೨೫೦ಗ್ರಾಂ ಗಾಂಜಾದೊಂದಿಗೆ ಯುವಕ ಸೆರೆ

ಕಾಸರಗೋಡು: ಕಾಸರಗೋಡು ಪ್ರೆಸ್ ಕ್ಲಬ್ ಪರಿಸರದಲ್ಲಿ ಕಾಸರ ಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ೨೫೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಉದುಮ ಬಾರಾ ಗ್ರಾಮದ ಮಾಂಙಾಡ್ ಹೌಸಿನ ಮುಹಮ್ಮದ್ ಆಶೀದ್ ಎಂ.ಎ. (೨೬) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಇಂದು ಸಂಜೆ ಡಿವೈಎಫ್‌ಐ ಮಾನವ ಸರಪಳಿ

ಕಾಸರಗೋಡು: ಕೇಂದ್ರ ಸರಕಾರದ ವಿರುದ್ಧ ಡಿವೈಎಫ್‌ಐ ನಡೆಸುವ ಮಾನವ ಸರಪಳಿ ಇಂದು ಸಂಜೆ ೫ ಗಂಟೆಗೆ ನಡೆಯಲಿದೆ. ಕಾಸರಗೋಡು ರೈಲು ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ತಿರುವನಂತಪುರ ರಾಜ್‌ಭವನ್ ತನಕ ಮಾನವ ಸರಪಳಿ ಮುಂದುವರಿಯಲಿದೆ. ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಎ.ಎ. ರಹೀಂ ಈ ಮಾನವ ಸರಪಳಿಯ ಮೊದಲ ಕೊಂಡಿಯಾಗಿ ಕಾಸರ ಗೋಡಿನಲ್ಲಿ ಭಾಗವಹಿಸಲಿದ್ದಾರೆ. ಸಿಪಿಎಂ ಮತ್ತು ಡಿವೈಎಫ್‌ಐ ಸೇರಿದಂತೆ ಇತರ ಹಲವು ನೇತಾರರು ಇದರ ಕೊಂಡಿಗಳಾ ಗಿರುವರು. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವಾಗಿ ಒಂದು ಲಕ್ಷದಷ್ಟು ಕಾರ್ಯಕರ್ತರು …

ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ : ಮಂಜೇಶ್ವರದಲ್ಲಿ ಎನ್‌ಐಎ ದಾಳಿ

ಮಂಜೇಶ್ವರ: ೨೦೧೦ ಜುಲೈ ೪ರಂದು ಮೂವಾಟುಪುಳ ಕಾಲೇಜು ಪ್ರಾಧ್ಯಾಪಕ ಟಿ.ಜೆ. ಜೋಸೆಫ್‌ರ ಕೈ ತುಂಡರಿಸಿದ ಪ್ರಕರಣದ ಆರೋಪಿ ಸವಾದ್ ವಿವಾಹಿತನಾದ ಮಂಜೇಶ್ವರ ನಿವಾಸಿಯಾದ ಯುವತಿಯ ಮನೆಗೆ ಮತ್ತು ತಲೆಮರೆಸಿಕೊಳ್ಳಲು ಆತನಿಗೆ ಸಹಾಯವೊದಗಿಸಿದ ಇತರರ ಕುರಿತಾದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಬೆಳಿಗ್ಗೆ ಮಂಜೇಶ್ವರ ಪರಿಸರ ಪ್ರದೇಶದಲ್ಲಿ ದಾಳಿ ನಡೆಸಿದೆ. ದಾಳಿ ನಡೆಸಿದ ತಂಡದಲ್ಲಿ ಕೇರಳ ಮತ್ತು ಕರ್ನಾಟಕದ ಎನ್‌ಐಎ ಘಟಕದ ಅಧಿಕಾರಿಗಳು  ತಂಡದಲ್ಲಿ ಒಳಗೊಂಡಿದ್ದರು. ಅಧ್ಯಾಪಕನ ಕೈ ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿ ೧೩ ವರ್ಷಗಳ …

ರಂಜಿತ್ ಶ್ರೀನಿವಾಸನ್ ಕೊಲೆ : ೧೫ ಮಂದಿ ಆರೋಪಿಗಳು ತಪ್ಪಿತಸ್ಥರು

ಮಾವೇಲಿಕ್ಕರ:  ೨೦೧೨ ಡಿಸೆಂಬರ್ ೧೯ರಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಕಾರ್ಯದರ್ಶಿಯಾ ಗಿದ್ದ ನ್ಯಾಯವಾದಿ ರಂಜಿತ್ ಶ್ರೀನಿವಾಸನ್ ಅವರ ಮನೆಯೊಳಗೆ ಪತ್ನಿ ಮತ್ತು ಮಕ್ಕಳ ಕಣ್ಮುಂದೆಯೇ ಕಡಿದು ಕೊಲೆಗೈದ  ಪ್ರಕರಣದ ಆರೋಪಿಗಳಾಗಿ ೧೫ಮಂದಿ ಪೋಪುಲರ್ ಫ್ರೆಂಟ್ ಕಾರ್ಯಕರ್ತರ ಮೇಲಿನ ಆರೋಪ ಮಾವೇಲಿಕ್ಕರ ಜಿಲ್ಲಾ ನ್ಯಾಯಾಲಯದಲ್ಲಿ  ನಡೆದ ವಿಚಾರಣೆಯಲ್ಲಿ ಸಾಬೀತುಗೊಂಡಿದೆ. ಈ ೧೫ ಮಂದಿ ಆರೋಪಿಗಳ ಪೈಕಿ ೮ ಮಂದಿ ಮೇಲಿನ ಆರೋಪವೂ ಸಾಬೀತುಗೊಂಡಿದೆ. ಆರೋಪಿಗಳ ಪೈಕಿ ೮ ಮಂದಿ ಕೊಲೆಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವುದಾಗಿಯೂ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. …

೩೮ ಲಕ್ಷ ರೂ. ಗಳೊಂದಿಗೆ ಸೌದಿಯಿಂದ ತಲೆಮರೆಸಿಕೊಂಡ ವ್ಯಕ್ತಿಗಾಗಿ ಶೋಧ

ಕಾಸರಗೋಡು: ಸೌದಿಯಿಂದ  ಸಂಗ್ರಹಿಸಿದ ೩೮ ಲಕ್ಷ ರೂಪಾ ಯಿಗಳ ಹವಾಲಾ ಹಣದೊಂದಿಗೆ ಮಂಜೇಶ್ವರ ನಿವಾಸಿಯೆಂದು ಪರಿಚಯಗೊಂಡ ವ್ಯಕ್ತಿ ತಲೆಮರೆ ಸಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಸೌದಿಯ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುವ ಕಲ್ಲಿಕೋಟೆ ನಿವಾಸಿಯನ್ನು ವಂಚಿಸಿ  ವ್ಯಕ್ತಿ ಹಣದೊಂದಿಗೆ ಪರಾರಿಯಾ ಗಿರುವುದಾಗಿ ದೂರಲಾಗಿದೆ.  ಮೂರು ವಾರಗಳ ಹಿಂದೆ ಕಲ್ಲಿಕೋಟೆ ನಿವಾಸಿಯ ಸಹಾಯದೊಂದಿಗೆ ಮಂಜೇಶ್ವರ ನಿವಾಸಿಯೆನ್ನಲಾದ ವ್ಯಕ್ತಿ ಸೌದಿಯಲ್ಲಿ ಹಲವರಿಂದ ಹಣ ಸಂಗ್ರಹಿಸಿದ್ದಾನೆನ್ನಲಾಗಿದೆ. ಹಣದೊಂದಿಗೆ ಅಲ್ಲಿಂದ ಮರಳಿದ ಬಳಿಕ ಆತನ ಕುರಿತಾದ ಯಾವುದೇ ಸುಳಿವು ಲಭಿಸಿರಲಿಲ್ಲ.  ಎರಡು ವಾರಗಳ ನಂತರ ಸೌದಿಯ ವಾಸಸ್ಥಳಕ್ಕೆ …

