ಬಸ್ ನೌಕರನ ಸ್ಕೂಟರ್ ಕಳವು

ಬದಿಯಡ್ಕ: ಬಸ್ ನೌಕರ ರೊಬ್ಬರ ಸ್ಕೂಟರ್ ಕಳವಿಗೀಡಾದ ಘಟನೆ ನಡೆದಿದೆ. ಬೆಳ್ಳಿಗೆ ಬಳಿಯ ವಳಕಲ ಎಂಬಲ್ಲಿನ ವಿಜಿತ್ ವಿ ಎಂಬವರ ಸ್ಕೂಟರ್ ಕಳವಿಗೀಡಾ ಗಿದೆ. ಈ ತಿಂಗಳ ೧೭ರಂದು ರಾತ್ರಿ ೮.೩೦ರಿಂದ ೧೮ರಂದು ಬೆಳಿಗ್ಗೆ ೬ ಗಂಟೆ ಮಧ್ಯೆ ಸ್ಕೂಟರ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಮನೆ ಸಮೀಪದ ರಸ್ತೆ ಬದಿ ಸ್ಕೂಟರ್ ನಿಲ್ಲಿಸಲಾಗಿತ್ತು. ಅದನ್ನು ಕಳ್ಳರು ಕದ್ದೊಯ್ದಿದ್ದಾರೆಂದು  ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿಜಿತ್‌ರ ಮನೆ ಸಮೀಪದ …

ಆಟೋ ಚಾಲಕ ನಿಧನ

ಬದಿಯಡ್ಕ: ಬದಿಯಡ್ಕದ ಆಟೋ ಚಾಲಕ ಸಜಿ ಕುಮಾರ್ (೫೨) ನಿಧನಹೊಂದಿದರು. ಇವರು ಗೋಳಿಯಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು.  ಮೃತರು ಪತ್ನಿ ಉಷಾ, ಮಕ್ಕಳಾದ ನಿಶಾ (ಬದಿಯಡ್ಕ ಪಂಚಾಯತ್ ಕಚೇರಿ ನೌಕರೆ), ಸಹೋದರ-ಸಹೋದರಿಯರಾದ ಬಿಜು, ಅನಿತ, ಶ್ರೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಹಿಳೆ ನಾಪತ್ತೆ-ದೂರು

ಕುಂಬಳೆ: ರಾತ್ರಿ ನಿದ್ರಿಸಿದ್ದ ಮಹಿಳೆ ಬಳಿಕ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಮೂಲತಃ ತಮಿಳುನಾಡು ನಿವಾಸಿ ಯೂ ಹಲವು ವರ್ಷಗಳಿಂದ ಕುಟುಂಬ ಸಮೇತ ಶಾಂತಿಪಳ್ಳದಲ್ಲಿ ವಾಸಿಸುವ ಜಯಪಾಲ್ ಎಂಬವರ ಪತ್ನಿ ರಾಜಲಕ್ಷ್ಮಿ (೫೨) ನಾಪತ್ತೆ ಯಾಗಿ ರುವುದಾಗಿ ದೂರಲಾಗಿದೆ. ಈ ತಿಂಗಳ ೧೬ರಂದು ರಾತ್ರಿ ನಿದ್ರಿಸಿದ್ದ ರಾಜಲಕ್ಷ್ಮಿ ೧೭ರಂದು ಬೆಳಿಗ್ಗೆ ನೋಡಿದಾಗ ನಾಪತ್ತೆಯಾ ಗಿದ್ದಾರೆನ್ನಲಾಗಿದೆ. ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ ವೆನ್ನಲಾಗಿದೆ. ಈ ಬಗ್ಗೆ ಅವರ ಪುತ್ರ ಸುದಲಾಮಣಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ನಿದ್ರಿಸಿದ್ದ ಬಾಲಕಿಗೆ ದೌರ್ಜನ್ಯ: ಕೊಯಿಪ್ಪಾಡಿ ನಿವಾಸಿ ಸೆರೆ

