ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ಜ. ೨೭ರಂದು

ಕಾಸರಗೋಡು:  ಕಾಸರಗೋ ಡಿನಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ   (೨೭)ರ ಕೊಲೆ ಪ್ರಕರಣ ತೀರ್ಪನ್ನು  ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಕೆ. ಬಾಲಕೃಷ್ಣನ್ ಅವರು ಜನವರಿ ೨೭ರಂದು   ನೀಡಲಿರುವರು. ೨೦೧೭ ಮಾರ್ಚ್ ೨೦ರಂದು ರಾತ್ರಿ ೧೨ ಗಂಟೆ ವೇಳೆಗೆ ಹಳೇ ಸೂರ್ಲಿನ ಮದ್ರಸಾದ ಕಟ್ಟಡದಲ್ಲಿ ನಿದ್ರಿಸುತ್ತಿದ್ದ ರಿಯಾಸ್ ಮೌಲವಿಯವರನ್ನು ಅಕ್ರಮಿಗಳು ಇರಿದು ಕೊಲೆಗೈದಿದ್ದರು. ಕೇಳುಗುಡ್ಡೆಯ ಅಜೇಶ್ ಅಲಿಯಾಸ್ ಅಪ್ಪು, ಪೆರಿಯಡ್ಕದ …

ನಾಪತ್ತೆಯಾದ ಶಿಕ್ಷಕಿಯ ಮೃತದೇಹ ಪತ್ತೆ

ಸುಳ್ಯ: ಶಾಲೆಗೆ ಹೋಗಿ ಬರುತ್ತೇನೆಂದು ತಿಳಿಸಿ ತೆರಳಿದ್ದ ಶಿಕ್ಷಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮೃತದೇಹವನ್ನು ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಮಂಡ್ಯ ಶ್ರೀರಂಗಪಟ್ಟಣ ಮೇಲುಕೋಟೆಯಲ್ಲಿ ಘಟನೆ ನಡೆದಿದ್ದು, ಇಲ್ಲಿನ ಪಾಂಡವಪುರ ಮಾಣಿಕ್ಯ ಹಳ್ಳಿ ನಿವಾಸಿ ದೀಪಿಕ (೨೮) ಮೃತಪಟ್ಟ ಶಿಕ್ಷಕಿಯಾಗಿದ್ದಾರೆ. ಇವರನ್ನು ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತುಹಾಕಿರಬೇಕೆಂದು ಶಂಕಿಸಲಾಗಿದೆ. ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು.

ಮಂಜೇಶ್ವರದಲ್ಲಿ ಕರಸೇವಕರಿಗೆ ಗೌರವಾರ್ಪಣೆ

ಮಂಜೇಶ್ವರ: ಶ್ರೀಮದನಂತೇಶ್ವರ ದೇವಳ, ತಿಲಕ ಗೆಳೆಯರ ಬಳಗದ ಆಶ್ರಯದಲ್ಲಿ ಕ್ಷೇತ್ರದ ವಿಭುದೇಂದ್ರ ಕಲಾಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ನಿತಿನ್‌ಚಂದ್ರ ಪೈ ಉದ್ಘಾಟಿಸಿದರು. ಕುಣಿತ ಭಜನೆ, ಶ್ರೀ ರಾಮತಾರಕ ಮಂತ್ರ ಪಠಣ ಜರಗಿತು. ಅಯೋಧ್ಯೆಯ ಪ್ರಾಣಪ್ರತಿಷ್ಠೆ ನೇರ ಪ್ರಸಾರ ಮಾಡ ಲಾಯಿತು. ಸಿಹಿತಿಂಡಿ ವಿತರಿಸಲಾ ಯಿತು. ಕರಸೇವೆಯಲ್ಲಿ ಭಾಗವಹಿಸಿದ ಪ್ರೇಮಾ ಕಾಮತ್, ಕಡಂಬಾರು ಕೇಶವ, ಗಣೇಶ ಸಫಲ್ಯ ಅಯ್ಯರ ಕಟ್ಟೆ, ರೋಹಿ ತಾಶ್ವ ಶೆಟ್ಟಿಗಾರ ಉದ್ಯಾವರ, ಗುಡ್ಡೆ, ಶ್ರೀ ಕೃಷ್ಣ ಗುಡ್ಡೆಮಾರ್, ರಾಜೇಶ್ ಉದ್ಯಾವರ, ಮನೋಹರ ಬೆಂಗರೆ, ಹರಿಪ್ರಸಾದ್ ಬೆಂಗರೆ, …

ಜಿಲ್ಲೆಯ ಬ್ಯಾಂಕ್‌ಗಳಲ್ಲಿ ೧೫,೭೬೯.೨೮ ಕೋಟಿ ರೂ. ಠೇವಣಿ

ಕಾಸರಗೋಡು: ಈ ಆರ್ಥಿಕ ವರ್ಷದ ದ್ವಿತೀಯ ಹಂತದಲ್ಲಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ  ನಡೆಸಲಾದ ಆರ್ಥಿಕ ವ್ಯವಹಾರಗಳ ಬಗ್ಗೆ ಜಿಲ್ಲಾ ಮಟ್ಟದ ಬ್ಯಾಂಕ್‌ನ ಸಭೆಯಲ್ಲಿ ಅವಲೋಕನೆ ನಡೆಸ ಲಾಯಿತು.ಈ  ಆರ್ಥಿಕ ವರ್ಷದ ದ್ವಿತೀ ಯ ಹಂತದಲ್ಲಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ  ಒಟ್ಟು ೧೫,೭೬೯.೨೮ ಕೋಟಿ ರೂ.ಗಳ ಠೇವಣಿ ಹೊಂದಿದೆ. ೧೩,೭೭೪.೮೫ ಕೋಟಿ ರೂ.ವನ್ನು ಸಾಲ ವಿತರಣೆಗಾಗಿ ಮೀಸಲಿರಿಸಲಾಗಿದೆ.  ಈ ಆರ್ಥಿಕ ವರ್ಷ ದಲ್ಲಿ ಎರಡನೇ ಹಂತದಲ್ಲಿ ೪೬೬೪.೦೫ ಕೋಟಿ ರೂ. ಸಾಲ ನೀಡಲಾಗಿದೆ. ಕೃಷಿ ಸೇರಿದಂತೆ ಪ್ರಾಥಮಿಕ ವಲಯದಲ್ಲಿ  ೨೫೫೩.೮೭ ಕೋಟಿ …

ನಾಳೆಯ ಮುಷ್ಕರವನ್ನು ಯಶಸ್ವಿಗೊಳಿಸಲು ಎನ್‌ಟಿಯು ಕರೆ

ಕಾಸರಗೋಡು: ವಿವಿಧ ಬೇಡಿಕೆ ಈಡೇರಿಕೆಗಾಗಿ ಎನ್‌ಟಿಯು ಜಿಲ್ಲಾ ಸಮಿತಿ  ನಾಳೆ ನಡೆಸಲು ಉದ್ದೇಶಿಸಿರುವ ಮುಷ್ಕರದಲ್ಲಿ ಶಿಕ್ಷಕ ಸಮುದಾಯ, ನೌಕರರು ಭಾಗವಹಿಸಿ ಯಶಸ್ವಿಗೊಳಿಸಲು ಶಿಕ್ಷಕರ ಸಂಘಟನೆಗಳ ಒಕ್ಕೂಟ (ಎಫ್ ಇಟಿಒ) ಆಗ್ರಹಿಸಿದೆ. ಶಿಕ್ಷಕರ ಸವಲತ್ತುಗಳನ್ನು ಕಸಿದುಕೊಂಡಿರುವ ಎಡ ಸರಕಾರದ ವಿರುದ್ಧ ನಡೆಸುವ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರದ ಡಯಾಸ್ ನೋನ್‌ನಿಂದ ಸಾಧ್ಯವಾಗದೆಂದು ಸಂಘಟನೆ ತಿಳಿಸಿದೆ. ನಾಳೆ ಬೆಳಿಗ್ಗೆ  ೧೦ ಗಂಟೆಗೆ ಕಾಸರಗೋಡು  ಸಿವಿಲ್ ಸ್ಟೇಶನ್ ಆವರಣದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಎಲ್ಲಾ ಶಿಕ್ಷಕರು ಭಾಗವಹಿಸಬೇಕೆಂದು ಎನ್‌ಟಿಯು ವಿನಂತಿಸಿದೆ. ಈ ಬಗ್ಗೆ  ನಡೆದ …

ಅಯೋಧ್ಯೆ ಕ್ಷೇತ್ರಯಾತ್ರೆಗಾಗಿ ಬಿಜೆಪಿಯಿಂದ ಜ. ೨೫ರಿಂದ ಯಾತ್ರಾ ಸೌಕರ್ಯ ವಸತಿ, ಆಹಾರಕ್ಕೂ ಅಗತ್ಯದ ವ್ಯವಸ್ಥೆ

ತಿರುವನಂತಪುರ: ಅಯೋಧ್ಯೆ ಶ್ರೀರಾಮ ಕ್ಷೇತ್ರ ದರ್ಶನ ನಡೆಸುವವರಿಗಾಗಿ ಬಿಜೆಪಿ ವಿಶೇಷ ಯಾತ್ರಾ ಸೌಕರ್ಯ ಏರ್ಪಡಿಸಿದೆ. ಇದರಂತೆ   ಕೇರಳ ಸೇರಿದಂತೆ ರಾಜ್ಯದಾದ್ಯಂತವಾಗಿ ಜನವರಿ ೨೫ರಿಂದ  ಈ ಯಾತ್ರಾ ಸೌಕರ್ಯ ಏರ್ಪಡಿಸಲಾಗಿದೆ. ಮಾರ್ಚ್ ೨೫ರ ತನಕ ಇದು ಮುಂದುವರಿಯಲಿದೆ.  ಇದರಂತೆ ಪ್ರತಿದಿನ ದೇಶದ ವಿವಿಧ ರಾಜ್ಯಗಳಿಂದಾಗಿ ೫೦,೦೦೦ ಭಕ್ತರಿಗೆ ಯಾತ್ರಾ ಸೌಕರ್ಯ ಏರ್ಪಡಿಸ ಲಾಗುವುದು.  ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಇದಕ್ಕಿರುವ ಸೌಕರ್ಯ ಏರ್ಪಡಿಸಲಾಗುವುದು.  ಹೀಗೆ ಅಯೋಧ್ಯೆಗೆ ಯಾತ್ರೆ ನಡೆಸು ವವರಿಗೆ ಅಗತ್ಯದ ಆಹಾರ ಮತ್ತು ವಸತಿ ಸೌಕರ್ಯವನ್ನು ಅಯೋಧ್ಯೆ ಯಲ್ಲಿ …

ಮಂಜೇಶ್ವರ ಬ್ಲೋಕ್ ಪಂ. ರಿಸೋರ್ಸ್ ಸೆಂಟರ್ ಉದ್ಘಾಟನೆ

ಮಂಜೇಶ್ವರ: ಕಿಲದ ನೇತೃತ್ವದಲ್ಲಿ ಕೇಂದ್ರದ ಯೋಜನೆಯಾದ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್ (ಆರ್. ಜಿ.ಎಸ್.ಎ) ಅಂಗವಾಗಿ ನಿರ್ಮಿಸಿದ ಮಂಜೇಶ್ವರ ಬ್ಲೋಕ್ ಪಂಚಾಯತ್ ರಿಸೋರ್ಸ್ ಸೆಂಟರ್‌ನ ಕಚೇರಿ ಉದ್ಘಾಟನೆಯನ್ನು ಕಿಲ ಡೈರೆಕ್ಟರ್ ಜನರಲ್ ಡಾ. ಜೋಯ್ ಇಳಮನ್ ನಿರ್ವಹಿ ಸಿದರು. ಎಂ. ಪ್ಲೋಯೆಬಿಲಿಟಿ ಸೆಂಟರ್, ತ್ಯಾಜ್ಯ ನಿರ್ಮೂಲನೆ ಚಟುವಟಿಕೆಗಳು, ತರಬೇತಿ ಸಹಿತ ಹಲವು ಯೋಜನೆಗಳು ಈ ಕೇಂದ್ರದ ಅಡಿಯಲ್ಲಿ ಕಾರ್ಯಾಚರಿಸ ಲಿದೆ. ಬ್ಲೋಕ್ ಪಂ. ಅಧ್ಯಕ್ಷೆ ಶಮೀನ ಟೀಚರ್ ಅಧ್ಯಕ್ಷತೆ ವಹಿಸಿದರು. ಅಜಯನ್ ಪನಯಾಲ್ ಸೆಂಟರ್‌ನ ಮಾಹಿತಿ ನೀಡಿದರು. …

ಕುಂಟಿಕಾನ ಮಾಡತ್ತಡ್ಕ ಶ್ರೀ ಹರಿಹರ ಭಜನಾಮಂದಿರದಲ್ಲಿ ಕರಸೇವಕರಿಗೆ ಗೌರವಾರ್ಪಣೆ

ಬದಿಯಡ್ಕ: ಕುಂಟಿಕಾನ ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರ ಸಮಿತಿ, ಶ್ರೀ ಭಾರತಾಂಬಾ ಸೇವಾ ಟ್ರಸ್ಟ್ ಹಾಗೂ ಹರಿಹರ ಬಾಲಗೋಕುಲ ಸಮಿತಿ ಮಾಡತ್ತಡ್ಕ ಇದರ ಜಂಟಿ ಆಶ್ರಯದಲ್ಲಿ ಶ್ರೀ ಮಂದಿರದಲ್ಲಿ ಕರಸೇವಕರಿಗೆ ಹಾಗೂ ಶ್ರೀ ರಾಮಮಂದಿರ ಹೋರಾಟಗಾರರಿಗೆ ನಡೆದ ಗೌರವಾರ್ಪಣೆ ಸಮಾರಂಭದಲ್ಲಿ ಹಿರಿಯ ವಕೀಲರಾದ ಶ್ರೀಕೃಷ್ಣ ಭಟ್ ಮಾತನಾಡಿದರು. ಹಿರಿಯ ಕರಸೇವಕ ಗೋವಿಂದ ಭಟ್ ಮಿಂಚಿನಡ್ಕ, ಕರಸೇವಕ ಪಾಕತಜ್ಞ ಗಣೇಶ್ ಭಟ್ ಸರಳಿ, ಗಣಪತಿ ಪ್ರಸಾದ ಕುಳಮರ್ವ ಮಾತನಾಡಿದರು. ಶ್ರೀ ಮಂದಿರದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಣಬೈಲು …

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾ

ಅಯೋಧ್ಯೆ: ಇಡೀ ವಿಶ್ವವೇ ಐತಿಹಾಸಿಕ ಕ್ಷಣಕ್ಕೆ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ   ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿ ಪೂಜಾ ವಿಧಿ-ವಿಧಾನ ಇಂದು ಬೆಳಿಗ್ಗೆ ವಿದ್ಯುಕ್ತವಾಗಿ ಆರಂ ಭಗೊಂಡಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿ ಸಲಾಗಿರುವ ಶ್ರೀರಾಮ ಮೂರ್ತಿಗೆ ೧೧೪ ಕಲಶ ಔಷಧಿಯ ಜಲದಿಂದ ಪುಣ್ಯಸ್ನಾನ ಮಾಡಿಸುವ ಮೂಲಕ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಗಳಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿ ತು. ಪುಣ್ಯ ಸ್ನಾನದ ಬಳಿಕ  ಪ್ರತಿಷ್ಠಾಪಿಸಲಾಗಿರುವ ದೇವತೆಗಳಿಗೆ ನಿತ್ಯಪೂಜೆ, ಹವನ, ಪಾರಾಯಣ ನಡೆಸಲಾಯಿತು. ಪ್ರಾತಃ ಕಾಲ ಮಧ್ವಾಧೀನಗಳು, ಮಹಾ ಪೂಜೆ, …

ನಿವೃತ್ತ ಮುಖ್ಯೋಪಾಧ್ಯಾಯ ಕಾರು ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ಕ್ಷೇತ್ರ ದರ್ಶನ ನಡೆಸಿ ಮರಳುತ್ತಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಕಾರು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬಳೆಯಲ್ಲಿ ಅನಿಲ್ ಕುಂಬಳೆ ರಸ್ತೆ ನಿವಾಸಿಯಾದ ಬಾಲಕೃಷ್ಣನ್ (೭೯) ಎಂಬವರು ಮೃತಪಟ್ಟ ದುರ್ದೈವಿ. ಇವರು ಇಚ್ಲಂಗೋಡು ಇಸ್ಲಾಮಿಯ ಎಲ್.ಪಿ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದಾರೆ. ನಿನ್ನೆ ರಾತ್ರಿ ೮.೩೦ಕ್ಕೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದರ್ಶನ ನಡೆಸಿ ಮರಳುತ್ತಿದ್ದ ಇವರಿಗೆ ಬದಿಯಡ್ಕ ರಸ್ತೆಯಲ್ಲಿ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ …