ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ

ಕಾಸರಗೋಡು: ಕೆಲಸಕ್ಕೆಂದು ಮನೆಯಿಂದ ಹೋದ ಯುವತಿ ಬಳಿಕ ಹಿಂತಿರುಗದೆ ನಾಪತ್ತೆಯಾಗಿ ರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೂಡ್ಲು, ಚೌಕಿ ಮಜಲ್ ಹೌಸ್‌ನ ಭಾಸ್ಕರ ಎಂಬವರ ಪುತ್ರಿ ಶ್ರೇಯ (೨೧) ನಾಪತ್ತೆಯಾದ ಯುವತಿ. ಈ ಬಗ್ಗೆ ಆಕೆಯ ಮನೆಯವರು ನೀಡಿದ ದೂರಿನಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಯುವತಿ ಚೌಕಿಯಲ್ಲಿರುವ ಫ್ಯಾನ್ಸಿ ಅಂಗಡಿ ಯೊಂದಕ್ಕೆ ಜನವರಿ ೧ರಂದು ಕೆಲಸಕ್ಕೆ ಸೇರ್ಪಡೆಗೊಂಡಿದ್ದಳು. ನಿನ್ನೆ ಕೆಲಸಕ್ಕೆ ಹೋಗಿ ಬಳಿಕ ಬಳಿಕ ಮನೆಗೆ ಹಿಂತಿರುಗಿಲ್ಲವೆಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ …

ಕರ್ನಾಟಕ ಮದ್ಯ ವಶ

ಉಪ್ಪಳ: ಉಪ್ಪಳದಲ್ಲಿ ಕುಂಬಳೆ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಇನ್‌ಸ್ಪೆಕ್ಟರ್ ಕೆ. ಸುರೇಶ್‌ಬಾಬುರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೯೦ ಎಂಎಲ್‌ನ ೭೭ ಟೆಟ್ರಾ ಪ್ಯಾಕೆಟ್ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪೈವಳಿಕೆ ಬಾಯಿಕಟ್ಟೆಯ  ಅರುಣ್ ಕುಮಾರ್ ಜೆ.ಕೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿ ಸಲು ಬಳಸಲಾದ ಸ್ಕೂಟರ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿ ದ್ದಾರೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ …

ಶಾಲಾ ವಿದ್ಯಾರ್ಥಿನಿಗೆ ಇರಿತ

ಬದಿಯಡ್ಕ: ಶಾಲೆ ಬಿಟ್ಟು ಮನೆಗೆ ನಡೆದುಹೋಗುತ್ತಿದ್ದ ಒಂಭತ್ತನೇ ತರಗತಿ ವಿದ್ಯಾರ್ಥಿನಿಗೆ ವಿದ್ಯಾರ್ಥಿ ಯೋರ್ವ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಪೆರಡಾಲ ನವಜೀವನ ಶಾಲೆಯ ವಿದ್ಯಾರ್ಥಿನಿಗೆ ಇರಿದು ಗಾಯಗೊಳಿ ಸಲಾಗಿದೆ. ಮೊನ್ನೆ ಸಂಜೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ನಡೆದುಹೋಗುತ್ತಿ ದ್ದಂತೆ  ಆಕೆಯನ್ನು ಹಿಂಬಾಲಿಸಿ ಬಂದ ಬದಿಯಡ್ಕ ಸರಕಾರಿ ಹೈಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿಯಾದ ೧೫ರ ಹರೆಯದ ಬಾಲಕ ಇರಿದು ಗಾಯಗೊಳಿಸಿರು ವುದಾಗಿ ದೂರಲಾಗಿದೆ. ವಿಕಲ ಚೇತನನಾದ ವಿದ್ಯಾರ್ಥಿ ಈ ಕೃತ್ಯ ನಡೆಸಿದ್ದಾನೆ. ಇರಿತದಿಂದ ಗಾಯಗೊಂಡ ಬಾಲಕಿ ಆಸ್ಪತ್ರೆಯಲ್ಲಿ …

ಕಾಡುಹಂದಿ ಉಪಟಳ ಸಂಕಷ್ಟಕ್ಕೀಡಾದ ಕೃಷಿಕರು

ಮಂಜೇಶ್ವರ: ಮಂಜೇಶ್ವರ, ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಕಾಡು ಹಂದಿಗಳ ಉಪಟಳ ದಿಂದ ಬsÀತ್ತದ ಕೃಷಿ ಸಹಿತ ಇತರ ಕೃಷಿ ನಾಶಗೊಂಡು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಮಾಣಿಂಜ ಸಮೀಪದ ಅಕ್ಕರೆ, ಅಂಬಿತ್ತಡಿ, ಪೈವಳಿಕೆ ಪಂಚಾಯತ್ ವ್ಯಾಪ್ತಿ ಗೊಳಪಟ್ಟ ಕುಡಾಲು ಬಯಲು, ಮೇರ್ಕಳ, ಚೇವಾ ರು ಬಯಲು ಪ್ರದೇಶದಲ್ಲಿ ಬsÀತ್ತದ ಕೃಷಿ ಅಲ್ಲದೆ ಬಾಳೆ ಸಹಿತ ತರಕಾರಿ ಕೃಷಿಯನ್ನು ನಾಶಮಾಡುತ್ತಿದೆ. ರಾತ್ರಿ ಹೊತ್ತಿನಲ್ಲಿ ಕಾಡುಹಂದಿಗಳ ಗುಂಪು ಬಂದು ಗದ್ದೆಯಲ್ಲಿರುವ ಬತ್ತದ ಕೃಷಿ ಸಹಿತ ಇತರ ಗಿಡ …

ಅಭಿವೃದ್ಧಿ ಯೋಜನೆಯಲ್ಲಿ ರಾಜಕೀಯ ತೋರಲ್ಲ- ಸಚಿವ ಗಡ್ಕರಿ

ಕಾಸರಗೋಡು: ಅಭಿವೃದ್ಧಿ ಯೋಜನೆಯಲ್ಲಿ ರಾಜಕೀಯ ಬೇದ ಬಾವ ತೋರುವುದಿಲ್ಲವೆಂದು ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇರಳದಲ್ಲಿ ಪೂರ್ತೀಕರಿಸಲಾದ ಒಂಭತ್ತು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ೧೨ ಹೊಸ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನಡೆಸಿ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಿನ್ನೆ ನಡೆದ ಬೃಹತ್ ಕಾರ್ಯಕ್ರಮದಲ್ಲಿ  ಸಚಿವರು ಮಾತನಾಡುತ್ತಿದ್ದರು. ನಿಗದಿತ ಕಾರ್ಯಕ್ರಮದಂತೆ ಸಚಿವರು ಮುಂಬೈಯಿಂದ ನಿನ್ನೆ ಕಾಸರಗೋಡಿಗೆ ಬರಬೇಕಾಗಿತ್ತು. ಆದರೆ ಅವರು ಮುಂಬೈಯಿಂದ ಬರಬೇಕಾಗಿದ್ದ ವಿಮಾನದಲ್ಲಿ ಕೆಲವೊಂದು ತಾಂತ್ರಿಕ ದೋಷ ಕಂಡು ಬಂದ …

 ನಾಪತ್ತೆಯಾದ ವ್ಯಕ್ತಿ ಪತ್ತೆ

ಕುಂಬಳೆ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಯ್ಕಾಪು ನಿವಾಸಿ ದುರೈ (೮೯) ಎಂಬವರು ಇಂದು ಬೆಳಿಗ್ಗೆ ಕುಂಬಳೆಯಲ್ಲಿ ಪತ್ತೆಯಾಗಿದ್ದು, ಅವರನ್ನು ಪೇಟೆಯ್ಲ ಆಟೋ ಚಾಲಕರು ಮನೆಗೆ ತಲುಪಿಸಿ ದ್ದಾರೆ. ಈ  ತಿಂಗಳ ೩ರಿಂದ ದುರೈ ನಾಪತ್ತೆಯಾಗಿದ್ದರು.  ಈ ಬಗ್ಗೆ ಪತ್ನಿ ಲಕ್ಷ್ಮಿ ಕುಂಬಳೆ ಪೊಲೀಸ ರಿಗೆ ದೂರು ನೀಡಿದ್ದರು. ಅವರಿ ಗಾಗಿ ಶೋಧ  ನಡೆಸುತ್ತಿದ್ದಂತೆ ಇಂದು ಬೆಳಿಗ್ಗೆ ಅವರು ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ತಮಿಳುನಾಡು ನಿವಾಸಿಯಾದ ದುರೈ ನಾಯ್ಕಾ ಪುನಲ್ಲಿ  ಕುಟುಂಬ ಸಮೇತ ವಾಸಿಸುತ್ತಿದ್ದಾರೆ.

ಆಟೋರಿಕ್ಷಾ ಮಜ್ದೂರ್ ಸಂಘ  ಮುಳ್ಳೇರಿಯ ಘಟಕ ಸಮ್ಮೇಳನ

ಮುಳ್ಳೇರಿಯ: ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಮುಳ್ಳೇರಿಯ ಘಟಕ ಸಮ್ಮೇಳನ ಜರಗಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಘಟಕ ಅಧ್ಯಕ್ಷ ಸದಾಶಿವ ಅಧ್ಯಕ್ಷತೆ ವಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಲೀಲಾಕೃಷ್ಣನ್, ವಲಯ ಅಧ್ಯಕ್ಷ ಸಿ.ಎಚ್. ಆನಂದ, ಕಾರ್ಯದರ್ಶಿ ಭಾಸ್ಕರನ್ ಮಾತನಾಡಿದರು. ಅಸಂಘಟಿತ ಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷ ಎಂ.ಕೆ. ರಾಘವನ್ ಸಮಾರೋಪ ಭಾಷಣ ಮಾಡಿದರು. ನೂತನ ಘಟಕ  ಅಧ್ಯಕ್ಷರಾಗಿ ನಾರಾಯಣನ್ ಕರಿಂಬುವಳಪ್ಪ್, ಕಾರ್ಯದರ್ಶಿಯಾಗಿ ಸದಾಶಿವ, ಕೋಶಾಧಿಕಾರಿಯಾಗಿ ಜನಾರ್ದನರನ್ನು ಆಯ್ಕೆ ಮಾಡಲಾಯಿತು. ಘಟಕ ಕಾರ್ಯದರ್ಶಿ ಜಯಂತ …

ನವಕೇರಳ ಸಭೆಯಲ್ಲಿ ನೀಡಿದ ಮನವಿಗೆ ಸ್ಪಂದನೆ: ಕಾನ ಗೋಳಿಯಡ್ಕದಲ್ಲಿ ಹೆಚ್ಚಿದ ಸೇತುವೆ ನಿರೀಕ್ಷೆ

ಬದಿಯಡ್ಕ: ಕನ್ನೆಪ್ಪಾಡಿ- ಕಾನ ಗೋಳಿಯಡ್ಕ ಸೇತುವೆ ನಿರ್ಮಾಣವಾಗಬಹುದೆಂಬ  ನಿರೀಕ್ಷೆ ಸ್ಥಳೀಯರಲ್ಲಿ ಈಗ ಹುಟ್ಟಿಕೊಂಡಿದೆ. ಸೇತುವೆಗಾಗಿ ವಾರ್ಡ್‌ನ ಜನಪ್ರತಿನಿಧಿ ರವಿ ಕುಮಾರ್ ರೈ ನವಕೇರಳ ಸಭೆಯಲ್ಲಿ  ಮನವಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಸ್ಥಳ ಸಂದರ್ಶಿಸಿ ವರದಿ ನೀಡಲು ಕಾಸರಗೋಡು ಲೋಕೋಪಯೋಗಿ ಇಲಾಖೆ ಸೇತುವೆ ವಿಭಾಗ ಅಧಿಕಾರಿಗಳು ನಿನ್ನೆ ಸ್ಥಳಕ್ಕೆ ತಲುಪಿದ್ದಾರೆ. ಬದಿಯಡ್ಕ ಪಂಚಾಯತ್‌ನ ೧೩ನೇ ವಾರ್ಡ್‌ಗೆ ಸೇರುವ ಗೋಳಿಯಡ್ಕದಲ್ಲಿ ೧೦೦ರಷ್ಟು ಪರಿಶಿಷ್ಟ ಜಾತಿ ಕುಟುಂಬಗಳು ಸೇರಿದಂತೆ ೧೨೦೦ ಮತದಾರರು ಇದ್ದಾರೆ. ಕನ್ನೆಪ್ಪಾಡಿ ಪೇಟೆಯಿಂದ ಸುಲಭದಲ್ಲಿ ತಲುಪಲು ಸಾಧ್ಯವಾಗುವ ಸ್ಥಳವಾಗಿದೆ …

ತೂಮಿನಾಡಿನಲ್ಲಿ ಭಕ್ತವೃಂದದಿಂದ ಕಟೀಲು ಕ್ಷೇತ್ರ ಪಾದಯಾತ್ರೆ

ಮಂಜೇಶ್ವರ: ತೂಮಿನಾಡು ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಮತ್ತು ಮಹಾಕಾಳಿ ಭಜನಾ ಮಂದಿರದ ಪರಿಸರದಿಂದ ಭಕ್ತವೃಂದ ೮ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶರೀ ಕ್ಷೇತ್ರ ಪಾದಯಾತ್ರೆ ಆರಂಭಗೊಂಡಿತು. ಮಾತೆಯರ ಸಹಿತ ೩೬ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ದೇವದಾಸ ತೂಮಿನಾಡು ಹಾಗೂ ಆಶಾ ಕಣ್ವತೀರ್ಥರು ನೇತೃತ್ವ ವಹಿಸಿದರು. ಗುರುವಾರ ಸಂಜೆ ಹೊರಟ ಇವರು ನಿನ್ನೆ ಮುಂಜಾನೆ ಕಟೀಲು ಕ್ಷೇತ್ರ ತಲುಪಿದ್ದಾರೆ.

ಕಣ್ವತೀರ್ಥ ಮಠ: ಸುತ್ತುಪೌಳಿ, ಪ್ರಾಂಗಣ ಲೋಕಾರ್ಪಣೆ ೯ರಂದು

ತಲಪ್ಪಾಡಿ: ಇಲ್ಲಿನ ಕಣ್ವತೀರ್ಥ ಮಠದ ಸುತ್ತುಪೌಳಿ ಹಾಗೂ ಪ್ರಾಂಗಣದ ನವೀಕರಣೆ ಪೂರ್ಣಗೊಂಡಿದ್ದು, ಈ ತಿಂಗಳ ೯ರಂದು ಅದನ್ನು ಲೋಕಾರ್ಪಣೆಗೊಳಿಸಲಾಗುವುದು. ಇದರಂಗವಾಗಿ ೮ರಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮನ, ಬಳಿಕ ವಿವಿಧ ವೈದಿಕ ಕಾರ್ಯಕ್ರಮ, ೯ರಂದು ಬೆಳಿಗ್ಗೆ ಪಂಚಾಮೃತ  ಅಭಿಷೇಕ ಸಹಿತ ವಿವಿಧ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಅಯೋಧ್ಯೆಯಲ್ಲಿ ನಡೆಯುವ ರಾಮದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ  ಭಾಗವಹಿಸಲು ತೆರಳುವ ಸ್ವಾಮೀಜಿಯವರನ್ನು ಗೌರವಿಸಲಾಗುವುದು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.