ಮೂವರು ಯುವಕರಿಗೆ ಹಲ್ಲೆ: ನ್ಯಾಯಾಲಯ ನಿರ್ದೇಶದಂತೆ ೧೨ ಮಂದಿ ವಿರುದ್ಧ ಕೇಸು ದಾಖಲು

ಕುಂಬಳೆ: ಮೂವರು ಯುವಕರಿಗೆ ಹಲ್ಲೆಗೈದ ಪ್ರಕರಣದಲ್ಲಿ ನ್ಯಾಯಾಲಯದ ನಿರ್ದೇಶ ಮೇರೆಗೆ ಹನ್ನೆರಡು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಶಿರಿಯಾದ ಶಿರಿಯ ಕ್ವಾರ್ಟರ್ಸ್ ನಲ್ಲಿ ವಾಸಿಸುವ ಆಯಿಶಾ ಎಂಬವರು ನೀಡಿದ ದೂರನ್ನು ಪರಿಗಣಿಸಿದ ನ್ಯಾಯಾಲಯ ಹಲ್ಲೆ ಆರೋಪಿಗಳ ವಿರುದ್ಧ ಕೇಸು ದಾಖಲಿಸುವಂತೆ ನಿರ್ದೇಶ ನೀಡಿದೆ. ಆಯಿಶಾರ ಪುತ್ರ ಇಬ್ರಾಹಿಂ ಅಸ್ಲಾಂ, ಆತನ ಸ್ನೇಹಿತನಾದ ಮೊಹಮ್ಮದ್ ಬಿಲಾಲ್, ಮುಸ್ತಾಕ್ ಎಂಬಿವರನ್ನು ೨೦೨೩ ಡಿಸೆಂಬರ್ ೫ರಂದು ಶಿರಿಯ ಬಸ್ ಸ್ಟಾಪ್ ಬಳಿ ತಂಡವೊಂದು ತಡೆದು ನಿಲ್ಲಿಸಿ  ಹಲ್ಲೆಗೈದಿತ್ತೆಂದು …

ಕೇಂದ್ರದಿಂದ ಉಚಿತವಾಗಿ ಲಭಿಸಲಿರುವ ಇ-ಬಸ್ ಪಡೆಯಲು ರಾಜ್ಯ ಸಾರಿಗೆ ಇಲಾಖೆ ಹಿಂಜರಿತ

ತಿರುವನಂತಪುರ: ರಾಜ್ಯಕ್ಕೆ ಹೊಸತಾಗಿ ಇಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಿರುವ ಎಲ್ಲಾ ಟೆಂಡರ್ ಗಳನ್ನು ಕೆಎಸ್‌ಆರ್‌ಟಿಸಿ ರದ್ದುಗೊ ಳಿಸಿದೆ. ಕೇಂದ್ರದಿಂದ ಉಚಿತವಾಗಿ ೯೫೦ ಇ-ಬಸ್‌ಗಳನ್ನು ಪಡೆಯ ಲಿರುವ ಕ್ರಮದಿಂದ ಹಿಂಜರಿಂiiಲಾ ಗಿದೆ. ಇಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ  ಬಗ್ಗೆ ಇಲಾಖೆ ಸಚಿವ ಗಣೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆಂದು ಇದುವೇ ಈಗಿನ ನಿರ್ಧಾರಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕೇರಳದ ನಗರಗಳಲ್ಲಿ ಸಂಚಾರ ನಡೆಸಲು ಪ್ರಧಾನಮಂತ್ರಿ ಇ-ಬಸ್ ಸೇವೆ ಯೋಜನೆ ಪ್ರಕಾರ ಕೇಂದ್ರ ಮಂಜೂರು ಮಾಡಿದ ೯೫೦ ಇ-ಬಸ್‌ಗಳನ್ನು ಪಡೆಯಲು  ಒಪ್ಪಿಗೆ ಸೂಚಿಸಿ ಸಾರಿಗೆ ಇಲಾಖೆ …

೮.೪೫ ಲೀಟರ್ ಬಿಯರ್ ವಶ: ಕೇಸು ದಾಖಲು

ಕುಂಬಳೆ: ಕುಂಬಳೆ ಕೊಪಾಡಿ ಕಂಚಿಕಟ್ಟೆಯಲ್ಲಿ ಕುಂಬಳೆ ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸುರೇಶ್ ಬಾಬು ಕೆ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮.೪೫ ಲೀಟರ್ ಕೇರಳ ಬಿಯರ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ   ಕೊಪಾಡಿ ಕಂಚಿಕಟ್ಟೆಯ ರಾಜೇಶ್ ಕೆ. ಎಂ ಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಸಂಜೀವ್, ವಿ.ಸಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಂಜಿತ್ ಟಿ.ಕೆ, ಅಖಿಲೇಶ್ ಎಂ.ವಿ, ಮತ್ತು ಲಿಮ …