ಕಾಸರಗೋಡು: ಗೆಳೆಯನ ಮನೆಗೆ ತಲುಪಿ ಸಂಬಂಧಿಕೆಯಾದ  ಬಾಲಕಿ ಯನ್ನು ದೌರ್ಜನ್ಯಗೈದ ಕುಂಬಳೆ, ಕೊಯಿಪ್ಪಾಡಿ ನಿವಾಸಿಯನ್ನು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಬಂಧಿಸಲಾಗಿದೆ. ಕೊಯಿಪ್ಪಾಡಿ ಬಾತಿಷ ಮಂಜಿಲ್‌ನ ದಾವೂದ್ ಹಕೀಂ (೨೫)ನನ್ನು ಶ್ರೀಕಂಠಾಪುರಂ ಎಸ್‌ಐ ಖದೀಜ ಬಂಧಿಸಿದ್ದಾರೆ. ಇತ್ತೀಚೆಗೆ ಘಟನೆ ನಡೆದಿದೆ. ಶ್ರೀಕಂಠಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಓರ್ವ ಗೆಳೆಯನ ಮನೆಗೆ ಕಾರು ಸಹಿತ ದಾವೂದ್ ತಲುಪಿದ್ದನು. ಮನೆ ಮಂದಿಯೊಂದಿಗೆ ಪಕ್ಕನೆ ಬೆರೆತು ಉತ್ತಮ ಸಂಬಂಧವನ್ನು ಬೆಳೆಸಿದ ಈತ ಅಂದು ರಾತ್ರಿ ಅದೇ ಮನೆಯಲ್ಲಿ   ತಂಗಿದ್ದನು. ರಾತ್ರಿ ವೇಳೆ …

ಮಹಾರಾಜಾಸ್ ಕಾಲೇಜಿನಲ್ಲಿ ಅಂಗಡಿಮೊಗರು ನಿವಾಸಿ ವಿದ್ಯಾರ್ಥಿಗೆ ಇರಿತ: ಕೆಎಸ್‌ಯು ಕಾರ್ಯಕರ್ತ ಸೆರೆ

ಕೊಚ್ಚಿ: ಎರ್ನಾಕುಳಂನ ಮಹಾರಾಜಾಸ್ ಕಾಲೇಜು ವಿದ್ಯಾರ್ಥಿಯೂ, ಅಂಗಡಿಮೊಗರು ಬಳಿಯ ಪರ್ಲಾಡಂ ನಿವಾಸಿಯಾದ ಎಸ್‌ಎಫ್‌ಐ ಕಾರ್ಯಕರ್ತನಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್‌ಯು ಕಾರ್ಯಕರ್ತನನ್ನು ಸೆರೆ ಹಿಡಿಯಲಾಗಿದೆ. ಪರ್ಲಾಡಂ ನಿವಾಸಿ ಅಬ್ದುಲ್ ರಹಿಮಾನ್‌ರ ಪುತ್ರ  ಅಬ್ದುಲ್ ನಾಸರ್‌ಗೆ ನಿನ್ನೆ ಮುಂಜಾನೆ ತಂಡವೊಂದು ಇರಿದು ಗಾಯಗೊಳಿಸಿತ್ತು. ಈ ಸಂಬಂಧ ಕಣ್ಣೂರು ನಿವಾಸಿಯೂ, ಎನ್ವಯೋನ್‌ಮೆಂಟಲ್ ಕೆಮೆಸ್ಟ್ರಿ ತೃತೀಯ ವರ್ಷ ವಿದ್ಯಾರ್ಥಿಯಾದ ಮುಹಮ್ಮದ್ ಇಜ್‌ಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಎಂ.ಜಿ. ವಿಶ್ವವಿದ್ಯಾನಿಲಯದ ನಾಟಕೋತ್ಸವದಂಗವಾಗಿ ಕಾಲೇಜು ಕ್ಯಾಂಪಸ್‌ನೊಳಗೆ ನಾಟಕ ತರಬೇತಿ ನಡೆಯುತ್ತಿತ್ತು. ಇದರ ಹೊಣೆಗಾರಿಕೆಯನ್ನು …

