೧೧ ಪ್ರಕರಣಗಳ ಆರೋಪಿ ಕಾಪಾ ಪ್ರಕಾರ ಸೆರೆ

ಕಾಸರಗೋಡು: ೧೧ ಪ್ರಕರಣಗಳಲ್ಲಿ ಆರೋಪಿಯಾದ  ಯುವಕನನ್ನು ಕಾಪಾ ಕಾಯ್ದೆ ಪ್ರಕಾರ ಬಂಧಿಸಲಾಗಿದೆ. ವಲಿಯಪರಂಬ  ಪಾರಕ್ಕಡವತ್ ಹೌಸ್‌ನ ಪಿ.ಕೆ. ನಸೀರ್ (೩೮) ಎಂಬಾತನನ್ನು ಕಾಞಂಗಾಡ್ ಡಿವೈಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ, ನೀಲೇಶ್ವರ. ತಿರೂರು, ಚಂದೇರ ಎಂಬೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು, ಮದ್ಯ ಮಾರಾಟ, ಹೊಡೆದಾಟ, ವಂಚನೆ, ಮಹಿಳೆಯರ ವಿರುದ್ಧ ಅತಿಕ್ರಮಣ ಸಹಿತ ೧೧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್‌ರ …

ಪತ್ನಿಯ ತಲೆಗೆ ಹೊಡೆದು ಕೊಲೆಗೆ ಯತ್ನ: ಆರೋಪಿ ಸೆರೆ

ಕಾಸರಗೋಡು:  ಪತ್ನಿಯ ತಲೆಗೆ  ಮರದ  ಬೆತ್ತದಿಂದ   ಹೊಡೆದು  ಕೊಲೆಗೈಯ್ಯಲು ಯತ್ನಿಸಿದ ಸಹಿತ ಎಂಟರಷ್ಟು ಪ್ರಕರಣಗಳಲ್ಲಿ ಆರೋಪಿ ಯಾದ  ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನುಳ್ಳಿಪ್ಪಾಡಿಯ  ಎನ್. ಮಣಿ (೪೦) ಎಂಬಾತನನ್ನು ಎಸ್‌ಐ ಕೆ.ಪಿ. ವಿನೋದ್ ಕುಮಾರ್ ನೇತೃ ತ್ವದಲ್ಲಿ ಬಂಧಿಸಲಾಗಿದೆ. ೨೦೨೨ರಲ್ಲಿ  ಪತ್ನಿ ಸುನಿತರಿಗೆ ಮರದ ಬೆತ್ತದಿಂದ ತಲೆಗೆ ಹೊಡೆದು ಗಂಭೀರಗಾ ಯಗೊಳಿಸಿದ ಆರೋಪದಂತೆ  ಈತನ ವಿರುದ್ಧ ನರಹತ್ಯಾಯತ್ನಕ್ಕೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.  ಮಣಿ ವಿರುದ್ಧ ಇನ್ನೂ ಎಂಟರಷ್ಟು ಪ್ರಕರಣಗ ಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಲಂಚ ಸ್ವೀಕಾರ ದೂರು: ಬಂಧಿತ ಪ್ರೊಫೆಸರ್‌ಗೆ ನ್ಯಾಯಾಂಗ ಬಂಧನ, ಸೇವೆಯಿಂದ ಅಮಾನತು

ಕಾಸರಗೋಡು: ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಅಧ್ಯಾಪಕ ನೇಮಿಸುವ ಒಪ್ಪಂದದ ನವೀಕರಣೆ ಹಾಗೂ ಪಿಎಚ್‌ಡಿಗೆ ಪ್ರವೇಶ ಖಾತರಿಪಡಿಸುವ ಹೆಸರಲ್ಲಿ ಲಂಚ ಸ್ವೀಕರಿಸಿದ ಆರೋಪದಂತೆ ವಿಜಿಲೆನ್ಸ್ ತಂಡದಿಂದ ಬಂಧಿತರಾದ ಪ್ರಸ್ತುತ ವಿಶ್ವವಿದ್ಯಾಲ ಯದ ಪ್ರಾಧ್ಯಾಪಕ ಪ್ರೊಫೆಸರ್ ಎ.ಕೆ. ಮೋಹನ್‌ರನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಮೋಹನ್‌ರನ್ನು ವಿಜಿಲೆನ್ಸ್ ತಂಡ ನಿನ್ನೆ ತಲಶ್ಶೇರಿ ವಿಜಿಲೆನ್ಸ್ ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶ ಪ್ರಕಾರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಲಂಚ ಆರೋಪಕ್ಕೆ ಸಂಬಂಧಿಸಿ ಬಂಧಿತರಾದ ಹಿನ್ನೆಲೆಯಲ್ಲಿ ಪ್ರೊ. ಮೋಹನನ್‌ರನ್ನು ಕೇಂದ್ರೀಯ ವಿಶ್ವ …

ಮಾದಕಪದಾರ್ಥ ಮೆಥಾಫಿಟಾಮಿನ್ ಸಹಿತ ಓರ್ವ ಸೆರೆ

ಕಾಸರಗೋಡು: ಕಣ್ಣೂರು ಎಕ್ಸೈಸ್ ಎನ್‌ಫೋರ್ಸ್ ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಇನ್‌ಸ್ಪೆಕ್ಟರ್ ಶಾಜು ಹಾಗೂ ತಂಡ ೧೩೪.೧೭೮ ಗ್ರಾಂ ಮೆತಾ ಫಿಟಾಮಿನ್ ಮಾದಕ ಪದಾರ್ಥ ವನ್ನು ವಶಪಡಿಸಿದೆ. ಪಯ್ಯಾಂ ಬಲಂ ಬೀಚ್‌ಗೆ ತೆರಳುವ   ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಮಾದಕಪದಾರ್ಥ ಸಾಗಾಟ ಪತ್ತೆಯಾಗಿದೆ. ಆರೋ ಪಿಗಳಾದ ಕಣ್ಣೂರ ಎಡಕ್ಕಾಡ್ ಮುಹಮ್ಮದ್ ಶರೀಫ್ ಸಿ ಎಚ್ (೩೪) ನನ್ನು ಸೆರೆಹಿಡಿಯಲಾಗಿದೆ. ಈತನ ಬೈಕ್‌ನ್ನು ವಶಪಡಿಸಲಾಗಿದೆ. ಆರೋಪಿ ಈ ಮೊದಲು ಮಾದಕಪದಾರ್ಥ ಸಾಗಾಟ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. …

ನಕಲಿ ಪಾಸ್‌ಪೋರ್ಟ್ ವಾರಂಟ್:  ಆರೋಪಿ ೧೮ ವರ್ಷಗಳ ಬಳಿಕ ಸೆರೆ

ಕಾಸರಗೋಡು: ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಆರೋಪಿಯಾಗಿ ಸಕಾಲದಲ್ಲಿ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ. ವಿನೋದ್ ಕುಮಾರ್ ೧೮ ವರ್ಷ ಬಳಿಕ  ಬಂಧಿಸಿದ್ದಾರೆ.  ಮಧೂರು ಹಿದಾಯತ್‌ನಗರದ ಕುರುಂತ್ತೋಡಿಯ ಕೆ.ಎಂ. ಶೌಕತ್ತಲಿ (೪೫) ಬಂಧಿತ ಆರೋಪಿಯ ಈತನನ್ನು ಬಳಿಕ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಬದಿಯಡ್ಕ ಅಬಕಾರಿ ರೇಂಜ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ರ ನೇತೃತ್ವದ ತಂಡ ಅಡೂರು ಅತ್ತನಾಡಿ ಶಿವಾಜಿ ನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಎಂಎಲ್‌ನ ೨೨ ಪ್ಯಾಕೆಟ್ (೩.೯೬ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ಅಡೂರು ಬೆಳ್ಳಚ್ಚೇರಿಯ ಸುಕುಮಾರನ್ (೩೨) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿಇಒಗಳಾದ ಮನೋಜ್ ಪಿ, ಮೋಹನ್ ಕುಮಾರ್, ವಿನೋದ್ ಕೆ, ಸಬಿತ್‌ಲಾಲ್, ಸದಾನಂದನ್, ಮತ್ತು ಚಾಲಕ ರಾಧಾಕೃಷ್ಣನ್ ಎಂಬವರು ಒಳಗೊಂಡಿದ್ದಾರೆ. ಇದೇ …

