೧೦೬ ಪ್ಯಾಕೆಟ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮದ ಪೆರಿಯಡ್ಕ ಜಂಕ್ಷನ್‌ನಲ್ಲಿ ರಸ್ತೆ ಬಳಿಯ ಮಜಲ್‌ನಲ್ಲಿ ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಜನಾರ್ದನನ್ ಕೆ.ಯು. ಅವರ ನೇತೃತ್ವದ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಕರ್ನಾಟಕ ನಿರ್ಮಿತ ೧೮೦ ಎಂ.ಎಲ್‌ನ ೧೬೦ ಟೆಟ್ರಾ ಪ್ಯಾಕೆಟ್ ಮದ್ಯ (೧೯.೦೮ ಲೀಟರ್) ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೊಗ್ರಾಲ್ ಪುತ್ತೂರು ಮಜಲ್ ಶಿವಕೃಪಾ ವೀಟಿಲ್‌ನ ಅಶೋಕನ್ (೪೩) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ …

ಎಂಡಿಎಂಎ ಸಹಿತ ಯುವಕನ ಸೆರೆ

ಉಪ್ಪಳ: ಹಲವು ಪ್ರಕರಣ ಗಳಲ್ಲಿ ಆರೋಪಿಯಾದ ಯುವಕನನ್ನು ಎಂಡಿಎಂಎ ಸಹಿತ ಸೆರೆಹಿಡಿಯ ಲಾಗಿದೆ. ಮೊರತ್ತಣೆ ಕಜೆಕ್ಕೋಡಿಯ ಮೊಹಮ್ಮದ್ ಅಸ್ಕರ್ (೨೬) ಎಂಬಾತನನ್ನು ಎಸ್‌ಐ ನಿಖಿಲ್ ನೇತೃ ತ್ವದ ಪೊಲೀಸರು ಸೆರೆಹಿಡಿದಿದ್ದಾರೆ.  ನಿನ್ನೆ ಸಂಜೆ ೬ ಗಂಟೆ ವೇಳೆ ಬಟ್ಯಪದವಿ ನಲ್ಲಿ ಸಂಶಯಾಸ್ಪದ ರೀತಿ ಯಲ್ಲಿ ಕಂಡುಬಂದ ಮೊಹಮ್ಮದ್ ಅಸ್ಕರ್ ನ ದೇಹ ತಪಾಸಣೆ ನಡೆಸಿದಾಗ  ೦.೪೨ ಗ್ರಾಂ ಎಂಡಿಎಂಎ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಈ ಹಿಂದೆ ಮಾದಕವಸ್ತು ಹಾಗೂ ಹಲ್ಲೆ ಪ್ರಕರಣಗಳೂ ದಾಖಲಾಗಿ ಯೆಂದು …

ಆಪ್ತ ಸ್ನೇಹಿತನಿಂದಲೇ ಯುವಕನ ಕೊಲೆ

ತಿರುವನಂತಪುರ: ಆಪ್ತ ಸ್ನೇಹಿತನೇ ಯುವಕನನ್ನು ಇರಿದು ಕೊಲೆಗೈದ ಭೀಕರ ಕೃತ್ಯ ತಿರುವನಂತಪುರದ ಕಮಲೇಶ್ವರಂ ಎಂಬಲ್ಲಿ ನಡೆದಿದೆ. ಕಮಲೇಶ್ವರಂ ನಿವಾಸಿ ಸುಜಿತ್ ಎಂಬವರು ಕೊಲೆಗೀಡಾದ ವ್ಯಕ್ತಿ. ಈ ಸಂಬಂಧ ಸುಜಿತ್‌ರ ಸ್ನೇಹಿತ ಜಯನ್ ಪೂಂದುರ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮದ್ಯಪಾನ ವೇಳೆ ಉಂಟಾದ ತರ್ಕವೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಘಟನೆ ಬಳಿಕ ಆರೋಪಿಯೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.

ಕೈಕಂಬ: ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡದಿಂದ ಅಪಾಯ

ಉಪ್ಪಳ: ಕೈಕಂಬ ಪೇಟೆಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಈ ಪ್ರದೇಶದಲ್ಲಿ ದಿನನಿತ್ಯ ನೂರಾರು ಜನರ ಸಂಚಾರವಿದ್ದು ರಾತ್ರಿ ಹೊತ್ತಲ್ಲಿ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಅನಾಹುತ ಸಂಭವಿಸಬಹುದಾಗಿದೆ. ಒಂದು ತಿಂಗಳ ಹಿಂದೆ ಹೊಂಡ ತೋಡಲಾ ಗಿದೆ. ವಿದ್ಯುತ್ ಕೇಬಲ್ ಅಳವಡಿಸಲಾದರೂ ಹೊಂಡ ಮುಚ್ಚದೆ ಬಿಟ್ಟಿರುವುದು ಅಧಿಕೃತರ ನಿರ್ಲಕ್ಷ÷್ಯವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಂಡದಿAದ ಈ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ತೆರಳಲು ಕೂಡಾ ಸಮಸ್ಯೆಯÁಗಿರುವುದಾಗಿಯೂ ದೂರಲಾಗಿದೆ. ಕಳೆದ ಎರಡು ದಿನಗಳಿಂದ ಮಳೆ …

ರಾಜ್ಯ ಶಾಲಾ ಕಲೋತ್ಸವಕ್ಕೆ ಚಾಲನೆ

ಕೊಲ್ಲಂ: ಏಷ್ಯಾದಲ್ಲೇ ಅತೀ ದೊಡ್ಡ ಮಕ್ಕಳ ಕಲೋತ್ಸವವಾಗಿ ರುವ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ಕೊಲ್ಲಂ ನಗರದಲ್ಲಿ ಇಂದು ಚಾಲನೆ ದೊರಕಿದೆ. ಒಟ್ಟು ೨೪ ವೇದಿಕೆಗಳನ್ನು ಇದಕ್ಕಾಗಿ ನಿರ್ಮಿಸಲಾಗಿದೆ. ಇದ ರಲ್ಲಿ ಶಾಲಾ ಕಲಾಪ್ರತಿಭೆಗಳು ತಮ್ಮ ಕಲಾ ಪ್ರತಿಭೆಗಳನ್ನು ಪ್ರದರ್ಶಿಸು ವರು. ಎಲ್‌ಪಿ, ಹೈಸ್ಕೂಲ್ ಮತ್ತು  ಹೈಯರ್ ಸೆಕೆಂಡರಿ ವಿಭಾಗಗಳಿಂ ದಾಗಿ ಒಟ್ಟು  ೧೪,೦೦೦ ಕಲಾಪ್ರತಿ ಭೆಗಳು  ಕಲೋತ್ಸವದಲ್ಲಿ ಭಾಗವಹಿಸಿ ವೇದಿಕೆಗಳಲ್ಲಿ ತಮ್ಮ ಕಲೆಗಳನ್ನು ಅನಾವರಣಗೊಳಿಸು ವರು.  ವಿವಿಧ ರೀತಿಯ ಒಟ್ಟು ೨೩೯ ಸ್ಪರ್ಧೆಗಳು ಈ …

ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಪಾದಚಾರಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲ ಶ್ರೀ ಕುರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ (ಕಡವನ್) ಬೇಕಲ ವಿಷ್ಣುಮಠದ ಯಜಮಾನ್ ನಗರದ ಕುಂಞಿರಾಮನ್ ಕಡವನ್ (೬೫) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಸಂಜೆ  ಬೇಕಲ ಚಿರಮ್ಮಲ್ ಸರಕಾರಿ ಶಾಲೆ  ಬಳಿಯ ರಾಜ್ಯ ಹೆದ್ದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ   ಆ ದಾರಿಯಾಗಿ ಬಂದ ಬುಲ್ಲೆಟ್ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಗಂಭೀರಗಾಯಗೊಂಡ ಅವರನ್ನು  ಉದುಮದ ಆಸ್ಪತ್ರೆಗೆ ಸಾಗಿಸಿ  ಪ್ರಾಥಮಿಕ ಚಿಕಿತ್ಸೆ ಕೊಡಿಸಿದ …

ಸಹಕಾರಿ ಠೇವಣಿಗೆ ೦.೭೫ ಶೇ.ವರೆಗೆ ಬಡ್ಡಿ ಹೆಚ್ಚಳ

ತಿರುವನಂತಪುರ: ಪ್ರಾಥಮಿಕ ಸಹಕಾರಿ ಸಂಘಗಳ ಹಾಗೂ ಕೇರಳ ಬ್ಯಾಂಕ್‌ನ ಠೇವಣಿಗಳ ಬಡ್ಡಿದರವನ್ನು ೦.೫ ಶೇ.ದಿಂದ ೦.೭೫ ಶೇಕಡಾವರೆಗೆ ಹೆಚ್ಚಿಸಲಾಗಿದೆ ಎಂದು ಸಚಿವ ವಿ.ಎನ್. ವಾಸವನ್ ತಿಳಿಸಿದ್ದಾರೆ. ಬಡ್ಡಿ ನಿರ್ಣಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಹಕಾರಿ ಠೇವಣಿ ಸಂಗ್ರಹದ ಮೂಲಕ ೯,೦೦೦ ಕೋಟಿ ರೂ.ವನ್ನು ಗುರಿ ಇರಿಸಲಾಗಿದೆ. ಒಂದು ಮನೆಯಿಂದ ಒಂದು ಹೊಸ ಖಾತೆ ಎಂಬ ಪ್ರಚಾರದೊಂದಿಗೆ ಆರಂಭಿಸುವ ಕಾರ್ಯಕ್ರಮ ಈ ತಿಂಗಳ ೧೦ರಿಂದ ಆರಂಭಗೊಳ್ಳುವುದು. ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳ ಮೂಲಕ ೭೨೫೦ ಕೋಟಿ ರೂ. …

