ಯುವಕನಿಗೆ ಹಲ್ಲೆ : ಮೂವರ ವಿರುದ್ಧ ಕೇಸು

ಕುಂಬಳೆ: ಯುವಕನಿಗೆ ಹಲ್ಲೆಗೈದ ಆರೋಪದಂತೆ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಆಲಪ್ಪುಳ ನಿವಾಸಿಯೂ ಪ್ರಸ್ತುತ ಸೂರಂ ಬೈಲು ಅಂಬೇಡ್ಕರ್ ಕಾಲನಿ ಯಲ್ಲಿ ವಾಸಿಸುವ ರತೀಶ್ (೪೨) ನೀಡಿದ ದೂರಿನಂತೆ ಅದೇ ಕಾಲನಿ ನಿವಾಸಿಗಳಾದ ವಿಜಯ್, ಸುಂದರ್, ಸುನಿತ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೂರು ಮಂದಿ ಸೇರಿ ಮೊನ್ನೆ ಹಲ್ಲೆಗೈದರೆಂದು ರತೀಶ್ ಪೊಲೀಸರಿ ಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ರೇಶನ್ ಅಂಗಡಿ ಮಾಲಕ ನಿಧನ

ಕುಂಡಂಕುಳಿ: ಕಾಂಗ್ರೆಸ್ ಕಾರ್ಯಕರ್ತ, ಕುಂಡಂಕುಳಿಯ ರೇಶನ್ ಅಂಗಡಿ ಮಾಲಕನಾದ ಮಾಡಕ್ಕಲ್‌ನ ತುಳಿಚ್ಚೇರಿ ವಿಜಯನ್ ನಾಯರ್ (೬೪) ನಿಧನಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ದಿ| ಪಾಂಡಿಕಂಡಂ ಮುಲ್ಲಚ್ಚೇರಿ ಕುಂಞಿಕಣ್ಣನ್ ನಾಯರ್-ಮಾಡಕ್ಕಲ್ಲ್ ತುಳಿಚ್ಚೇರಿ ಕಮಲಾಕ್ಷಿ ಅಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ  ಶೋಭನ (ಜನಶ್ರೀ ರಾಜ್ಯ ಸಮಿತಿ ಸದಸ್ಯೆ), ಮಕ್ಕಳಾದ ವಿಜಯಶ್ರೀ, ವಿನೀತ್, ಅಳಿಯ ಶ್ರೀಕಾಂತ್ ಪೆರಿಯಾ, ಸೊಸೆ ಸ್ವಾತಿ,ಸಹೋದರ-ಸಹೋದರಿಯರಾದ ಕೆ. ಸತ್ಯನಾಥನ್ ಪಾಂಡಿಕಂಡ, ಕೆ. ಗಂಗಾಧರನ್ ಕುಂಡಂಕುಳಿ, ಕೆ. ಸೌಮಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಇನ್ನೋವೆ ಸಹೋದರಿ …

ಮಂಗಲ್ಪಾಡಿ ಪಂ.ನಲ್ಲಿ ತ್ಯಾಜ್ಯ ಸಂಸ್ಕರಣೆಗೆ ಡಿಜಿಟಲ್ ಆಪ್

ಮಂಗಲ್ಪಾಡಿ: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಹೆಚ್ಚಿನ ಆರೋಪ ಕೇಳಬೇಕಾಗಿ ಬಂದಿದ್ದ ಮಂಗಲ್ಪಾಡಿ ಪಂಚಾಯತ್ ನೂತನ ವರ್ಷದಲ್ಲಿ ತ್ಯಾಜ್ಯ ಸಂಸ್ಕರಣೆಗೆ ಸ್ಮಾರ್ಟ್ ಗಾರ್ಬೇಜ್ ಮೋನಿಟರಿಂಗ್ ಸಿಸ್ಟಂ ಆಗಿರುವ ಡಿಜಿಟಲ್ ಆಪ್ಲಿಕೇಶನ್ ಹಸಿರುವ ಮಿತ್ರ ಆಪ್  ಬಿಡು ಗಡೆಗೊಳಿಸಿದರು. ಕೆಲ್ಟ್ರೋನ್‌ನೊಂದಿಗೆ ಸಹಕರಿಸಿ ಕ್ಯೂ ಆರ್ ಕೋಡ್ ವ್ಯವಸ್ಥೆಯಲ್ಲಿ ಈ ಚಟುವಟಿಕೆ ನಡೆಸಲಿದೆ. ಈ ಬಗ್ಗೆ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು. ಮುಂದಿನ ವಾರ ಪ್ರತಿ ವಾರ್ಡ್‌ನಲ್ಲೂ ಇಬ್ಬರು ಕಾರ್ಯಕರ್ತರನ್ನು  ನೇಮಕಗೊಳಿಸಿ ಮನೆಗಳ, ಅಂಗಡಿಗಳ ಹಾಗೂ ಇತರ ಎಲ್ಲಾ …

ಕೆಟ್ಟುಹೋದ ಬೀದಿ ದೀಪ ಕತ್ತಲಾವರಿಸಿದ ಬೆರಿಪದವು ಜಂಕ್ಷನ್

ಪೈವಳಿಕೆ: ಬೀದಿ ದೀಪ ಉರಿಯದೆ ಬೆರಿಪದವು ಜಂಕ್ಷನ್ ಕತ್ತಲಾವರಿಸಿದೆ. ಪೈವಳಿಕೆ ಪಂಚಾ ಯತ್‌ನ ೭ನೇ ವಾರ್ಡ್ ಬೆರಿಪದವು ಜಂಕ್ಷನ್‌ನಲ್ಲಿರುವ ಬೀದಿ ದೀಪ ಕೆಟ್ಟುಹೋದ ಕಾರಣ ಇಲ್ಲಿ ರಾತ್ರಿ ಊರವರು ಸಮಸ್ಯೆಗೀಡಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪಂಚಾ ಯತ್ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ  ದೀಪವನ್ನು ದುರಸ್ತಿಗೊಳಿಸ ಲಾಗಿದ್ದು, ಬೆರಿಪದವಿನಲ್ಲಿ ಕೆಲವೇ ವಾರದಲ್ಲಿ ಅದು ಮತ್ತೆ ಹಾನಿಗೀಡಾಗಿ ರುವುದಾಗಿ ದೂರಲಾಗಿದೆ. ರಾತ್ರಿ ಹೊತ್ತಿನಲ್ಲಿ ಪೇಟೆಗೆ ತಲುಪುವ ಜನರು ಆತಂಕಕ್ಕೀಡಾಗಿದ್ದಾರೆ. ಅಲೆಮಾರಿ ನಾಯಿಗಳ ಕಾಟ ಅಧಿಕವಾಗಿದ್ದು, ಕತ್ತಲೆಯಲ್ಲಿ ನಡೆದು …

ಮುಸ್ಲಿಂ ಲೀಗ್ ಮುಖಂಡನಿಗೆ ಹಲ್ಲೆ: ಆರೋಪಿಗಳ ಸೆರೆಗೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

ಕಾಸರಗೋಡು: ಮುಸ್ಲಿಂ ಲೀಗ್ ಮೊಗ್ರಾಲ್ ಪುತ್ತೂರು ಪಂ. ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದಿಖ್ ಬೇಕ ಲ್‌ರನ್ನು ಕೊಲೆಗೈಯ್ಯಲು ಯತ್ನಿಸಿದ ಆರೋಪಿಗಳನ್ನು ಕೂಡಲೇ ಸೆರೆ ಹಿಡಿದು ಗೂಢಾ ಲೋಚನೆ ಬಹಿರಂಗಪಡಿಸ ಬೇಕೆಂದು ಕಾಸರಗೋಡು ಮಂಡಲ ಮುಸ್ಲಿಂ ಲೀಗ್ ಅಧ್ಯಕ್ಷ ಮಾಹಿನ್ ಕೇಳೋಟ್, ಪ್ರಧಾನ ಕಾರ್ಯದರ್ಶಿ ಟಿ.ಎಂ. ಇಕ್ಬಾಲ್ ಆಗ್ರಹಿಸಿದ್ದಾರೆ.  ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇವರು ಮನವಿ ನೀಡಿದ್ದಾರೆ. ಶಾಸಕ ಎನ್.ಎ. ನೆಲ್ಲಿಕುನ್ನು ಈ ವೇಳೆ ಉಪಸ್ಥಿತರಿದ್ದರು.

ಪುತ್ತೂರು ಕ್ಷೇತ್ರದಲ್ಲಿ ಕಳೆದ ತಿಂಗಳು ದಾಖಲೆ ಹುಂಡಿ ಕಾಣಿಕೆ ಸಂಗ್ರಹ

ಪುತ್ತೂರು: ಪ್ರಸಿದ್ಧ ಕ್ಷೇತ್ರವಾದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಗಳಿಕೆ ಉಂಟಾಗಿದೆ. ಕಳೆದ ಡಿ. ೨೯ರಂದು ತಿಂಗಳ ಹುಂಡಿ ಲೆಕ್ಕಾಚಾರ ನಡೆಸಲಾಗಿದ್ದು, ಅದರಲ್ಲಿ ಡಿಸೆಂಬರ್ ತಿಂಗಳಲ್ಲಿ ೨೩ ಲಕ್ಷ ರೂ. ಸಂಗ್ರಹವಾಗಿದೆ. ಸಾಮಾನ್ಯ ವಾಗಿ ಎಪ್ರಿಲ್ ತಿಂಗಳಲ್ಲಿ ನಡೆಯುವ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಹುಂಡಿ ಕಾಣಿಕೆ ಹೆಚ್ಚಾಗಿರುತ್ತಿದ್ದು, ಆದರೆ ಕಳೆದ ತಿಂಗಳು ಅದಕ್ಕಿಂತಲೂ ಹೆಚ್ಚು ಸಂಗ್ರಹವಾಗಿದೆ. ದೇವಸ್ಥಾನದ ಮಹಾಗಣಪತಿ ಗುಡಿ, ಶ್ರೀ ಮಹಾಲಿಂಗೇಶ್ವರ ದೇವರ ನಡೆಯ ಕಾಣಿಕೆ ಹುಂಡಿಯಲ್ಲಿ ರೂ. ೫೦೦ ಮುಖಬೆಲೆಯ …

ಅರವಣ ಪ್ರಸಾದ ವಿತರಣೆಯಲ್ಲಿ ನಿಯಂತ್ರಣ

ಪತ್ತನಂತಿಟ್ಟ: ಟಿನ್‌ನ ಕ್ಷಾಮದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಅರವಣ ಪ್ರಸಾದ ವಿತರಣೆಗೆ ನಿಯಂತ್ರಣ ಹೇರಲಾಗಿದೆ. ಇದರಂಗವಾಗಿ ಇಂದಿನಿಂದ ಭಕ್ತರಿಗೆ ಐದು ಟಿನ್ ಅರವಣ ಪ್ರಸಾದ ಮಾತ್ರವೇ ಲಭಿಸಲಿದೆ. ಇಂದೇ ಹೆಚ್ಚುವರಿ ಟಿನ್‌ಗಳನ್ನು ಸನ್ನಿಧಾನಕ್ಕೆ ತಲುಪಿಸಲಾಗುವು ದೆಂದು ದೇವಸ್ವಂ ಬೋರ್ಡ್ ತಿಳಿಸಿದೆ. ನಿನ್ನೆ ಮಧ್ಯಾಹ್ನ ಅರವಣ ಪ್ರಸಾದ ನಿರ್ಮಾಣ ವನ್ನು ಮೊಟಕುಗೊಳಿಸಲಾಗಿತ್ತು. ಟಿನ್‌ಗಳ ಕೊರತೆ ಇದಕ್ಕೆ ಕಾರಣವೆನ್ನಲಾಗಿದೆ. ಕರಾರು ವಹಿಸಿಕೊಂಡ ಎರಡು ಕಂಪೆನಿಗಳಲ್ಲಿ ಒಂದು ಕಂಪೆನಿ ಸರಿಯಾದ ಸಮಯಕ್ಕೆ ಟಿನ್‌ಗಳನ್ನು ತಲುಪಿಸ ದಿರುವುದೇ ಈ ಸಂದಿಗ್ಧತೆಗೆ ಕಾರಣವೆನ್ನಲಾಗಿದೆ. ೩ ಲಕ್ಷ …

ರಾಮಯ್ಯ ಶೆಟ್ಟಿ ಸಂಸ್ಮರಣೆ ವಾರ್ಷಿಕಾಚರಣೆ

ಮಂಜೇಶ್ವರ: ಸಿಪಿಎಂ ಪಕ್ಷವನ್ನು ತುಳುನಾಡಿನ ಮಣ್ಣಿನಲ್ಲಿ ಕಟ್ಟಿ ಬೆಳೆಸಲು, ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿ ಮಂಜೇಶ್ವರ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಜನಪರ ನಾಯಕ ರಾಮಯ್ಯ ಶೆಟ್ಟಿಯವರ ೨೧ನೇ ಸಂಸ್ಮರಣೆ ವಾರ್ಷಿಕ ದಿನಾಚರಣೆ ಹೊಸಬೆಟ್ಟು ಗುಡ್ಡೆಕ್ಕೇರಿ ಬೋಳ್ನಾಡುಗುತ್ತು ಅವರ ಮನೆ ಸಮೀಪ ನಡೆಯಿತು. ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ವಿ. ಕುಂಞಿರಾಮನ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಏರಿಯಾ ಸಮಿತಿ ಸದಸ್ಯರಾದ ಡಿ. ಬೂಬ, ಅಬ್ದುಲ್ ರಝಾಕ್ ಚಿಪ್ಪಾರ್, …

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹ ಅಯೋಧ್ಯೆಯಲ್ಲಿ  ಪ್ರತಿಷ್ಠೆ

ಅಯೋಧ್ಯೆ: ಇಲ್ಲಿನ ಶ್ರೀರಾಮ ಕ್ಷೇತ್ರದಲ್ಲಿ  ಈ ತಿಂಗಳ  ೨೨ರಂದು ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್  ನಿರ್ಮಿಸಿದ್ದಾರೆ. ಇವರು ಕೆತ್ತಿದ ಬಾಲರಾಮನ ವಿಗ್ರಹವನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯ್ಕೆ ಮಾಡಿದೆ. ಇವರು ಇದುವರೆಗೆ ಕೆತ್ತಿದ ಮೂರನೇ ಅದ್ಭುತ ಶಿಲ್ಪ ಇದಾಗಲಿದೆ. ಈ ಮೊದಲು ಹೊಸದಿಲ್ಲಿಯ ಇಂಡ್ಯ ಗೇಟ್‌ನಲ್ಲಿ ಸ್ಥಾಪಿಸಿದ ನೇತಾಜಿ ಸುಭಾಷ್‌ಚಂದ್ರ ಬೋಸ್, ಕೇದಾರನಾಥದಲ್ಲಿರುವ ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಇವರು ಕೆತ್ತಿದ್ದಾರೆ. ಶ್ರೀರಾಮನ ವಿಗ್ರಹವನ್ನು ಕೆತ್ತಲು ಇವರು ಮೈಸೂರು ಜಿಲ್ಲೆಯ ಎಚ್.ಡಿ. …

ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ದೀಪೋತ್ಸವ, ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ೫೨ನೇ ವರ್ಷದ ಶಬರಿ ಮಲೆ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಆಲುವಾ ತಂತ್ರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಬ್ರಹ್ಮಶ್ರೀ ಮಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ನಿವೃತ್ತ ಯೋಧರು, ಕರ್ನಾಟಕ ಸರಕಾರ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಕ್ಯಾಂಪ್ಕೋ ನಿದೆðÃಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂದಿ ರದ ಅಧ್ಯಕ್ಷ ಸತೀಶ್ …