ಬದಿಯಡ್ಕ ವರ್ಕ್ ಶಾಪ್‌ನಿಂದ ಕಳವು: ಓರ್ವ ಸೆರೆ; ಮುಖ್ಯ ಆರೋಪಿಗಾಗಿ ಶೋಧ

ಬದಿಯಡ್ಕ: ಇಲ್ಲಿನ ಬೋಳು ಕಟ್ಟೆಯಲ್ಲಿರುವ ವರ್ಕ್ ಶಾಪ್‌ನ ಬಾಗಿಲು ಮುರಿದು ಒಳನುಗ್ಗಿ ಒಂದು ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ ಓರ್ವ ಸೆರೆಗೀಡಾಗಿದ್ದಾನೆ. ಬೋವಿಕ್ಕಾನ ಬಳಿಯ ಮುದಲ ಪ್ಪಾರ ನಿವಾಸಿಯೂ ಮುಳ್ಳೇರಿಯ ಅಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮುಹಮ್ಮದ್ ಶಫೀಕ್ (೩೧) ಎಂಬಾತನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ನೆಕ್ರಾಜೆ ಅರ್ತಿಪಳ್ಳ ಕೋಂ ಬ್ರಾಜೆ ನಿವಾಸಿ ತಿಮೋತಿ ಕ್ರಾಸ್ತರ ಮಾಲಕತ್ವದಲ್ಲಿ  ಬೋಳುಕಟ್ಟೆಯಲ್ಲಿ ಕಾರ್ಯಾಚರಿಸುವ ವರ್ಕ್ ಶಾಪ್ ನಿಂದ ಇತ್ತೀಚೆಗೆ …

ಪತ್ನಿಯನ್ನು ಇರಿದು ಕೊಲೆಗೈದ ಯುವಕನ ಮೃತದೇಹ ರೈಲುಹಳಿಯಲ್ಲಿ ಪತ್ತೆ

ತೃಶೂರ್: ಪತ್ನಿಯನ್ನು ಕೊಲೆಗೈದ ಯುವಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ತೃಶೂರ್ ಮುರಿಂಙೋರ್‌ನಲ್ಲಿ ಇಂದು ಬೆಳಿಗ್ಗೆ ಘಟನೆ ಸಂಭವಿಸಿದೆ. ಮುರಿಂಙೋರ್ ನಿವಾಸಿ ಶೀಜಾರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಬಿನು ರೈಲು ಢಿಕ್ಕಿ ಹೊಡೆದು  ಮೃತಪಟ್ಟ ಸ್ಥಿತಿಯಲ್ಲಿ ಹಳಿಯಲ್ಲಿ ಪತ್ತೆಹಚ್ಚಲಾಗಿದೆ. ಕೊರಟ್ಟಿ ಕಮ್ಯೂನಿಟಿ ಹಾಲ್ ಹಿಂಭಾಗದ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪತ್ನಿಯನ್ನು ಕೊಲೆಗೈದ ಬಳಿಕ  ಬಾಬು ಮಕ್ಕಳಿಗೂ ಇರಿದು ಗಾಯಗೊಳಿಸಿದ್ದಾನೆ. ಗಂಭೀರ ಗಾಯಗೊಂಡ ಮಕ್ಕಳನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳಲ್ಲಿ ಗಂಡು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. …

ಕೆಎಸ್‌ಆರ್ ಟಿಸಿ ಬಸ್ ಬೈಕ್‌ಗೆ ಢಿಕ್ಕಿ: ಪೈಂಟಿಂಗ್ ಕಾರ್ಮಿಕ ಮೃತ್ಯು

ಕಾಸರಗೋಡು: ಕೆಎಸ್‌ಆರ್ ಟಿಸಿ ಬಸ್ ಬೈಕ್‌ಗೆ ಢಿಕ್ಕಿ ಹೊಡೆದು ಪೈಂಟಿಂಗ್ ಕಾರ್ಮಿಕ ಮೃತಪಟ್ಟ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ೧೦ ಗಂಟೆ ವೇಳೆ ಬಂದಡ್ಕದಲ್ಲಿ ಅಪಘಾತ ಸಂಭವಿಸಿದೆ. ಚಿಟ್ಟಾರಿಕಲ್ ನಿವಾಸಿಯೂ, ಚೂರಿತ್ತೋಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸಜಿ ಜೋಸ್ ಕುಳಿಪರಂಬಿಲ್ (೪೪) ಎಂಬವರು  ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅಪಘಾತ ಸ್ಥಳದಲ್ಲೇ ಸಜಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಜೋಸ್ ಎಂಬವರ ಪುತ್ರನಾದ ಮೃತರು ಪತ್ನಿ, ಇಬ್ಬರು ಮಕ್ಕಳು ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಖ್ಯಾತ ಕಳ್ಳ ಕರ್ನಾಟಕ ನಿವಾಸಿ ಸೆರೆ

ಮಲಪ್ಪುರಂ: ಕೊಂಡೋಟಿ ಬಸ್ ನಿಲ್ದಾಣ ಪರಿಸರದ ಮೊಬೈಲ್ ಅಂಗಡಿ ಮುರಿದು ನಾಲ್ಕು ಲಕ್ಷದಷ್ಟು ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕಳವುಗೈದ ಪ್ರಕರಣದಲ್ಲಿ ಕರ್ನಾಟಕ ನಿವಾಸಿಗಳು ಸೆರೆಯಾಗಿದ್ದಾರೆ. ಕರ್ನಾಟಕ ಚಿಕ್ಕಬಳ್ಳಾಪುರ ನಿವಾಸಿ ಹರೀಶ (೨೩) ಕಳವುಗೈದ ಮೊಬೈಲ್  ಮಾರಾಟ ಮಾಡಲು ಸಹಾಯ ಮಾಡಿದ ಕರ್ನಾಟಕದ ಹೋಂಗಾರ್ಡ್ ಮಡಿಕೇರಿ ಕೈಕೇರಿ ಗಾಂಧಿನಗರ ನಿವಾಸಿ ಮೋಹನ್ ಕುಮಾರ್ (೨೭) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕಳೆದ ತಿಂಗಳ ೨೯ರಂದು ರಾತ್ರಿ ಅಂಗಡಿ ಮುರಿದು ಮೊಬೈಲ್‌ಗಳನ್ನು ತೆಗೆದುಕೊಂಡು ಬೆಂಗಳೂರಿಗೆ ತಲುಪಿದ ಹರೀಶ್ ಹೋಂಗಾರ್ಡ್‌ನ ಸಹಾಯದಿಂದ ವಿವಿಧ ಸ್ಥಳಗಳಲ್ಲಿ …

೯೯ ಲಕ್ಷ ರೂ. ಮೌಲ್ಯದ ಚಿನ್ನ ವಶ: ಓರ್ವ ಸೆರೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಸಾಗಿಸಲಾದ ೧.೬ ಕಿಲೋ ಗ್ರಾಂ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ನಿವಾಸಿ ಹಿಸಾಮುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ. ಈತ ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ  ವಿಮಾನದಲ್ಲಿ  ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದನು. ಕಸ್ಟಮ್ಸ್ ತಂಡ ಆತನ ದೇಹ ತಪಾಸಣೆ ನಡೆಸಿದಾಗ ಐದು ಮಾತ್ರೆಗಳ ರೂಪದಲ್ಲಾಗಿದ್ದ ಚಿನ್ನವನ್ನು ಆತನ ದೇಹದಲ್ಲಿ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿದ್ದಾರೆ. ಅದರಂತೆ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಕಿ ಬೆಲೆ ಗಗನದತ್ತ: ಸಪ್ಲೈಕೋದಲ್ಲಿ ಅಕ್ಕಿ ಖಾಲಿ

ತಿರುವನಂತಪುರ: ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಅಕ್ಕಿಯ ದರ ಗಗನದತ್ತ ಮುಖ ಮಾಡಿರುವಾಗ  ಸಪ್ಲೈಕೋದಲ್ಲಿ ಅಕ್ಕಿಯ ಸಂಗ್ರಹ ಶೂನ್ಯವಾಗಿದೆ. ೪ರಿಂದ ೫ ರೂ.ವರೆಗೆ ಕೆಲವು ವಿಧದ ಅಕ್ಕಿಗೆ ಮಾರುಕಟ್ಟೆಯಲ್ಲಿ ಹೆಚ್ಚಳ ಉಂಟಾಗಿರುವುದು. ಸಪ್ಲೈಕೋದಲ್ಲಿ ಇತ್ತೀಚೆಗೆ ಟೆಂಡರ್‌ಗಳೆಲ್ಲಾ ಮೊಟಕಾಗಿದೆ. ಸಬ್ಸಿಡಿಯಿರುವ ೧೩ ವಿಧದ ಸಾಮಗ್ರಿಗಳಿಗೆ ಟೆಂಡರ್ ನೀಡಲು ಯಾರೂ ಸಿದ್ಧರಾಗಿಲ್ಲ. ಇದರಿಂದಾಗಿ ಇನ್ನೊಮ್ಮೆ ಟೆಂಡರ್ ಕರೆಯಬೇಕೆಂದು ಹೇಳಲಾಗುತ್ತಿ ದ್ದರೂ ಬಾಕಿ ಉಳಿದಿರುವ ಮೊತ್ತದ ಅಲ್ಪಾಂಶವಾದರೂ ಸಿಗದ ಕಾರಣ ಟೆಂಡರ್‌ನಲ್ಲಿ ಭಾಗವಹಿಸುವು ದಿಲ್ಲವೆಂದು ಕಂಪೆನಿಗಳು, ಏಜೆನ್ಸಿಗಳು ತಿಳಿಸುತ್ತವೆ. ಜಯ ಅಕ್ಕಿ (೨೪), ಕುರುವ …

ಎಂಡಿಎಂಎ ಸಹಿತ ಕಾರಿನಲ್ಲಿ  ಸಂಚರಿಸುತ್ತಿದ್ದ ಮೂವರ ಸೆರೆ

ಕುಂಬಳೆ: ಭಾರೀ ಮಾದಕವಸ್ತು ವಾದ ಎಂಡಿಎಂಎ ಸಹಿತ ಕಾರಿನಲ್ಲಿ ಸಂಚರಿಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕಯ್ಯಾರು ಪರಂಬಳ ಹೌಸ್‌ನ ಮೊಹಮ್ಮದಲಿ (೨೭), ಸೀತಾಂಗೋಳಿ ಮುಖಾರಿ ಕಂಡದ ಉಬೈದ್ (೨೨), ಕಯ್ಯಾರು ಕುಡಾಲುಮೇರ್ಕಳದ ಅಬ್ದುಲ್ ರಹ್ಮಾನ್ (೨೩) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರು ಕಾರಿನಲ್ಲಿ ಸಾಗಿಸುತ್ತಿದ್ದ ೩.೮೭ ಗ್ರಾಂ ಎಂಡಿಎಂಎಯನ್ನು ವಶಪಡಿಸಲಾಗಿದೆ. ಮೊನ್ನೆರಾತ್ರಿ ಕುಂಬಳೆ ಠಾಣೆ ಅಡಿಶನಲ್ ಎಸ್.ಐ. ಉಮೇಶ್ ನೇತೃತ್ವದ ಪೊಲೀಸ್ ತಂಡ ಮುಖಾರಿ ಕಂಡದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರು ಆಗಮಿಸಿದೆ. …

ಕಾಸರಗೋಡಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಕೆ. ವಿಶ್ವನಾಥನ್ ನಿಧನ

ಕಾಸರಗೋಡು: ಕೇರಳ ಸರಕಾರದ ನಿವೃತ್ತ ಕಾರ್ಯದರ್ಶಿ ಹಾಗೂ ಈ ಹಿಂದೆ ಕಾಸರಗೋಡು  ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ  ಸಿ.ಕೆ. ವಿಶ್ವನಾಥನ್ (೭೪) ನ್ಯುಮೋನಿಯಾ ನಿಮಿತ್ತ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಇವರು ಪತ್ತನಂತಿಟ್ಟ ಕಲಂತ್ತೂರು ನಿವಾಸಿಯಾಗಿದ್ದರು. ಪರೀಕ್ಷಾ  ಆಯುಕ್ತ ಉದ್ಯೋ ಗ ಶಿಕ್ಷಣ ಕಾರ್ಯ ದರ್ಶಿ ಯಾ ಗಿಯೂ ಅವರು ಸೇವೆ ಸಲ್ಲಿಸಿದ್ದರು. ೧೯೯೮ರಿಂದ ೨೦೦೧ರ ತನಕ ಇವರು ಕಾಸರಗೋಡು ಜಿಲ್ಲಾಧಿ ಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದರು. ಮಾತ್ರವಲ್ಲ ೨೦೧೦ರಿಂದ ೨೦೧೩ರ ತನಕ ಕೆ.ಬಿ. ಗಣೇಶ್ ಕುಮಾರ್ …

ಸಿ.ಪಿ.ಐ. ಹಿರಿಯ ನೇತಾರ, ಪ್ರಗತಿಪರ ಕೃಷಿಕ ರಾಘವ ಪಟ್ನ ನಿಧನ

ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ, ಸಿ. ಪಿ.ಐ. ಪಕ್ಷದ ಹಿರಿಯ ನೇತಾರ, ಪ್ರಗತಿಪರ ಕೃಷಿಕ ಉದ್ಯಾವರ ಮಾಡ ಪಟ್ನ ನಿವಾಸಿ ರಾಘವ ಪಟ್ನ (86) ಶನಿವಾರ ಸ್ವ-ಗೃಹದಲ್ಲಿ ನಿಧನರಾದರು. ಮೃತರು ಪತ್ನಿ: ಬೇಬಿ, ಮಕ್ಕಳಾದ: ಕರುಣಾಕರ, ಶಶಿಧರ, ದಿನೇಶ್, ಶ್ರೀಧರ (ಸಿ.ಪಿ. ಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ), ಜಯಶ್ರೀ, ರೇಷ್ಮಾ, ದಯಾಕರ ಮಾಡ (ಎ. ಐ.ವೈ.ಎಫ್ ಮಂಜೇಶ್ವರ ಮಂಡಲ ಕಾರ್ಯದರ್ಶಿ) ಅಳಿಯಂದಿರಾದ: ಅಜಿತ್ ಕಾಸರಗೋಡು, ಸುರೇಶ್ ಚೌಕಿ, …

ಮಂಜೇಶ್ವರ ಶಾಸಕ ನಿರಂತರ ವಿದೇಶ ಪ್ರವಾಸ ಉದ್ದೇಶ ಬಹಿರಂಗಗೊಳಿಸಲು ಬಿಜೆಪಿ ಆಗ್ರಹ

ಕಾಸರಗೋಡು: ಮಂಜೇಶರದ ಶಾಸಕರನ್ನು ಕಾಣಬೇಕಿದ್ದರೆ ನಾಡಿನ ಜನತೆ ವಿದೇಶ ಪ್ರವಾಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಬಿಜೆಪಿ ದೂರಿದೆ. ಪ್ರತಿ ತಿಂಗಳು ವಿದೇಶ ಪ್ರವಾಸ ಮಾಡುವ ಶಾಸಕರ ನಡೆ ಶಂಕಾಸ್ಪದವಾಗಿದೆ ಎಂದೂ ಬಿಜೆಪಿ ಆರೋಪಿಸಿದೆ. ಈ ಪ್ರವಾಸ ಮಂಜೇಶ್ವರ ಕ್ಷೇತ್ರದ ಅಭಿವೃದ್ಧಿಗೋ, ಅಥವಾ ಸ್ವಂತ ಅಭಿವೃದ್ಧಿಗೋ ಎಂದು ಬಿಜೆಪಿ ಪ್ರಶ್ನಿಸಿದೆ. ಸ್ಥಳೀಯಾಡಳಿತದ ಅಭಿವೃದ್ಧಿ ಸೆಮಿನಾರ್‌ಗಳಲ್ಲಿ ಶಾಸಕರು ಭಾಗವಹಿಸುತ್ತಿಲ್ಲ. ರಾಜ್ಯ ಸರಕಾರದ ವಿರುದ್ಧ ಮಾತನಾಡುತ್ತಿಲ್ಲ. ಶಾಸಕರ ಈ ಮೌನದಿಂದ ಜನಸಾಮಾನ್ಯರಿಗೆ  ಸಮಸ್ಯೆಯಾಗುತ್ತಿದ್ದು, ವಿವಿಧ ಯೋಜ ನೆಗಳ ಫಂಡ್ ನಷ್ಟವಾಗುತ್ತಿದೆ …