ಉಪೇಕ್ಷಿತ ಸ್ಥಿತಿಯಲ್ಲಿ ೭೦ ಲೀಟರ್ ಹುಳಿರಸ ವಶ

ಕಾಸರಗೋಡು: ವೆಳ್ಳರಿಕುಂಡ್ ಕಳ್ಳಾರಿನ ಒಟಕಂಡಂನಲ್ಲಿನ ಹಿತ್ತಿಲೊಂ ದರಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಬಚ್ಚಿಡ ಲಾಗಿದ್ದ ೭೦ ಲೀಟರ್ ಹುಳಿರಸವನ್ನು ಹೊಸದುರ್ಗ ಅಬಕಾರಿ ರೇಂಜ್ ಕಚೇರಿಯ ಅಸ್ಸಿಸ್ಟೆಂಟ್ ಎಕ್ಸೈಸ್ ಇನ್ ಸ್ಪೆಕ್ಟರ್ (ಗ್ರೇಡ್) ಎಂ. ರಾಜೀವನ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅದನ್ನು ಬಳಿಕ ಅಲ್ಲೇ ನಾಶಗೊಳಿಸಲಾಗಿದೆ. ಕಳ್ಳಭಟ್ಟಿ ಸಾರಾಯಿ ತಯಾರಿಸಲೆಂದು ಈ ಮಾಲನ್ನು ಅಲ್ಲಿ ಯಾರೋ ಬಚ್ಚಿಟ್ಟಿದ್ದರೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್ ತ್ಯಾಜ್ಯ ಎಸೆಯಲು ಬಂದವರನ್ನು ಕೈಯಾರೆ ಸೆರೆಹಿಡಿದ ನಾಗರಿಕರು

ಹೊಸದುರ್ಗ: ದ್ವಿಚಕ್ರ ವಾಹನ ಗಳಲ್ಲಿ ಹೋಟೆಲ್ ತ್ಯಾಜ್ಯಗಳನ್ನು ಎಸೆಯಲು ತಲುಪಿದವರನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ರಾತ್ರಿ ೧೦.೩೦ರ ವೇಳೆ ಕಾಞಂಗಾಡ್ ಐಎಂಎ ಹಾಲ್ ಸಮೀಪ ಘಟನೆ ನಡೆದಿದೆ.  ನಾಗರಿಕರು ನೀಡಿದ ಮಾಹಿತಿಯಂತೆ ಸಬ್ ಇನ್‌ಸ್ಪೆಕ್ಟರ್ ಸಾಜು ಥೋಮಸ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ತ್ಯಾಜ್ಯ ಎಸೆಯಲು ಬಂದವರನ್ನು ಕಸ್ಟಡಿಗೆ ತೆಗೆದಿದ್ದಾರೆ.  ಈ ಘಟನೆಗೆ ಸಂಬಂಧಿಸಿ ಕಾಞಂಗಾಡ್‌ನಲ್ಲಿ  ಶವರ್ಮ ಮಾರಾಟ ನಡೆಸುವ ಪಾರಪ್ಪಳ್ಳಿ ಕಾಟಿಪ್ಪಾರದ ಎಂ. ಇಬ್ರಾಹಿಂ, ಪಾಣತ್ತೂರು ಚಾಮುಂಡಿಕುನ್ನುವಿನ ಕೆ.ಎಂ. ಸತ್ತಾರ್ ಎಂಬಿವರ ವಿರುದ್ದ …

ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯಿಂದ ಸುಳ್ಳು ದೂರು ಕೊಡಿಸಿ ಹಣ ಎಗರಿಸಲೆತ್ನಿಸಿದ ಸೂತ್ರಧಾರನ ಸೆರೆ