ಡಿಫಿ ಮಾನವಸರಪಳಿ: ಪೈವಳಿಕೆಯಲ್ಲಿ ಹೋರಾಟಗಾರರ ಸಂಗಮ

ಪೈವಳಿಕೆ: ಡಿವೈಎಫ್‌ಐ ಇಂದು ನಡೆಸುವ ಮಾನವ ಸರಪಳಿ ಪ್ರತಿಭಟನೆಯಂಗವಾಗಿ ಪೈವಳಿಕೆ ಬೋಳಂಗಳ ಸ್ಮೃತಿ ಮಂಟಪದಲ್ಲಿ ಹೋರಾಟಗಾರರ ಸಂಗಮ ನಡೆಯಿತು. ೧೯೮೭ರಲ್ಲಿ ಪ್ರಥಮವಾಗಿ ನಡೆಸಿದ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರು ಭಾಗವಹಿಸಿದರು. ಸಂಗಮವನ್ನು ಡಿಫಿ ಮುಖಂಡ ಅಹಮ್ಮದ್ ಹುಸೈನ್ ಪಿ.ಕೆ ಉದ್ಘಾಟಿಸಿದರು. ಬ್ಲೋಕ್ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಶೆಟ್ಟಿ, ಅಬ್ದುಲ್ಲ ಕೆ, ನಾಗೇಶ ಬಾಯಾರು, ಬಾಬು, ಚಂದ್ರನಾಯ್ಕ್  ಮಾಣಿಪ್ಪಾಡಿ ಮಾತನಾಡಿದರು. ಬ್ಲೋಕ್ ಸಮಿತಿ ಕಾರ್ಯದರ್ಶಿ ಹಾರಿಸ್ ಪೈವಳಿಕೆ ಸ್ವಾಗತಿಸಿ,  ಪೈವಳಿಕೆ ವಿಲ್ಲೇಜ್ ಕಾರ್ಯದರ್ಶಿ …

ಕುಂಬಳೆ ಪರಿಸರದಲ್ಲಿ ಹಂದಿಗಳ ಕಾಟ: ನಿದ್ದೆಗೆಡುತ್ತಿರುವ ಸ್ಥಳೀಯರು

ಕುಂಬಳೆ: ರಾತ್ರಿ ವೇಳೆಯಲ್ಲಿ ಜನವಾಸ ಕೇಂದ್ರಗಳಿಗೆ ಹಂದಿಗಳ ಹಿಂಡು ತಲುಪುತ್ತಿರುವುದು ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದೆ. ಮೊಗ್ರಾಲ್ ತಖ್ವನಗರದಲ್ಲೂ, ಮಿಲಾದ್ ನಗರದಲ್ಲಿ, ಬಂಬ್ರಾಣ, ಮೊಗ್ರಾಲ್ ಕೆ.ಕೆ. ಪುರಂಗಳಲ್ಲಿ ಹಂದಿಗಳು ಜನರಿಗೆ ಉಪಟಳ ನೀಡತೊಡಗಿವೆ ಎಂದು ಸ್ಥಳೀಯರು ದೂರುತ್ತಾರೆ. ಮನೆ ಹಿತ್ತಿಲಿಗೆ ನುಗ್ಗುವ ಹಂದಿಗಳು, ಬೆಳೆಸಿದ ತರಕಾರಿ, ಹೂ ಗಿಡಗಳನ್ನು ನಾಶಪಡಿಸುತ್ತಿದೆ. ಅಲ್ಲದೆ ರಾತ್ರಿ ಹೊತ್ತು ಇವು ಕೂಗುವ ಶಬ್ದದಿಂದ ನಿದ್ದೆಗೆಡಬೇಕಾಗುತ್ತಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಮುಂಜಾನೆ ವೇಳೆ ಮಸೀದಿಗೆ ನಮಾಜಿಗೆಂದು  ತೆರಳುವಾಗ ರಸ್ತೆಯಲ್ಲಿ ಹಂದಿಗಳ ಹಿಂಡು ಕಂಡು ಬರುತ್ತಿದೆ …