ಮಲಬಾರ್ ಅಭಿವೃದ್ಧಿ ಯೋಜನೆ: ಕೇಂದ್ರ ಸಚಿವ ಗಡ್ಕರಿಯಿಂದ ೫ರಂದು ಕಾಸರಗೋಡಿನಲ್ಲಿ ವಿದ್ಯುಕ್ತ ಘೋಷಣೆ

ಕಾಸರಗೋಡು: ಉತ್ತರ ಕೇರಳದ ಸರ್ವಾಂಗೀಣ ಅಭಿವೃದ್ಧಿ ಕೇಂದ್ರ ಸರಕಾರ ರೂಪು ನೀಡಿರುವ ಮಲಬಾರ್ ಅಭಿವೃದ್ಧಿ ಯೋಜನೆಯನ್ನು  ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಜನವರಿ ೫ರಂದು ಕಾಸರಗೋಡಿನಲ್ಲಿ  ನಡೆಯುವ ಬೃಹತ್ ಸಮಾರಂಭದಲ್ಲಿ ವಿದ್ಯುಕ್ತವಾಗಿ ಘೋಷಿಸುವರು. ಅಂದು ಬೆಳಿಗ್ಗೆ ೧೦.೩೦ಕ್ಕೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವರುಗಲಾದ ಆರ್.ಪಿ.ಸಿಂಗ್, ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ-ಪ್ರವಾಸೋದ್ಯಮ ಖಾತೆ ಸಚಿವ ಮೊಹಮ್ಮದ್ ರಿಯಾಸ್ ಸೇರಿದಂತೆ ಹಲವರು  ಭಾಗವಹಿಸುವರು. ಮಾತ್ರವಲ್ಲ …

ಸಾಮಗ್ರಿಗಳ ಮರೆಯಲ್ಲಿ ಎಂಡಿಎಂಎ ಸಾಗಾಟ: ಬೈಕ್ ಸಹಿತ ಇಬ್ಬರ ಸೆರೆ

ಕಾಸರಗೋಡು: ಪಾರ್ಸೆಲ್ ಸಾಮಗ್ರಿಗಳ ಮರೆಯಲ್ಲಿ ಸಾಗಿಸುತ್ತಿದ್ದ ಮಾರಕ ಮಾದಕ ದ್ರವ್ಯವಾದ ಎಂಡಿಎಂಎಯನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೂಡ್ಲು ಗ್ರಾಮದ ನೀರ್ಚಾಲ್‌ನ ಅಮಾನ್ ಸಜಾದ್ (೨೦) ಮತ್ತು  ಕಾಸರಗೋಡು ಅಡ್ಕತ್ತಬೈಲ್‌ನ ಅಮೀರ್ ಕೆ.ಎಂ.(೩೪) ಎಂಬವರನ್ನು ಬಂಧಿಸಿ ಅವರ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  ಇವರು ಸಂಚರಿಸುತ್ತಿದ್ದ ಬೈಕನ್ನೂ ಅಬಕಾರಿ ತಂಡ ವಶಪಡಿಸಿಕೊಂಡಿದೆ. ಸ್ಪೆಷಲ್ …

ಮದ್ರಸ ವಿದ್ಯಾರ್ಥಿನಿಯನ್ನು ಬಿಗಿದಪ್ಪಿದ ಮೀನುಮಾರಾಟಗಾರ ಸೆರೆ

ಬದಿಯಡ್ಕ: ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಅಪ್ಪಿ ಹಿಡಿದು ಮೀನು ಮಾರಾಟಗಾರನನ್ನು ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಸೆರೆಹಿಡಿದಿದ್ದಾರೆ. ಶೇಣಿ ಪದ್ಯಾಣದ ಹಂಸ (೫೫) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಈತನಿಗೆ ರಿಮಾಂಡ್ ವಿಧಿಸಲಾಗಿದೆ.  ಕಳೆದ ದಿನ ಬೆಳಿಗ್ಗೆ ಘಟನೆ ನಡೆದಿದೆ. ಬಾಲಕಿ ನಡೆದು ಹೋಗುತ್ತಿದ್ದ ವೇಳೆ ಮೀನು ಮಾರಾಟಕ್ಕೆ ತಲುಪಿದ ಹಂಸ ಅಪ್ಪಿಹಿಡಿದನೆಂದು ದೂರಲಾಗಿದೆ. ಬಾಲಕಿ ಮದ್ರಸಕ್ಕೆ  ತೆರಳಿ ಮನೆಗೆ  ತಲುಪಿ ತಾಯಿಯಲ್ಲಿ ವಿಷಯ ತಿಳಿಸಿದ್ದಳು. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಮುಳ್ಳೇರಿಯ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಯುವಕನನ್ನು ಸೆರೆ ಹಿಡಿಯಲಾಗಿದೆ. ಅಡೂರು ಎಡಪರಂಬ ಕುಂಞಿಮೂಲೆಯ ವಸಂತ (೨೫) ಎಂಬಾತನನ್ನು ಆದೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕ ಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತೆಯಾಗಿ ದ್ದಾರೆ. ಕೊರಕ್ಕೋಡು ಕ್ಷೇತ್ರ ಸಮೀಪದ ಮನಮೋಹನ್-ಶಾರದ ದಂಪತಿ ಪುತ್ರ ದೇವರಾಜ್ (೪೬) ಮೃತಪಟ್ಟ ಯುವಕನಾಗಿದ್ದಾರೆ. ನಿನ್ನೆ ರಾತ್ರಿ ಮಲಗಿದ್ದ ಇವರು ಇಂದು ಬೆಳಿಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಬಗ್ಗೆ ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಯ  ಶವಾಗಾರಕ್ಕೆ ತಲುಪಿಸಲಾಗಿದೆ. ಮೃತರು ಪತ್ನಿ ಲೇಖನ, ಏಕಪುತ್ರ ತನುಷ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮನೆಗೆ ನುಗ್ಗಿ ಹಲ್ಲೆ: ಓರ್ವನ ವಿರುದ್ಧ ಜಾಮೀನು ರಹಿತ ಕೇಸು

ಕುಂಬಳೆ: ಮನೆಗೆ ನುಗ್ಗಿ ಹಲ್ಲೆಗೈದ ಆರೋಪದಂತೆ ಓರ್ವನ ವಿರುದ್ಧ ಕುಂಬಳೆ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸಿಕೊಂಡಿ ದ್ದಾರೆ. ಉಳುವಾರು ಬಾಯಿಕಟ್ಟೆಯ ಅಬ್ದುಲ್ಲ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಉಳುವಾರು ನಿವಾಸಿ ಮೊಹಮ್ಮದ್ ಕುಂಞಿಯ ದೂರಿನಂತೆ ಈ ಕೇಸು ದಾಖಲಿಸಲಾ ಗಿದೆ. ಮೊಹಮ್ಮದ್ ಕುಂಞಿ (೩೮), ಪತ್ನಿ ಹೈರುನ್ನಿಸ (೩೨), ಮಕ್ಕಳಾದ ಮುಬೀನ (೮), ಮುನವರ್ (೧೧), ಮೊಹಮ್ಮದ್ ಕುಂಞಿಯ ತಾಯಿ ಆಯಿಶಾಬಿ ಎಂಬವರಿಗೆ ಅಬ್ದುಲ್ಲ ಹಲ್ಲೆಗೈದಿದ್ದಾನೆಂದು ದೂರಲಾಗಿದೆ.

ಪಂಚಾಯತ್ ಅಧ್ಯಕ್ಷರ ಬೈಕ್ ಕಳವು

ಕಾಸರಗೋಡು: ಪಂಚಾಯತ್ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಪಂ. ಅಧ್ಯಕ್ಷರ ಬುಲ್ಲೆಟ್ ಬೈಕ್ ಕಳವುಗೈಯ್ಯಲಾಗಿದೆ. ಪಳ್ಳಿಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಕುಮಾರ್‌ರ ಬೈಕ್ ಈ ರೀತಿ ಕಳವುಗೈಯ್ಯಲಾಗಿದೆ. ಇವರು ದ. ೨೯ರಂದು ಬೈಕನ್ನು ಪಂಚಾಯತ್ ಕಚೇರಿಯ ಆವರಣದೊಳಗೆ ನಿಲ್ಲಿಸಿದ್ದರು. ಬಳಿಕ ಅವರು ಎರಡು ದಿನ ಪಂಚಾಯತ್ ವಾಹನವನ್ನು ತಮ್ಮ ಅಧಿಕೃತ ಕಾರ್ಯಕ್ರಮಕ್ಕೆ ಉಪಯೋಗಿಸಿದ್ದರು. ಬಳಿಕ ಪಂಚಾಯತ್ ಕಚೇರಿ ಬಳಿ ಬಂದಾಗ, ಅಲ್ಲಿ ನಿಲ್ಲಿಸಲಾಗಿದ್ದ ಬೈಕ್ ನಾಪತ್ತೆಯಾಗಿತ್ತು. ಅದರಂತೆ ಅವರು  ನೀಡಿದ ದೂರಿನಂತೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ …

ಪ್ರಧಾನಮಂತ್ರಿ ನಾಳೆ ಕೇರಳಕ್ಕೆ: ತೃಶೂರಿನಲ್ಲಿ ಬೃಹತ್ ರೋಡ್‌ಶೋ

ತೃಶೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಕೇರಳಕ್ಕೆ ಆಗಮಿಸುವರು. ಮಧ್ಯಾಹ್ನ ವೇಳೆ ಕೊಚ್ಚಿಗೆ ತಲುಪುವ ಪ್ರಧಾನಮಂತ್ರಿ ಬಳಿಕ ತೃಶೂರಿಗೆ ತೆರಳುವರು. ಅಲ್ಲಿನ ತೆಕ್ಕಿನ್‌ಕಾಡ್ ಮೈದಾನದಲ್ಲಿ ರೋಡ್‌ಶೋ ನಡೆಯಲಿದ್ದು, ಅನಂತರ ಮಹಿಳಾ ಸಮ್ಮೇಳನದಲ್ಲಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡುವರು. ಪ್ರಧಾನಮಂತ್ರಿ ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವರು. ರಸ್ತೆ, ವಾಯುಸಾರಿಗೆ ರಂಗಗಳಲ್ಲಾಗಿ ೧೯,೫೦೦ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ತಮಿಳುನಾಡಿನಲ್ಲಿ ನಡೆಯಲಿದೆ.

ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಘಟನೆ: ಸಮಗ್ರ ತನಿಖೆ ಆರಂಭ

ಕಾಸರಗೋಡು: ಮಾಯಿಪಾಡಿಗೆ ಸಮೀಪದ ಕುದ್ರೆಪ್ಪಾಡಿಯಲ್ಲಿ ನಿನ್ನೆ ಮುಂಜಾನೆ ದೇವಸ್ಥಾನಕ್ಕೆ ಹೋಗುತ್ತಿದ್ದ ಕುದ್ರೆಪ್ಪಾಡಿಯ ಕೃಷ್ಣ ಬೆಳ್ಚಪ್ಪಾಡರ ಪತ್ನಿ ಕಾರ್ತ್ಯಾಯಿನಿ (೭೬) ಎಂಬವರ  ಕುತ್ತಿಗೆಯಿಂದ ಎರಡೂವರೆ ಪವನಿನ ಚಿನ್ನದ ಸರ ಎಗರಿಸಿ ಪರಾರಿಯಾದ ಸ್ಕೂಟಿ ಯಲ್ಲಿ ಬಂದ ಕಳ್ಳನ   ಪತ್ತೆಗಾಗಿ ವಿದ್ಯಾನಗರ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಆ ಪರಿಸರದಿಂದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು, ಅದರಲ್ಲಿ ಕಳ್ಳನು ಸಂಚರಿಸುತ್ತಿದ್ದ ಸ್ಕೂಟಿಯ ನಂಬ್ರ ಅಸ್ಪಷ್ಟವಾಗಿ ಗೋಚರಿಸಿದೆ. ಕಾರ್ತ್ಯಾಯಿನಿಯವರು ನಿನ್ನೆ ಮುಂಜಾನೆ ೫.೫೫ಕ್ಕೆ ಕುದ್ರೆಪ್ಪಾಡಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ …

ಮುಖ್ಯಮಂತ್ರಿಗೆ ಕರಿಪತಾಕೆ ಪ್ರದರ್ಶನ: ಎರ್ನಾಕುಳಂನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಸೆರೆ; ಮುಂಜಾನೆವರೆಗೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಎರ್ನಾಕುಳಂ:  ಎರ್ನಾಕುಳಂ ನಲ್ಲಿ ನವಕೇರಳ ಸಭೆಗೆ ತಲುಪಿದ ಮುಖ್ಯ ಮಂತ್ರಿ ಪಿಣರಾಯಿ ವಿಜಯ ನ್‌ರಿಗೆ ಕರಿ ಪತಾಕೆ ತೋರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸೆರೆಹಿಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತ ರನ್ನು ಇಂದು ಮುಂಜಾನೆ ೨ ಗಂಟೆ ವೇಳೆ ಜಾಮೀನಿ ನಲ್ಲಿ ಬಿಡುಗಡೆಗೊಳಿ ಸಲಾಯಿತು. ಕಾರ್ಯಕರ್ತರನ್ನು ಸೆರೆಹಿಡಿದುದನ್ನು ಪ್ರತಿಭಟಿಸಿ ಪಾಲಾರಿ ವಟ್ಟಂ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದ ಚಳವಳಿಯನ್ನು ಬಳಿಕ ಕೊನೆಗೊಳಿಸ ಲಾಯಿತು. ಸಂಸದ ಹೈಬಿ ಈಡನ್, ಶಾಸಕರಾದ ಉಮಾ ಥೋಮಸ್, ಟಿ.ಜೆ. ವಿನೋದ್, ಅನ್ವರ್ ಸಾದತ್, …