ಎಂಡಿಎಂಎ ಸಹಿತ ಓರ್ವ ಸೆರೆ

ಉಪ್ಪಳ: ಮಾದಕವಸ್ತು ಕೈವಶವಿರಿಸಿಕೊಂಡ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಪರ್ವೀನ್ ಮಂಜಿಲ್‌ನ ಯಾಸಿನ್ ಇಮ್ರಾಸ್ ಕೆ.ಎಂ(36)  ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಕೈಯಿಂದ 0.4 ಗ್ರಾಂ ಎಂಡಿಎಂಎ ವಶ ಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ ಕುಂಜತ್ತೂರು ಪೇಟೆಯಲ್ಲಿ ಎಸ್‌ಐ ರತೀಶ್ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಸಂಶಯಾಸ್ಪದ ರೀತಿಯಲ್ಲಿ  ಕಂಡುಬಂದ  ಯಾಸಿನ್ ಇಮ್ರಾಸ್ ನನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.

ನಗರದ ಲಕ್ಷ್ಮೀ ವೆಂಕಟೇಶ ರಸ್ತೆ ಶೋಚನೀಯ ನೀರು ತುಂಬಿಕೊಂಡು ಸ್ಥಳೀಯರಿಗೆ ಆತಂಕ

ಕಾಸರಗೋಡು: ಕಾಸರಗೋಡು ನಗರದ ಬ್ಯಾಂಕ್ ರಸ್ತೆಯಲ್ಲಿ ಬಿ.ಎಂ.ಎಸ್ ಕಚೇರಿ ಬಳಿಯಿಂದ ಐಎಂಎ ಹಾಲ್‌ನತ್ತ ತೆರಳುವ ಲಕ್ಷ್ಮೀ ವೆಂಕಟೇಶ ರಸ್ತೆ ಪೂರ್ಣವಾಗಿ ಹೊಂಡಗಳಿಂದ ತುಂಬಿಕೊಂಡಿದೆ. ಸುಮಾರುಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ವಿವಿಧೆಡೆ ಹೊಂಡಗಳು ತುಂಬಿಕೊಂ ಡು ವಾಹನ ಸಂಚಾರಕ್ಕೆ ಸಮಸ್ಯೆ ಯಾಗಿ ಪರಿಮಿಸಿದೆ. ಮಾತ್ರವಲ್ಲದೆ ರಸ್ತೆ ಬದಿ ಚರಂಡಿ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಇದರಿಂದ ಮಳೆನೀರು ರಸ್ತೆಯಲ್ಲೇ ಕಟ್ಟಿ ನಿಂತಿರುವುದು ಹೊಂಡ ಗಳು ಸೃಷ್ಟಿಯಾಗಲು ಕಾರಣವಾಗಿದೆ. ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿರು ವುದರಿಂದ ರಸ್ತೆ ಬದಿಯ ಖಾಸಗಿ …

ನಾಡೋಜ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಕನ್ನಡ ಭವನ ಶೀಘ್ರ ಲೋಕಾರ್ಪಣೆ- ಸೋಮಣ್ಣ ಬೇವಿನಮರದ

ಕಯ್ಯಾರು: ಬದಿಯಡ್ಕದ ಡಾ. ಕಯ್ಯಾರ ಕಿಂಞಣ್ಣ ರೈ ಕನ್ನಡ ಭವನ ವನ್ನು ಶೀಘ್ರದಲ್ಲೇ ಕರ್ನಾಟಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ ನಡೆಸುವರು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್‌ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕಯ್ಯಾರು, ಕಯ್ಯಾರು 16ನೇ ವಾರ್ಡ್ ಕುಟುಂಬಶ್ರೀ ಘಟಕಗಳ ಸಹಯೋಗದಲ್ಲಿ ನಿನ್ನೆ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ …

ಕಾಂಗ್ರೆಸ್ ಮುಖಂಡ ಜಿ. ರಾಮ ಭಟ್ ನಿಧನ

ಮಂಜೇಶ್ವರ: ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಮೀಯಪದವು ಬಳಿಯ ಗುಳಿಮನೆ ನಿವಾಸಿ ಜಿ. ರಾಮ ಭಟ್ (73) ನಿಧನರಾದರು. ಅಲ್ಪಕಾಲದ ಅಸೌಖ್ಯ ದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ನಿನ್ನೆ ನಿಧನ ಹೊಂದಿ ದ್ದಾರೆ. ಮೃತರು ಪತ್ನಿ ಗೋಪಿ, ಮಕ್ಕಳಾದ ಗೋವಿಂದ ಪ್ರಸಾದ್, ಚೇತನ, ಸೊಸೆ ವಾಣಿ, ಅಳಿಯ ವೆಂಕಟೇಶ್ ಕಿನ್ನಿಂಗಾರ್, ಸಹೋದರ – ಸಹೋದರಿಯರಾದ ಗಣಪತಿ ಭಟ್, ಕೃಷ್ಣ ಕುಮಾರ್ ಭಟ್, ನಾರಾಯಣ ಭಟ್, ಸುಬ್ರಹ್ಮಣ್ಯ …

