ಉಪ್ಪಳ: ಬಿಎಂಎಸ್ ಯೂನಿಟ್ ಸಮ್ಮೇಳನ

ಉಪ್ಪಳ: ತಲೆಹೊರೆ ಕಾರ್ಮಿಕ ಸಂಘ (ಬಿಎಂಎಸ್) ಇದರ ಉಪ್ಪಳ ಯೂನಿಟ್ ಸಮ್ಮೇಳನ ಯೂನಿಟ್ ಕಚೇರಿಯಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಯೂನಿಯನ್ ಜಿಲ್ಲಾ ಪ್ರಧಾನ ಸೆಕ್ರೆಟರಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು.  ಜಿಲ್ಲಾ ಕೋಶಾಧಿಕಾರಿ ದಿಲೀಪ್ ಕುದ್ರೆಪ್ಪಾಡಿ, ಪಂಚಾಯತ್ ಸಮಿತಿ ಅಧ್ಯಕ್ಷ ಕಮಲಾಕ್ಷ ಐಲ, ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣಮಂಗಲ ಚರ್ಚೆಗೆ ನೇತೃತ್ವ ನೀಡಿದರು. ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ಪಿ. ಸಮಾರೋಪ ಭಾಷಣ ನಡೆಸಿದರು. ಯೂನಿಟ್ ಕಾರ್ಯದರ್ಶಿ ಸಂಜೀವ ವಾರ್ಷಿಕ ವರದಿ ಮಂಡಿಸಿದರು. …

ಕೇಳುಗುಡ್ಡೆಯಲ್ಲಿ ತ್ಯಾಜ್ಯ ತೆರವು; ಕ್ರಿಯಾ ಸಮಿತಿ ನೇತೃತ್ವದಲ್ಲಿ ಜಂಟಿ ಸಭೆ

ಕಾಸರಗೋಡು: ಕೇಳು ಗುಡ್ಡೆಯಲ್ಲಿ ಹಲವು ವರ್ಷಗಳಿಂದ ರಾಶಿ ಹಾಕಿರುವ ತ್ಯಾಜ್ಯವನ್ನು ವಿಂಗಡಿಸಿ ತೆರವು ಗೊಳಿಸುವಾಗ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಕೇಳುಗುಡ್ಡೆ ಕ್ರಿಯಾ ಸಮಿತಿ ನೇತೃತ್ವದಲ್ಲಿ  ಜಂಟಿ ಸಭೆ ನಡೆಸಲಾಯಿತು. ನದಗರಸಭಾ ಕೌನ್ಸಿಲರ್ ಪಿ. ರಮೇಶ್ ಅಧ್ಯಕ್ಷತೆ ವಹಿಸಿದರು. ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ  ಮಾಜಿ ಅಧ್ಯಕ್ಷ ಮಾಧವನ್ ಮಾಸ್ತರ್, ಪಂ. ಸದಸ್ಯರಾದ ರಾಧಾಕೃಷ್ಣ ಸೂರ್ಲು, ಸೌಮ್ಯ, ನಗರಸಭಾ ಕೌನ್ಸಿಲರ್ ಅಶ್ವಿನಿ, ಕ್ರಿಯಾ ಸಮಿತಿ ಪದಾಧಿಕಾರಿಗಳಾದ ನ್ಯಾಯವಾದಿ ಪಿ. ಮುರಳೀಧರನ್, ಕೆ. ಶ್ರೀಧರನ್ ಹರೀಶ್, ಶಾಹುಲ್ ಹಮೀದ್, …

ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ಸೋಲಾರ್ ಲೈಟ್ ಕೊಡುಗೆ

ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಚೆರು ಗೋಳಿ ಹಿಂದೂ ರುದ್ರ ಭೂಮಿಗೆ ೧೫೦ ವಾಟ್ಸ್ನ ೨ ಸೋಲಾರ್ ಲೈಟನ್ನು ಕೊಡುಗೆಯಾಗಿ ನೀಡಲಾ ಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಪ್ರೇಮ್ ಕುಮಾರ್ ಕೆ. ಪಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಎಂ. ಪಿ, ನಿರ್ದೇಶಕÀ ಭರತ್ ರೈ ಕೋಡಿ ಬೈಲ್, ಜಯಂತ. ವಿ. ರವೀಶ್ ಕೊಡಂಗೆ, ಉದಯಕುಮಾರ್, ಶ್ರೀಧರ ಬೀರಿಗುಡ್ಡೆ, ರಾಮ. ಎಂ, ಜಯಂತಿ ಟಿ ಶೆಟ್ಟಿ, ಹಾಗೂ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಸಿಬ್ಬಂದಿ ಸುರೇಶ್ ಶೆಟ್ಟಿ …

ಶಬರಿಮಲೆ ತೀರ್ಥಾಟನೆ: ಕೆಎಸ್‌ಆರ್‌ಟಿಸಿಗೆ ೩೮.೮೮ ಕೋಟಿ ರೂ. ಆದಾಯ

ಶಬರಿಮಲೆ: ಮಂಡಲ, ಮಕರಜ್ಯೋತಿ ಉತ್ಸವಕಾಲಾವಧಿಯಲ್ಲಿ ಶಬರಿಮಲೆಗೆ ಸಂಚಾರ ನಡೆಸಿದ ವತಿಯಿಂದ ಕೆಎಸ್‌ಆರ್‌ಟಿಸಿಗೆ ೩೮.೮೮ ಕೋಟಿ ರೂಪಾಯಿಗಳ ಆದಾಯ ಲಭಿಸಿದೆ. ಕೆಎಸ್‌ಆರ್‌ಟಿಸಿ ಪಂಪಾ-ನಿಲಯ್ಕಲ್ ರೂಟ್‌ನಲ್ಲಿ ೧,೩೭,೦೦೦ ಚೈನ್ ಸರ್ವೀಸ್, ೩೪,೦೦೦ ದೀರ್ಘದೂರ ಸಂಚಾರ ನಡೆಸಿದೆ. ಒಟ್ಟು ೬೪.೨೫ ಲಕ್ಷ ಮಂದಿ ಪ್ರಯಾಣಿಸಿದ್ದಾರೆಂದು ಲೆಕ್ಕಹಾಕಲಾಗಿದೆ.

ಶಬರಿಮಲೆ ತೀರ್ಥಾಟನೆ:  ಭಕ್ತರಿಗೆ ದರ್ಶನ ಇಂದು ಮಾತ್ರ

ಶಬರಿಮಲೆ: ಮಕರಜ್ಯೋತಿ ತೀರ್ಥಾಟನೆ ಪೂರ್ಣಗೊಂಡು ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರ ಬಾಗಿಲು ನಾಳೆ ಬೆಳಿಗ್ಗೆ ೬ ಗಂಟೆಗೆ ಮುಚ್ಚಲಾಗುವುದು. ಇಂದು ರಾತ್ರಿ  ೧೦ ಗಂಟೆವರೆಗೆ ಮಾತ್ರವೇ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಸೌಕರ್ಯವಿರುವುದು. ಇಂದು ಅತ್ತಾಳಪೂಜೆ ಬಳಿಕ ಹರಿವರಾಸನಂ ಹಾಡಿ ಬಾಗಿಲು ಮುಚ್ಚಿದ ಕೂಡಲೇ ಮಾಳಿಗಪುರಂ ಕ್ಷೇತ್ರದಲ್ಲಿ ಗುರುದಿಕ್ರಿಯೆ ನಡೆಯಲಿದೆ. ನಾಳೆ ಮುಂಜಾನೆ ೫ ಗಂಟೆಗೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ೫.೩೦ಕ್ಕೆ ತಿರುವಾಭರಣವನ್ನು ಮರಳಿ ಕೊಂಡೊಯ್ಯಲಾಗುವುದು.

ಕುಸಿದುಬೀಳಲು ಕಾಯುತ್ತಿದೆ ವಿದ್ಯುತ್ ಕಂಬ: ಅಪಾಯ ಆಹ್ವಾನ ಭೀತಿ

ಉಪ್ಪಳ: ಕುಸಿದು ಬೀಳಲು ಸಿದ್ಧವಾಗಿರುವ ಹಲವು ವಿದ್ಯುತ್ ಕಂಬಗಳು ಸ್ಥಳೀಯರಿಗೆ ಬೆದರಿಕೆ ಸೃಷ್ಟಿಸುತ್ತಿವೆ. ಮಂಗಲ್ಪಾಡಿ ಪಂಚಾ ಯತ್‌ನ ಉಪ್ಪಳ ಸೆಕ್ಷನ್ ವ್ಯಾಪ್ತಿಗೊಳಪಟ್ಟ ಪ್ರತಾಪನಗರದ ಒಳರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳು ವಾಲಿ ನಿಂತಿವೆ. ಚರಂಡಿಯಲ್ಲೇ ಕಂಬವಿದ್ದು ಮಳೆ ನೀರು ಹರಿಯುವ ವೇಳೆ ಕಂಬ ಒಂದು ಬದಿಗೆ ವಾಲಿ ನಿಂತಿದೆ. ಅಲ್ಲದೆ ತುಕ್ಕು ಹಿಡಿದು ಶೋಚನೀಯಾವಸ್ಥೆಯಲ್ಲಿದೆ. ಈ ಕಂಬ  ಯಾವುದೇ ಕ್ಷಣ ಮುರಿದು ಅಥವಾ ಕುಸಿದು ಬೀಳಬಹುದೆಂಬ ಭೀತಿ ಸ್ಥಳೀಯರಲ್ಲಿದೆ. ಈ ಪರಿಸರರದಲ್ಲಿ ಹಲವಾರು ಮನೆಗಳ, ಮದ್ರಸ ಸಹಿತ ವಿವಿಧ  …

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ: ಆಹ್ವಾನಿತರಿಗೆ ವಾಸ್ತವ್ಯಕ್ಕಾಗಿ ಟೆಂಟ್ ಸಿಟಿ ಸಿದ್ಧ

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ದೇವರ ಪ್ರಾಣ ಪ್ರತಿಷ್ಠೆ ಜನವರಿ ೨೨ರಂದು ನಡೆಯಲಿರು ವಂತೆಯೇ ಕಾರ್ಯಕ್ರಮದ ಆಮಂತ್ರಣ ಲಭಿಸಿದ ಗಣ್ಯರು ಆಯೋಧ್ಯೆಯತ್ತ ತೆರಳತೊಡಗಿದ್ದಾರೆ. ಅವರಿಗಾಗಿ  ವಾಸ್ತವ್ಯ ಹೂಡಲು ಸಕಲ ವ್ಯವಸ್ಥೆ ಏರ್ಪಡಿಸ ಲಾಗಿದೆ. ಏಕ ಕಾಲದಲ್ಲಿ ಹತ್ತು ಸಾವಿರ ಮಂದಿಗೆ ತಂಗಬಹುದಾದ ಟೆಂಟ್ ಸಿಟಿಯನ್ನು ಸಿದ್ಧಪಡಿಸಲಾಗಿದೆ. ಅಯೋಧ್ಯೆ ರೈಲ್ವೇ ನಿಲ್ದಾಣದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಟೆಂಟ್ ಸಿಟಿಯಿದೆ. ೪೫ ಎಕರೆ ಸ್ಥಳದ ಲ್ಲಿರುವ ಈ ಟೆಂಟ್ ಸಿಟಿಗೆ ಅಶೋಕ್ ಸಿಂಪೂಲ್‌ಜೀ ಪೂರಂ ಎಂಬ …

ಐಟಿಐಗೆ ಬ್ಯಾಂಕ್ ಪಾಸ್ ಪುಸ್ತಕ ಹಾಜರುಪಡಿಸಲು ಕರೆ

ಕಾಸರಗೋಡು: ೨೦೧೮ರಲ್ಲಿ ಕಾಸರಗೋಡು ಸರಕಾರಿ ಐಟಿಐ ಯಿಂದ ವಿವಿಧ ಟ್ರೇಡ್‌ಗಳಲ್ಲಿ ಪ್ರವೇಶ ಪಡೆದು ಕೋರ್ಸ್ ಪೂರ್ತಿಗೊಳಿಸಿದ ತರಬೇತುದಾರರು  ಜಾಮೀನು ಠೇವಣಿಯಾಗಿ ಇರಿಸಿದ ಮೊತ್ತವನ್ನು ಬ್ಯಾಂಕ್ ಅಕೌಂಟ್‌ಗೆ ಮರು ಪಾವತಿಸುವುದಕ್ಕಾಗಿ ತರಬೇತುದಾರರು ಅವರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ನೋನ್ ಲಯಾಬಿಲಿಟಿ ಸರ್ಟಿಫಿಕೇಟ್ ಎಂಬಿವುಗಳನ್ನು ಈ ತಿಂಗಳ ೩೧ರ ಮುಂಚಿತ ಸರಕಾರಿ ಐಟಿಐ ಕಚೇರಿಯಲ್ಲಿ ಹಾಜರುಪಡಿಸಬೇಕು. ಅಲ್ಲದಿದ್ದರೆ ಈ ಮೊತ್ತವನ್ನು ಸರಕಾರಕ್ಕೆ ಪಾವತಿಸುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ.

ಪುಣಿಂಚಿತ್ತಾಯ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ

ಬೆಳ್ಳೂರು: ಕಲೆ, ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡಿ ಅಮರರಾದ ಪುಂಡೂರು ದಾಮೋದರ ಪುಣಿಂಚಿತ್ತಾಯರ ಸ್ಮಾರಕ ಪ್ರತಿಷ್ಠಾನದ ನೇತೃತ್ವದಲ್ಲಿ ಸಾಹಿತ್ಯ, ಕಲೋಪಾಸಕ ರಾಮಚಂದ್ರ ಪುಣಿಂಚಿತ್ತಾಯರ ಪ್ರಥಮ ವಾರ್ಷಿಕ ಸಂಸ್ಮರಣೆಯೊಂದಿಗೆ ನಾಡಿನ ಹಿರಿಯ ಕವಿ, ಅರ್ಥದಾರಿ ಡಾ| ರಮಾನಂದ ಬನಾರಿ ದಂಪತಿಗೆ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಂಡೂರು ನೀರ್ಮಜೆಯಲ್ಲಿ ನಡೆದ ಸಮಾರಂಭವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ, ದಿ. ರಾಮಚಂದ್ರ ಪುಣಿಂಚಿತ್ತಾಯ ರಚಿಸಿದ ಭಕ್ತಿಭಾವಯಾನ ಎಂಬ ಭಕ್ತಿಗೀತೆಗಳ ಕೃತಿ ಬಿಡುಗಡೆಗೈದು ಆಶೀರ್ವಚನವಿತ್ತರು. …

ಅಯೋಧ್ಯೆಯಲ್ಲಿ ‘ಒಂಟಿ-ತೋಳ’ ಮಾದರಿ ದಾಳಿಗೆ ಸ್ಕೆಚ್: ಮೂವರು ಅಲ್‌ಖೈದಾ ಉಗ್ರರ ಸೆರೆ

ಅಯೋಧ್ಯೆ: ಅಯೋಧ್ಯೆಯಲ್ಲಿ  ಜ.೨೨ರಂದು  ಪ್ರಾಣಪ್ರತಿಷ್ಠೆ ನಡೆಯಲಿ ರುವಂತೆಯೇ ಆ ಪರಿಸರದಲ್ಲಿ ‘ಲೋನ್ -ವೂಲ್ಫ್’ (ಒಂಟಿ ತೋಳ) ಮಾದರಿ ದಾಳಿಗೆ ಸ್ಕೆಚ್ ಹಾಕಿಕೊಂಡಿದ್ದ ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಗುಪ್ತಚರ ವಿಭಾಗದ ಸಹಾಯದೊಂದಿಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉಗ್ರರು ಅಲ್‌ಖೈದಾ ಭಯೋತ್ಪಾದಕ ಸಂಘಟನೆಯ ಚಟು ವಟಿಕೆಗಳ ಬಗ್ಗೆ ಪಾಲುದಾರ ಸಂಸ್ಥೆಗಳೊಂ ದಿಗೂ ಭಯೋತ್ಪಾದನೆ ಸಂಚುಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂಬುವುದು ತನಿಖೆಯಲ್ಲಿ ಬಹಿರಂಗ ಗೊಂಡಿದೆ. ಬಂಧಿತರು ಕೈಪಿಡಿಯೊಂ ದನ್ನು ಹೊಂದಿದ್ದರು. ಜಾಗತಿಕ ಭಯೋತ್ಪಾದಕ ಸಂಘಟನೆಯಾದ …