ಜುಜಾಟ ಕೇಂದ್ರಕ್ಕೆ ದಾಳಿ ನಾಲ್ವರ ಸೆರೆ

ಕಾಸರಗೋಡು: ಬೇಡಡ್ಕ ಬೇಳಾಯಿ ಜುಗಾರಿ ಅಡ್ಡೆಗೆ ಬೇಡಗಂ ಪೊಲೀಸರು ದಾಳಿ ನಡೆಸಿ ಜುಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ಬಂಧಿಸಿ, ೫೮೦೦ ರೂ. ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಬೇಡಡ್ಕ ಪನ್ನಿಯಾಡಿಯ ಇಬ್ರಾಹಿಂ ಟಿ. (೪೦), ಅಂಬಿಲಾಡಿಯ ನಿದಿನ್ ಎಂ. (೨೩), ಕೈರಳಿಪ್ಪಾರದ ಗೋಪಾಲಕೃಷ್ಣನ್ (೩೫) ಮತ್ತು ಬೇಡಡ್ಕ ಪಂಡಿಕ್ಕಾಡ್‌ನ ಕೃಷ್ಣನ್ ಟಿ. (೬೦) ಎಂಬವರನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ.

ಚೇವಾರು ಶಾಲೆಯಲ್ಲಿ ಎನ್‌ಎಸ್‌ಎಸ್ ಶಿಬಿರ

ಧರ್ಮತ್ತಡ್ಕ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಸಪ್ತ ದಿನ ಶಿಬಿರ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಚೇವಾರಿನಲ್ಲಿ ಜರಗಿತು. ಧರ್ಮತ್ತಡ್ಕ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು ಅಧ್ಯಕ್ಷತೆ ವಹಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಉದ್ಘಾಟಿಸಿದರು. ಚೇವಾರು ಶಾಲೆಯ ವ್ಯವಸ್ಥಾಪಕ ಶ್ರೀಧರ್ ಭಟ್ ಧ್ವಜಾರೋಹಣ ಗೈದರು. ಧರ್ಮತ್ತಡ್ಕ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಪೈವಳಿಕೆ ಪಂಚಾಯತ್ ಸದಸ್ಯೆ …

೧೯ರ ಯುವತಿ ಆತ್ಮಹತ್ಯೆ ಫೋನ್ ಪೊಲೀಸ್ ಕಸ್ಟಡಿಯಲ್ಲಿ

ಕುಂಬಳೆ: ೧೯ರ ಹರೆಯದ ಯುವತಿ ಮಲಗುವ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಂದ್ಯೋಡು ಅಡ್ಕದ ಫ್ಲಾಟ್‌ನಲ್ಲಿ  ವಾಸವಾಗಿರುವ ಬದ್ರುದ್ದೀನ್-ಮರಿಯಮ್ಮ ದಂಪತಿ ಪುತ್ರಿ  ರನ ಫಾತಿಮಾ (೧೯) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ೧೦ ಗಂಟೆಗೆ ತಾಯಿ ಬಾಗಿಲು ತೆರೆದು ನೋಡಿದಾಗ ಪುತ್ರಿ ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿ ದ್ದಾಳೆ.  ಮಾಹಿತಿ ತಿಳಿದು  ತಲುಪಿದ ಪೊಲೀಸರು ಮಹಜರು ನಡೆಸಿದ ಬಳಿಕ ಜನರಲ್ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ. ಘಟನೆಯಲ್ಲಿ ಕುಂಬಳೆ ಪೊಲೀಸರು ಅಸಹಜ  ಸಾವಿಗೆ ಕೇಸು ದಾಖಲಿಸಿ …

ವರ್ಕಾಡಿ ಬಳಿಯ ಯುವಕ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಸಾವು

ಉಪ್ಪಳ: ವರ್ಕಾಡಿ ಬಳಿಯ ನಿವಾಸಿಯಾದ ಯುವಕ ಕರ್ನಾಟಕದ ಸುಳ್ಯ ಸಮೀಪ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ವರ್ಕಾಡಿ ಮಜೀರ್ಪಳ್ಳ ಶಾಂತಿನಗರ ನಿವಾಸಿ ಉಮ್ಮರ್ ಎಂಬವರ   ಪುತ್ರ ಶಮೀರ್ (೨೬) ಮೃತಪಟ್ಟ ದುರ್ದೈವಿಯಾ ಗಿದ್ದಾರೆ. ಸುಳ್ಯದಲ್ಲಿ ಕನ್ನಡಕ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಮೀರ್ ಅಲ್ಲಿಯೇ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ಇವರು ಇಬ್ಬರು ಸ್ನೇಹಿತರ ಜೊತೆ ಸುಳ್ಯ ಬಳಿಯ ಭಸ್ಮಡ್ಕದ ಪಯಸ್ವಿನಿ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು. ಶಮೀರ್ ಸ್ನಾನ ಮಾಡುವ ವೇಳೆ ಆಯತಪ್ಪಿ …