ಹೆದ್ದಾರಿ ಅಭಿವೃದ್ಧಿ: ಬಂದ್ಯೋಡ್‌ನಲ್ಲಿ ಕಾಮಗಾರಿ ಪ್ರಗತಿಯಲ್ಲಿ

ಉಪ್ಪಳ: ತಲಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಬಂದ್ಯೋಡಿನಲ್ಲಿ ಹೆದ್ದಾರಿಯನ್ನು ಅಗೆದು ತೆಗೆಯಲಾಗಿದೆ. ಹೊಸಂಗಡಿ ಹಾಗೂ ಬಂದ್ಯೋಡ್‌ನಲ್ಲಿ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಕೆಳಸ್ತರದಲ್ಲಿ ಸಾಗುತ್ತಿದ್ದು, ಇಲ್ಲಿ ಹೊಂಡ ತೆಗೆಯಲಾಗುತ್ತಿದೆ. ಸುಮಾರು ಒಂದು ಕಿಲೋ ಮೀಟರ್‌ನೊಳಗೆ ಹೊಂಡ ತೆಗೆಯಲಾಗುತ್ತಿದೆ. ಸರ್ವೀಸ್ ರಸ್ತೆಗೆ ಸೇತುವೆ ನಿರ್ಮಾಣವಾಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪಾಡಿಯಿಂದ ಚೆಂಗಳದವರೆಗೆ ಎಂಟು ಸೇತುವೆಗಳು, ಎರಡು ಫ್ಲೈಓವರ್ ನಿರ್ಮಾಣವಾಗಲಿದೆ. ಇದರಲ್ಲಿ ಪೊಸೋಟು, ಕುಕ್ಕಾರ್, ಕುಂಬಳೆ ಸೇತುವೆ ಕಾಮಗಾರಿ ಪೂರ್ತಿಗೊಂಡಿದೆ. ಹೆಚ್ಚಿನ ಕಡೆಗಳಲ್ಲಿ ಸರ್ವೀಸ್ ರಸ್ತೆಯ ಕೆಲಸವೂ …

ಕೆವಿವಿಇಎಸ್‌ನ ವ್ಯಾಪಾರ ಸಂರಕ್ಷಣಾ ಜಾಥಾ ೨೯ರಂದು ಕಾಸರಗೋಡಿನಿಂದ

ಕಾಸರಗೋಡು: ವ್ಯಾಪಾರ ರಂಗದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ  ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೇತೃತ್ವದಲ್ಲಿ ಚಳವಳಿಗೆ ನಿರ್ಧರಿಸಲಾಗಿದೆ. ಇದರ ಅಂಗವಾಗಿ ಈ ತಿಂಗಳ ೨೯ರಂದು ಕಾಸರಗೋ ಡಿನಿಂದ ತಿರುವನಂತಪುರಕ್ಕೆ ವ್ಯಾಪಾರ ಸಂರಕ್ಷಣಾ ಜಾಥಾ ನಡೆಸುವುದಾಗಿ ರಾಜ್ಯ ಅಧ್ಯಕ್ಷ  ರಾಜು ಅಪ್ಸರ ತೃಶೂ ರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಾಥಾ ತಿರುವನಂತಪುರಕ್ಕೆ ತಲುಪುವ ಫೆಬ್ರವರಿ ೧೫ರಂದು ರಾಜ್ಯ ವ್ಯಾಪಕವಾಗಿ ಅಂಗಡಿಗಳನ್ನು  ಮುಚ್ಚಿ ಚಳವಳಿ ನಡೆಸಲಾಗುವುದು. ಕೇಂದ್ರ-ರಾಜ್ಯ ಸರಕಾರಗಳ ವ್ಯಾಪಾರ ನೀತಿಗಳಿಂದ ಕಿರು ವ್ಯಾಪಾರಿಗಳು ಸಂದಿಗ್ಧತೆಗೀಡಾಗಿದ್ದಾರೆ. ಕಾರ್ಪರೇಟ್‌ಗಳಿಗೆ  ಮಾತ್ರ ಅನುಕೂಲವಾಗುವ …

ಶ್ರೀ ಕೃಷ್ಣ ಭಜನಾ ಸಂಘದ ವತಿಯಿಂದ ಅಖಂಡ ಭಜನಾ ಸಪ್ತಾಹ ಪ್ರಯುಕ್ತ ಮನೆ ಮನೆ ಭಜನೆ

ಮಂಗಲ್ಪಾಡಿ: ಕೃಷ್ಣನಗರ ಶ್ರೀ ಕೃಷ್ಣ ಭಜನಾ ಸಂಘ ಇದರ ವತಿಯಿಂದ ನಡೆಯಲಿರುವ ಅಖಂಡ ಭಜನಾ ಸಪ್ತಾಹದ ಪ್ರಯುಕ್ತ ಮನೆ ಮನೆ ಭಜನೆ ಕಳೆದ ಒಂದು ವಾರದಿಂದ ನಡೆಯು ತ್ತಿದೆ. ನಿನ್ನೆ ರಾತ್ರಿ ಪ್ರತಾಪನಗರದ ಮನೆಗಳಲ್ಲಿ ಭಜನೆ ನಡೆಯಿತು. ಮಂಗಳವಾರದAದು ಮನೆ ಮನೆ ಭಜನೆ ಮುಕ್ತಾಯಗೊಂಡು ಈ ತಿಂಗಳ 18ರಿಂದ 26ರ ತನಕ ಅಖಂಡ ಭಜನಾ ಸಪ್ತಾಹ ಪ್ರಾರಂಭಗೊಳ್ಳಲಿದೆ.

ಅಧ್ಯಾಪಕನ ಕೈ ಕಡಿದ ಆರೋಪಿ ಬಗ್ಗೆ ಹೆಚ್ಚಿನ ತನಿಖೆಗೆ ಬಿಜೆಪಿ ಆಗ್ರಹ

ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಮಾಸಿಕ ಸಭೆ ಮೀಯಪದವಿನಲ್ಲಿ ಜರಗಿತು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಉದ್ಘಾಟಿಸಿದರು. ತೊಡುಪುಳ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಟಿ.ಜೆ. ಜೋಸೆಫ್‌ರ ಕೈ ಕಡಿದ ಆರೋಪಿ ಕೇರಳ ಪೊಲೀಸರ ಕಣ್ತಪ್ಪಿಸಿ ಮಂಜೇಶ್ವರದಲ್ಲಿ ವಾಸಿಸಿ, ಇಲ್ಲಿಂದ ವಿವಾಹವಾಗಿ, ನಕಲಿ ದಾಖಲೆ ಸೃಷ್ಟಿಸಿದಾಗಲೂ ಕೇರಳ ಪೊಲೀಸರ ಏನು ಮಾಡುತ್ತಿದ್ದರೆಂದು  ಬಿಜೆಪಿ ಪ್ರಶ್ನಿಸಿದೆ. ಆರೋಪಿಗೆ  ಹೆಣ್ಣು ಕೊಟ್ಟ ಮನೆಯವರನ್ನು,  ಸಂರಕ್ಷಣೆ ನೀಡಿದವರನ್ನು, ವಾಸಿಸಲು ಸಹಾಯ ಮಾಡಿದವರನ್ನು ತನಿಖೆಗೊಳಪಡಿ ಬೇಕೆಂದು …