ಕಾಸರಗೋಡು: ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೋರ್ವಳಿಂದ ಪೊಲೀಸರಿಗೆ ಸುಳ್ಳು ದೂರು ಕೊಡಿಸಿ ಆ ಮೂಲಕ ಹಣ ಎಗರಿಸಲೆತ್ನಿಸಿದ ಪ್ರಕರಣದ ಸೂತ್ರಧಾರನನ್ನು ಮಾಹಿ ಪೊಲೀಸರು  ಬಂಧಿಸಿದ್ದಾರೆ. ಹೊಸದುರ್ಗ ಕಾರಕೆಡುವಟ್ಟ ಪಳ್ಳಿ ವೀಟಿಲ್‌ನ ಮುಹಮ್ಮದ್ ಇಕ್ಬಾಲ್ ಅಲಿಯಾಸ್ ಶಿವಶಂಕರ (೬೧) ಎಂಬಾತ ಬಂಧಿತನಾದ ಆರೋಪಿ. ಈತ ತನ್ನ ಪತ್ನಿಯೆಂಬ ಸೋಗಿನಲ್ಲಿ ೬೩ ವರ್ಷದ ಮಹಿಳೆಯೋರ್ವ ಳೊಂದಿಗೆ ಮಾಹಿಗೆ ಹೋಗಿ ಅಲ್ಲಿನ ವಸತಿಗೃಹವೊಂದರಲ್ಲಿ ಮೂರು ದಿನ ತಂಗಿದ್ದನು. ಅಲ್ಲಿ ಆ ಮಹಿಳೆಗೆ ಆ ವಸತಿಗೃಹದ ರೂಮ್‌ನಲ್ಲಿ ಮೂರು ದಿನ ತಂಗಿದ್ದನು. ಆ …

ಪೊಲೀಸರು ನಾಶಗೊಳಿಸಿದ ಅನಧಿಕೃತ ಕಡವು ಮತ್ತೆ ನಿರ್ಮಾಣ: ಹೊಯ್ಗೆ ಸಾಗಾಟ ವ್ಯಾಪಕ- ದೂರು

ಕುಂಬಳೆ: ಎರಡು ದಿನಗಳ ಹಿಂದೆ ಯಷ್ಟೇ ಪೊಲೀಸರು ಕೆಡವಿದ ಅನಧಿಕೃತ ಕಡವು ಇದೀಗ ಮತ್ತೆ ನಿರ್ಮಾಣವಾದ ಬಗ್ಗೆ ದೂರುಂಟಾಗಿದೆ. ಕಡವುಗಳನ್ನು ಕೆಡವಿ ಪೊಲೀಸರು ಮರಳಿದ ಬೆನ್ನಲ್ಲೇ ಅಲ್ಲಿಗೆ ತಲುಪಿದ ಹೊಯ್ಗೆ ಮಾಫಿಯಾಗಳು ಕಡವು ಪುನರ್ ನಿರ್ಮಿಸಿದ್ದು ಅನಂತರ ರಾತ್ರಿ ಹೊತ್ತಿನಲ್ಲಿ ಹೊಯ್ಗೆ ಅನಧಿಕೃತ ವಾಗಿ  ಸಾಗಾಟ ಮತ್ತೆ ತೀವ್ರಗೊಂ ಡಿದೆ. ಶಿರಿಯ ವಳಯಂನಲ್ಲಿದ್ದ ಆರು ಅನಧಿಕೃತ ಕಡವುಗಳನ್ನು  ಎರಡು ದಿನಗಳ ಹಿಂದೆ ಕುಂಬಳೆ ಎಸ್.ಐ. ವಿ.ಕೆ. ಅನೀಶ್‌ರ ನೇತೃತ್ವದಲ್ಲಿ ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದ್ದರು. ಪೊಲೀಸರು ಮರಳಿದ …

ವಿಮಾನ ನಿಲ್ದಾಣ ಮೂಲಕ ಚಿನ್ನ ಸಾಗಾಟ: ನಾಲ್ಕು ವರ್ಷಗಳಲ್ಲಿ ಕೇರಳ ದಲ್ಲಿ ವಶಪಡಿಸಿದ್ದು ೨೨೯೧ ಕಿಲೋ ಚಿನ್ನ

ತಿರುವನಂತಪುರ: ಕೇರಳದ ವಿಮಾನ ನಿಲ್ದಾಣಗಳ ಮೂಲಕ ಅನಧಿಕೃತವಾಗಿ ವ್ಯಾಪಕ ಚಿನ್ನ  ಸಾಗಾಟ ನಡೆಯುತ್ತಿದೆಯೆಂದು ಮೂಲಗಳಿಂದ ತಿಳಿದುಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ವಿಮಾನ ನಿಲ್ದಾಣಗಳಿಂದಾಗಿ  ೨೨೯೧.೫೧ ಕಿಲೋ ಚಿನ್ನವನ್ನು ವಶಪಡಿಸಲಾಗಿದೆ.  ಚಿನ್ನ ಸಾಗಾಟ ಹಾಗೂ ಅದನ್ನು ವಶಪಡಿಸಿಕೊ ಳ್ಳುವಲ್ಲಿ ದೇಶದಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಆದರೆ ಕಳೆದ ವರ್ಷ ಮಾತ್ರ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಚಿನ್ನ ವಶಪಡಿಸಲಾಗಿದೆ. ೨೦೨೩ ಅಕ್ಟೋಬರ್ ವರೆಗಿನ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫೪೨.೩೬ ಕಿಲೋ ಚಿನ್ನವನ್ನು ವಶಪಡಿಸಲಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ೯೯೭.೫೧ …