ಮನೆಗೆ ನುಗ್ಗಿ ಹಲ್ಲೆ: ದಂಪತಿ ಸಹಿತ ಐದು ಮಂದಿಗೆ ಗಾಯ

ಕುಂಬಳೆ: ಮನೆಗೆ ನುಗ್ಗಿದ ವ್ಯಕ್ತಿ ದಂಪತಿ ಸಹಿತ ಐದು ಮಂದಿಗೆ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.ಉಳುವಾರು ನಿವಾಸಿ ಮೊಹಮ್ಮದ್  ಕುಂಞಿ (೩೮), ಪತ್ನಿ ಹೈರುನ್ನಿಸ (೩೨), ಮಕ್ಕಳಾದ  ಮುಬೀನ್ (೮), ಮುನವರ್ (೧೧), ಮೊಹಮ್ಮದ್ ಕುಂಞಿಯವರ ತಾಯಿ ಆಯಿಶಾಲಿ ಎಂಬಿವರು ಹಲ್ಲೆಯಿಂದ ಗಾಯಗೊಂಡಿದ್ದಾರೆ. ಈ ಪೈಕಿ ಮೊಹಮ್ಮದ್ ಕುಂಞಿ ಹಾಗೂ ಪತ್ನಿ ಹೈರುನ್ನಿಸ  ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಸಂಜೆ ಉಳುವಾರು ಬಾಯಿಕಟ್ಟೆಯ ಅಬ್ದುಲ್ಲ ಎಂಬಾತ ಹಲ್ಲೆಗೈದಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಮೊಹಮ್ಮದ್ ಕುಂಞಿ ಹಾಗೂ …

ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿ

ಮಧೂರು:  ದೇವಸ್ಥಾನಕ್ಕೆ ಹೋಗುತ್ತಿದ್ದ ೭೫ ವರ್ಷದ ಮಹಿಳೆಯ ಕುತ್ತಿಗೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳ ಒಂದೂವರೆ ಪವನ್ ನ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಕುದ್ರೆಪ್ಪಾಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಈ ಮಹಿಳೆ  ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಲೆಂದು ಮನೆಯಿಂದ ನಡೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳ ಅವರ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನ ಗರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಎಕ್ಸ್‌ಪೋ ಸ್ಯಾಟ್ ಉಪಗ್ರಹ

ಶ್ರೀಹರಿಕೋಟಾ: ಹೊಸ ವರ್ಷದ ಮೊದಲ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಇತಿಹಾಸಿಕ ಸಾಧನೆ ಮಾಡಿದೆ. ಎಕ್ಸ್ ರೇ ಮೂಲಗಳ  ನಿಗೂಢತೆ ಹಾಗೂ ಕಪ್ಪು ರಂಧ್ರದ ನಿಗೂಢ  ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಇಸ್ರೋ ನಿರ್ಮಿತ ಎಕ್ಸ್‌ರೇ-ಪೋಲಾರಿ ಮೀಟರ್ ಉಪಗ್ರಹ (ಎಕ್ಸ್‌ಪೋ ಸ್ಯಾಟ್)ವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ದಲ್ಲಿರುವ   ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ ೯.೧೦ಕ್ಕೆ  ಎಕ್ಸ್‌ಪೋ ಸ್ಯಾಟ್ ಸೇರಿದಂತೆ ೧೦ ಉ ಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಯಶಸ್ವಿ ಯಾಗಿ ನಭಕ್ಕೆ ಚಿಮ್ಮಿದೆ. …

ಅರ್ಧ ಕಿಲೋ ಗಾಂಜಾ ಸಹಿತ ಓರ್ವಸೆರೆ

ಕುಂಬಳೆ:  ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ಅರ್ಧಕಿಲೋ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಜೋಡುಕಲ್ಲು ಮೊಡಂದೂರು ನಿವಾಸಿ ಗಪ್ಪು ಯಾನೆ ಗಫೂರ್ (೩೧) ಬಂಧಿತ ವ್ಯಕ್ತಿಯೆಂದು ಅಬಕಾರಿ ಅಧಿಕಾರಗಳು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ ಗಾಂಜಾ ಸಹಿತ ಬೇಕೂರಿನಲ್ಲಿ ನಿಂತಿರುವ ಬಗ್ಗೆ ಕಾಸರಗೋಡು ಡೆಪ್ಯುಟಿ ಎಕ್ಸೈಸ್ ಕಮಿಷನರ್‌ಗೆ ಮಾಹಿತಿ ಲಭಿಸಿತ್ತು. ಇದರಂತೆ ಇನ್‌ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿ ಗಫೂರ್‌ನನ್ನು ಬಂಧಿಸಿದೆ.  ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಗ್ರೇಡ್ ಆಫೀಸರ್ ರಮೇಶನ್ …

ಆಟೋರಿಕ್ಷಾ ಮಗುಚಿ ಚಾಲಕ ಮೃತ್ಯು: ಪುತ್ರನಿಗೆ ಗಂಭೀರ

ಕಾಸರಗೋಡು: ಆಟೋರಿಕ್ಷಾ ಮಗುಚಿ ಬಿದ್ದು ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕುಂಡಂಕುಳಿ ಪುತ್ಯಡ್ಕದ ವಿ. ಗೋಪಿ (೬೨) ಸಾವನ್ನಪ್ಪಿದ ದುರ್ದೈವಿ. ಹೊಸದುರ್ಗ ಟ್ರಾಫಿಕ್ ಸರ್ಕಲ್ ಬಳಿಯ ಆಟೋರಿಕ್ಷಾ ಸ್ಟಾಂಡನ್ನು ಕೇಂದ್ರೀಕರಿಸಿ ಗೋಪಿ ಆಟೋ ರಿಕ್ಷಾ ಸೇವೆ ನಡೆಸುತ್ತಿದ್ದರು. ಅವರು ಮೊನ್ನೆ ರಾತ್ರಿ ಪುತ್ರ ಗಿಜೇಶ್‌ನೊಂದಿಗೆ ಆಟೋ ರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಪೆರಿಯಾ- ಮೂನಾಮಂಕಡವು ನಿಡುವೋಟುಪಾರಕ್ಕೆ ತಲುಪಿದಾಗ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅಪಘಾತದಲ್ಲಿ ಗೋಪಿ ಮತ್ತು ಅವರ ಪುತ್ರ ಗಿಜೇಶ್ ಗಂಭೀರ …

ಧಾರ್ಮಿಕ ಮುಂದಾಳು ನಿಧನ

ಉಪ್ಪಳ: ಚೆರುಗೋಳಿ ಕುಳಬೈಲು ನಿವಾಸಿ ಧಾರ್ಮಿಕ ಮುಂದಾಳು, ಕೆ. ಕುಂಞಣ್ಣ ಶೆಟ್ಟಿ (೭೩) ಇಂದು ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನಹೊಂದಿದರು. ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷರೂ,ಸದಾಶಿವ ಕಲಾವೃಂದ ಚೆರುಗೋಳಿ ಇದರ ಸ್ಥಾಪಕ ಸದಸ್ಯನಾಗಿದ್ದಾರೆ. ನವ ಮಂಗಳೂರು ಬಂದರು ಮಂಡಳಿಯ ನಿವೃತ್ತ ಉದ್ಯೋಗಿಯಾಗಿರುವ ಇವರು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತನಾಗಿದ್ದರು. ಇವರ ಪತ್ನಿ ವೇದಾವತಿ ಈ ಹಿಂದೆ ನಿಧನರಾಗಿ ದ್ದಾರೆ. ಮೃತರು ಸಹೋದರ-ಸಹೋದರಿಯರಾದ ಶಿವರಾಮ ಶೆಟ್ಟಿ, ಗೋಪಾಲ ಶೆಟ್ಟಿ, ಸುಮತಿ, ವಾರಿಜ, ರಾಜೀವಿ, ಉಮಾವತಿ,  ಪುಷ್ಪಾವತಿ, …