ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರಿ ಸಂಗಮ

ಕಾಸರಗೋಡು: ಸಹಕಾರ ಭಾರತಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲೆಯ ಸಹಕಾರಿಗಳ ಸಹಕಾರಿ ಸಂಗಮ ನಡೆಯಿತು. ಸಹಕಾರ ಭಾರತಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಡಾ. ಉದಯ್ ಜೋಶಿ ಉದ್ಘಾಟಿಸಿ ಮಾತನಾಡಿ ದರು. ಸಹಕಾರ ಭಾರತಿ ಈ ದೇಶದಲ್ಲಿ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯ ನಡೆಸುತ್ತಿದ್ದು ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಹಕಾರ ಭಾರತೀಯ ಎಲ್ಲ ನಿರ್ದೇಶಗಳನ್ನು ಅಂಗೀಕರಿಸಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸಮಿತಿ ಸದಸ್ಯರಾದ ಕರುಣಾಕರನ್ …

ಕುಬಣೂರು ರಸ್ತೆಯಲ್ಲಿ ತ್ಯಾಜ್ಯ ಉಪೇಕ್ಷೆ: ಸಂಚಾರ ಸಮಸ್ಯೆ

ಉಪ್ಪಳ: ಎರಡು ಗೋಣಿ ಚೀಲದಲ್ಲಿ ತ್ಯಾಜ್ಯ ತುಂಬಿಸಿ ನುಡುರಸ್ತೆಯಲ್ಲಿ ಉಪೇಕ್ಷಿಸಿದ ಘಟನೆ ನಡೆದಿದೆ. ಶಾಂತಿಗುರಿ-ಕುಬಣೂರು ಸುವರ್ಣಗಿರಿ ಹೊಳೆ ಸಮೀಪದ ರಸ್ತೆಯಲ್ಲಿ ತ್ಯಾಜ್ಯ ಉಪೇಕ್ಷಿಸಲಾಗಿದೆ. ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯ ಹೊಂದಿದ ಎರಡು ಗೋಣಿಚೀಲವನ್ನು ಉಪೇಕ್ಷಿಸಲಾಗಿದೆ. ಇದರಿಂದ ಈ ಪರಿಸರದ ಕ್ಷೇತ್ರ, ಮಸೀದಿ ಸಹಿತ ವಿವಿಧ ಕಡೆ ಸಂಚರಿಸುವ ಜನರಿಗೆ ಸಮಸ್ಯೆ ಉಂಟಾಗಿದೆ. ಬಳಿಕ ತ್ಯಾಜ್ಯವನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ. ವರ್ಷಗಳ ಹಿಂದೆ ಇದೇ ರಸ್ತೆಯ ಸಮೀಪ ವಿರುವ ಸುವರ್ಣಗಿರಿ ಹೊಳೆಯಲ್ಲಿ ಆಹಾರ ಅವಶಿಷ್ಟ ಸಹಿತ ವಿವಿಧ ತ್ಯಾಜ್ಯವನ್ನು ಗೋಣಿ …

ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕ ಸಾವು

ಕಾಸರಗೋಡು: ಬೈಕ್ ಅಫಘಾತ ದಲ್ಲಿ ಗಂಭೀರ ಗಾಯಗೊಂಡು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಯುವಕ ಸಾವನ್ನ ಪ್ಪಿದ್ದಾರೆ. ಚೆರ್ವತ್ತೂರು ರೈಲು ನಿಲ್ದಾಣ ಬಳಿ ವಾಸಿಸುತ್ತಿರುವ ಮೂಲತಃ ಕನ್ಯಾಕುಮಾರಿ ನಿವಾಸಿ ನೌಶಾದ್ (೩೪) ಸಾವನ್ನಪ್ಪಿದ ಯುವಕ. ನೌಶಾದ್ ಮೊನ್ನೆ ರಾತ್ರಿ  ಬೈಕ್‌ನಲ್ಲಿ ಕೈದಕ್ಕಾಡ್ ಕುಳಇತ್ತಡಿಯ ಮೂಲಕ ಚೆರ್ವತ್ತೂರಿಗೆ ಹೋಗುವ ದಾರಿ ಮಧ್ಯೆ ಸೈಕಲ್‌ನಲ್ಲಿ ಆ ದಾರಿಯಾಗಿ ಬರು ತ್ತಿದ್ದ ಬಾಲಕನಿಗೆ ಢಿಕ್ಕಿ ಹೊಡೆಯದಿರಲು ಬೈಕ್‌ನ್ನು ತಿರುಗಿಸಿದಾಗ ಅದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಆ …

ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನ ವಾರ್ಷಿಕ ನೇಮ ಆರಂಭ

ಉಪ್ಪಳ: ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದಲ್ಲಿ ೪೩ನೇ ವರ್ಷದ ವಾರ್ಷಿಕ ನೇಮ ಇಂದಿನಿಂದ ೨೪ರತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಬೆಳಿಗ್ಗೆ ಗಣಹೋಮ, ನವಕ ಕಲಶ, ೯ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಹೂವಿನ ಪೂಜೆ, ಅನ್ನ ಸಂತರ್ಪಣೆ ಜರಗಿತು. ಸಂಜೆ ೩ರಿಂದ ಭಂಡಾರ ಏರುವುದು, ಗುಳಿದ ದೈವ ನೇಮ, ರಾತ್ರಿ ಸಂಕೊಳಿಗೆ ದೈವನೇಮ, ಅನ್ನ ಸಂತರ್ಪಣೆ ನಡೆಯಲಿದೆ. ೧೨ರಿಂದ ಶ್ರೀ ಮಹಾಂಕಾಳಿ ದೈವದ ನೇಮ ನಡೆಯಲಿದೆ. ನಾಳೆ ಬೆಳಿಗ್ಗೆ ಮಧ್ಯಾಹ್ನ ಸೀಯಾಳ ಅಭಿಷೇಕ, …

ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನ ವಾರ್ಷಿಕ ನೇಮ ಆರಂಭ

ಉಪ್ಪಳ: ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದಲ್ಲಿ ೪೩ನೇ ವರ್ಷದ ವಾರ್ಷಿಕ ನೇಮ ಇಂದಿನಿಂದ ೨೪ರತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಬೆಳಿಗ್ಗೆ ಗಣಹೋಮ, ನವಕ ಕಲಶ, ೯ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಹೂವಿನ ಪೂಜೆ, ಅನ್ನ ಸಂತರ್ಪಣೆ ಜರಗಿತು. ಸಂಜೆ ೩ರಿಂದ ಭಂಡಾರ ಏರುವುದು, ಗುಳಿದ ದೈವ ನೇಮ, ರಾತ್ರಿ ಸಂಕೊಳಿಗೆ ದೈವನೇಮ, ಅನ್ನ ಸಂತರ್ಪಣೆ ನಡೆಯಲಿದೆ. ೧೨ರಿಂದ ಶ್ರೀ ಮಹಾಂಕಾಳಿ ದೈವದ ನೇಮ ನಡೆಯಲಿದೆ. ನಾಳೆ ಬೆಳಿಗ್ಗೆ ಮಧ್ಯಾಹ್ನ ಸೀಯಾಳ ಅಭಿಷೇಕ, …

ಮುಳ್ಳೇರಿಯ ಬಳಿ ವಾಹನ ಅಪಘಾತ ಯುವಕ ದಾರುಣ ಮೃತ್ಯು

ಮುಳ್ಳೇರಿಯ: ಇಲ್ಲಿಗೆ ಸಮೀಪದ ದೇಲಂಪಾಡಿಯಲ್ಲಿ ಇಂದು ಬೆಳಿಗ್ಗೆ ಸಂಭವಿ ಸಿದ ವಾಹನ ಅಪಘಾತ ದಲ್ಲಿ ಓರ್ವ ಯುವಕ ದಾರುಣವಾಗಿ ಮೃತ ಪಟ್ಟ ಘಟನೆ ನಡೆದಿದೆ.  ಆದೂರು ಸಿಎ ನಗರ ಬೀಟಿಯಡಿ ನಿವಾಸಿ ಖಾದರ್-ರಮ್ಲ ದಂಪತಿ ಯ ಪುತ್ರ  ರೈಸ್ ಅನ್ವರ್ (೧೮) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಇವರು ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಟೆಂಪೋ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ರೈಸ್ ಅನ್ವರ್  ಮುಳ್ಳೇರಿ ಯದ ತರಕಾರಿ ಅಂಗಡಿಯೊಂದರಲ್ಲಿ ನೌಕರನಾಗಿದ್ದರು. ಇವರು    ಇಂದು ಬೆಳಿಗ್ಗೆ ಬೇರೊಬ್ಬರ …

