ಜಿಲ್ಲೆಯ ಹಲವು ಕಡೆ ಕಾಲ್ನಡೆ ಪ್ರಯಾಣಿಕರಿಗೆ ರಸ್ತೆ ದಾಟಲು ಅಸೌಕರ್ಯ: ಫೂಟ್ ಓವರ್ ಬ್ರಿಡ್ಜ್‌ಗೆ ಬಿಜೆಪಿ ಮನವಿ

ಮಂಜೇಶ್ವರ: ಜಿಲ್ಲೆಯ ಹಲವು ಕಡೆಗಳಲ್ಲಿ ಕಾಲ್ನಡೆ ಸಂಚಾರಿಗಳಿಗೆ ರಸ್ತೆ ದಾಟಲು ಅಸೌಕರ್ಯವಿರುವು ದನ್ನು ಮನಗಂಡು ಬಿಜೆಪಿ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದೆ. ಕಾಸರಗೋಡು ಅಡ್ಕತ್ತಬೈಲು, ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತೀ ಕ್ಷೇತ್ರ ಬಳಿ, ಬಂಗ್ರಮಂಜೇಶ್ವರದಲ್ಲಿ ರಸ್ತೆ ಅಡ್ಡದಾಟಲು ಸಮಸ್ಯೆಯಿದ್ದು, ಇಲ್ಲಿ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಂಡದಲ್ಲಿ ಬಿಜೆಪಿ ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯಾ ರೈ, ಮಂಗಳೂರು ಸಂಸದ ಬ್ರಿಜೇಶ್ …

ಪಾಲಕ್ಕಾಡ್ ವಿಭಾಗೀಯ ರೈಲ್ವೇ ಅಧಿಕಾರಿ ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ

ಮಂಜೇಶ್ವರ: ಪಾಲಕ್ಕಾಡ್ ವಿಭಾಗೀಯ ರೈಲ್ವೇ ಅಧಿಕಾರಿ ಮಧುಕರ್ ರಾವತ್, ಎಡಿಆರ್‌ಎಂ ಜಯಕೃಷ್ಣನ್ ನಿನ್ನೆ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ತಲುಪಿ ಅಭಿವೃದ್ಧಿ ಬಗ್ಗೆ ಅವಲೋಕನ ನಡೆಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಹರಿಶ್ಚಂದ್ರ ಮಂಜೇಶ್ವರ ಉಪಸ್ಥಿತರಿದ್ದರು. ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಅಧಿಕಾರಿಗಳಿಗೆ ಬಿಜೆಪಿ ಮುಖಂಡರು ಮನವಿ ನೀಡಿದರು. ಹೊಸಂಗಡಿ ರೈಲ್ವೇ ಸೇತುವೆ, ಹೊಸಬೆಟ್ಟು ಕ್ರಾಸಿಂಗ್, ಶಾಪಿಂಗ್ ಕಟ್ಟಡ, ಪಾರ್ಕ್ ಹಾಗೂ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಸ್ವಯಂಚಾಲಿತ ಲಿಫ್ಟ್ ಸ್ಥಾಪಿಸಲು, ವಿವಿಧ ರೈಲುಗಳು ಮಂಜೇಶ್ವರದಲ್ಲಿ …

ಜಿಲ್ಲೆಯ ಕಾನೂನು, ಸುವ್ಯವಸ್ಥೆಯನ್ನು ಖಾತರಿಪಡಿಸಬೇಕು- ಬಿಜೆಪಿ

ಕಾಸರಗೋಡು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಖಾತರಿಪಡಿ ಸಬೇಕು ಮಾತ್ರವಲ್ಲದೆ ಮುಂದೆ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಅಗತ್ಯದ ಎಲ್ಲಾ ಪೂರ್ವಭಾವಿ ಭದ್ರತಾ ಕ್ರಮಗಳನ್ನು ಈಗಲೇ ಆರಂಭಿಸಬೇಕಾಗಿದೆ ಎಂದು  ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರಾವಡ ಎ. ಚಂದ್ರಶೇಖರನ್ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ. ನಿನ್ನೆ ಕಾಸರಗೋಡಿಗೆ ಆಗಮಿಸಿದ ಅವರು ಎಸ್.ಪಿ. ಕಚೇರಿಯಲ್ಲಿ ಕರೆದ ಜಿಲ್ಲೆಯ ವರಿಷ್ಠ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಈ ನಿರ್ದೇಶ ನೀಡಿದ್ದಾರೆ.

ಎನ್‌ಟಿಯುನಿಂದ ರಾಮಾಯಣ ಮಾಸಾಚರಣೆ, ವನಿತಾ ಸಂಗಮ 9ರಂದು

ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ವನಿತಾ ವಿಭಾಗ ಇದರ ಆಶ್ರಯದಲ್ಲಿ ವನಿತಾ ಸಂಗಮ, ರಾಮಾಯಣ ಮಾಸಾಚರಣೆ ಈ ತಿಂಗಳ 9ರಂದು ಬೆಳಿಗ್ಗೆ 10 ಗಂಟೆಗೆ ಕೂಡ್ಲು ಎನ್‌ಟಿಯು ಕಾರ್ಯಾಲಯದಲ್ಲಿ ನಡೆಯಲಿದೆ. ಮಧೂರು ಪಂ. ಸದಸ್ಯೆ ರಾಧಾ ಉದ್ಘಾ ಟಿಸುವರು. ಸಾಮಾಜಿಕ ಕಾರ್ಯಕರ್ತ ಮುರಳೀಧರ ಯಾದವ್ ನಾಯ್ಕಾಪು ಮಾತನಾಡುವರು. ವನಿತಾ ವಿಭಾಗದ ಸಂಚಾಲಕಿ ದಿವ್ಯಾ ಕದ್ರಿ ಅಧ್ಯಕ್ಷತೆ ವಹಿಸುವರು. ಎನ್‌ಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣನ್ ಟಿ, ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭಾಕರನ್ ನಾಯರ್ ಶುಭ ಕೋರುವರು. …

ಇರಿಯಣ್ಣಿ ಪರಿಸರದಲ್ಲಿ ಮತ್ತೆ ಆತಂಕ: ಗೂಡಿನಲ್ಲಿದ್ದ ಜರ್ಮನ್ ಶಫರ್ಡ್ ನಾಯಿ ಚಿರತೆ ದಾಳಿಗೆ ಬಲಿ

ಬೋವಿಕ್ಕಾನ: ಅಲ್ಪ ದಿನಗಳ ಬಿಡುವಿನ ಬಳಿಕ ಮುಳಿಯಾರು ಪಂಚಾಯತ್‌ನ ಇರಿಯಣ್ಣಿಯಲ್ಲಿ ಮತ್ತೆ ಚಿರತೆಯ ದಾಳಿ ನಡೆದಿದೆ. ಇಂದು ಮುಂಜಾನೆ ೩ ಗಂಟೆ ವೇಳೆ ಮನೆ ಅಂಗಳಕ್ಕೆ ತಲುಪಿದ ಚಿರತೆ  ಸಾಕು ನಾಯಿಯನ್ನು  ಕೊಂದು ಕೊಂಡೊಯ್ದಿದೆ.  ಇರಿಯಣ್ಣಿ ಬಳಿಯ ಓಲತ್ತುಕಯ ನಿವಾಸಿ ಗೋಪಾಲನ್ ನಾಯರ್‌ರ ೪ ವರ್ಷ ಪ್ರಾಯದ ಜರ್ಮನ್ ಶಫಾರ್ಡ್ ವಿಭಾಗಕ್ಕೊಳ ಪಟ್ಟ ನಾಯಿ ಚಿರತೆಗೆ ಬಲಿಯಾಗಿದೆ.  ಕಬ್ಬಿಣದ ಗೂಡನ್ನು ಕೆಡಹಿದ ಬಳಿಕ ನಾಯಿಯನ್ನು ಚಿರತೆ ಹಿಡಿದಿದೆ.  ಇಂದು ಮುಂಜಾನೆ 3 ಗಂಟೆ ವೇಳೆ ಈ ಘಟನೆ …

ಮನೆಗೆ ನುಗ್ಗಿ ಕಿಟಿಕಿ ಗಾಜು ಹಾನಿ: ನೆರೆಮನೆ ನಿವಾಸಿ ವಿರುದ್ಧ ಕೇಸು

ಬದಿಯಡ್ಕ: ಮನೆಗೆ ಅತಿಕ್ರಮಿಸಿ ನುಗ್ಗಿ ಕಿಟಿಕಿಯ ಗಾಜನ್ನು ಹಾನಿಗೊಳಿಸಿದ ಬಗ್ಗೆ ದೂರಲಾಗಿದೆ. ನೆರೆಮನೆ ನಿವಾಸಿಯಾದ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಂಬ್ಡಾಜೆ ಎರಡನೇ ಮೈಲ್ ತೊಟ್ಟಿ ಎಂಬಲ್ಲಿನ ಕೆ. ಅಭಿಲಾಷ್‌ರ ಮನೆಗೆ  ಸೋಮವಾರ ರಾತ್ರಿ 11.30 ರ ವೇಳೆ ಆಕ್ರಮಣ ನಡೆದಿದೆ. ನೆರೆಮನೆ ನಿವಾಸಿ ಪ್ರಶಾಂತ್ ಅಲಿಯಾಸ್ ಕುಟ್ರು(29) ಮರದ ಸಲಾಕೆಯೊಂದಿಗೆ ಮನೆಗೆ ನುಗ್ಗಿ ಕಿಟಿಕಿ ಗಾಜನ್ನು ಹೊಡೆದು ಹಾನಿಗೊಳಿಸಿರುವುದಾಗಿ ದೂರಲಾಗಿದೆ. ಪತ್ನಿಗೆ ಉಪಟಳ ನೀಡಿದ ಬಗ್ಗೆ ಪ್ರಶಾಂತ್ ವಿರುದ್ಧ ಅಭಿಲಾಷ್ ಪೊಲೀಸರಿಗೆ ದೂರು …

ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಬಂದಡ್ಕ: ಯುವಕನೋರ್ವ ಮನೆಯ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಂಡಂಗುಳಿ ವ್ಯಾಪಾರಿ ಭವನ ಸಮೀಪದ ಇಬ್ರಾಹಿಂರ ಪುತ್ರ ಮಜೀದ್ (37) ಮೃತಪಟ್ಟವರು. ಕುಂಡಂಗುಳಿಯಲ್ಲಿ ಚಾಲಕರಾಗಿದ್ದರು. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದೆ. ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ತಂದೆ ಹೊರಗೆ ಬಂದು ನೋಡಿದ್ದು, ಪುತ್ರ ಬಾವಿಗೆ ಬಿದ್ದಿರಬೇಕೆಂದು ಅವರು ಶಂಕೆ ವ್ಯಕ್ತಪಡಿಸಿದರು. ಬಳಿಕ ಸ್ಥಳೀಯರು ಹಾಗೂ ಕುತ್ತಿಕ್ಕೋಲು ಅಗ್ನಿಶಾಮಕ ದಳ ತಲುಪಿ ಮಜೀದ್‌ರನ್ನು ಮೇಲೆತ್ತಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ …

ಕಾಸರಗೋಡಿನಲ್ಲಿ ಡಿಜಿಪಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ: ಮಾದಕವಸ್ತು, ಹೊಯ್ಗೆ ಮಾಫಿಯಾಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾಧ್ಯತೆ

ಕಾಸರಗೋಡು: ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿಜಿಪಿ ರವಾಡ ಚಂದ್ರಶೇಖರ್ ಇದೇ ಮೊದಲ ಬಾರಿಗೆ ಕಾಸರಗೋಡಿಗೆ ಆಗಮಿಸಿದ್ದಾರೆ. ನಿನ್ನೆ ಸಂಜೆ ತಲುಪಿದ ಅವರು ಪಿಲಿಕುಂಜೆಯ ಸರಕಾರಿ ಅತಿಥಿಗೃಹದಲ್ಲಿ ತಂಗಿದ್ದರು. ಇಂದು ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ಜಿಲ್ಲೆಯ ಡಿವೈಎಸ್ಪಿಗಳು  ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ  ಡಿಜಿಪಿ ಪಾಲ್ಗೊಳ್ಳಲಿದ್ದಾರೆ. ತ್ರಿಸ್ತರ ಪಂಚಾಯತ್ ಚುನಾವಣೆ  ಸಮೀಪಿಸಿದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ  ಕ್ರಮಗಳ ಬಗ್ಗೆ ಡಿಜಿಪಿ ಸಲಹೆ ಸೂಚನೆ ನೀಡುವರೆಂದು  ಹೇಳಲಾಗುತ್ತಿದೆ.   ಜಿಲ್ಲೆಯಲ್ಲಿ  ತೀವ್ರಗೊಂಡಿರುವ ಮಾದಕವಸ್ತು, …

ಪೊಲೀಸ್ ಜೀಪು ಸೇರಿ ಮೂರು ವಾಹನಗಳು ಪರಸ್ಪರ ಢಿಕ್ಕಿ: ಪಾದಚಾರಿ ಮಹಿಳೆ ಸಾವು; ಇಬ್ಬರಿಗೆ ಗಾಯ

ಕಾಸರಗೋಡು: ಪೊಲೀಸ್ ಜೀಪು ಸೇರಿ ಮೂರು ವಾಹನಗಳು ಪರಸ್ಪರ ಢಿಕ್ಕಿ ಹೊಡೆದು  ಆ ದಾರಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಪಡನ್ನಕ್ಕಾಡ್ ನೆಹರೂ ಕಾಲೇಜು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದಿದೆ. ಪಡನ್ನಕ್ಕಾಡ್ ಕರುವಿಳಂ ಪಿಳ್ಳೇರು ಪೀಡಿಗೆಯಿಲ್‌ನ ಮೊಹಮ್ಮದ್ ಶಫೀಕ್ ಎಂಬವರ ಪತ್ನಿ ಸುಹರಾ (48) ಸಾವನ್ನಪ್ಪಿದ ಮಹಿಳೆ. ಹೊಸದುರ್ಗ ಭಾಗದಿಂದ ಬರುತ್ತಿದ್ದ ಚೀಮೇನಿ ಪೊಲೀಸ್ ಠಾಣೆಯ ಜೀಪು ಎದುರುಗಡೆಯಿಂದ ಬರುತ್ತಿದ್ದ ವಾಹನಗಳಿಗೆ ಢಿಕ್ಕಿ ಹೊಡೆಯದಿರಲು  ಬದಿಗೆ ಸರಿಸಿದಾಗ ಆ ದಾರಿಯಾಗಿ ಬರುತ್ತಿದ್ದ ದ್ವಿಚಕ್ರ ವಾಹನ, …

ಮಾಜಿ ಶಾಸಕ ಎಂ. ನಾರಾಯಣನ್ ನಿಧನ

ಹೊಸದುರ್ಗ: ಸಿಪಿಐ ನೇತಾರ ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಡಿಕೈ ನಿವಾಸಿ ಎಂ. ನಾರಾಯಣನ್ (73) ನಿಧನ ಹೊಂದಿದರು.  ಇವರನ್ನು ಅಸೌಖ್ಯ ನಿಮಿತ್ತ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಅದು ಫಲಕಾರಿ ಯಾಗದೆ ನಿನ್ನೆ   ನಿಧನಹೊಂದಿದರು. 1991ರಿಂದ 2001ರ ತನಕ ಹೊಸದುರ್ಗ ವಿಧಾನಸಭಾ ಕ್ಷೇತ್ರ (ಈಗ ಕಾಞಂಗಾಡ್ ವಿಧಾನಸಭಾ ಕ್ಷೇತ್ರ)ದಲ್ಲಿ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. 2015ರಿಂದ 2020ರ ತನಕ ಕಾಸರಗೋಡು ಜಿಲ್ಲಾ ಪಂಚಾ ಯತ್‌ನ ಬೇಡಗಂ ಡಿವಿಶನ್‌ನಿಂದ …