ವಯನಾಡ್‌ನ ಜನವಾಸ ಕೇಂದ್ರದಲ್ಲಿ ಕರಡಿ

ವಯನಾಡ್: ವಯನಾಡ್‌ನ ಜನವಾಸ ಪ್ರದೇಶದಲ್ಲಿ ಕರಡಿಯೊಂದು ಕಳೆದ ಕೆಲವು ದಿನಗಳಿಂದ ಅಲೆದಾಡುತ್ತಿದ್ದು, ಇದು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ನಾಗರಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿ ಕರಡಿಯನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸುತ್ತಿದ್ದರಾದರೂ ಅದು ಸಾಧ್ಯವಾಗುತ್ತಿಲ್ಲ. ಕರಡಿಗೆ ಅಸೌಖ್ಯ ಬಾಧಿಸಿದೆ. ಆದರೂ ಅತೀ ವೇಗದಲ್ಲಿ  ಓಡಾಡುತ್ತಿರುವುದರಿಂದ  ಮಾದಕಗುಂಡು ಹಾರಿಸಲು ಸಾಧ್ಯವಾಗುತ್ತಿಲ್ಲ. ಕಳೆದ ೬೦ ಗಂಟೆಗಳಲ್ಲಿ ಕರಡಿ ಕನಿಷ್ಠ ೩೦ ಕಿಲೋ ಮೀಟರ್ ನಷ್ಟು ಸಂಚರಿಸಿದೆ ಎನ್ನಲಾಗಿದೆ.

ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ಬೇವಿಂಜೆ ಯಲ್ಲಿ ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ.ರ ನೇತೃತ್ವದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೪.೫ ಲೀಟರ್ ಮದ್ಯ ಪತ್ತೆ ಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಬೇವಿಂಜೆಯ ವೇಲಾ ಯುಧನ್ ಕೆ. (೫೫) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒಗಳಾದ ರಾಜೇಶ್, ಶರತ್, ಗೀತ, ಪಿ.ಒಗಳಾದ ಪ್ರಶಾಂತ್ ಮತ್ತು ಉಣ್ಣಿಕೃಷ್ಣನ್ ಎಂಬವರು ಒಳಗೊಂಡಿದ್ದಾರೆ.

ಬಾಲಕಿಯನ್ನು ಹಿಂಬಾಲಿಸಿ ತೊಂದರೆ ನೀಡಿದ ಯುವಕ ಸೆರೆ

ಕಾಸರಗೋಡು: ಪ್ಲಸ್‌ಟು ವಿದ್ಯಾರ್ಥಿನಿಯನ್ನು ಹಿಂಬಾಲಿಸಿ   ತೊಂದರೆ ನೀಡಿದ ಯುವಕನನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಮಾನ್ಯ ಕೊಲ್ಲಂಗಾನದ ಅಜ್ಮಲ್ (೨೫) ಎಂಬಾತನನ್ನು  ವಿದ್ಯಾನಗರ ಪೊಲೀಸರು ಬಂಧಿಸಿ ದ್ದಾರೆ. ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಬಾಲಕಿ ಪ್ರಯಾಣಿಸುವ ಬಸ್‌ನಲ್ಲೂ, ಬಸ್ ಇಳಿದು ನಡೆದು ಹೋಗುವಾಗಲೂ ಆಕೆಯನ್ನು ಹಿಂ ಬಾಲಿಸಿ ಈತ ತೊಂದರೆ ನೀಡುತ್ತಿದ್ದ ನೆಂದು ದೂರಲಾಗಿದೆ.  ಇದನ್ನು ಬಾಲಕಿ ಪ್ರಶ್ನಿಸಿದ್ದರೂ ಆತ ತನ್ನ ಕೃತ್ಯ ಮುಂದುವರಿಸಿದನೆಂದು ಹೇಳಲಾ ಗಿದೆ. ಇದರಿಂದ   ಪೊಲೀಸರಿಗೆ ದೂರು ನೀಡಿದ್ದು, ಇದರಂತೆ ಪೊಲೀಸರು …

