ಮತವಾಹನ ಮುಂದಿನ ವಾರದಿಂದ ಜಿಲ್ಲೆಯಲ್ಲಿ ಪರ್ಯಟನೆ

ಕಾಸರಗೋಡು: ಸ್ವೀಪ್ ಕೋರ್ ಕಮಿಟಿ ಸಭೆ ಕಾಸರಗೋಡು ಕಲೆಕ್ಟರೇಟ್ ವಿಡಿಯೋ ಕಾನ್ಫರೆನ್ಸ್ ಹಾಲï‌ನಲ್ಲಿ ನಡೆಯಿತು ಮುಂದಿನ ವಾರದಿಂದ ಜಿಲ್ಲೆಯಲ್ಲಿ ಪರ್ಯಟನೆ ಆರಂಭಿಸಲಿದೆ. ಅಸಿಸ್ಟೆಂಟ್ ಕಲೆಕ್ಟರ್ ದಿಲೀಪ್ ಕೆ ಕೈನಿಕ್ಕರ ಅಧ್ಯಕ್ಷತೆ ವಹಿಸಿದ್ದರು. ಸ್ವೀಪ್ ಜಿಲ್ಲಾ ನೋಡಲ್ ಆಫೀಸರ್ ಟಿ.ಟಿ.ಸುರೇಂದ್ರನ್ ಮಾತನಾಡಿದರು. ಜನವರಿ ೧೦ರೊಳಗೆ ಸ್ವೀಪ್ ಆಕ್ಷನ್ ಪ್ಲಾನ್ ತಯಾರಿಸಲು ನಿರ್ಧರಿ¸ Àಲಾಗಿದೆ. ಜನವರಿ ೨೫ರ ರಾಷ್ಟ್ರೀಯ ಮತದಾರರ ದಿನಾಚರಣೆ ಯಂದು ನಡೆಸಲಿರುವ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಎನ್‌ಎಸ್‌ಎಸ್‌ನಿಂದ ಪೆರ್ಲ ಪೇಟೆಯಲ್ಲಿ ಮಿನಿ ಗಾರ್ಡನ್ ನಿರ್ಮಾಣ

ಪೆರ್ಲ: ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್ ಮತ್ತು ಕ್ರಿಕೇಟರ್ಸ್ ಕ್ಲಬ್ ಎಣ್ಮಕಜೆ, ಎಣ್ಮಕಜೆ ಪಂಚಾಯತ್, ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಎಂಬಿವುಜಳ ಜಂಟಿ ಆಶ್ರಯದಲ್ಲಿ ಪೆರ್ಲ ಬಸ್ ನಿಲ್ದಾಣ ಸಮೀಪ ಮಿನಿ ಗಾರ್ಡನ್ ನಿರ್ಮಿಸಲಾಗಿದೆ. ಎನ್‌ಎಸ್‌ಎಸ್ ಘಟಕ ಸಂಖ್ಯೆ ೪೯ ಇದರ ಸ್ನೇಹರಾಮ ಕಾರ್ಯಕ್ರಮ ದಂಗವಾಗಿ ಗಾರ್ಡನ್ ನಿರ್ಮಿಸ ಲಾಗಿದ್ದು, ನಿನ್ನೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್ ಅಧ್ಯಕ್ಷತೆ ವಹಿಸಿದರು. ಯೋಜನಾ ಸಮಿತಿ ಉಪಾಧ್ಯಕ್ಷೆ ಆಯಿಶಾ …

ವಿಲ್ಲೇಜ್ ಆಫೀಸ್ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪರಿಶೀಲನೆ

ಕಾಸರಗೋಡು: ಸಂಕ್ಷಿಪ್ತ ಮತದಾರರ ಪಟ್ಟಿ ೨೦೨೪ ಪರಿಷ್ಕರಣೆಯಂಗವಾಗಿ ಕರಡು ಮತದಾರರ ಪಟ್ಟಿಯ ಪರಿಶೀಲನೆಯನ್ನು ವಿಲ್ಲೇಜ್ ಕಚೇರಿ ವ್ಯಾಪ್ತಿಯಲ್ಲಿ ನಾಳೆ ಬೆಳಿಗ್ಗೆ ೧೦ ಗಂಟೆಯಿಂದ ನಡೆಸಲು ಜಿಲ್ಲಾ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಜಿಲ್ಲೆಯ ಎಲ್ಲಾ ವಿಲ್ಲೇಜ್ ಆಫೀಸರ್‌ಗಳಿಗೆ ಆದೇಶ ನೀಡಿದ್ದಾರೆ. ವಿಲ್ಲೇಜ್ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳು, ಬೂತ್ ಏಜೆಂಟರುಗಳು ಪರಿಶೀಲನಾ ಕೇಂದ್ರಕ್ಕೆ ಹಾಜರಾಗಬೇಕು. ಈ ಶಿಬಿರದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮೃತಪಟ್ಟ, ಅನರ್ಹ ಮತದಾರರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಮನೆ ಹಿತ್ತಿಲಿನಿಂದ ಶ್ರೀಗಂಧ ಮರ ಕಡಿದು ಸಾಗಾಟ: ನಾಲ್ಕು ಮಂದಿ ಸೆರೆ

ಬೇಡಗಂ: ಮನೆ ಹಿತ್ತಿಲಿನಿಂದ ಶ್ರೀಗಂಧ ಮರ ಕಡಿದು ಸಾಗಾಟ ನಡೆಸುತ್ತಿದ್ದಾಗ ನಾಲ್ಕು ಮಂದಿ ತಂಡವನ್ನು ಪೊಲೀಸರು ಕೈಯ್ಯಾರೆ ಸೆರೆಹಿಡಿದಿದ್ದಾರೆ.  ಕುಂಡಂಕುಳಿ ಲಿಂಗತ್ತೋಡ್‌ನ ಮಧುಸೂದನನ್ (೪೩), ಕುಂಡಂಕುಳಿಯ ಶಬೀರ್ (೨೨), ಕುಂಡಂಕುಳಿ ಚಿರಪೈಕ್ಕದ ಇಬ್ರಾಹಿಂ ಬಾದುಷ (೨೪) ಕುನ್ನುಚ್ಚಿಯ ಎಚ್. ರಾಜೇಶ್ (೨೨) ಎಂಬಿವರನ್ನು ಬೇಡಗಂ ಎಸ್‌ಐ ಗಂಗಾಧರನ್ ನೇತೃತ್ವದ ಪೊಲೀಸ್ ತಂಡ ಸೆರೆಹಿಡಿದಿದೆ. ಆರೋಪಿಗಳಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಆರೋಪಿಗಳು ಸಂಚರಿಸುತ್ತಿದ್ದ ಬೈಕ್, ಶ್ರೀಗಂಧ ಹಾಗೂ ಆಯುಧಗಳನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ನಿನ್ನೆ …

ಲೈಂಗಿಕ ಕಿರುಕುಳಕ್ಕೆಡೆಯಾದ ಯುವತಿ ಗರ್ಭಿಣಿ: ಮೂರು ಮಂದಿ ವಿರುದ್ಧ ಅತ್ಯಾಚಾರಕ್ಕೆ ಕೇಸು

ಕಾಸರಗೋಡು:  ಮೂರು ಮಂದಿಯಿಂದ ಲೈಂಗಿಕ ಕಿರುಕುಳಕ್ಕೆಡೆಯಾದ ಯುವತಿ ಒಂಭತ್ತು ತಿಂಗಳ ಗರ್ಭಿಣಿಯಾದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ  ಮೂರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪುರುಷು, ಬದ್ರುದ್ದೀನ್, ರಾಘವನ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅವರನ್ನು ಪತ್ತೆಹಚ್ಚಲಿರುವ ಕ್ರಮ ಆರಂಭಿಸಿ ರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ೩೦ರ ಹರೆಯದ ಯುವತಿ ದೂರುದಾತೆಯಾಗಿದ್ದಾಳೆ. ಈಕೆ ವಿವಾಹಿತೆಯಾಗಿದ್ದರೂ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾಳೆನ್ನಲಾಗಿದೆ. ಒಂಭತ್ತು ತಿಂಗಳ ಗರ್ಭಿಣಿ ಯಾದರೂ ಆ ಬಗ್ಗೆ …

ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಇಂದು ಕಾಸರಗೋಡಿನಲ್ಲಿ

ಕಾಸರಗೋಡು: ಭಾರತ್ ಪರ್ಯೋಜನ್ ಮೂಲಕ ಒಳಪಡಿಸಿ ಕೇಂದ್ರ ಸರಕಾರ ರಾಜ್ಯದಲ್ಲಿ ನಿರ್ಮಾಣ ಕೆಲಸ ಆರಂಭಿಸಿದ ಹಾಗೂ ಪೂರ್ತೀ ಕರಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಇಂದು ಅಪರಾಹ್ನ ೩.೩೦ಕ್ಕೆ ಕಾಸರ ಗೋಡು ತಾಳಿಪಡ್ಪು ನಗರಸಭಾ ಮೈದಾ ನದಲ್ಲಿ ನಡೆಯುವ ಕಾರ್ಯಕ್ರದಲ್ಲಿ ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ನಿರ್ವಹಿಸುವರು. ಕೇಂದ್ರ ಸಚಿವರುಗಳಾದ ಡಾ. ವಿ.ಕೆ. ಸಿಂಗ್, ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಪಿ.ಎ. ಮೊಹಮ್ಮದ್ ರಿಯಾ ಸ್, ಸಂಸದ ರಾಜ್‌ಮೋಹನ್ …

ಸ್ಕೂಟರ್ ಕಳವು: ಇಬ್ಬರ ಸೆರೆ

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ ಸ್ಕೂಟರ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಕಾಸರ ಗೋಡು ಪೊಲೀಸ್ ಠಾಣೆಯ ಎಸ್‌ಐ ರಾಮಚಂದ್ರನ್ ಬಂಧಿಸಿದ್ದಾರೆ. ಕಣ್ಣೂರು ತೋಟ್ಟಡ ಮುಬಾರಕ್ ಮಂಜಿಲ್‌ನ  ಮೊಹಮ್ಮದ್ ತ್ವಾಹಾ (೨೧) ಮತ್ತು ವಳಪಟ್ಟಣಂ ಮುಂಡೋ ಲ್ ವಯಲ್‌ನ ಕೆ.ಎನ್. ನಿಬ್ರಾಸ್ (೨೩) ಬಂಧಿತರಾದ ಆರೋಪಿಗಳು. ೨೦೨೩ ನವಂಬರ್ ೫ರಂದು ಕಾಸರಗೋಡು ರೈಲು ನಿಲ್ದಾಣ ಪರಿಸರ ದಲ್ಲಿ ನಿಲ್ಲಿಸಲಾಗಿದ್ದ ಕಾಸರಗೋಡಿನ ಫಾತಿಮಾ ಎಂಬವರ ಸ್ಕೂಟರ್  ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಆರೋಪಿಗಳನ್ನು ಬಂಧಿಸಲಾಗಿದೆ.ಕದ್ದ ವಾಹನವನ್ನು ಆರೋಪಿ …

ಸನ್ನಿಧಾನದಲ್ಲಿ ತೀರ್ಥಾಟಕರಿಗೆ ಪೊಲೀಸ್ ಹಲ್ಲೆ-ದೂರು

ಶಬರಿಮಲೆ: ಸನ್ನಿಧಾನದಲ್ಲಿ ತೀರ್ಥಾಟಕನಿಗೆ ಪೊಲೀಸರು ಹಲ್ಲೆಗೈಯ್ದುದಾಗಿ ಆರೋಪವುಂಟಾಗಿದೆ. ತಮಿಳುನಾಡು ತಂಜಾವೂರು ನಿವಾಸಿ ದಯಾನಂದ್ (೨೪) ಎಂಬವರು ಈ ಬಗ್ಗೆ ಆರೋಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಇವರು ಸನ್ನಿಧಾನದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಿನ್ನೆ ಬೆಳಿಗ್ಗೆ ಹದಿನೆಂಟು ಮೆಟ್ಟಿಲೇರುತ್ತಿದ್ದಾಗ ಪೊಲೀಸ್ ಹಲ್ಲೆಗೈದುದಾಗಿ ದೂರಲಾಗಿದೆ. ಹಲ್ಲೆಗೈದುದನ್ನು ಪ್ರಶ್ನಿಸಿದ ಇತರ ತೀರ್ಥಾಟಕರಿಗೂ ಪೊಲೀಸ್ ಹಲ್ಲೆಗೈದುದಾಗಿ ದೂರಲಾಗಿದೆ.

ಶಬರಿಮಲೆಯಲ್ಲಿ ಅರವಣ ಕ್ಷಾಮ: ತೀರ್ಥಾಟಕರಿಗೆ ಅಸಮಾಧಾನ

ಶಬರಿಮಲೆ: ಶಬರಿಮಲೆಯಲ್ಲಿ ಅರವಣ ಪ್ರಸಾದ ಕ್ಷಾಮ ಮತ್ತೆ ಎದುರಾಗಿದ್ದು, ಇದು ತೀರ್ಥಾಟಕರಲ್ಲಿ ತೀವ್ರ ಅಸಮಾಧಾನಕ್ಕೆ  ಕಾರಣವಾಗಿದೆ. ಪ್ರಸ್ತುತ ಒಬ್ಬರಿಗೆ ಎರಡು ಟಿನ್ ಅರವಣ ಪ್ರಸಾದ ಮಾತ್ರವೇ ನೀಡಲಾಗುತ್ತಿದೆ. ಆದರೆ ಹೆಚ್ಚು ಟಿನ್ ಅರವಣ ಬೇಕಾದವರು ನಿರಾಸೆಗೊಳ್ಳುತ್ತಿದ್ದು, ಕೌಂಟರ್‌ನ ಮುಂದೆ ಇದು ಪ್ರತಿಭಟನೆಗೂ ಕಾರಣವಾಗಿದೆ. ಕಳೆದ ಆರು ದಿನಗಳಿಂದ ಅರವಣ ಕ್ಷಾಮ ಎದುರಾಗಿದೆ. ಆದರೆ ಕ್ಷಾಮ ಪರಿಹರಿಸಲು ದೇವಸ್ವಂ ಮಂಡಳಿಗೆ ಇನ್ನೂ ಸಾಧ್ಯವಾಗಲಿಲ್ಲ. ಅರವಣ ತುಂಬಿಸುವ ಟಿನ್‌ನ ಅಭಾವವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಡಿ. ೨೬ರಂದು ಹೊಸತಾಗಿ ಎರಡು …

ಅಬಕಾರಿ ದಾಳಿ: ನಕಲಿ, ಕರ್ನಾಟಕ ಮದ್ಯ ಪತ್ತೆ; ಇಬ್ಬರ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡು ಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ  ಐದು ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಕರ್ನಾಟಕ ನಿರ್ಮಿ ತ ಮದ್ಯ ಪತ್ತಹಚ್ಚಿ ವಶಪಡಿಸಿ ಕೊಂಡಿದೆ. ಬದಿಯಡ್ಕ ಅಬಕಾರಿ ರೇಂಜ್‌ನ ಇನ್‌ಸ್ಪೆಕ್ಟರ್ ದಿನೇಶನ್ ಕೆ ನೇತೃತ್ವದ ತಂಡ ಬಾಂಜತ್ತಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಟಾಲು ಮೂಲೆಯ ಬಾಲಕೃಷ್ಣನ್ ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.  ಅಬಕಾರಿ ಕಾರ್ಯಾಚರಣೆಯಲ್ಲಿ ಸಿಇಒಗಳಾದ ಮೋಹನ್ ಕುಮಾರ್, ಜನಾರ್ದ ನನ್, ಜೋಬಿ …