ಕಳವು ನಡೆಸಿದ ಸಾಮಗ್ರಿಗಳನ್ನು ಮುಖ್ಯೋಪಾಧ್ಯಾಯರ ಮನೆ ಬಳಿ ಉಪೇಕ್ಷಿಸಿ ಕ್ಷಮೆ ಕೇಳಿದ ಕಳ್ಳ

ತಿರುವನಂತಪುರ: ಶಾಲೆಯಿಂದ ಕಳವುಗೈದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿ ಮುಖ್ಯೋಪಾಧ್ಯಾಯರ ಮನೆಯ ಸಮೀಪ ಉಪೇಕ್ಷಿಸಿ ಕ್ಷಮಾಪಣೆಯ ಪತ್ರ ಕಳ್ಳ ಅಲ್ಲೇ ಇರಿಸಿದ ಘಟನೆ ನಡೆದಿದೆ. ವಾಳಮುಟ್ಟಂ ಸರಕಾರಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿಯಾದ ವೆಂಗಾನೂರ್ ಪನಂಗೋಡು ನಿವಾಸಿಯಾದ ಶ್ರೀಜಾರ ಮನೆಯ ಮುಂದೆ ಗೋಣಿ ಇರಿಸಿದ್ದು, ಕ್ಷಮೆ ಕೇಳಿ ಗೋಡೆಗೆ ಪತ್ರವನ್ನು ಅಂಟಿಸಿದ್ದಾನೆ. ‘ಟೀಚರ್ ನನ್ನನ್ನು ಕ್ಷಮಿಸಿ, ಇನ್ನು ಮುಂದೆ ಯಾವತ್ತೂ  ಹೀಗೆ ಮಾಡೋದಿಲ್ಲ. ನನ್ನ ಮನೆಯವರಿಗೆ ಇದು ತಿಳಿದಿಲ್ಲ.  ಕೇಸು ನೀಡಿ ಜನರಿಗೆ ತಿಳಿಸಿ ನನ್ನ ಮಾನ ಕಳೆಯಬಾರದು’ ಎಂದು ಪತ್ರದಲ್ಲಿ …

ದಾಳಿ ಬೆದರಿಕೆ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಹೈಟೆಕ್ ಭದ್ರತೆ

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದಾಳಿ ಬೆದರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಮ ಮಂದಿರದ ಮತ್ತು  ಸುತ್ತಮುತ್ತಲ ಪ್ರದೇಶಗಳಲ್ಲಿ  ‘೨೪೭ ಕವಚ್’ ಎಂಬ ಹೆಸರಲ್ಲಿ ಹೈಟೆಕ್ ಭದ್ರತೆ ಏರ್ಪಡಿಸಿ ಉತ್ತರ ಪ್ರದೇಶ ಸರಕಾರ ತೀರ್ಮಾನಿಸಿದೆ. ಇದು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಹೊಂದಿದೆ. ದೇವಸ್ಥಾನದ ಮೇಲಿನ ದಾಳಿ ಮತ್ತು ಅತಿಕ್ರಮಣ ತಡೆಯಲು ೯೦ ಕೋಟಿ ರೂ. ವೆಚ್ಚದಲ್ಲಿ ಪೂಲ್ ಪ್ರೂಫ್ ಕವಚ್ ಭದ್ರತೆ ನಿರ್ಮಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ  ಪೊಲೀಸ್ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆಯ ಮಹಾನಿರ್ದೇಕ ಪ್ರಶಾಂತ್ ಕುಮಾರ್ …

ಶಾಪಿಂಗ್ ಕಾಂಪ್ಲೆಕ್ಸ್‌ನಿಂದ ತ್ಯಾಜ್ಯ ನೀರು ತೆರೆದ ಸ್ಥಳಕ್ಕೆ: ಬಿಜೆಪಿ ಕೌನ್ಸಿಲರ್‌ಗಳಿಂದ ಪ್ರತಿಭಟನೆ

ಕಾಸರಗೋಡು: ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣದ ನಗರಸಭಾ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಹೋಟೆಲ್ ಗಳಿಂದ ತ್ಯಾಜ್ಯ ನೀರನ್ನು ಹೊರಗೆ ಹರಿದು ಬಿಡುವುದನ್ನು ಪ್ರತಿಭಟಿಸಿ ಬಿಜೆಪಿ ಕೌನ್ಸಿಲರ್‌ಗಳು ಚಳವಳಿ ನಡೆಸಿದರು.  ನಗರದ ಹೊಸ ಬಸ್ ನಿಲ್ದಾಣ  ಶಾಪಿಂಗ್ ಕಾಂಪ್ಲೆಕ್ಸ್ ಪರಿಸರದ ಆಟೋ ರಿಕ್ಷಾ-ಟ್ಯಾಕ್ಸಿ ಸ್ಟ್ಯಾಂಡ್ ಪರಿಸರದಲ್ಲಿ ತ್ಯಾಜ್ಯ ನೀರು ತುಂಬಿಕೊಂಡು ಆ ನೀರನ್ನು ನೂರಾರು ಮಂದಿ ಮೆಟ್ಟಿಕೊಂಡೇ ನಡೆದು ಹೋಗಬೇಕಾಗುತ್ತಿದೆ. ತ್ಯಾಜ್ಯ ನೀರು ಪರಿಸರದ ಪ್ರದೇಶದಲ್ಲಿ ದುರ್ನಾತ ಬೀರತೊಡಗಿದೆ. ಇದನ್ನು ಪ್ರತಿಭಟಿಸಿ ನಗರಸಭೆಯ ಬಿಜೆಪಿ ಕೌನ್ಸಿಲರ್‌ಗಳು ಪ್ರತಿಭಟನೆ …

ಬೆರಿಪದವು: ಉದ್ಯೋಗ ಖಾತರಿ ಯೋಜನೆಯಲ್ಲಿ ವಂಚನೆ ಆರೋಪಿಸಿ ಪಂ. ಕಾರ್ಯದರ್ಶಿಗೆ ಸಿಪಿಎಂ ದೂರು

ಪೈವಳಿಕೆ: ಪಂಚಾಯತ್‌ನ ಏಳನೇ ವಾರ್ಡ್ ಬೆರಿಪದವಿನಲ್ಲಿ ತೋಡು ಪುನರುದ್ಧಾರ, ಬದಿ ಸಂರಕ್ಷಣೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಸಿಪಿಎಂ ಬಾಯಾರ್ ಲೋಕಲ್ ಸಮಿತಿ  ಆರೋಪಿಸಿದೆ. ಇಲ್ಲಿ ಬಿಜೆಪಿಯ ವಾರ್ಡ್ ಸದಸ್ಯನ ಸಹಾಯದಿಂದ ಜೆಸಿಬಿ ಮೂಲಕ ಕೆಲಸ ನಡೆಸಿ ಅದನ್ನು ಕಾರ್ಮಿಕರಿಂದ ಮಾಡಿಸಲಾ ಗಿದೆ ಎಂದು ದಾಖಲಿಸಿ ಅವ್ಯವಹಾರ ನಡೆಸಲಾಗಿದೆಯೆಂದು ಲೋಕಲ್ ಸಮಿತಿ ಕಾರ್ಯದರ್ಶಿ ಪುರುಷೋ ತ್ತಮ ಬಳ್ಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರ ಕೆಲಸವನ್ನು ಇಲ್ಲದಂತೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಸಿಪಿಎಂ  ಆರೋಪಿಸಿದ್ದು, ಇದರ ವಿರುದ್ಧ …

ಹದಗೆಟ್ಟ ರಸ್ತೆಯಲ್ಲಿ ತುಂಬಿಕೊಂಡ ಮಳೆ ನೀರು: ವಿವಿಧ ಕಡೆ ಸಂಚಾರ ಸಮಸ್ಯೆ

ಉಪ್ಪಳ: ಕಳೆದ ಎರಡು ದಿನ ಗಳಿಂದ ಅನಿರೀP್ಷತವಾಗಿ ಸುರಿದ ಮಳೆಗೆ ನೀರು ರಸ್ತೆಯಲ್ಲಿ ತುಂಬಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಯಾಗಿರುವುದಾಗಿ ದೂರಲಾಗಿದೆ. ಹೆದ್ದಾರಿಯಿಂದ ಕೋಡಿಬೈಲು ರಸ್ತೆಗೆ ಪ್ರವೇಶಿಸುವಲ್ಲಿ ಮಳೆ ನೀರು ಕಟ್ಟಿ ನಿಂತು ಶೋಚನೀಯÁವಸ್ಥೆಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ನಡೆದು ಹೋಗುವ ಜನರ ಮೈಮೇಲೆ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ನಯÁಬಜಾರ್ ಅಂಬಾರು ರಸ್ತೆ, ಪ್ರತಾಪನಗರ ಸಹಿತ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ದುಸ್ತರವಾಗಿದೆ.

ರಾಜ್ಯ ಶಾಲಾ ಕಲೋತ್ಸವ: ಮೊದಲ ದಿನ ಕಲ್ಲಿಕೋಟೆ ಮುನ್ನಡೆ

ಕೊಲ್ಲಂ: ರಾಜ್ಯದಲ್ಲಿ ಶಾಲಾ ಕಲೋತ್ಸವದ ಮೊದಲ ದಿನದ ಸ್ಪರ್ಧೆಗಳು ನಿನ್ನೆ ಸಂಜೆ ಕೊನೆಗೊಂಡಾಗ ಅಂಕಗಳ ಆಧಾರದಲ್ಲಿ ಕಲ್ಲಿಕೋಟೆ ಜಿಲ್ಲೆ ಮುನ್ನಡೆಯಲ್ಲಿದೆ. ಕಲ್ಲಿಕೋಟೆಗೆ ೧೩೯ ಅಂಕಗಳು ಲಭಿಸಿದ್ದು, ೧೩೭ ಅಂಕಗಳೊಂದಿಗೆ ತೃಶೂರು ದ್ವಿತೀಯ ಸ್ಥಾನದಲ್ಲಿದೆ. ೧೩೨ ಅಂಕಗಳೊಂದಿಗೆ ಕಣ್ಣೂರು ತೃತೀಯ, ಆತಿಥೇಯವಾದ ಕೊಲ್ಲಂ ೧೨೬ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕೊಲ್ಲಂನ ಆಶ್ರಮಂ ಮೈದಾನದಲ್ಲಿರುವ ಪ್ರಧಾನ ವೇದಿಕೆಯಲ್ಲಿ ಕಲೋತ್ಸವವನ್ನು ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೀಪ ಬೆಳಗಿಸಿ ಉದ್ಘಾಟಿಸಿದ್ದಾರೆ. ನಿನ್ನೆ ೫೯ ಸ್ಪರ್ಧೆಗಳು ನಡೆದಿದೆ. ಐದು ದಿನಗಳ ಕಾಲ …

ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಉಪ್ಪಳ: ಹಳಿದಾಟುತ್ತಿದ್ದಾಗ ರೈಲು sಢಿಕ್ಕಿ ಹೊಡೆದು ಮಹಿಳೆಯೋವೆÀð ಮೃತಪಟ್ಟ್ಟಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ಬಳಿಯ ನಿವಾಸಿ ದಿ| ಪರಮೇಶ್ವರ – ದಿ| ಪುತ್ತಮ್ಮ ದಂಪತಿ ಪುತ್ರಿ ಚಂದ್ರಾವತಿ (೫೩) ಮೃತಪಟ್ಟವರು. ನಿನ್ನೆ ಸಂಜೆ ಘಟನೆ ನಡೆದಿದೆ. ಸಮುದ್ರ ತೀರದಲ್ಲಿ ರುವ ತರವಾಡು ಮನೆಯಿಂದ ಮನೆಗೆ ತೆರಳುತ್ತಿದ್ದಾಗ ಮನೆ ಪರಿಸರದ ಹಳಿದಾ ಟುತ್ತಿದ್ದಂತೆ ಮಂಗಳೂರಿನಿAದ ಕಾಸರ ಗೋಡಿಗೆ ಆಗಮಿಸುತ್ತಿದ್ದ ಎಕ್ಸ್ಪ್ರೆಸ್ ರೈಲು ಗಾಡಿ ಢಿಕ್ಕಿಹೊಡೆದು ಪರಿಸರದ ಹೊಂಡಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. …

ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾದ ಯುವತಿ ಹೊಳೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಎರಡು ತಿಂಗಳ ಹಿಂದೆಯಷ್ಟೇ ವಿವಾಹಿತಳಾದ ಯುವತಿ ಹೊಳೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉದುಮ ಕಾಪ್ಪಿಲ್ ಕೋಡಿ ರಸ್ತೆ ಪರಿಸರದ ನಿವಾಸಿ ಅಟೋ ರಿಕ್ಷಾ ಚಾಲಕ ಮುಹಮ್ಮದಲಿ-ಜುಬೈದಾ ದಂಪತಿ ಪುತ್ರಿ ವಿ.ಎಸ್. ತಫ್‌ಸೀಫಾ (೨೭) ಸಾವನ್ನಪ್ಪಿದ ನವವಧು. ಇವರು ನಿನ್ನೆ ಸಂಜೆ ಸುಮಾರು ೬.೩೦ರ ವೇಳೆ ಉದುಮ ಕಾಪ್ಪಿಲ್ ಹೊಳೆಯಲ್ಲಿ ಬಿದ್ದ ಸ್ಥಿತಿಯಲ್ಲಿ ಊರವರು ಪತ್ತೆಹಚ್ಚಿದ್ದಾರೆ. ತಕ್ಷಣ  ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.  …

ಪತ್ನಿ ಆಸ್ಪತ್ರೆಯಲ್ಲಿ ದಾಖಲು: ಪತಿ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಪತ್ನಿಯನ್ನು ಅಸೌಖ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಿಸಿದ ಬೆನ್ನಲ್ಲೇ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ  ಘಟನೆ ನಡೆದಿದೆ. ಅಡೂರು ಉರುಡೂರು ಪೇಲಮರ್ವ ಹೌಸ್‌ನ ಸೋಮೋಜಿ ರಾವ್‌ರ ಪುತ್ರ ರಾಮಕೃಷ್ಣ ರಾವ್ (೭೦) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ರಾಮಕೃಷ್ಣ ರಾವ್ ಹಾಗೂ ಪತ್ನಿ ಮಾತ್ರವೇ ವಾಸವಾಗಿದ್ದಾರೆ. ಪತ್ನಿ ಲೀಲಾವತಿಯನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಕಾಸರಗೋಡಿನ ಆಯುರ್ವೇದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಮಧ್ಯೆ ರಾಮಕೃಷ್ಣ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಘಟನೆ ಬಗ್ಗೆ ಆದೂರು ಪೊಲೀಸರು …

ಶ್ರೀರಾಮಕ್ಷೇತ್ರಕ್ಕೆ ಬಾಂಬ್ ಬೆದರಿಕೆ:  ಇಬ್ಬರು ಸೆರೆ

ಲಕ್ನೋ: ಅಯೋಧ್ಯೆಯ ಶ್ರೀ ರಾಮಕ್ಷೇತ್ರವನ್ನು ಬಾಂಬ್ ಇರಿಸಿ ನಾಶಪಡಿಸುವುದಾಗಿ ಸಾಮಾಜಿಕ ಜಾಲ ತಾಣದ ಮೂಲಕ  ಬೆದರಿಕೆ ಯೊಡ್ಡಿದ ಇಬ್ಬರನ್ನು ಬಂಧಿಸಲಾಗಿದೆ. ತಹರ್ ಸಿಂಗ್, ಓಂಪ್ರಕಾಶ್ ಮಿಶ್ರ ಎಂಬಿವರು ಸೆರೆಯಾದವರು.  ಸುಬೈರ್ ಖಾನ್ ಎಂ ಬಾತ ಬೆದರಿಕೆ ಸಂದೇಶಕ್ಕೆ ನೇತೃತ್ವ ನೀಡಿ ದ್ದು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಈತನಿಗೆ ಪಾಕಿಸ್ತಾನದ ಉಗ್ರಗಮಿ ಸಂW ಟನೆಯಾದ ಐಎಸ್‌ಐ ಯೊಂದಿಗೆ ಸಂಪ ರ್ಕವಿದೆಯೆಂದು ಪೊಲೀಸರು ತಿಳಿಸಿ ದ್ದಾರೆ. ಲಕ್ನೋದ ಗೋಮ್ತಿ ನಗರದಿಂದ  ಉತ್ತರಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಇವರನ್ನು ಸೆರೆಹಿಡಿದಿದೆ.