ಕೊಂಡೆವೂರು ವಿದ್ಯಾಪೀಠದಲ್ಲಿ ವಿದ್ಯಾರ್ಥಿ ಸಂಭ್ರಮ
ಉಪ್ಪಳ: ನಿತ್ಯಾನಂದ ವಿದ್ಯಾಪೀಠ ಕೊಂಡೆವೂರು ಇದರ 19ನೇ ವರ್ಷದ ವಾರ್ಷಿಕೋತ್ಸವ ಸಂಸ್ಥಾಪಕರಾದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಭ್ರಮದಿAದ ಜರಗಿತು. ಸ್ವಾಮೀಜಿ ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಕ್ಕಾಗಿ, ಪಠ್ಯದ ಜೊತೆ ವೀರ, ಮಹಾಪುರುಷರ ಜೀವನ ಚರಿತ್ರೆಯ ಪುಸ್ತಕ ಓದಿ ದೇಶಭಕ್ತ ಪ್ರಜೆಗಳಾಗಿ ಬಾಳಿ ಬದುಕಿ ಎಂದರು. ಕಾಸರಗೋಡು ಜಿಲ್ಲೆ ಶಿಕ್ಷಣಾಧಿಕಾರಿ ದಿನೇಶನ್. ವಿ ಅಧ್ಯಕ್ಷತೆ ವಹಿಸಿದ್ದರು. ಕಮಲಾಕ್ಷ ಶಾಲಾ ಚಟುವಟಿಕೆಗಳ ವರದಿ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಪನ್ಯಾಸಕ ಡಾ|ಅಶೋಕ್ ಪದಕ …