ನಾಪತ್ತೆಯಾದ ಯುವಕನನ್ನು ರೈಲು ಹಳಿಯಿಂದ ರಕ್ಷಿಸಿದ ಪೊಲೀಸರು

ಕಾಸರಗೋಡು: ನಾಪತ್ತೆಯಾದ ಯುವಕ ರೈಲು ಹಳಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಆತನನ್ನು ರಕ್ಷಿಸಿ ಬಳಿಕ ಮನೆಯವರನ್ನು ಕರೆಸಿ ಅವರ ಜತೆ ಕಳುಹಿಸಿಕೊಟ್ಟ ಘಟನೆ ನಗರದಲ್ಲಿ ನಡೆದಿದೆ. ಪಾಲ್ಘಾಟ್ ಮಣ್ಣಾರಕ್ಕಾಡ್  ನಿವಾಸಿ ಅಬ್ದುಲ್ ಸಲಾಂ ಎಂಬವರ ಪುತ್ರ ಮೊಹಮ್ಮದ್ ರಫೀಕ್ ಎಂಬ ಯುವಕ ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದನು. ಈತ   ಕಾಸರಗೋಡು ರೈಲು ನಿಲ್ದಾಣ ಬಳಿಯ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು  ನಿನ್ನೆ ರಾತ್ರಿ ಕಾಸರಗೋಡು   ಕಂಟ್ರೋಲ್ ರೂಂನ    ಗಸ್ತು ತಿರುಗುತ್ತಿದ್ದ ಎಎಸ್‌ಐ ಸಂಜೀವ್ ಕುಮಾರ್ ನೇತೃತ್ವದ …

೨೩.೫ ಪವನ್ ಚಿನ್ನಾಭರಣ ಕಳವು : ಕಳ್ಳರ ಸುಳಿವು ಇನ್ನೂ ಅಲಭ್ಯ

ಬದಿಯಡ್ಕ: ಮನೆ ಮಂದಿ ಉತ್ಸವಕ್ಕೆ ತೆರಳಿದ್ದ ವೇಳೆ ಮನೆಯಿಂದ ೨೩.೫ ಪವನ್ ಚಿನ್ನಾಭರಣವನ್ನು ಕಳವುಗೈದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರಂಗವಾಗಿ ಹಲವರನ್ನು ತನಿಖಾ ತಂಡ ವಿಚಾರಣೆ ನಡೆಸಿದೆ.  ಆದರೆ ಕಳವಿನ ಬಗ್ಗೆ ಬೆಳಕು ಚೆಲ್ಲುವ ಯಾವುದೇ ಸೂಚನೆಗಳು ಲಭಿಸಿಲ್ಲವೆನ್ನಲಾಗಿದೆ. ಚಿನ್ನಾಭರಣ ಇರಿಸಿದ್ದ ಕಪಾಟಿ ನಿಂದ ಹಾಗೂ  ಕೀಲಿಕೈಯಿಂದ ಲಭಿ ಸಿದ ಬೆರಳಚ್ಚುಗಳ  ಪರಿಶೀಲನಾ ವರದಿ ಲಭಿಸಿದರೆ ತನಿಖೆಯು ನಿರ್ಣಾಯಕ ಹಂತಕ್ಕೆ ತಲುಪಬಹುದಾಗಿದೆ. ಸೀತಾಂಗೋಳಿ, ಮುಗು, ಕುಂಞಿ ಪದವಿನ ಬಟ್ಟುರೈಯವರ ಮನೆಯಿಂದ  ಇತ್ತೀಚೆಗೆ ಹಾಡಹಗಲು ಕಳವು ನಡೆದಿತ್ತು. …

ಜೈಲಿನ ಮುಂದೆ ಮೆರವಣಿಗೆ ರಾಹುಲ್ ಮಾಂಕುಟ್ಟತ್ತಿಲ್, ಶಾಸಕರ ವಿರುದ್ಧ ಕೇಸು

ತಿರುವನಂತಪುರ: ಪೂಜಾಪುರ ಜೈಲಿನ ಮುಂದೆ ಹರ್ಷ ಮೆರವಣಿಗೆ ನಡೆಸಿದ ಸಂಬಂಧ ಕಾಂಗ್ರೆಸ್ ನೇತಾರರಾದ ರಾಹುಲ್ ಮಾಂಕುಟ್ಟತ್ತಿಲ್ ಹಾಗೂ ಶಾಸಕರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶಾಫಿ ಪರಂಬಿಲ್, ಅನ್ವರ್ ಸಾದತ್‌ರ ಸಹಿತ ಕಂಡರೆ ಪತ್ತೆಹಚ್ಚಬಹುದಾದ ೫೦ಕ್ಕೂ ಹೆಚ್ಚು ಮಂದಿ ವಿರುದ್ಧ  ಕೇಸು ದಾಖಲಿಸಲಾಗಿದೆ. ಸಾರಿಗೆ ಅಡಚಣೆ ಸೃಷ್ಟಿಸಲಾಗಿದೆ. ಅದೇ ರೀತಿ ಜೈಲು ಅಧಿಕಾರಿಗಳ ಸಂಘಟನೆಯ ಬೋರ್ಡ್ ನಾಶಗೊಳಿಸಲಾಗಿದೆ ಎಂದು ಕೇಸು ದಾಖಲಿಸಲಾಗಿದೆ. ಸೆಕ್ರೆಟರಿಯೇಟ್ ಮಾರ್ಚ್ ವೇಳೆ ಉಂಟಾದ ಘರ್ಷಣೆಗೆ ಸಂಬಂಧಿಸಿ ಸೆರೆಗೀಡಾದ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ …

ಓಟುಗಾಗಿ ಸಂಚಾರ ಆರಂಭ: ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಜಿಲ್ಲಾಧಿಕಾರಿ ಕರೆ

ಕಾಸರಗೋಡು: ಜಿಲ್ಲಾ ಚುನಾವಣೆ ವಿಭಾಗದ ಹಾಗೂ ಸ್ವೀಪ್‌ನ ಜಂಟಿ ಆಶ್ರಯದಲ್ಲಿ ಜನರಲ್ಲಿ ಮತದಾನ ಮಾಡಬೇಕಾದ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ಮೂಡಿಸಲು, ಮತದಾನ ಯಂತ್ರಗಳನ್ನು ತಿಳಿದುಕೊಳ್ಳಲು ಜಿಲ್ಲೆಯ ಕಾಲೇಜು ಕ್ಯಾಂಪಸ್‌ಗಳ ಮೂಲಕ, ಕಾಲನಿಗಳ ಮೂಲಕ ಓಟುಗಾಗಿ ಪ್ರಯಾಣ ಆರಂಭಿಸಿದೆ. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಓಟುಗಾಗಿ ಪ್ರಯಾಣಕ್ಕೆ ಚಾಲನೆ ನೀಡಿದರು. ಮತದಾರರ ಯಾದಿಯಲ್ಲಿ ಹೆಸರು ಸೇರಿಸಲಿರುವವರು ಕಡ್ಡಾಯವಾಗಿ ಹೆಸರು ಸೇರಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. ಸ್ವೀಪ್ ಜಿಲ್ಲಾ ನೋಡೆಲ್ ಅಧಿಕಾರಿ ಟಿ.ಟಿ. ಸುರೇಂದ್ರನ್ …

ಶ್ರೀರಾಮ ಕ್ಷೇತ್ರ: ಆರು ವಿಶೇಷ ಅಂಚೆ ಚೀಟಿ ಬಿಡುಗಡೆ

ಹೊಸದಿಲ್ಲಿ: ಶ್ರೀ ರಾಮಜನ್ಮಭೂಮಿ ಸಮರ್ಪಣೆಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರು ವಿಶೇಷ ಅಂಚೆ ಚೀಟಿಗಳನ್ನು ಹಾಗೂ ಶ್ರೀ ರಾಮನಿಗೆ ಸಂಬಂಧಿಸಿದ ವಿಶೇಷ ಸ್ಟಾಂಪ್‌ಗಳು ಒಳಗೊಂಡ ಆಲ್ಬಂನ್ನು ಬಿಡುಗಡೆಗೊಳಿಸಿದರು. ಈ ಅಂಚೆ ಚೀಟಿಗಳು ಕೇವಲ ಕಾಗದದ ತುಂಡುಗಳಲ್ಲ. ಬದಲಾಗಿ ಐತಿಹಾಸಿಕ ದಾಖಲೆಗಳ ಪುಟ್ಟ ಪುಸ್ತಕವಾಗಿದೆ. ಅವು ಮಾನವ ನಿರ್ಮಿತ ಹಾಗೂ ಐತಿಹಾಸಿಕ ಪ್ರಾಧಾನ್ಯತೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ನುಡಿದರು. ಭವಿಷ್ಯದ ತಲೆಮಾರಿಗೆ ಐತಿಹಾಸಿಕ ದಾಖಲೆಗಳ ಮೂಲಕ ಸಾಗಲಿರುವ ಮಾರ್ಗದರ್ಶಿಯೂ ಆಗಿದೆ. ಪ್ರತೀ ಸ್ಟಾಂಪ್‌ಗಳನ್ನು ಇತಿಹಾಸದ ಒಂದು ಭಾಗವಾಗಿ …