ಜನದ್ರೋಹ ಕಾರ್ಯಗಳಲ್ಲಿ ಪರಸ್ಪರ ಸ್ಪರ್ಧಿಸುತ್ತಿರುವ ಎಡರಂಗ, ಬಿಜೆಪಿ ಸರಕಾರಗಳು-ಕಾಂಗ್ರೆಸ್ ಆರೋಪ

ಮಂಜೇಶ್ವರ: ಕೇರಳದ ಎಡರಂಗ ಸರಕಾರ ಹಾಗೂ ಕೇಂದ್ರದ ಬಿಜೆಪಿ ಸರಕಾರಗಳು ಜನತೆಗೆ ದ್ರೋಹ ಬಗೆಯುತ್ತಿದ್ದು, ಜನರನ್ನು ವಂ_ಸುವ ಮಾಡುವ ಕಾರ್ಯದಲ್ಲಿ ಪರಸ್ಪರ ಸ್ಪರ್ಧಿಸುತ್ತಿದೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ.ಫೈಸಲ್ ನುಡಿದರು.ಫೆಬ್ರುವರಿ ೯ ರಂದು ಕೆ.ಪಿ.ಸಿ.ಸಿ ಅಧ್ಯಕ್ಷ ಕೆ.ಸುಧಾಕರನ್ ಮತ್ತು ವಿಪಕ್ಷ ನಾಯಕ ವಿ.ಡಿ. ಸತೀಶನ್ ಕಾಸರಗೋಡಿನಿಂದ ಆರಂಭಿಸಲಿರುವ ಸಮರಾಗ್ನಿ ಜನಾಂದೋಲನ ಯಾತ್ರೆಯ ಉದ್ಘಾ ಟನಾ ಸಮಾರಂಭವನ್ನು ಯಶಸ್ವಿಗೊಳಿಸಲು ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ನಿನ್ನೆ ನಡೆದ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯನ್ನು ಉದ್ಘಾಟಿಸಿ …

ಸರ್ಕಲ್ ಸಹಕಾರಿ ಯೂನಿಯನ್‌ನಿಂದ ಸಹಕಾರಿ ಸಂಗಮ

ಕಾಸರಗೋಡು: ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್‌ನ ನೇತೃತ್ವದಲ್ಲಿ ಸಹಕಾರಿ ಸಂಗಮ ನಡೆಸಲಾಯಿತು. ಕೇರಳ ಬ್ಯಾಂಕ್ ಆಡಳಿತ ಸಮಿತಿ ಸದಸ್ಯ ಬಾಬು ಎಬ್ರಹಾಂ ಉದ್ಘಾಟಿಸಿದರು. ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್. ಜಯಾನಂದನ್ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಪಿ.ವಿ. ರಾಜೇಶ್ ತರಗತಿ ನಡೆಸಿದರು. ಅಸಿಸ್ಟೆಂಟ್ ರಿಜಿಸ್ಟ್ರಾರ್‌ಗಳಾದ ಎ. ರವೀಂದ್ರ, ಕೆ. ನಾಗೇಶ್, ಅಸಿಸ್ಟೆಂಟ್ ಡೈರೆಕ್ಟರ್ ಎ. ಜಯಚಂದ್ರನ್, ವಿವಿಧ ಸಹಕಾರಿ ಸಂಘ ಪದಾಧಿಕಾರಿಗಳಾದ ನ್ಯಾಯವಾದಿ ಎಸಿ ಅಶೋಕ್ ಕುಮಾರ್, ಕೆ.ಪಿ. ಬಲರಾಮನ್ ನಾಯರ್, ಪಿ. ಜಾನಕಿ, ಪಿ.ಕೆ. ವಿನೋದ್ ಕುಮಾರ್, …