ನೀರ್ಚಾಲು ಕೆಎಸಿಎಂ ಸಹಕಾರಿ ಸಂಘ ವಾರ್ಷಿಕ ಮಹಾಸಭೆ

ಬದಿಯಡ್ಕ: ಕಾಸರಗೋಡು ಕೃಷಿಕರ ಮಾರುಕಟ್ಟೆ ಸಹಕಾರಿ ಸಂಘ ನೀರ್ಚಾಲು ಇದರ ವಾರ್ಷಿಕ ಮಹಾ ಸಭೆ ನೀರ್ಚಾಲು ಪ್ರಧಾನ ಕಚೇರಿಯಲ್ಲಿ ಜರಗಿತು. ಸಂಘದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇ ಶಕರಾದ ಶಶಿಕಲಾ, ವೆಂಕಟ್ರಮಣ ಭಟ್, ಬಾಲಗೋಪಾಲ, ರಾಮಕೃಷ್ಣ ಹೆಬ್ಬಾರ್ ಉಪಸ್ಥಿತರಿದ್ದರು. ಕಾರ್ಯ ದರ್ಶಿ ಅಪ್ಪಣ್ಣ ವರದಿ, ಬಜೆಟ್ ಮಂಡಿಸಿದರು. ಸಹಕಾರ ಭಾರತಿಯ ಜಿಲ್ಲಾ ಕಾರ್ಯದರ್ಶಿ ಶಂಕರನಾ ರಾಯಣ ಕಿದೂರು, ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ವಾಶೆ ಶ್ರೀಕೃಷ್ಣ ಭಟ್, ನೀರ್ಚಾಲು ಮಿಲ್ಕ್ ಸೊಸೈಟಿ ಅಧ್ಯಕ್ಷ ಉದನೇಶ ವೀರ …

ಅಯೋಧ್ಯೆಯ ಮಂತ್ರಾಕ್ಷತೆ ಮನೆಗಳಿಗೆ ವಿತರಣೆ

ಮಂಜೇಶ್ವರ: ಅಯೋಧ್ಯೆಯಲ್ಲಿ ಜನವರಿ ೨೨ ರಂದು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ಅಯೋಧೆÀ್ಯಯಲ್ಲಿ ಪೂಜಿಸಿ ತಂದ ಮಂತ್ರಾಕ್ಷತೆಯನ್ನು ದೈಗೋಳಿ ರಾಮಕೃಷ್ಣ ಭಜನಾ ಮಂದಿರದ ಸದಸ್ಯರು ಮನೆ ಮನೆಗೆ ತಲುಪಿಸುವಂ ತಹ ಕಾರ್ಯಕ್ಕೆ ವಿದ್ವಾನ್ ರಾಮ್ ಭಟ್ ಬೋಳಂತ ಕೋಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂದಿ ರದ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಭಟ್, ಶಂಕರ ನಾರಾ ಯಣ ಭಟ್, ಧಾರ್ಮಿಕ ಮುಖಂಡ ಸಂತೋಷ್ ಶೆಟ್ಟಿ ದೈಗೋಳಿ, …

ಜೆಸಿಐ ರಾಷ್ಟ್ರೀಯ ಅಧ್ಯಕ್ಷನಿಗೆ ಸ್ವಾಗತ

ಕಾಸರಗೋಡು:   ಜ್ಯೂನಿಯರ್ ಚೇಂಬರ್ ಇಂಟರ್ ನೇಶನಲ್ ಇಂಡಿಯಾದ ನೂತನ ವರ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾ ದ ನ್ಯಾಯವಾದಿ ರಾಖೇಶ್ ಶರ್ಮಾರಿಗೆ  ಕಾಸರಗೋಡು ರೈಲು ನಿಲ್ದಾಣದಲ್ಲಿ ಜೆಸಿಐ ವತಿಯಿಂದ ಸ್ವಾಗತ ಕೋರಲಾಯಿತು. ಪ್ರಬಾರ ಅಧ್ಯಕ್ಷ ಮೊಯಿನುದ್ದೀನ್ ಹೂಗುಚ್ಛ ನೀಡಿದರು. ರಜೀಶ್ ಉದುಮ, ವಲಯ ಉಪಾಧ್ಯಕ್ಷ ಯತೀಶ್ ಬಲ್ಲಾಳ್, ಎ.ವಿ. ವಾಮನ್ ಕುಮಾರ್, ನಾಗೇಶ್ ಕೆ, ಎ.ಕೆ. ಶ್ಯಾಮ್ ಪ್ರಸಾದ್, ಪ್ರಸಾದ್, ಶಿಹಾಬ್, ಮಿಥುನ್ ಜಿ.ವಿ, ಸಾದಿಖ್ ಮೇರಿ, ನಾಗೇಶ್ ಭಾಗವಹಿಸಿದರು.