ಜಲ್ಲಿ ಲಾರಿಗಳನ್ನು ತಡೆದು ನಿಲ್ಲಿಸಿ ಬೆದರಿಕೆ; ಕ್ರಷರ್ ಮೆನೇಜರ್‌ಗೆ ಹಲ್ಲೆ

ಬದಿಯಡ್ಕ: ಜಲ್ಲಿ ಕೊಂಡೊಯ್ಯುವ ಲಾರಿಗಳನ್ನು ತಡೆದು ನಿಲ್ಲಿಸಿ ಹಣ ಕೇಳುವುದನ್ನು ಪ್ರಶ್ನಿಸಿದ ಕ್ರಷರ್‌ನ ಮೆನೇಜರ್‌ಗೆ ಹಲ್ಲೆಗೈದ ಬಗ್ಗೆ ದೂರುಂಟಾಗಿದೆ. ನೀರ್ಚಾಲ್‌ನ ಕ್ರಷರ್ ಮೆನೇಜರ್ ಆಗಿರುವ ಕಣ್ಣೂರು ಉದಯಗಿರಿ ಟಾಬೋರ್ ನಿವಾಸಿಯಾದ ಪರವುಂಗಾಲ್ ಹೌಸ್‌ನ ಅಮಲ್ ಜೋರ್ಜ್‌ರ ದೂರಿನಂತೆ ಬದಿಯಡ್ಕ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಹಮ್ಮದ್, ಇಷಾಕ್ ಎಂಬಿವರ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಈ ಘಟನೆ ನಡೆದಿದೆ. ಕ್ರಷರ್‌ನಿಂದ ಜಲ್ಲಿಕಲ್ಲುಗಳನ್ನು ಹೇರಿ ಸಾಗುತ್ತಿರುವ ಲಾರಿಗಳನ್ನು ತಡೆದು ನಿಲ್ಲಿಸಿ ಕಾನೂನು ವಿರುದ್ಧವಾಗಿ ಹಣ …

ಬದಿಯಡ್ಕದಲ್ಲಿ ವರ್ಕ್‌ಶಾಪ್‌ನಿಂದ ಒಂದು ಲಕ್ಷ ರೂಪಾಯಿಗಳ ಉಪಕರಣಗಳು ಕಳವು

ಬದಿಯಡ್ಕ:  ಬದಿಯಡ್ಕದ ವರ್ಕ್‌ಶಾಪ್‌ನಿಂದ ೧ ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ಉಪಕರಣಗಳನ್ನು ಕಳವು ನಡೆಸಲಾಗಿದೆ. ನೆಕ್ರಾಜೆ ಅರ್ತಿಪಳ್ಳದ ಕೋಂಬ್ರಾಜೆ ಹೌಸ್‌ನ ತಿಮೋತಿ ಕ್ರಾಸ್ತಾರ ಮಾಲಕತ್ವದಲ್ಲಿ ಬೋಳುಕಟ್ಟೆಯಲ್ಲಿರುವ ವರ್ಕ್‌ಶಾಪ್‌ನಿಂದ ಈ ಉ ಕರಣಗಳನ್ನು ದೋಚಲಾಗಿದೆ. ಮೊನ್ನೆ ಸಂಜೆ ವರ್ಕ್‌ಶಾಪ್ ಮುಚ್ಚಲಾಗಿತ್ತು. ನಿನ್ನೆ ಬೆಳಿಗ್ಗೆ ತೆರೆಯಲು ತಲುಪಿದಾಗ ವರ್ಕ್ ಶಾಪ್‌ನ ಬಾಗಿಲು ಮುರಿದು ಜಾಕಿ ಮತ್ತಿತರ ಬೆಲೆ ಬಾಳುವ ಉಪಕರಣಗಳನ್ನು ಕಳ್ಳರು ಕಳವು ನಡೆಸಿರುವುದು ತಿಳಿದು ಬಂದಿದೆ. ತಿಮೋತಿ ಕ್ರಾಸ್ತಾರ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಇದೇ …

‘ರಾಮ್ ಲಲ್ಲಾ’ ವಿಗ್ರಹ ತಾತ್ಕಾಲಿಕ ಟೆಂಟ್‌ನಿಂದ ಇಂದು ದೇವಾಲಯ ಪ್ರವೇಶ

ಅಯೋಧ್ಯೆ: ಅಯೋಧ್ಯೆಯಲ್ಲಿ ೫೦೦ ವರ್ಷಗಳ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ರಾಮ್‌ಲಲ್ಲಾ ವಿಗ್ರಹ ತನ್ನ ತಾತ್ಕಾಲಿಕ  ಟೆಂಟ್‌ನಿಂದ ಇಂದು ಮುಖ್ಯ ದೇವಾಲಯ ಪ್ರವೇಶಿಸಲಿದೆ. ಅಂದರೆ ಐನೂರು ವರ್ಷಗಳ ನಂತರ ಶ್ರೀರಾಮ್ ಲಲ್ಲಾ ತನ್ನ ದೇವಾಲಯಕ್ಕೆ ಮರಳುತ್ತಿದ್ದಾನೆ. ಜನವರಿ ೨೨ರಂದು ಇದರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಿಂದಾಗಿ  ಇಂದಿನಿಂದ ಅಯೋಧ್ಯೆಗೆ ಹೊರಗಿನವರನ್ನು ಪ್ರವೇಶಿಸಬಿಡಲಾಗುವುದಿಲ್ಲವೆಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ. ಐನೂರು ವರ್ಷ ಗಳ ಸುಧೀರ್ಘ ಹೋರಾಟದ ಬಳಿಕ ಇಂದು ರಾಮಲಲ್ಲಾ ತನ್ನ ತಾತ್ಕಾಲಿಕ ಟೆಂಟ್‌ನಿಂದ ದೈವಿಕ ಮತ್ತು …

ಪರ್ಫ್ಯೂಂ, ಖರ್ಜೂರ, ಜೀನ್ಸ್‌ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ: ಕುಂಬಳೆ ನಿವಾಸಿ ಸಹಿತ ಇಬ್ಬರು ಕಸ್ಟಡಿಗೆ

ಕಲ್ಲಿಕೋಟೆ: ಜೀನ್ಸ್, ಖರ್ಜೂರ ಹಣ್ಣು ಹಾಗೂ ಪರ್ಫ್ಯೂಮ್ ಬಾಟ್ಲಿಗಳಲ್ಲ್ಲಿ ಚಿನ್ನ ಬಚ್ಚಿಟ್ಟು ತಂದ ಚಿನ್ನವನ್ನು ಕರಿಪ್ಪೂರ್ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕಸ್ಟಂಸ್ ವಶಪಡಿಸಿಕೊಂ ಡಿದೆ. ಈ ಸಂಬಂಧ ಕುಂಬಳೆ ಹಾಗೂ ಓಮಶ್ಶೇರಿ ನಿವಾಸಿಗಳಾದ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ. ದುಬಾಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆಗಮಿಸಿದ ಕುಂಬಳೆ ನಿವಾಸಿ ಅಬ್ದುಲ್ ಲತೀಫ್ (೩೧), ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮಸ್ಕತ್ ನಿಂದ ಆಗಮಿಸಿದ ಓಮಶ್ಶೇರಿ ನಿವಾಸಿ ಶರಫುದ್ದೀನ್ (೩೫) ಎಂಬಿವರ ಕೈಯಿಂದ ಚಿನ್ನ ವಶಪಡಿಸ ಲಾಗಿದೆ. …