ರಾಜ್ಯ ಶಾಲಾ ಕಲೋತ್ಸವ: ಚಿನ್ನದ ಕಿರೀಟ ಕಣ್ಣೂರಿಗೆ

ಕೊಲ್ಲಂ: ಕೊಲ್ಲಂನಲ್ಲಿ ನಡೆದ ೬೨ನೇ ರಾಜ್ಯ ಶಾಲಾ ಕಲೋತ್ಸವದಲ್ಲಿ ಕಣ್ಣೂರು ಜಿಲ್ಲೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಕಣ್ಣೂರು ಜಿಲ್ಲೆಗೆ ೯೬೨ ಅಂಕಗಳು ಲಭಿಸಿದಾಗ ಕಲ್ಲಿಕೋಟೆ ೯೪೯ ಅಂಕಗಳೊಂದಿಗೆ ದ್ವಿತೀಯ, ಪಾಲ ಕ್ಕಾಡ್ ೯೩೮ ಅಂಕಗಳಿಸಿ ತೃತೀಯ ಸ್ಥಾನ ಗಳಿಸಿದೆ. ಕಾಸರಗೋಡು ಜಿಲ್ಲೆ ೮೪೬ ಅಂಕಗಳೊಂದಿಗೆ ಹತ್ತನೇ ಸ್ಥಾನ ಗಳಿಸಿದೆ. ಆತಿಥೇಯವಾದ ಕೊಲ್ಲಂ ಜಿಲ್ಲೆ ೯೧೨ ಅಂಕಗಳೊಂ ದಿಗೆ ಆರನೇ ಸ್ಥಾನ ಪಡೆದಿದೆ. ವಿಜೇತರಾದ ಕಣ್ಣೂರು ಜಿಲ್ಲಾ ತಂಡಕ್ಕೆ ಚಲನಚಿತ್ರ ನಟ ಮಮ್ಮುಟ್ಟಿ ಪ್ರಶಸ್ತಿ …

ಪೊಲೀಸ್ ಠಾಣೆಯಲ್ಲಿ ದಾಂಧಲೆ: ಆರೋಪಿ ಸೆರೆ

ಕುಂಬಳೆ:  ಮಧ್ಯರಾತ್ರಿ ವೇಳೆ ಪೊಲೀಸ್ ಠಾಣೆಗೆ ತಲುಪಿ ದಾಂಧಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರುವಾಡ್ ನಿವಾಸಿ ಅಸ್ಕರ್ (೩೦) ಎಂಬಾತ ಬಂಧಿತ ಆರೋಪಿ ಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಮೊನ್ನೆ ರಾತ್ರಿ ೧೧ ಗಂಟೆ ವೇಳೆ ಕುಂಬಳೆ ಠಾಣೆಗೆ ತಲುಪಿ ದಾಂಧಲೆ ನಡೆಸಿದ್ದಾನೆ. ಕುಂಬಳೆ  ಪೇಟೆಯಲ್ಲಿ ತನ್ನ ಮೊಬೈಲ್ ಫೋನ್ ಕಳೆದು ಹೋಗಿದೆಯೆಂದೂ ಅದನ್ನು ಪತ್ತೆ ಹಚ್ಚಿಕೊಡಬೇಕೆಂದು ಒತ್ತಾ ಯಿಸಿ ಈತ ಠಾಣೆಯಲ್ಲಿ ದಾಂಧಲೆ ನಡೆಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಶಾಲಾ ಕಲೋತ್ಸವ: ಚಟ್ಟಂಚಾಲ್, ದುರ್ಗಾ ಶಾಲೆ ವಿದ್ಯಾರ್ಥಿಗಳ ಗಣನೀಯ ಸಾಧನೆ

ಕಾಸರಗೋಡು: ರಾಜ್ಯ ಶಾಲಾ ಕಲೋತ್ಸವ ಕೊನೆಗೊಂಡಾಗ ಅಂಕ ಪಟ್ಟಿಯಲ್ಲಿ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಜಿಲ್ಲೆಗೆ ನಷ್ಟವಾಗಿದೆ. ಕಳೆದ ಬಾರಿ ೯ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ೧೦ಕ್ಕೆ ತಲುಪಿದೆ. ೮೪೬ ಅಂಕ ಪಡೆದ ಜಿಲ್ಲೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ ೪೧೬,  ಹೈಯರ್ ಸೆಕೆಂ ಡರಿ ವಿಭಾಗದಲ್ಲಿ ೪೩೦, ಹೈಸ್ಕೂಲ್ ಅರೆಬಿಕ್, ಸಂಸ್ಕೃತೋತ್ಸವಗಳಲ್ಲಿ ೯೩ ಅಂಕದಂತೆ ಲಭಿಸಿದೆ. ಹೆಚ್ಚುವರಿ ವಿಭಾಗಗಳಲ್ಲಿ ಈ ಬಾರಿ ಸ್ಪರ್ಧಿಸಲಾಗಿದ್ದರೂ ಅಂಕಪಟ್ಟಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹೈಯರ್ ಸೆಕೆಂಡರಿ ವಿಭಾಗ ದಲ್ಲಿ ಸಿಎಚ್‌ಎಸ್‌ಎಸ್ ಚಟ್ಟಂ …

ಮಧೂರು ಚೇನಕ್ಕೋಡು ಭತ್ತ ಉತ್ಪಾದಕ ಗದ್ದೆಗೆ ನೀರುಣಿಸುವ ಕೆರೆ ನವೀಕರಿಸಲು ನಿರ್ದೇಶ

ಮಧೂರು: ಪಂಚಾಯತ್‌ನ ಚೇನಕ್ಕೋಡ್ ಭತ್ತ ಉತ್ಪಾದಕ ಕೆರೆಯನ್ನು ನವೀಕರಿಸಲಿರುವ ಯೋಜನೆಯ ಪ್ರೊಪೋಸಲ್ ನೀಡಲು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನಿರ್ದೇಶ ನೀಡಿದರು. ಮಧೂರು ಪಂಚಾಯತ್‌ನ ಪ್ರೊಪೋಸಲ್ ಲಭಿಸಿದ ಬಳಿಕ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಮೊತ್ತ ವೆಚ್ಚ ಮಾಡಲು ಜಿಲ್ಲಾಧಿಕಾರಿ ನಿರ್ದೇಶ ನೀಡಿದರು.  ಕಾಲುವೆಗಳಲ್ಲಿ ಸಂಗ್ರಹಗೊಂಡ ಮಣ್ಣು ತೆಗೆದು ಗದ್ದೆಗಳಿಗೆ ನೀರು ತಲುಪಿಸಲಿರುವ ಚಟುವಟಿಕೆ ಆರಂಭಿಸಲು ಜಿಲ್ಲಾಧಿಕಾರಿ ಮೈನರ್ ಇರಿಗೇಷನ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಲ್ ಶಕ್ತಿ ಅಭಿಯಾನ್ ಚಟುವಟಿಕೆಗಳ ಅಂಗವಾಗಿ ಜಿಲ್ಲಾಧಿಕಾರ ಸಂದರ್ಶನ ನಡೆಸಿದ್ದಾರೆ. ಮಧೂರು ಪಂ. …

ಮಂಗಲ್ಪಾಡಿ ಪಂಚಾಯತ್‌ನಲ್ಲಿ ಅವ್ಯವಹಾರ: ಬಿಜೆಪಿ ಧರಣಿ ಸತ್ಯಾಗ್ರಹ ನಾಳೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ನಡೆಯುವ ಅವ್ಯವಹಾರದ ವಿರುದ್ಧ ಭಾರತೀಯ ಜನತಾ ಪಕ್ಷ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ನಾಳೆ ಬೆಳಿಗ್ಗೆ ೧೦ ಗಂಟೆಗೆ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಧರಣಿ ಸತ್ಯಾಗ್ರಹ ನಡೆಯಲಿದೆ. ಪರಿಶಿಷ್ಟ ಜಾತಿ ವಿಭಾಗದವರಿಗೆ ಶಿಕ್ಷಣದಂಗವಾಗಿ ಪಂಚಾಯತ್‌ನಿಂದ ಕೊಡಲ್ಪಟ್ಟ ಕಂಪ್ಯೂಟರ್, ಲ್ಯಾಪ್‌ಟಾಪನ್ನು ಅರ್ಹರಿಗೆ ನೀಡದೆ ಅವರ ನಕಲಿ ಸಹಿಯೊಂದಿಗೆ ಖರೀದಿಸಿ ಮೋಸಗೊಳಿಸಿದ ಅವ್ಯವಹಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ. ಬಿಜೆಪಿಯ ನೇತಾರರು, ಕಾರ್ಯ ಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಲು ಸಂಬಂಧಪಟ್ಟವರು ವಿನಂತಿಸಿದ್ದಾರೆ.

ದೇರಂಬಳ ಸಂಕ ಕುಸಿತ: ಸ್ಥಳೀಯರ ಸಂಚಾರಕ್ಕೆ ಇನ್ನೂ ಪರಿಹಾರವಿಲ್ಲ

ಉಪ್ಪಳ: ಮಂಗಲ್ಪಾಡಿ- ಮೀಂಜ ಪಂಚಾಯತ್‌ಗಳನ್ನು ಜೋಡಿಸುವ ದೇರಂಬಳ ಕಾಂಕ್ರೀಟ್ ಸೇತುವೆ ಮುರಿದು ಬಿದ್ದು ಏಳು ತಿಂಗಳು ಕಳೆದರೂ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಉಂಟಾಗಿಲ್ಲ. ೨೦ ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದಿತ್ತು. ಸಂಕವಿಲ್ಲದ ಕಾರಣ ಸ್ಥಳೀಯರ ಸಂಚಾರಕ್ಕೆ ಸಂಕಷ್ಟ ಉಂಟಾದಾಗ ತಾತ್ಕಾಲಿಕವಾಗಿ ಕಂಗನ್ನು ಹಾಸಿ ಕಾಲುಸಂಕ ನಿರ್ಮಿಸಲಾಗಿತ್ತು. ಆದರೆ ಅದು ಅಪಾಯಕರ ರೀತಿಯಲ್ಲಿದೆ. ಇದರಿಂದಾಗಿ ವಿದ್ಯಾರ್ಥಿಗಳ ಸಹಿತದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ. ಇತ್ತೀಚೆಗೆ ಈ ಸಂಕದಲ್ಲಿ ಸಂಚರಿಸುತ್ತಿದ್ದ ವೇಳೆ ಆಯ ತಪ್ಪಿ …

ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ೮೦ನೇ ಯೋಜನೆ ಹಸ್ತಾಂತರ

ಮಂಜೇಶ್ವರ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ೮೦ನೇ ಯೋಜನೆಯ ಸಹಾಯಧನ ಹಸ್ತಾಂತರ ಫಲಾನುಭವಿಗಳ ಮನೆಯಲ್ಲಿ ಜರಗಿತು.ವರ್ಕಾಡಿ ಪಂಚಾಯತ್‌ನ, ಕೊಡ್ಲಮೊಗರು ಮುಗುಳಿ ನಿವಾಸಿ ನವ್ಯ ಶೆಟ್ಟಿಳಿಗೆ _P}್ತ್ಜ ಸಲುವಾಗಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಗಿರೀಶ್ ಮುನ್ನಿಪ್ಪಾಡಿ ಹಸ್ತಾಂತರಿಸಿದರು. ಈ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸನತ್ ಮಯ್ಯ, ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ, ಸಂಚಾಲಕ ಸುಕೇಶ್ ಬೆಜ್ಜ, ಸದಸ್ಯರಾದ ಮಮತ ಕೊಡ್ಲಮೊಗರು, ಸ್ಥಳೀಯ ವಾರ್ಡ್ ಪ್ರತಿನಿದಿs ಮಮತ ಕೋಣಿಬೈಲು ಉಪಸ್ಥಿತರಿದ್ದರು.

ಕೊಲೆ ಆರೋಪಿಯನ್ನು ಹುಡುಕಿ ಹೋದ ಪೊಲೀಸರಿಗೆ ಬೆದರಿಕೆ: ಹಲವು ಪ್ರಕರಣಗಳ ಆರೋಪಿ ಬಂಧನ

ಉಪ್ಪಳ: ಕೊಲೆ  ಪ್ರಕರಣದ ಆರೋಪಿಯನ್ನು ಹುಡುಕಿಹೋದ ಪೊಲೀಸರಿಗೆ ಬೆದರಿಕೆಯೊಡ್ಡಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಂತೆ  ಹಲವು ಪ್ರಕರಣ ಗಳಲ್ಲಿ ಆರೋಪಿಯಾದವನನ್ನು ಮಂ ಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಪೈವಳಿಕೆ ನಿವಾಸಿ ಮೊಹ ಮ್ಮದ್ ಹರ್ಷಾದ್ (೨೨) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ಪೈವಳಿಕೆಯಲ್ಲಿ ಈ ಘಟನೆ ನಡೆದಿದೆ.  ಕೊಲೆ ಪ್ರಕರಣವೊಂದರ ಆರೋಪಿಯನ್ನು ಹುಡುಕಿಕೊಂಡು ನಿನ್ನೆ ಮಧ್ಯಾಹ್ನ ಮಂಜೇಶ್ವರ ಪೊಲೀಸ್ ಠಾಣೆಯ  ಫ್ಲೈಯಿಂಗ್ ಸ್ಕ್ವಾಡ್ ಪೈವಳಿಕೆಗೆ ತೆರಳಿತ್ತು. ಆ ವೇಳೆ ರಸ್ತೆಯಲ್ಲಿ  ನಿಂತಿದ್ದ ಪೊಲೀಸ್ ವಾಹನದ …

ಅನಧಿಕೃತ ಕಡವು ನಿರ್ಮಿಸಿ ಹೊಯ್ಗೆ ಸಂಗ್ರಹ: ಆರು ದೋಣಿಗಳ ನಾಶ

ಕುಂಬಳೆ: ಅನಧಿಕೃತ ಕಡವುಗಳನ್ನು ನಿರ್ಮಿಸಿ  ಹೊಯ್ಗೆ ಸಂಗ್ರಹಿಸುತ್ತಿದ್ದ ಆರು ದೋಣಿಗಳನ್ನು ಕುಂಬಳೆ ಪೊಲೀಸರು ನಿನ್ನೆ ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಇಚ್ಲಂ ಗೋಡು ಪಾಚಾಣಿ, ಉಳುವಾರು ಮಾಕೂರು ಎಂಬೆಡೆಗಳಲ್ಲಿ  ಹೊಯ್ಗೆ ಸಂಗ್ರಹಿಸುತ್ತಿದ್ದ ದೋಣಿಗಳನ್ನು ನಾಶಗೊಳಿ ಸಲಾಗಿದೆ. ಹೊಯ್ಗೆ ಸಂಗ್ರಹಿಸಿದ ಬಳಿಕ ದೋಣಿಗಳನ್ನು ಹೊಳೆಯ ನೀರಿನಲ್ಲಿ ಮುಳುಗಿಸಿಡಲಾಗುತ್ತಿತ್ತು. ಕುಂಬಳೆ ಎಸ್‌ಐ  ವಿ.ಕೆ. ಅನೀಶ್, ಅಡಿಶನಲ್ ಎಸ್‌ಐ ಉಮೇಶ್, ಪೊಲೀಸ್ ಬಿಜು ಎಂಬಿವರು ನಿನ್ನೆ ಹೊಳೆಗೆ ತೆರಳಿ ನಡೆಸಿದ ಶೋಧ ವೇಳೆ ದೋಣಿಗಳು ಪತ್ತೆಯಾಗಿದೆ.  ಬಳಿಕ ಅವುಗಳ ನ್ನು ಜೆಸಿಬಿ ಬಳಸಿ …

ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ .ಕಂಗಾಲಾದ ಮಾಲ್ದೀವ್ಸ್‌ನ ಪ್ರವಾಸೋದ್ಯಮ ವಲಯ: ಭಾರತದಿಂದ ಮತ್ತೊಂದು ‘ಸ್ಟ್ರೋಕ್’; ಲಕ್ಷದ್ವೀಪದಲ್ಲಿ  ವಿಮಾನ ನಿಲ್ದಾಣ ಸ್ಥಾಪಿಸಲು ತೀರ್ಮಾನ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಅವಹೇಳನಗೈಯ್ಯುವ ರೀತಿಯಲ್ಲಿ  ಮಾಲ್ದೀವ್ಸ್‌ನ ಮೂವರು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ಭಾರತ ಸರಕಾರ ಮಾಲ್ದೀವ್ಸ್‌ನ ಹೈ ಕಮಿಶನರ್ ಸಮನ್ಸ್ ಜ್ಯಾರಿಗೊಳಿಸಿದೆ. ಮಾತ್ರವಲ್ಲ ಇದರ ಬೆನ್ನಲ್ಲೇ ಕೇಂದ್ರದ ಬಿಜೆಪಿ ಸರಕಾರ ಮತ್ತೊಂದು ಮಾಸ್ಟರ್ ಸ್ಟ್ರೋಕ್‌ಗೆ ಸಜ್ಜಾಗಿದೆ. ಲಕ್ಷದ್ವೀಪ್ ನಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಮುಂದಾಗಿದೆ. ಮಾಲ್ದೀವ್ಸ್‌ನಲ್ಲಿ ಈಗ ವಿಮಾನ ನಿಲ್ದಾಣವಿಲ್ಲ. ಅದನ್ನು ಸ್ಥಾಪಿಸುವ ಘೋಷಣೆ ಶೀಘ್ರ ಹೊರಡಿಸಲಾ ಗುವುದು. ಕೇಂದ್ರ  ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ …