೯೦ ಕಿಲೋ ಗಾಂಜಾ ವಶ ಪ್ರಕರಣ: ಪರಾರಿಯಾದ ಆರೋಪಿ ಬಂಧನ
ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾ ವಶ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಕುಬಣೂರು ನಿವಾಸಿ ಶೇಕ್ ಅಲಿ (೬೯) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈತನನ್ನು ಮಂಜೇಶ್ವರ ಸಿಐ ರಜೀಶ್ ನೇತೃತ್ವದ ಪೊಲೀಸರು ಮನೆಯಿಂದ ಸೆರೆಹಿಡಿದಿದ್ದಾರೆ. ಅಲ್ಲದೆ ಆರೋಪಿಯ ಒಂದು ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯದಲ್ಲಿ ರಿಮಾಂಡ್ ವಿಧಿಸಿದೆ. ೨೦೨೩ ಅಕ್ಟೋಬರ್ ೧೫ ರಂದು ರಾತ್ರಿ ೧೦.೩೦ರ ವೇಳ ಮಂಜೇಶ್ವರ ಪೊಲೀಸರು ಬಾಯಿಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ …