಹಲವು ವರ್ಷಗಳಿಂದ ಮರೆಯಾಗುತ್ತಿರುವ ದೇಸಿ ಭತ್ತದ ತಳಿಗಳ ಸಂರಕ್ಷಣೆ ಹಾಗೂ ಅವುಗ ಸಂವರ್ಧನೆಯ ಮೂಲಕ ಸತ್ಯನಾರಾಯಣ ಬೆಳೇರಿ ಅವರು ಉತ್ತಮ ಸಾಧನೆಗೈದುದನ್ನು ಪರಿಗಣಿಸಿ ಕೇಂದ್ರ …

೧೦ ಕೆ.ಜಿ ಗಾಂಜಾ ವಶ: ಕಾರು ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ತಳಂಗರೆ ಹಾರ್ಬರ್ ಬಳಿ ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೧೦ಕಿಲೋ ಗಾಂಜಾ ಪತ್ತೆಹZ ಲಾಗಿದೆ. ಮಾಲನ್ನು ಕಾರೊಂ ದರಲ್ಲಿ ಸಾಗಿಸಲಾಗುತ್ತಿದ್ದು, ಅದನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮುಳಿಯಾರು ಪೊವ್ವಲ್ ಬೆಂಚ್ ಕೋರ್ಟ್‌ನ ಅಬೂಬಕರ್ ಶಾನ್‌ಫರ್ ಎನ್ (೨೪) ಎಂಬಾತನನ್ನು ಬಂಧಿಸಲಾಗಿದೆ. ಮೂವರು ಸೇರಿ  ೩೦ ಕಿಲೋ ಗಾಂಜಾ ಸಾಗಿಸಲಾಗುತ್ತಿದೆ ಯೆಂಬ ಗುಪ್ತ ಮಾಹಿತಿ ತಮಗೆ ಲಭಿಸಿತ್ತು. ಅದರಂತೆ ನಡೆಸಲಾದ ಈ …

ತಂದೆಯನ್ನು  ಕೊಲ್ಲುವುದಾಗಿ ಬೆದರಿಕೆ: ೧೦ನೇ ತರಗತಿ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲು: ಯುವಕನ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: ತಂದೆಯನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಬಾಲಕಿಯ ಹೇಳಿಕೆ ಪ್ರಕಾರ ಮೊಗ್ರಾಲ್ ನಿವಾಸಿಯಾದ ಗಲ್ಫ್ ಉದ್ಯೋಗಿ ವಿರುದ್ದ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ. ಆರೋಪಿಗಾಗಿ ತೀವ್ರಶೋಧ ನಡೆಸಲಾಗುತ್ತಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಹದಿನಾರರ ಹರೆಯದ ಬಾಲಕಿ ಗಂಭೀರ ಸ್ಥಿತಿಯಲ್ಲಿ  ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಮೊನ್ನೆ ಸಂಜೆ ಶಾಲೆಯಿಂದ …