ಯುವಕ ಮನೆಯೊಳಗೆ ನೇಣುಬಿಗಿದು ಸಾವು
ಉಪ್ಪಳ: ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿ ಯ ದಡ್ಡಂಗಡಿ ನಿವಾಸಿ ಗುಮ್ಮಣ್ಣ ಶೆಟ್ಟಿಗಾರ್ ಎಂಬವರ ಪುತ್ರ ಚರಣ್ ರಾಜ್ ಜಿ (35) ಮೃತಪಟ್ಟ ಯುವಕ. ಇವರು ನಿನ್ನೆ ರಾತ್ರಿ ಮನೆಯಲ್ಲಿ ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ 6.30ಕ್ಕೆ ಎಬ್ಬಿಸಲೆಂದು ತಾಯಿ ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿತ್ತು. ಕರೆದರೂ ಪ್ರತಿಕ್ರಿಯೆ ಉಂಟಾಗದ ಹಿನ್ನೆಲೆಯಲ್ಲಿ ಕಿಟಿಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಚರಣ್‌ರಾಜ್ ಪತ್ತೆಯಾಗಿ ದ್ದಾರೆ. …