ಅಸೌಖ್ಯ: ವ್ಯಾಪಾರಿ ನಿಧನ

ಮಂಜೇಶ್ವರ: ಮಜಿಬೈಲ್ ನಿವಾಸಿ, ವ್ಯಾಪಾರಿ ಅರುಣ್ (48) ನಿಧನರಾದರು. ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಬಂಗ್ರಮAಜೇಶ್ವರ ಪೊಯ್ಯಕಂಡ ನದಿ ತೀರ ಬಳಿಯಲ್ಲಿ ಹಲವು ವರ್ಷಗಳಿಂದ ದಿನಸಿ ವ್ಯಾಪಾರಿಯಾಗಿದ್ದರು. ಮೃತರು ಬಾಬು-ಸೇಸಮ್ಮ ದಂಪತಿ ಪುತ್ರರಾಗಿದ್ದಾರೆ. ಪತ್ನಿ ಸುನಿತಾ, ಪುತ್ರ ಅಭೀಶ್, ಸಹೋದರಿಯರಾದ ಪುಷ್ಪಾ, ಭಾರತಿ, ಸರಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ಮಧ್ಯಾಹ್ನ ರಾಮತ್ತಮಜಾಲ್ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಯಿತು.

ಅಸೌಖ್ಯ: ಮಹಿಳೆ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಮಿತ್ತಕನಿಲ ನಿವಾಸಿ ದಿ| ರಾಮಚಂದ್ರರ ಪತ್ನಿ ರೇವತಿ (74) ಪುತ್ರ ಸಚಿನ್‌ರ ಮಜಿಬೈಲ್‌ನಲ್ಲಿ ರುವ ಮನೆಯಲ್ಲಿ ನಿಧನರಾದರು. ಮೃತರು ಇತರ ಮಕ್ಕಳಾದ ಸಂತೋಷ್, ಶರ್ಮಿಳಾ, ಸಹನಾ, ಅಳಿಯ, ಸೊಸೆಯಂದಿರಾದ ವೆಂಕಪ್ಪ ಮಜಿಬೈಲ್, ದಿನೇಶ್ ಪೊಳಲಿ, ಸುಪ್ರೀತ, ವಿನುತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಗೃಹಿಣಿಯ ಮಾಲೆ ಅಪಹರಿಸಿ ಪರಾರಿಯಾಗಲು ಸಮುದ್ರಕ್ಕೆ ಹಾರಿದ ಆರೋಪಿ ಸೆರೆ

ತಿರುವನಂತಪುರ: ಗೃಹಿಣಿಯ ಸರ ಎಳೆದು ತೆಗೆದ ಬಳಿಕ ಪರಾರಿಯಾಗಲು ಸಮುದ್ರಕ್ಕೆ ಹಾರಿದ ಆರೋಪಿಯನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದರು. ತಿರುವನಂತಪುರ ಕಠಿನಂಕುಳಂನಲ್ಲಿ  ಘಟನೆ ನಡೆದಿದೆ. ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾದ ಸುಹೈಲ್‌ನನ್ನು ಪೊಲೀಸರು ಹಾಗೂ ಕೋಸ್ಟಲ್ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದ್ದಾರೆ. ನಿನ್ನೆ ಸಂಜೆ 4 ಗಂಟೆ ವೇಳೆ ಬ್ರದರ್ಸ್ ಚಿಕನ್ ಅಂಗಡಿಯ ಮಾಲಕನಿಗೆ ಕತ್ತಿ ತೋರಿಸಿ ಬೆದರಿಸಿ ಈತ 5000 ರೂ. ಅಪಹರಿಸಿದ್ದನು. ಬಳಿಕ ಅಂಗಡಿ ಯಾತ ನೀಡಿದ ದೂರಿನಂತೆ ಸುಹೈಲ್‌ನನ್ನು ಹಿಡಿಯಲು …

ಟಿವಿ ಧಾರಾವಾಹಿ ನಟ ಕಾಞಂಗಾಡ್ ನಿವಾಸಿ ಕಿರಣ್‌ರಾಜೀವ್ ನಿಧನ

ಕಾಸರಗೋಡು: ಟೆಲಿ ಫಿಲ್ಮ್ ನಟ ಕಾಞಂಗಾಡ್ ವೆಳ್ಳಿಕೋತ್ ಪೆರ್ಲತ್ ನಿವಾಸಿ ಕಿರಣ್‌ರಾಜ್ (29) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಇಂದು ಮಧ್ಯಾಹ್ನ ವೇಳೆ ಮೃತದೇಹವನ್ನು ಊರಿಗೆ ತರಲಾಯಿತು. ಹಲವಾರು ಟಿವಿ ಧಾರಾವಾಹಿಗಳಲ್ಲಿ ಪ್ರಧಾನ ಕಥಾ ಪಾತ್ರದಲ್ಲಿ ಅಭಿನಯಿಸಿದ್ದರು. ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಪೆರ್ಲತ್ ಕಿರಣ್ ನಿವಾಸ್‌ನ ಸಿ. ರಾಜೀವ್- ಕನಕ ರಾಜೀವ್ ದಂಪತಿ ಪುತ್ರನಾಗಿದ್ದಾರೆ. ಕೀರ್ತನ ಸಹೋದರಿಯಾಗಿದ್ದಾಳೆ.

ಪ್ರಕೃತಿ ವಿಕೋಪ: ಜಿಲ್ಲೆಯಲ್ಲಿ ಇದುವರೆಗೆ 77 ಮನೆಗಳು ಆಂಶಿಕ, 3 ಪೂರ್ಣವಾಗಿ ನಾಶ

ಕಾಸರಗೋಡು: ಇದುವರೆಗೆ ಸುರಿದ ಮಳೆಗೆ ಜೂನ್ 2ನೇ ವಾರದಿಂದ 77 ಮನೆಗಳು ಆಂಶಿಕವಾಗಿ ಹಾಗೂ 3 ಮನೆಗಳು ಸಂಪೂರ್ಣವಾಗಿ ನಾಶವಾ ಗಿವೆ. ಮಂಜೇಶ್ವರ ತಾಲೂಕಿನಲ್ಲಿ ಇದುವರೆಗೆ 29 ಮನೆಗಳು ಆಂಶಿಕ ವಾಗಿಯೂ, 3 ಮನೆಗಳು ಪೂರ್ಣವಾಗಿ ನಾಶವಾಗಿದೆ. 13ಕಡೆಗಳಲ್ಲಿ ಗುಡ್ಡೆ ಕುಸಿತ ಉಂಟಾಗಿದೆ. 50 ಕಡೆಗಳಲ್ಲಿ ನೆರೆ ನುಗ್ಗಿದ್ದು, 6 ಬಾವಿಗಳು ಕುಸಿದಿವೆ. 11 ಕುಟುಂಬಗಳನ್ನು ಸಂಬAಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಕಾಸರಗೋಡು ತಾಲೂಕಿನಲ್ಲಿ ಇದುವರೆಗೆ 8 ಮನೆಗಳು ಆಂಶಿಕವಾಗಿ ಹಾನಿಗೊಂಡಿವೆ. 21 ಮನೆಗಳಿಗೆ ನೆರೆ ನೀರು ನುಗ್ಗಿದ್ದು, …

ಬೇಕಲ ಕೋಟೆಯ ಒಂದು ಭಾಗ ಕುಸಿತ

ಕಾಸರಗೋಡು: ಅಂತಾ ರಾಷ್ಟ್ರೀಯ ಪ್ರವಾಸೋದ್ಯಮ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲಕೋಟೆಯ ಒಂದು ಭಾಗ ಧಾರಾಕಾರ ಮಳೆಗೆ ಕುಸಿದುಬಿದ್ದಿದೆ. ಈ ಕೋಟೆಯ ಐದನೇ ನಂಬ್ರದ ಪ್ರವೇಶದ್ವಾರದ ಸಮುದ್ರ ದಡದ ಸಮೀಪದಲ್ಲೇ ಇರುವ ಈ ಕೋಟೆಯ ಒಂದು ಭಾಗ ರಾತ್ರಿ ವೇಳೆ ಕುಸಿದುಬಿದ್ದಿದೆ. ಕಳೆದ ವರ್ಷ ಈ ಜಾಗದಲ್ಲಿ ಕೆಂಪುಕಲ್ಲಿನ ನಡೆಹಾದಿ ನಿರ್ಮಿಸಲಾಗಿದ್ದು, ಅದಕ್ಕೂ ಈಗ ಕುಸಿತದ ಬೆದರಿಕೆ ಉಂಟಾಗಿದೆ. ಕೋಟೆ  ಕುಸಿದುಬಿದ್ದ ಈ ಭಾಗಕ್ಕೆ ಪ್ರವಾಸಿಗರ ಸಂದರ್ಶನಕ್ಕೆ ಈಗ ತಡೆ ಹೇರಲಾಗಿದೆ. ಈ ಭಾಗ ಇನ್ನಷ್ಟು ಕುಸಿದು ಬೀಳದಿರಲು …