ಸುದೆಂಬಳ ಸಂಕ ಶೋಚನೀಯಾವಸ್ಥೆಯಲ್ಲಿ ವಾಹನ ಸಂಚಾರಕ್ಕೆ ಭೀತಿ

ಪೈವಳಿಕೆ: ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ಸುದೆಂಬಳದಲ್ಲಿ ಸಂಕವೊಂದು ಶೋಚನೀಯಾವ್ಥೆಯ ಲ್ಲಿದ್ದು, ವಾಹನ ಸಂಚಾರ್ಕಕೆ ಭೀತಿ ಸೃಷ್ಟಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಕನಿಯಾ-ಬಳ್ಳೂರು ರಸ್ತೆಯ ಸುದೆಂಬಳದಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಸಂಕ ಶೋಚನೀಯಾವಸ್ಥೆಯಲ್ಲಿದೆ. ಸಂಕದ ಅಡಿ ಭಾಗದ ಕಾಂಕ್ರೀಟ್  ಬಿದ್ದು ಹೋಗಿ ಕಬ್ಬಿಣದ ಸಲಾಕೆ ಗೋಚರಿ ಸುತ್ತಿದೆ. ಅಗಲ ಕಿರಿದಾದ ಸಂಕದಲ್ಲಿ ಆಗಾಗ ಅಪಘಾತವೂ ಸಂಭವಿಸು ತ್ತಿದೆ. ಮಾತ್ರವಲ್ಲ ಸಂಕದ ಒಂದು ಬದಿಗೆ ನಿರ್ಮಿಸಲಾದ ಕಬ್ಬಿಣದ ಬೇಲಿ ವಾಹನ ಢಿಕ್ಕಿಯಾಗಿ ಹಾನಿಗೊಂಡಿದೆ. ಈ ರಸ್ತೆಯಿಂದ ದಿನನಿತ್ಯ …

ಕರಸೇವಕನ ಬಂಧನ ಕರ್ನಾಟಕದಾದ್ಯಂತ ಇಂದು ಪ್ರತಿಭಟನೆ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವನ್ನು ಖಂಡಿಸಿ ಇಂದು ಕರ್ನಾಟಕ ಸರಕಾರದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ರಾಜ್ಯ ಸರಕಾರ ಹಿಂದೂ ವಿರೋಧಿ ಎಂಬುವುದನ್ನು ದೇಶದ ಜನತೆಗೆ ಪದೇ ಪದೇ ನೆನಪು ಹುಟ್ಟಿಸುವ ಕೆಲಸ ಮಾಡುತ್ತಿದೆಯೆಂದು ಅವರು ಆರೋಪಿಸಿದರು. ಹುಬ್ಬಳ್ಳಿಯಲ್ಲಿ ೩೧ ವರ್ಷ ಹಳೆಯ ಕೇಸಿನಲ್ಲಿ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಯನ್ನು ಬಂಧಿಸಿದ್ದನ್ನು ಖಂಡಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ನಯಬಜಾರ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ವಿಳಂಬ ಆರೋಪ

ಉಪ್ಪಳ: ನಯಬಜಾರ್‌ನಲ್ಲಿ ಸರ್ವೀಸ್ ರಸ್ತೆ ಇಕ್ಕೆಡೆಗಳಲ್ಲಿ ನಿರ್ಮಾಣಗೊಂಡಿದ್ದರೂ ಅಂಡರ್ ಪಾಸ್‌ನಿರ್ಮಾಣ ಕಾಮಗಾರಿ ಇನ್ನೂ ಪೂರ್ತಿಗೊಳ್ಳದ ಹಿನ್ನೆಲೆಯಲ್ಲಿ ಇಕ್ಕೆಡೆಯಲ್ಲಿರುವ ಆಸ್ಪತ್ರೆ ಸಹಿತ ಸರಕಾರಿ ಕಚೇರಿಗಳಿಗೆ ತೆರಳಲು ತೀವ್ರ ಸಮಸ್ಯೆ ಉಂಟಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಇದೀಗ ಎರಡು ಭಾಗದ ಸರ್ವೀಸ್ ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿದೆ.ಮಧ್ಯ ಭಾಗದಲ್ಲಿರುವ ಹೆದ್ದಾರಿ ರಸ್ತೆ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಎರಡು ಕಡೆ ಅಲ್ಲಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದರಿಂದ ಅಂಬಾರು, ಚೆರುಗೋಳಿ, ಪ್ರತಾಪನಗರ, ಸೋಂಕಾಲು ಸಹಿತ ಪರಿಸರ ಪ್ರದೇಶದ ಜನರಿಗೆ ರಸ್ತೆಯ ಇಕ್ಕೆಡೆಯಲ್ಲಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, …

ರಾಜ್ಯ ಶಾಲಾ ಕಲೋತ್ಸವ ನಾಳೆಯಿಂದ

ಕೊಲ್ಲಂ: ರಾಜ್ಯ ಶಾಲಾ ಕಲೋತ್ಸವಕ್ಕಾಗಿ ಕೊಲ್ಲಂ ನಗರ ಸಿದ್ಧಗೊಂಡಿದೆ. ೨೪ ವೇದಿಕೆಗಳಲ್ಲಾಗಿ ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗಗಳ ೨೩೯ ವಿಭಾಗ ಸ್ಪರ್ಧೆಗಳಲ್ಲಿ ೧೪ ಸಾವಿರ  ಪ್ರತಿಭೆಗಳು ಭಾಗವಹಿಸುವರು. ನಾಳೆ ಬೆಳಿಗ್ಗೆ ೧೦ ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೀಪ ಬೆಳಗಿಸುವರು.  ಅತ್ಯಂತ ಹೆಚ್ಚು ಅಂಕಗಳನ್ನು ಪಡೆಯುವ ಜಿಲ್ಲೆಗೆ ನೀಡುವ ಚಿನ್ನದ ಕಪ್‌ನ್ನು ಇಂದು ಮಧ್ಯಾಹ್ನ  ಕುಳಕ್ಕಡದಲ್ಲಿ ಸಚಿವರಾದ ಕೆ.ಎನ್. ಬಾಲಗೋಪಾಲ್, ಜೆ. ಚಿಂಜುರಾಣಿ, ಕೆ.ಬಿ. ಗಣೇಶ್ ಕುಮಾರ್ ಎಂಬಿವರು ಸ್ವೀಕರಿಸಿದರು. ನಿನ್ನೆ ಕಲ್ಲಿಕೋಟೆಯಿಂದ ಈ ಚಿನ್ನದ ಕಪ್‌ನ್ನು …

ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕ ಪದಾಧಿಕಾರಿಗಳು

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಡಾ| ಟಿ.ಕೆ. ಜಯಪ್ರಕಾಶ್ ನಾರಾಯಣ, ಗೌರವ ಕಾರ್ಯದರ್ಶಿಗಳಾಗಿ ಶೇಖರ ಶೆಟ್ಟಿ ಕೆ, ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ, ಕೋಶಾಧಿಕಾರಿಯಾಗಿ ಡಾ| ಬಿ. ರಾಜಗೋಪಾಲ್, ಸಂಘಟನಾ ಕಾರ್ಯದರ್ಶಿಗಳಾಗಿ ವಿಶಾಲಾಕ್ಷ ಪುತ್ರಕಳ, ಪಿ. ರಾಮಚಂದ್ರ ಭಟ್, ಸದಸ್ಯರಾಗಿ ಕವಿತಾ ಕೂಡ್ಲು, ಡಾ. ಆಶಾಲತಾ ಸಿ.ಕೆ, ಪ್ರವೀಣ್ ಕುಮಾರ್, ವಿದ್ಯಾವಾಣಿ ಮಠದಮೂಲೆ, ಆಯಿಷಾ ಎ ಎ ಪೆರ್ಲ, ದೇವದಾಸ ಕೆ, ನ್ಯಾಯವಾದಿ ಥೋಮಸ್ ಡಿ’ಸೋಜಾ …

ದೇಲಂತೊಟ್ಟು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ ಇಂದಿನಿಂದ

ಉಪ್ಪಳ: ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಆರಂಭಗೊAಡಿದ್ದು, ನಾಳೆ ಸಮಾಪ್ತಿಗೊಳ್ಳಲಿzಟೆ. ಇಂದು ಪ್ರಾತಕಾಲ ಮಹಾಪೂಜೆ, ದೀಪ ಪ್ರತಿಷ್ಠೆ ಹರಿನಾಮ ಸಂಕೀರ್ಥನೆ ನಡೆಯಿತು. ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ ಸಂಜೆ ತನಕ ನಡೆಯಲಿದೆ. ಸಂಜೆ ೬ರಿಂದ ದೇವತಾ ಪ್ರಾರ್ಥನೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ, ೭ರಿಂದ ಊರ ಪ್ರತಿಭೆಗಳಿಂದ ಸಾಂಸ್ಕöÈತಿಕ ವೈಭವ ನಡೆಯಲಿದೆ. ನಾಳೆ ಪ್ರಾತಕಾಲ ೬ರಿಂದ ಗಣಪತಿ ಹೋಮ ವಿವಿಧ ವೈಧಿಕ ಕಾರ್ಯಕ್ರಮ, ೯.೩೦ರಿಂದ ಯಕ್ಷಗಾನ ತಾಳಮದ್ದಳೆ, ೧೨.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, …

ಉಪ್ಪಳ ಬಿ.ಆರ್.ಸಿಯಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಬರಹಕೂಟ

ಉಪ್ಪಳ:ಎಸ್ ಎಸ್ ಕೆ ಕಾಸರಗೋಡು ಬಿ ಆರ್ ಸಿ ಮಂಜೇಶ್ವರ ಇದರ ನೇತೃತ್ವದಲ್ಲಿ ಮಂಜೇಶ್ವರ ಬಿ ಆರ್ ಸಿ ಮಟ್ಟದ ಪ್ರತಿಭಾ ಕೇಂದ್ರಗಳ ಬರಹ ಕೂಟ ಕಾರ್ಯಾಗಾರ ಉಪ್ಪಳ ಬಿ ಆರ್ ಸಿ ಯಲ್ಲಿ ಜರಗಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್ ಉ¥್ತ[ಟಿಸಿ ಮಾತನಾಡಿ, ಪ್ರತಿಭಾ ಕೇಂದ್ರಗಳು ಪ್ರಾದೇಶಿಕ ಪರಿಸರದ ಮಕ್ಕಳ ಪ್ರತಿಭೆಯ ಅನಾವರಣ ಕೇಂದ್ರವಾಗಿದೆ. ಇದು ಮಕ್ಕಳ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶ್ರಮವಹಿಸುತ್ತಿದ್ದು ಉತ್ತಮ ಅಡಿಪಾಯವನ್ನು ಒದಗಿಸುತ್ತಿದ್ದು ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತಿದೆ …

ರಾಜ್ಯದ ಎಲ್ಲಾ ದನಗಳಿಗೂ ವಿಮೆ ಸಂರಕ್ಷಣೆ-ಸಚಿವೆ

ತಿರುವನಂತಪುರ:  ರಾಜ್ಯದ ಎಲ್ಲಾ ದನಗಳಿಗೂ ವಿಮೆ ಸಂರಕ್ಷಣೆ ಖಚಿತಪಡಿಸಲು  ಕೇಂದ್ರ ಸರಕಾರದ ಜೊತೆಗೂಡಿ ಯೋಜನೆಗೆ  ರೂಪು ನೀಡುತ್ತಿ ರುವುದಾಗಿ ಸಚಿವೆ ಜೆ. ಚಿಂಜುರಾಣಿ ನುಡಿದರು.  ಕೇಂದ್ರ ಸರಕಾರದ ಒಪ್ಪಿಗೆ ಲಭಿಸಿದರೆ ಮೂರು ವರ್ಷದಲ್ಲಿ ಈ ಕಾರ್ಯ ಜ್ಯಾರಿಯಾಗುವು ದೆಂದ ಸಚಿವೆ ತಿಳಿಸಿದರು. ವೆಳ್ಳಿ ಯಾಮಾಟಂ ಕೆ.ಕೆ.ಪರಂಬಿಲ್ ಮ್ಯಾಥ್ಯೂ ಬೆನ್ನಿ ಎಂಬ ಕೃಷಿಕನ ಮನೆಗೆ ಭೇಟಿ ನೀಡಿದ ಸಚಿವೆ ಈ ವಿಷಯ ತಿಳಿಸಿದ್ದಾರೆ.  ಮ್ಯಾಥ್ಯು  ಬೆನ್ನಿಯ ೧೩ ಹಸುಗಳು ವಿಷಾಹಾರ ಸೇವಿಸಿ ಅಸುನೀಗಿ ದ್ದವು. ಈ ಹಿನ್ನೆಲೆಯಲ್ಲಿ ಸಚಿವ …

ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ ವಾರ್ಷಿಕ ಜಾತ್ರೆ ೨೨ರಿಂದ

ಬೆಳ್ಳೂರು: ಇಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ ಈ ತಿಂಗಳ ೨೨, ೨೩ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಪೂರ್ವಭಾವಿ ಯಾಗಿ ೧೫ರಂದು ಗೊನೆ ಮುಹೂರ್ತ ನಡೆಯಲಿದೆ. ೨೧ರಂದು ಸಂಜೆ ೪ ಗಂಟೆಗೆ ನಾಟೆಕಲ್ಲು ಶ್ರೀ ಅಯ್ಯಪ್ಪ ಜನಾಮಂದಿರ, ಹರಿನಗರ ಶ್ರೀ ಗಣೇಶ ಮಂದಿರ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ ೫ ಗಂಟೆಗೆ ಉಗ್ರಾಣ ತುಂಬಿಸುವುದು, ೬ಕ್ಕೆ ಭಜನೆ, ೭ರಿಂದ ವೈದಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ೨೨ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ನವಕ, …

ಕೇರಳ ಪೆನ್ಶನರ್ಸ್ ಸಂಘ ಜಿಲ್ಲಾ ಸಮ್ಮೇಳನ

ಹೊಸಂಗಡಿ: ಕೇರಳ ಪೆನ್ಶನರ್ಸ್ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಇತ್ತೀಚೆಗೆ ವಾಮಂಜೂರು ಶ್ರೀ ಗುರುನರಸಿಂಹ ಸಭಾ ಭವನದಲ್ಲಿ ನಡೆಯಿತು. ಸಮಿತಿ ಜಿಲ್ಲಾಧ್ಯಕ್ಷ ಮುತ್ತುಕೃಷ್ಣನ್ ಕೆ ಅಧ್ಯಕ್ಷತೆ ವಹಿಸಿದರು. ಕುಟುಂಬ ಪ್ರಬೋಧನ್ ದ.ಕ. ಸಂಚಾಲಕ ಸುಬ್ರಾಯ ನಂದೋಡಿ ಅತಿಥಿಯಾಗಿ ಭಾಗವಹಿಸಿದರು. ಸಂಘದ ರಾಜ್ಯ ಕೋಶಾಧಿಕಾರಿ ಜಯಭಾನು ಉದ್ಘಾಟಿಸಿದರು. ಆದರ್ಶ್ ಬಿ ಎಂ, ದಿನೇಶ್ ಬಿ  ಎಂ, ವೆಂಕಪ್ಪ ಶೆಟ್ಟಿ, ಈಶ್ವರ ರಾವ್ ಶುಭ ಕೋರಿದರು. ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಬಾಳಿಕೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ   ಬಾಬು ನೀಲೇಶ್ವರ ವಂದಿಸಿದರು.  …