ಪಿಎಂಜಿಎಸ್‌ವೈ: ಎರಡು ರಸ್ತೆಗಳ ಕಾಮಗಾರಿ ಉದ್ಘಾಟನೆ

ಮಂಜೇಶ್ವರ: ಪಿ.ಎಂ.ಜಿ.ಎಸ್.ವೈ ಯೋಜನೆಯಲ್ಲಿ ೬.೪೧ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಎರಡು ರಸ್ತೆಗಳ ಕಾಮಗಾರಿಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಶಿಲಾನ್ಯಾಸಗೈದರು. ನಂದಾರ್ ಪದವು- ಪೊಯ್ಯತ್ತಬೈಲು, ದೈಗೋಳಿ ಮೀಯಪದವು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಗೈಯ್ಯಲಾಗಿದೆ. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಪಂ. ಅಧ್ಯಕ್ಷೆ ಭಾರತಿ ಸ್ವಾಗತಿಸಿದರು. ಮಿತ್ರಾ ವರದಿ ಮಂಡಿಸಿದರು. ಜನಪ್ರತಿನಿಧಿಗಳಾದ ಮೊಯ್ದೀನ್ ಕುಂಞಿ, ರಾಧಾಕೃಷ್ಣ ಭಟ್, ಉಮ್ಮರ್ ಬೋರ್ಕಳ, ಆಶಾಲತಾ, ಪದ್ಮಾವತಿ, ಇಬ್ರಾಹಿಂ, ಅಬ್ದುಲ್ ಮಜೀದ್ ಬಿ.ಎ, ನಾರಾಯಣ ತುಂಗ, ಹರ್ಷಾದ್ ವರ್ಕಾಡಿ, ಅಝೀಜ್ …

ಮಣಿಯಂಪಾರೆ-ಕುರೆಡ್ಕ ರಸ್ತೆಯ ಕಾಮಗಾರಿಗೆ ಚಾಲನೆ

ಮಣಿಯಂಪಾರೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಸೇರಿಸಿ ನಿರ್ಮಿಸುವ ಮಂಜೇಶ್ವರ ಬ್ಲೋಕ್‌ನ ಎಣ್ಮಕಜೆ ಪುತ್ತಿಗೆ ಪಂಚಾಯತ್‌ಗಳ ೯.೬೭೩ ಕಿಲೋ ಮೀಟರ್ ಉದ್ದದ ಮಣಿಯಂಪಾರೆ- ದೇರಡ್ಕ-ಶಿರಿಯ-ಕುರಡ್ಕ ರಸ್ತೆಯ ಕಾಮಗಾರಿಗೆ ಮಣಿಯಂಪಾರೆಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಚಾಲನೆ ನೀಡಿದರು.  ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಸ್ವಾಗತಿಸಿದರು.  ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಬ್ಲೋಕ್ ಪಂಚಾಯತ್ ಸದಸ್ಯರಾದ ಬಟ್ಟು ಶೆಟ್ಟಿ, ಅನಿಲ್ …

ಡ್ರೀಮ್ ಫ್ಲವರ್ ಐವಿಎಫ್ ಸೆಂಟರ್‌ನ ವಾರ್ಷಿಕ ನಾಳೆ

ಕಾಸರಗೋಡು: ಕಾಸರಗೋಡು ನಗರದ ಬ್ಯಾಂಕ್ ರಸ್ತೆ ಬಳಿ ಕಾರ್ಯ ವೆಸಗುತ್ತಿರುವ ಡ್ರೀಮ್ ಫ್ಲವರ್ ಐವಿಎಫ್ ಸೆಂಟರ್‌ನ ೧೨ನೇ ವಾರ್ಷಿ ಕ ಜನವರಿ ೧೪ರಂದು ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ.  ಸಂತಾನ ಭಾಗ್ಯ ಹೊಂದದ ದಂಪತಿಗಳಿಗೆ ಆ ಭಾಗ್ಯ ಲಭಿಸುವಂತೆ ಮಾಡುವಲ್ಲಿ ಈ ಕೇಂದ್ರ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಇದರಂತೆ ಕಳೆದ ೧೨ ವರ್ಷಗಳಲ್ಲಿ ೬೦೦೦ದಷ್ಟು ದಂಪತಿಗೆ ಸೂಕ್ತ ಚಿಕಿತ್ಸೆ ಕೊಡುವ ಮೂಲಕ ಅವರಿಗೆ ಸಂತಾನ ಭಾಗ್ಯ ಒದಗಿಸಿದೆ. ಅದರಿಂದಾಗಿ ೧೨ನೇ ವಾರ್ಷಿಕೋ ತ್ಸವ ದಿನದಂದು …

ಪುತ್ತಿಗೆ ಕ್ಷೇತ್ರದಲ್ಲಿ ಮಕರಸಂಕ್ರಮಣ ಮಹೋತ್ಸವ

ಪುತ್ತಿಗೆ: ಪುತ್ತಿಗೆ ಶ್ರೀ ಕಿನ್ನಿಮಾಣಿ ದೈವ ಹಾಗೂ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಕರಸಂಕ್ರಮಣ ಮಹೋತ್ಸವ ಇಂದಿನಿಂದ  ೧೫ರ ವರೆಗೆ ಜರಗಲಿದೆ. ಇಂದು ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಗಣಪತಿ ಪೂಜೆ,ರಾತ್ರಿ ೭.೩೦ಕ್ಕೆ ಅತ್ತಾಳಪೂಜೆ ನಡೆಯಲಿದೆ. ನಾಳೆ ಬೆಳಿಗ್ಗೆ ೬.೩೦ಕ್ಕೆ ಉಷಃಪೂಜೆ, ಗಣಪತಿಹವನ, ೧೦ಕ್ಕೆ ನವಕಾಭಿಷೇಕ, ತುಲಾಭಾರಸೇವೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ೧ ಗಂಟೆಗೆ ಯಕ್ಷಗಾನ ತಾಳಮದ್ದಳ,ಸಂಜೆ ೬ಕ್ಕೆ ದೀಪಾರಾಧನೆ, ತಾಯಂಬಕ, ೬.೩೦ರಿಂದ ಎಸ್‌ಕೆಎಸ್ ಸ್ವರ ಸಂಗಮ ಪುತ್ತಿಗೆ ಇವರಿಂದ ಭಕ್ತಿರಸಮಂಜರಿ, ರಾತ್ರಿ ೭.೩೦ಕ್ಕೆ ಮಹಾಪೂಜೆ, ಶ್ರೀ ದೇವರ …

ಬೆಳ್ಳೂರು ಲಕ್ಷದೀಪೋತ್ಸವ ಎಳ್ಳೆಣ್ಣೆ ಸಮರ್ಪಣಾ ಯಜ್ಞ ನಾಳೆ

ಬೆಳ್ಳೂರು: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಈ ತಿಂಗಳ ೨೨ರಂದು ನಡೆಯಲಿರು ವಂತೆ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ನಾಳೆ ಬೆಳಿಗ್ಗೆ ೧೧ ಗಂಟೆಗೆ ಬೆಳ್ಳೂರು ಕ್ಷೇತ್ರದಲ್ಲಿ ಎಳ್ಳೆಣ್ಣೆ ಸಮರ್ಪಣಾ ಯಜ್ಞ ಆರಂಭಗೊಳ್ಳಲಿದೆ. ಭಕ್ತರಿಗೆ ೨೨ರವರೆಗೆ ಎಳ್ಳೆಣ್ಣೆ ಸಮರ್ಪಿಸಬಹುದೆಂದು, ಎಳ್ಳೆಣ್ಣೆ ದೇವಸ್ಥಾನದಲ್ಲೇ ಲಭ್ಯವಿದ್ದು,  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಸಂಬಂಧಪಟ್ಟವರು ತಿಳಿಸಿದ್ದಾರೆ.

ನೋಂದಾವಣೆ ಸೇವೆಗಳು ಇನ್ನು ಸಂಪೂರ್ಣ ಡಿಜಿಟಲೈಸೇಷನ್

ಕಾಸರಗೋಡು: ಜಿಲ್ಲೆಯಲ್ಲಿ ೯ ಸಬ್ ರಿಜಿಸ್ಟ್ರಾರ್ ಕಚೇರಿಗಳು, ಜಿಲ್ಲಾ ರಿಜಿಸ್ಟ್ರಾರ್ ಕಚೇರಿ ಸೋಮವಾರದಿಂದ ಸಂಪೂರ್ಣ ಡಿಜಿಟಲೈಸೇಷನ್ ಆಗಲಿದೆ. ಪ್ರಮಾಣಪತ್ರಗಳು, ದಾಖಲೆ ಗಳನ್ನು ಡಿಜಿಟಲೈಸೇಷನ್ ನಡೆಸಿ ಅದರ ಪ್ರತಿಗಳು ಇನ್ನು ಪೂರ್ಣ ವಾಗಿ ಆನ್‌ಲೈನ್ ಮೂಲಕ ಲಭ್ಯಗೊಳಿಸಲಾಗುವುದು.  ಆಧಾರ ನಷ್ಟಗೊಂಡವರಿಗೂ, ಸಾಲಕ್ಕೆ ಬ್ಯಾಂಕ್ ಗಳಿಗೆ ಸಲ್ಲಿಸಬೇಕಾದ ದಾಖಲೆಗಳಿಗೆ, ರೀ ಸರ್ವೇ, ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳಿಗೆ ಆಧಾ ರದ ಪ್ರತಿ ಅಗತ್ಯವಿದೆ. ಡಿಜಿಟ ಲೈಸೇಷನ್ ಜ್ಯಾರಿಗೆ ಬಂದ ಬಳಿಕ ಅಗತ್ಯವಿರುವವರಿಗೆ ದಾಖಲೆ ಗಳನ್ನು ಆನ್‌ಲೈನ್‌ನಲ್ಲಿ ನೀಡಲಾ ಗುವುದು. ಇದರಿಂದ …

ರಾಜ್ಯಪಾಲರ ವಿರುದ್ಧ ಸಿಪಿಐ ವಿಚಾರಗೋಷ್ಠಿ ನಾಳೆ

ಕಾಸರಗೋಡು: ಪಾರ್ಲಿಮೆಂಟರಿ ವ್ಯವಸ್ಥೆ ರಾಜಕೀಯಕ್ಕೆ ಬಳಸುವ ರಾಜ್ಯಪಾಲರ ವಿರುದ್ಧ ಸಿಪಿಐ ಜಿಲ್ಲಾ ಕೌನ್ಸಿಲ್ ನೇತೃತ್ವದಲ್ಲಿ ವಿಚಾರಗೋಷ್ಠಿ ನಾಳೆ ನಡೆಯಲಿದೆ. ಕಾಞಂಗಾಡ್ ಮೇಲಾಂಗೋಟ್‌ನಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ನಾಳೆ ಅಪರಾಹ್ನ ೨ ಗಂಟೆಗೆ ನಡೆಯುವ ವಿಚಾರಗೋಷ್ಠಿಯನ್ನು ಸಿಪಿಐ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ ಕೆ. ಪ್ರಕಾಶ್‌ಬಾಬು ಉದ್ಘಾಟಿಸು ವರು. ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.

