ಮಟ್ಕಾ: ಓರ್ವ ಸೆರೆ 

ಮಂಜೇಶ್ವರ:  ಹೊಸಂಗಡಿಯಲ್ಲಿ ನಿನ್ನೆ ಸಂಜೆ ಮಟ್ಕಾ ನಿರತನಾಗಿದ್ದ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಕೆ.ಜೆ.ಎಂ ರೋಡ್‌ನ ಮನೋಜ್ ಕುಮಾರ್ (೪೯) ಬಂಧಿತ ವ್ಯಕ್ತಿ. ಈತನ ಕೈಯಿಂದ ೬೧೦ ರೂಪಾಯಿ ವಶಪಡಿ ಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಪಾನ್ ಮಸಾಲೆ ಸಹಿತ ಓರ್ವ ಸೆರೆ ಮಂಜೇಶ್ವರ:  ನಿಷೇಧಿತ ಪಾನ್ ಮಸಾಲೆ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಮಂಜೇಶ್ವರ ಎಸ್‌ಐ ಪ್ರಶಾಂತ್ ಸೆರೆಹಿಡಿದಿದ್ದಾರೆ. ಪೊಸೋಟ್ ನಿವಾಸಿ ಮೂಸಕುಂಞಿ (೪೬) ಬಂಧಿತ ವ್ಯಕ್ತಿ. ಈತನ ಕೈಯಿಂದ ೬೪ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ.

ನೋಂದಾವಣೆ ಇಲಾಖೆಯಲ್ಲಿ ಭ್ರಷ್ಟಾಚಾರ ರಹಿತ ಸೇವೆ ಖಚಿತಪಡಿಸಲಾಗುವುದು-ಸಚಿವ

ಕಾಸರಗೋಡು: ಶತಮಾನದ ಇತಿಹಾಸವಿರುವ ನೋಂದಾವಣೆ ಇಲಾಖೆ ಕಾಲಾನುಸಾರವಾದ ಬದಲಾವಣೆಗೆ ನೆಗೆಯುತ್ತಿದೆ ಎಂದು ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ನುಡಿದರು. ಜಿಲ್ಲಾಧಿಕಾರಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನೋಂದಾವಣೆ ಇಲಾಖೆ ಡಿಜಿಟಲೈಸೇಶನ್ ಪೂರ್ತಿ ಗೊಳಿಸಿದ ಕಾಸರಗೋಡು, ಆಲ ಪ್ಪುಳ, ಕೋಟ್ಟಯಂ, ಇಡುಕ್ಕಿ ಜಿಲ್ಲೆಗ ಳ ರಾಜ್ಯ ಮಟ್ಟದ ಉದ್ಘಾಟನೆ ನಿರ್ವಹಿಸಿ ಸಚಿವರು ಮಾತನಾಡಿದರು. ವಿವಿಧ ರೀತಿಯ ಆಧಾರಗಳ ಮಾದರಿಗಳನ್ನು ಸುಲಲಿತಗೊಳಿಸಿ ಅವುಗಳಿಗೆ ರಾಜ್ಯದಾದ್ಯಂತ ಏಕರೂ ಪವನ್ನು ಜ್ಯಾರಿಗೊಳಿಸಲಾಗುವುದು ಎಂದು ಸಚಿವರು ನುಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋ ಹನ್ …

ಅರ್ತಲ ರಕ್ತೇಶ್ವರೀ ಕ್ಷೇತ್ರದ ಗರ್ಭಗುಡಿಗೆ ದಾರಂದ ಮುಹೂರ್ತ

ನೀರ್ಚಾಲು: ಕೊಲ್ಲಂಗಾನ ಅರ್ತಲ ಶ್ರೀ ರಕ್ತೇಶ್ವರೀ ಕ್ಷೇತ್ರದ ನೂತನ ಗರ್ಭ ಗುಡಿಯ ದಾರಂದ ಮುಹೂರ್ತ ಮತ್ತು ನಾಗನ ಕಟ್ಟೆಯ ಶಿಲಾನ್ಯಾಸ ಜರಗಿತು. ಡಾ| ಅನಂತ ಕಾಮತ್ ಕಾಸರಗೋಡು ದೀಪಬೆಳಗಿಸಿ ಸಭೆ ಉದ್ಘಾಟಿಸಿದರು.ಸುಬ್ಬಣ್ಣ ನಾಯ್ಕ ಅರ್ತಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಲಿಕೋಟೆ ಟ್ರಾಫಿಕ್ ಎಸ್‌ಪಿ ಹರಿಶ್ಚಂದ್ರ ನಾಯ್ಕ, ಉದ್ಯಮಿಗಳಾದ ಬಾಬೂಜಿ ಭಟ್, ಶೋಭಾ ಗೋಪಾಲನ್, ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ ಸಂತೋಷ್ ಕುಮಾರ್ ಮಾನ್ಯ, ಮಹೇಶ್ ವಳಕ್ಕುಂಜ, ಪಿ.ವಿ.ಶಿವರಾಮ ಚಿತ್ತಾರಿ, ಕೃಷ್ಣಪ್ರಸಾದ ಚಿತ್ತಾರಿ ಮಾತನಾಡಿದರು. ಗೋಪಾಲಕೃಷ್ಣ ಮೇಗಿನಡ್ಕ, …

ತೃಶೂರಿನಲ್ಲಿ ಫೆ. ೪ರಂದು ಕಾಂಗ್ರೆಸ್ ಮಹಾಸಮ್ಮೇಳನ: ಖರ್ಗೆ ಉದ್ಘಾಟನೆ

ತಿರುವನಂತಪುರ: ಲೋಕಸಭಾ ಚುನಾವಣಾ ದಿನಾಂಕ ಇನ್ನೇನು ಪ್ರಕಟಗೊಳ್ಳಲಿರುವಂತೆಯೇ ಅದಕ್ಕೆ  ಕೇರಳದಲ್ಲಿ ಅಗತ್ಯದ ಪೂರ್ವಸಿದ್ಧತೆ ನಡೆಸುವ ಸಲುವಾಗಿ ಫೆ. ೪ರಂದು ತೃಶೂರಿನಲ್ಲಿ ಮಹಾ ಸಮ್ಮೇಳನ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.  ಸಮ್ಮೇಳನವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಉದ್ಘಾಟಿಸುವರು. ಇದರ ಹೊರತಾಗಿ ಕಾಂಗ್ರೆಸ್‌ನ ಇತರ ಹಲವು ಗಣ್ಯ ನೇತಾgರೂ ಇದರಲ್ಲಿ ಭಾಗವಹಿಸುವರು. ತೃಶೂರು ಲೋಕಸಭಾ ಕ್ಷೇತ್ರದಲ್ಲಿ ನಟ ಸುರೇಶ್ ಗೋಪಿ ಬಿಜೆಪಿಯ ಉಮೇದ್ವಾರರಾಗುವುದು ಈಗಾಗಲೇ ಖಚಿತಗೊಂಡಂತಾಗಿದೆ.  ರಾಜಕೀಯಾತೀತವಾಗಿ ಅವರು ಭಾರೀ ಜನಬೆಂಬಲ ಹೊಂದಿದ್ದು, ಅದು ಯುಡಿಎಫ್ ಮತ್ತು ಎಲ್‌ಡಿಎಫ್‌ಗೆ …

ಚೆರುಗೋಳಿ ಹಿಂದೂ ರುದ್ರಭೂಮಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿಲಿಕಾನ್ ಚೇಂಬರ್ ಕೊಡುಗೆ

ಉಪ್ಪಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಗಲ್ಪಾಡಿ ಚೆರುಗೋಳಿ ಹಿಂದೂ ರುದ್ರಭೂಮಿಗೆ ಒದಗಿಸಿದ ಸಿಲಿಕಾನ್ ಚೇಂಬರ್‌ನ್ನು ಲೋಕಾರ್ಪಾಣೆ ಮಾಡಲಾಯಿತು.ಯೋಜನೆಯ ಪದಾಧಿ ಕಾರಿಗಳಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೋಪಾಲ ಶೆಟ್ಟಿ ಅರಿಬೈಲು, ಅಶ್ವಥ್ ಲಾಲ್‌ಭಾಗ್, ದಿನೇಶ್ ಚೆರುಗೋಳಿ, ಯೋಜನಾಧಿಕಾರಿ ಶಶಿಕಲಾ ಸುವರ್ಣ ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿಗಳು ಸ್ಮಶಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ರಘು ಚೆರುಗೋಳಿ ಇವರಿಗೆ ಹಸ್ತಾಂತರಿಸಿದರು.

ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನ ಕಿರು ಷಷ್ಠಿ ಮಹೋತ್ಸವಕ್ಕೆ ಚಾಲನೆ

ಮುಂಡಿತ್ತಡ್ಕ: ಮುಗು ಶ್ರೀ ಸುಬ್ರಾಯ ದೇವಸ್ಥಾನದ ಕಿರು ಷಷ್ಠೀ ಮಹೋತ್ಸವ ನಿನ್ನೆ ಸಂಜೆ ಹಸಿರುವಾಣಿ ಸಮರ್ಪಣೆಯೊಂದಿಗೆ ಆರಂಭಗೊಂ ಡಿತು. ದೇವಳದ ಮಹಾದ್ವಾರದ ಸಮೀಪದಿಂದ ಗ್ರಾಮಸ್ಥರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಸಿರುವಾಣಿ ಮೆರವಣಿಗೆ ಕ್ಷೇತ್ರಕ್ಕೆ ತಲುಪಿತು. ಆಡಳಿತ, ಸೇವಾ ಸಮಿತಿ, ವಿವಿಧ ಉಪ ಸಮಿತಿ ಪದಾಧಿಕಾರಿಗಳು ಮೆರವಣಿಗೆಗೆ ನೇತೃತ್ವ ವಹಿಸಿ ದ್ದರು. ಬಳಿಕ ರಾತ್ರಿ ಸಾಂಸ್ಕೃತಿಕ ನೃತ್ಯ ವೈಭವ ಪ್ರದರ್ಶನಗೊಂಡಿತು.

ಯುವಕನ ಮೃತದೇಹದ ಅಂತ್ಯ ಸಂಸ್ಕಾರ

ಉಪ್ಪಳ: ಕುಬಣೂರು ಶಾಂತಿಮೂಲೆ ನಿವಾಸಿ ದಿ| ಬಾಬು ಎಂಬವರ ಪುತ್ರ ನಾರಾಯಣ (೨೬)ರ ಸಾವಿನ ಬಗ್ಗೆ ಯಾವುದೇ ನಿಗೂಢತೆಗಳು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.  ಇತ್ತೀಚೆಗೆ ನಾಟಕ ನೋಡಲೆಂದು ತಿಳಿಸಿ ತೆರಳಿದ್ದ ನಾರಾಯಣ ಬಳಿಕ ಬೇಕೂರು ಶಾಲಾ ರಸ್ತೆ ಹಿತ್ತಿಲಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಿನ್ನೆ ಬಂದ್ಯೋಡು ಸ್ಮಶಾನದಲ್ಲಿಲ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಸಭೆ

ಎಡನೀರು: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆಯು ಕ್ಷೇತ್ರ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು. ನವೀನ್ ಕುಮಾರ್ ಭಟ್ ಕುಂಜರಕಾನ ಅಧ್ಯಕ್ಷತೆ ವಹಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಜೀರ್ಣೋದ್ಧಾರ ನಿದಿs ಕೂಪನ್ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಇತ್ತೀಚೆಗೆ ನಿಧನರಾದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಿತಿಯ ಕಾರ್ಯದರ್ಶಿ ಕೆ.ಎಂ. ಶರ್ಮಾ ಎಡನೀರು ಸ್ವಾಗತಿಸಿ, ಲೆಕ್ಕಪತ್ರ ವಿವರಗಳನ್ನು ನೀಡಿದರು. …

೧೩.೨೪ ಲಕ್ಷ ವಿದೇಶಿ ಕರೆನ್ಸಿ ಮತ್ತು ಭಾರತೀಯ ಕರೆನ್ಸಿ ವಶ: ಓರ್ವ ಕಸ್ಟಡಿಗೆ 

ಕಾಸರಗೋಡು: ಕಾಸರಗೋಡು ಚಕ್ಕರಬಜಾರ್‌ನಲ್ಲಿ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೩,೨೪,೮೦೦ ರೂ. ಮೌಲ್ಯದ ವಿದೇಶಿ ಕರೆನ್ಸಿ ನೋಟು ಮತ್ತು ೩೨ ಸಾವಿರ ಭಾರತೀಯ ಕರೆನ್ಸಿ ನೋಟುಗಳನ್ನು ಪತ್ತೆಹಚ್ಚಿ ವಶಪಡಿಸಿದ್ದಾರೆ.  ಕಾಳಧನವೆಂಬ ಶಂಕೆಯಲ್ಲಿ ಈ ನೋಟುಗಳನ್ನು ವಶಪಡಿಸಲಾಗಿದೆ. ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ  ಕೆ.ಪಿ.ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ನಿನ್ನೆ ರಾತ್ರಿ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ  ಮಲಪ್ಪುರಂ  ನಿಡಿಇರಿಪ್ಪ್ ಗ್ರಾಮದ ಕೊಂಡೋಟಿ ಕೊಟ್ಟಿಯೋಡತ್ತಿಲ್ ಹೌಸ್‌ನ ಅಬೂಬಕರ್ ಸಿದ್ದಿಕ್ ಪಿ (೪೭) ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. …

ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡುವುದಾಗಿ ತಿಳಿಸಿ ಯುವತಿಗೆ ಕಿರುಕುಳ: ಉಪ್ಪಳ ನಿವಾಸಿಗಾಗಿ ಶೋಧ

ಹೊಸದುರ್ಗ:  ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊದ ಗಿಸುವುದಾಗಿ ಭರವಸೆಯೊಡ್ಡಿ ಯುವತಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಕಿರುಕುಳ ನೀಡಿರು ವುದಾಗಿ ದೂರಲಾಗಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿ ನಿವಾಸಿ ಯೂ, ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ ಯುವತಿಯ ದೂರಿನಂತೆ ಉಪ್ಪಳ ನಿವಾಸಿ ಯಾದ ನವಾಸ್ (೨೪) ಎಂಬಾ ತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಕಳೆದ ವರ್ಷ ಜುಲೈ ೨೮ರಂದು ಮುನ್ನಾರ್‌ನಲ್ಲಿ, ಸೆಪ್ಟಂಬರ್‌ನಲ್ಲಿ ಬೇಕಲ ಪಳ್ಳಿಕೆರೆಯಲ್ಲಿರುವ ಖಾಸಗಿ ವ್ಯಕ್ತಿಯ ಮಾಲಕತ್ವದಲ್ಲಿರುವ ಸ್ಥಳಕ್ಕೆ ಕರೆದೊಯ್ದು ಕಿರುಕುಳ ನೀಡಿರುವು ದಾಗಿ ಯುವತಿಯ …