ಬೈಕ್ ಅಪಘಾತದಲ್ಲಿ ಗಾಯಗೊಂಡ ಬಂಬ್ರಾಣ ನಿವಾಸಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ತಿರುವನಂತಪುರ ದಲ್ಲಿ ಸಂಭವಿಸಿದ  ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಬ್ರಾಣ ಬಳಿಯ ನಿವಾಸಿಯಾದ ಯುವಕ  ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.  ಬಂಬ್ರಾಣ ಅಂಡಿತ್ತಡ್ಕ ನಿವಾಸಿ ದಿ| ಪಳ್ಳಿಕುಂಞಿ ಕುದೂರು- ಖದೀಜ ದಂಪತಿಯ ಪುತ್ರ ಅಪ್ಸಲ್ (೨೭) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ತಿರುವನಂತಪುರದಲ್ಲಿ ಜವುಳಿ ಅಂಗಡಿಯೊಂದರಲ್ಲಿ ಸೇಲ್ಸ್‌ಮೆನ್ ಆಗಿದ್ದ ಅಪ್ಸಲ್ ಎರಡು ದಿನಗಳ ಹಿಂದೆ  ರಾತ್ರಿ ಹೊತ್ತಿನಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬೈಕ್ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದ ಅಪ್ಸಲ್ ಅಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು …

ಸಾಕ್ಷಿದಾರನಿಗೆ ಬೆದರಿಕೆ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಸಾಕ್ಷಿದಾರನಿಗೆ ಬೆದರಿಕೆಯೊಡ್ಡಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ  ಪೊಲೀಸ್ ಠಾಣೆಯ ಎಸ್‌ಐ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಉಳಿಯತ್ತಡ್ಕ ಪಳ್ಳ ರಸ್ತೆ ಬಳಿಯ ಉಸ್ಮಾನ್ ಕೆ.  ಅಲಿಯಾಸ್ ಚಾರ್ಲಿ ಉಸ್ಮಾನ್ (೪೨) ಬಂಧಿತ ಆರೋಪಿ. ಖಾಸಗಿ ಬಸ್ ಸಿಬಬಂದಿಯಾಗಿರುವ ಪಾಡಿ ಎದುರ್ತೋಡು ನಿವಾಸಿ ನವೀನ್ ಕುಮಾರ್ (೨೪) ಎಂಬಾತನಿಗೆ ೨೪ರಂದು ಉಳಿಯತ್ತಡ್ಕದಲ್ಲಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಲಿ ಉಸ್ಮಾನ್‌ನನ್ನು  ಬಂಧಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ೨೦೧೯ರಲ್ಲಿ ದೂರಗಾರ ನವೀನ್ ಕುಮಾರ್‌ನ ೫೦೦೦ ರೂ. ಒಳಗೊಂಡ ಪರ್ಸ್‌ನ್ನು ಆತನ …

ವಿಪಕ್ಷ ಸಂಘಟನೆ ನೌಕರರಿಂದ ನಾಳೆ ಮುಷ್ಕರ: ಡಯಸ್‌ನೋನ್ ಘೋಷಿಸಿದ ಸರಕಾರ

ತಿರುವನಂತಪುರ: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ರಾಜ್ಯದಲ್ಲಿ ವಿಪಕ್ಷ ಸಂಘಟನೆಗಳ ನೌಕರರು ನಾಳೆ ಮುಷ್ಕರ ನಡೆಸು ವರು. ನೀಡಲು ಬಾಕಿಯಿರುವ ಡಿಎ ಕೂಡಲೇ ಮಂಜೂರು ಮಾಡಬೇಕು, ಲೀವ್ ಸರಂಡರ್ ಮರುಸ್ಥಾಪಿ ಸಬೇಕು, ವೇತನ ಪರಿಷ್ಕರಣೆ ಮಂಜೂರು ಮಾಡಬೇಕು, ಪಾಲುದಾರಿಕಾ ಪಿಂಚಣಿ ಹಿಂತೆಗೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ನೌಕರರ ಮುಷ್ಕರವನ್ನು ವಿರೋಧಿಸಿ ಸರಕಾರ ಡಯಸ್‌ನೋನ್ ಘೋಷಿಸಿದೆ. ಮುಷ್ಕರ ನಡೆಸುವ ನೌಕರರ ವೇತನ ಕಡಿತಗೊಳಿಸುವುದಾಗಿ ಸಾರ್ವಜನಿಕ ಆಡಳಿತ ಇಲಾಖೆ ತಿಳಿಸಿದೆ. ಅನುಮತಿಯಿಲ್ಲದೆ ಹಾಜರಾಗದ ತಾತ್ಕಾಲಿಕ …

