ಸೋಂಕಾಲಿನಲ್ಲಿ ಸ್ಕೂಟರ್-ಕಾರು ಅಪಘಾತ: ಸವಾರ ಮೃತ್ಯು
ಉಪ್ಪಳ: ಸ್ಕೂಟರ್‌ಗೆ ಕಾರು ಡಿಕ್ಕಿಹೊಡೆದು ಸವಾರ ಮೃತಪಟ್ಟ ಘಟನೆ ಸೋಂ ಕಾಲಿನಲ್ಲಿ ನಡೆದಿದೆ. ಮೀಂಜ ಪಂಚಾಯತ್‌ನ ಕುಳೂರು ಕೊಜಮುಕು ಉಮಿಕ್ಕಳ ನಿವಾಸಿ ದಿ| ಮೊಯಿದೀನ್ ಕುಂಞÂ ಯವರ ಪುತ್ರ ಮೊಹಮ್ಮದ್ ಹನೀಫ್ (41) ಮೃತಪಟ್ಟಿದ್ದಾರೆ. ಬೇಕೂರು ಬಳಿಯ ಒಬರ್ಲೆ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ ಕಳೆದು ಸ್ಕೂಟರ್‌ನಲ್ಲಿ ಕೊಡಂಗೆಗೆ ತೆರಳಿದ್ದರು. ಅಲ್ಲಿಂದ ಮನೆಗೆ ತೆರಳಲು ಸೋಂಕಾಲು ರಸ್ತೆ ಪ್ರವೇಶಿಸುತ್ತಿದ್ದಂತೆ ಬೇಕೂರು ಭಾಗದಿಂದ ಆಗಮಿಸಿದ ಕಾರು ಸ್ಕೂಟರ್‌ಗೆ ಡಿಕ್ಕಿಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಕೂಡಲೇ ಉಪ್ಪಳದ ಖಾಸಗಿ …