ವಾಂತಿಚ್ಚಾಲಿನಲ್ಲಿ ಧರ್ಮಕೋಲೋತ್ಸವ ೨೧ರಂದು

ಬದಿಯಡ್ಕ: ವಾಂತಿಚ್ಚಾಲು- ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಧರ್ಮಕೋಲೋ ತ್ಸವ ಈ ತಿಂಗಳ ೨೧ರಂದು ನಡೆಯಲಿದೆ. ಅಂದು ಪ್ರಾತಃಕಾಲ ೬ ಗಂಟೆಗೆ ದೀಪ ಪ್ರತಿಷ್ಠೆ, ೬.೨೫ಕ್ಕೆ ಶ್ರೀ ದೈವದ ಬಂಡಾರ ಇಳಿಯುವುದು, ೬.೩೦ಕ್ಕೆ ಮಹಾಗಣಪತಿ ಹೋಮ, ೭.೩೦ಕ್ಕೆ ಅಷ್ಟೋತ್ತರ ಶತ ಸೀಯಾಳಾಭಿಷೇಕ, ೮ ಗಂಟೆಗೆ ಶ್ರೀ ಕಿನ್ನಿಮಾಣಿ ಪೂಮಾಣಿ ಮಹಿಳಾ ಭಜನಾ ಸಂಘ ಶೇಣಿ ಇವರಿಂದ ಭಜನೆ, ೮.೩೦ಕ್ಕೆ ಕ್ಷೀರಾಭಿಷೇಕ, ೯ಕ್ಕೆ ಕುಣಿತ ಭಜನೆ, ೯.೧೫ಕ್ಕೆ ತಂಬಿಲ, ೧೦.೩೦ಕ್ಕೆ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲ …

ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ: ಎನ್.ಐ.ಎ ತಂಡ ಕಾಸರಗೋಡಿಗೆ ಆರೋಪಿಯ ಗುರುತು ಹಚ್ಚುವ ಪರೇಡ್ ಮುಂದಿನವಾರ

ಕಾಸರಗೋಡು: ಕೋಮು ದ್ವೇಷದಿಂದ ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್‌ರ ಕೈ ತುಂಡರಿಸಿದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಸರಗೋಡಿಗೆ ವಿಸ್ತರಿಸಿದೆ.  ಇದರಂತೆ ಎನ್‌ಐಎ ಅಧಿಕಾರಿಗಳು    ಕಾಸರಗೋಡಿಗೆ ಆಗಮಿಸಿದ್ದಾರೆ.   ಪ್ರಾಧ್ಯಾಪಕನ  ಕೈ ತುಂಡರಿಸಿದ ಪ್ರಕರಣದಲ್ಲಿ  ಸೆರೆಗೀಡಾದ   ಒಂದನೇ ಆರೋಪಿ ಹಾಗೂ ಅದರ ಪ್ರಧಾನ ಸೂತ್ರಧಾರನೂ ಆಗಿರುವ ನಿಷೇಧಿತ ಪೋಪುಲರ್ ಫ್ರಂಟ್  ಕಾರ್ಯಕರ್ತ ಎರ್ನಾಕುಳಂ ಪೆರುಂಬಾವೂರು ಅಶವನ್ನೂರು ನ್ಯುಲೇಲಿ ನಿವಾಸಿ  ಮುಟ್ಟಶ್ಶೇರಿ  ಸವಾದ್ (೩೮) ಎಂಬಾತನ ಕುರಿತಾಗಿ ತನಿಖೆಯ ಭಾಗವಾಗಿ ಎನ್‌ಐಎ ತಂಡ …

ಹಲವು ಪ್ರಕರಣಗಳ ಆರೋಪಿ ಕಾಪಾ ಪ್ರಕಾರ ಬಂಧನ

ಕಾಸರಗೋಡು: ಹಲವು ಪ್ರಕರಣಗಳ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ. ಅಣಂಗೂರು ಕೊಲ್ಲಂಪಾಡಿ ಹೌಸ್‌ನ ಶಾನವಾಸ್ ಅಲಿಯಾಸ್ ಶಾನು (೩೬) ಬಂಧಿತ ಆರೋಪಿ. ಈತನನ್ನು ಆತನ ಮನೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನ ವಿರುದ್ಧ ಕಾಸರಗೋಡು ಮತ್ತು ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಾಗಿ ಹಲವು ಪ್ರಕರಣಗಳಿವೆ. ಅಪಹರಣ, ಕೊಲೆಯತ್ನ, ಹಲ್ಲೆನಡೆಸಿ ಗಂಭೀರ ಗಾಯಗೊಳಿಸುವಿಕೆ, ಗಾಂಜಾ  ಇತ್ಯಾದಿ ಪ್ರಕರಣಗಳಲ್ಲಿ ಈತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಬಳಿಕ ಕಣ್ಣೂರು ಸೆಂಟ್ರಲ್ …