ಕುಂಬಳೆಯಲ್ಲಿ ೧ ಕೋಟಿ ೧೨ ಲಕ್ಷ ರೂ. ಖರ್ಚಿನಲ್ಲಿ ಮಾರುಕಟ್ಟೆ ಸಮುಚ್ಛಯ

ಕುಂಬಳೆ: ಹಲವು ವರ್ಷಗಳ ಬೇಡಿಕೆಗಳ ಪರಿಣಾಮವಾಗಿ ಕುಂಬಳೆಯಲ್ಲಿ ಮೀನು ಮಾರುಕಟ್ಟೆ ನವೀಕರಿಸಿ ನಿರ್ಮಿಸಲು  ಕ್ರಮ ಆರಂಭಗೊಂಡಿದೆ.  ಇದರ ಪೂರ್ವ ಭಾವಿಯಾಗಿ ಶೋಚನೀಯಾವಸ್ಥೆ ಯಲ್ಲಿರುವ ಮೀನು ಮಾರುಕಟ್ಟೆಯ ನ್ನು ಮುರಿದು ತೆಗೆದು ೧ ಕೋಟಿ ೧೨ ಲಕ್ಷ ರೂಪಾಯಿ ಖರ್ಚಿನಲ್ಲಿ ಆಧುನಿಕ ಸೌಕರ್ಯಗಳುಳ್ಳ ಸೂಪರ್ ಮೀನು ಮಾರುಕಟ್ಟೆ ನಿರ್ಮಿಸಲಾ ಗುವುದು. ಶೋಚನೀಯಾವಸ್ಥೆಯಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಸಲು ಮೀನು ಕಾರ್ಮಿಕರು ಹಿಂದೇಟು ಹಾಕಿದರು. ಇದು ವಿವಾದಕ್ಕೆಡೆಯಾಗುವುದ ರೊಂದಿಗೆ ಆಧುನಿಕ ಸೌಕರ್ಯಗಳುಳ್ಳ ಮೀನು ಮಾರುಕಟ್ಟೆ ನಿರ್ಮಿಸಲು ಪಂಚಾಯತ್ ಮುಂದಾಗಿದೆ. …

ಪ್ರಾಣಪ್ರತಿಷ್ಠೆ ಸಮಯದಲ್ಲಿ ವೆಲ್ಫೇರ್ ಫಂಡ್ ವಿತರಣೆ: ಕುಂಬಳೆ ಮರ್ಚೆಂಟ್ಸ್‌ನಲ್ಲಿ  ಮತ್ತೆ ವಿವಾದ

ಕುಂಬಳೆ: ದೇಶವೇ ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾತರದಿಂದ ಕಾಯುತ್ತಿದ್ದಾಗ ಅದೇ ಸಂದರ್ಭದಲ್ಲಿ ಕುಂಬಳೆ ವ್ಯಾಪಾರ ಭವನದಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವತಿಯಿಂದ ಧನ ಸಹಾಯ ಹಸ್ತಾಂತರ ಕಾರ್ಯಕ್ರಮವಿರಿಸಿಕೊಂ ಡಿರುವುದನ್ನು ಸಂಘಟನೆಯ ಒಂದು ವಿಭಾಗ  ವ್ಯಾಪಾರಿಗಳು ಖಂಡಿಸಿ ದ್ದಾರೆ.  ವ್ಯಾಪಾರಿಗಳ ಟ್ರೇಡ್ ವೆಲ್‌ಫೇರ್ ಸ್ಕೀಂನ ಸಹಾಯ ಧನವನ್ನು ನಿನ್ನೆ ವಿತರಿಸಲಾಗಿದೆ. ಈ ಕಾರ್ಯಕ್ರಮವನ್ನು ತುರ್ತಾಗಿ ತೀರ್ಮಾನಿಸಿದ್ದು, ಆ ದಿನವನ್ನು ಬದಲಿಸಬೇಕೆಂದು ಒಂದು ವಿಭಾಗ ವ್ಯಾಪಾರಿಗಳ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಸಂಘಟನೆಯ …

ಶಬರಿ ರೈಲು ಯೋಜನೆ ವೆಚ್ಚದಲ್ಲಿ ಶೇ. ೫೦ರಷ್ಟು ವಹಿಸಲು ಸಿದ್ಧವಾದ ರಾಜ್ಯ ಸರಕಾರ

ಶಬರಿಮಲೆ:  ಅಂಗಮಾಲಿ-ಎರುಮೇಲಿ ಶಬರಿ ರೈಲು ಯೋ ಜನೆಗೆ ತಗಲುವ ನಿರ್ಮಾಣ ವೆಚ್ಚದಲ್ಲಿ ಶೇ. ೫೦ರಷ್ಟನ್ನು ಸ್ವಯಂ ವಹಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ವಿಷಯವನ್ನು ಪತ್ರದ ಮೂಲಕ ರೈಲ್ವೇಇಲಾಖೆಗೆ ವಿದ್ಯುಕ್ತವಾಗಿ ತಿಳಿಸುವ ತೀರ್ಮಾ ನವನ್ನು ಸರಕಾರ ಕೈಗೊಂಡಿದೆ. ಶಬರಿ ರೈಲು ಯೋಜನೆಗೆ  ವೆಚ್ಚ ವಹಿಸುವ ಕುರಿತಾದ ಸಮಗ್ರ ಮಾಹಿತಿಯನ್ನು ಅಗತ್ಯದ ದಾಖಲು ಪತ್ರಗಳ ಸಹಿತ ತಿಳಿಸುವಂತೆ ರೈಲ್ವೇ ಇಲಾಖೆ ರಾಜ್ಯ ಸರಕಾರಕ್ಕೆ ತಿಳಿಸಿತ್ತು.  ಇದು ಒಟ್ಟಾರೆಯಾಗಿ ೩,೮೧೦ ಕೋಟಿ ರೂ. ವೆಚ್ಚ  ನಿರೀಕ್ಷಿಸುವ ಯೋಜನೆಯಾಗಿದೆ. ಶಬರಿ ರೈಲು …

ಕುತ್ತಿ ತೆಗೆಯುವ ಕಾರ್ಯಕ್ರಮದ ಬೆನ್ನಲ್ಲೇ ವಾಸ್ತು ತಜ್ಞ ಕುಸಿದುಬಿದ್ದು ಮೃತ್ಯು

ಕಾಸರಗೋಡು:  ಮನೆ ನಿರ್ಮಾಣಕ್ಕಾಗಿ ಸ್ಥಾಪಿಸಿದ್ದ ಕತ್ತಿಯನ್ನು ತೆಗೆಯುವ ಕಾರ್ಯಕ್ರಮ ನಡೆದ ಅಲ್ಪ ಹೊತ್ತಿನಲ್ಲಿ ವಾಸ್ತುತಜ್ಞ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.  ಪಳ್ಳಿಪುರ ಕೂಟಕ್ಕನಿಯ ಎ. ರವೀಂದ್ರನ್ (ಸೃಷ್ಟಿರವಿ ೫೪) ಎಂಬವರು ಮೃತಪಟ್ಟ ವ್ಯಕ್ತಿ. ಕಳೆದ ದಿನ ಪೂಚಕ್ಕಾಡ್‌ನಲ್ಲಿ ಘಟನೆ ನಡೆದಿದೆ.  ಹೊಸತಾಗಿ   ನಿರ್ಮಿಸಿದ ಮನೆಯ ಗೃಹ ಪ್ರವೇಶದ ಪೂರ್ವಭಾವಿಯಾಗಿ ನಡೆದ ಕುತ್ತಿ ತೆಗೆಯುವ ಕಾರ್ಯಕ್ರಮ ನಡೆದ ಅಲ್ಪ ಹೊತ್ತಿನಲ್ಲೇ ಅವರು ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹಲವು ಕ್ಷೇತ್ರಗಳು, ಭಜನಾ ಮಂದಿರ, …