ಎನ್‌ಟಿಯು ಕುಂಬಳೆ ಉಪಜಿಲ್ಲಾ ಸಮಿತಿಯಿಂದ ಯುವದಿನಾಚರಣೆ

ಬದಿಯಡ್ಕ: ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿ ಆಶ್ರಯದಲ್ಲಿ ವಿವೇಕಾನಂದ ಜಯಂತಿಯನ್ನು ದೇಶೀಯ ಯುವದಿನವನ್ನಾಗಿ ಪೆರಡಾಲ ಜಿ.ಎಚ್.ಎಸ್.ಎಸ್.ನಲ್ಲಿ ಆಚರಿಸಲಾಯಿತು. ಎನ್‌ಟಿಯು ಉಪಜಿಲ್ಲಾ ಅಧ್ಯಕ್ಷ ರಾಮಚಂದ್ರ ಪಿ. ಕಾರಡ್ಕ ಅಧ್ಯಕ್ಷತೆ ವಹಿಸಿದರು. ದಿನೇಶ್ ಪಡ್ರೆ ಉದ್ಘಾಟಿಸಿದರು. ಪುರುಷೋತ್ತಮ ಕುಲಾಲ್, ಕವಿತ, ದಿವ್ಯ, ಶರತ್ ಕುಮಾರ್, ಪ್ರಸಾದ್, ರಾಜೇಶ್, ನವಪ್ರಸಾದ್ ಭಾಗವಹಿಸಿದರು.

ಬೇಕೂರು ಸೇವಾಭಾರತಿ ಕಲಾವೃಂದ, ರಜತ ಮಹೋತ್ಸವ, ಕಟ್ಟಡ ಉದ್ಘಾಟನೆ

ಉಪ್ಪಳ: ಬೇಕೂರು ಸೇವಾಭಾರತಿ ಕಲಾವೃಂದ ಹಾಗೂ ಭಜನಾ ಮಂದಿರದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡ ರಜತಾದ್ರಿಯ ಉದ್ಘಾಟನಾ ಸಮಾರಂಭ, ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅಧ್ಯಕ್ಷತೆ ವಹಿಸಿದರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರಜತ ಸಂಭ್ರಮವನ್ನು ಉದ್ಘಾಟಿಸಿದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬಿನಾ ನೌಫಲ್, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಶಶಿಧರ ಶೆಟ್ಟಿ …

ಸ್ಥಳೀಯಾಡಳಿತ ಸಂಸ್ಥೆಗಳ ಅವಗಣನೆ ವಿರುದ್ಧಪ್ರತಿಭಟನಾ ಸಂಗಮ

ವರ್ಕಾಡಿ: ಸ್ಥಳೀಯಾಡಳಿತ ಸಂಸ್ಥೆಗಳನ್ನು ಅವಗಣಿಸುತ್ತಿರುವ ರಾಜ್ಯದ ಎಡರಂಗ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಎಲ್‌ಜಿಎಂಎಲ್ ನೀಡಿದ ಕರೆಯಂತೆ ಯುಡಿಎಫ್ ಜನಪ್ರತಿನಿಧಿಗಳು ಮತ್ತು ನಾಯಕರು ವರ್ಕಾಡಿ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನಾ ಸಂಗಮ ನಡೆಸಿದರು. ಐದು ತಿಂಗಳುಗಳಿಂದ ಮೊಟಕುಗೊಂಡ ಪಿಂಚಣಿ ಶೀಘ್ರ ನೀಡಬೇಕು, ಕಟ್ಟಡ ತೆರಿಗೆ, ಪರ್ಮಿಟ್ ಶುಲ್ಕ ಹೆಚ್ಚಳ ಹಿಂತೆಗೆಯಬೇಕು, ಟ್ರಶರಿ ನಿಯಂತ್ರಣ ಹಿಂತೆಗೆಯಬೇಕು, ಪಂಚಾಯತ್‌ಗಳ ಅಧಿಕಾರ ಮೊಟಕುಗೊಳಿಸುವ ಯತ್ನ ಹಿಂಪಡೆಯಬೇಕು, ತಾತ್ಕಾಲಿಕ ನೇಮಕಾತಿ ಮರೆಯಲ್ಲಿ ಸ್ವಪಕ್ಷೀಯರಿಗೆ ಉದ್ಯೋಗ ನೀಡುವ ಕ್ರಮ ಕೊನೆಗೊಳಿಸಬೇಕು, ಕಾಮಗಾರಿಗಳ ನಿರ್ವಹಣೆಗೆ …