ಕಾಸರಗೋಡು ಸೇರಿದಂತೆ ರಾಜ್ಯದ ೩೦ ರೈಲು ನಿಲ್ದಾಣಗಳು ಅಮೃತ್ ಭಾರತ್ ಯೋಜನೆಯಲ್ಲಿ ಸೇರ್ಪಡೆ

ಕಾಸರಗೋಡು: ಕಾಸರಗೋಡು  ರೈಲು ನಿಲ್ದಾಣ ಸೇರಿದಂತೆ ರಾಜ್ಯದ ೩೦ ರೈಲು ನಿಲ್ದಾಣಗಳನ್ನು ಕೇಂದ್ರ ಸರ ಕಾರದ ಹೊಸ ಅಮೃತ್ ಭಾರತ್ ಯೋ ಜನೆಯಲ್ಲಿ ಸೇರ್ಪೆಡಗೊಳಿಸಲಾಗಿದೆ. ರಾಜ್ಯದ ರೈಲು ನಿಲ್ದಾಣಗಳನ್ನು ಎgಡು ವಲಯಗಳಾಗಿ ವಿಂಗಡಿಸಿ ಈ ಯೋಜನೆ ಜ್ಯಾರಿಗೊಳಿಸಲಾಗು ವುದು. ಕಾಸರಗೋಡಿನ ಹೊರತಾಗಿ ರಾಜ್ಯದ ಇತರ ಜಿಲ್ಲೆಗಳ ಆಯ್ದ ರೈಲು ನಿಲ್ದಾಣಗಳನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.  ಇದರಂತೆ ಪ್ರತೀ ರೈಲು ನಿಲ್ದಾಣಕ್ಕೆ ತಲಾ ೧೫ ಕೋಟಿ ರೂ.ನಂತೆ ವ್ಯಯಿಸಿ ಅವುಗಳನ್ನು ಅಮೃತ್ ಭಾರತ್ ಮೇಲ್ದ ರ್ಜೆಗೇರಿಸಲಾಗುವುದು. ಈ ಯೋಜನೆ …

ಕೊಂಡೆವೂರು ಮಠದಲ್ಲಿ ಯಶಸ್ವಿಯಾದ ಕೊರಗ ಸಮಾಜ ಸಂಗಮ

ಉಪ್ಪಳ: ಕಾಸರಗೋಡು ಜಿಲ್ಲೆ ಕೊರಗ ಸಮಾಜ ಸಂಗಮ ಸಮಿತಿ ಆಶ್ರಯದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೊರಗ ಸಮಾಜ ಸಂಗಮ ನಿನ್ನೆ ಕೊಂಡೆವೂರು ಮಠದಲ್ಲಿ ನಡೆಯಿತು. ಉಪ್ಪಳ ಪೇಟೆಯಿಂದ ಶೋಭಾಯಾತ್ರೆ ನಡೆಯಿತು. ಶ್ರೀ ಯೋಗಾನಂದ ಸರ ಸ್ವತೀ ಸ್ವಾಮೀಜಿ ಹಾಗೂ ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಸಮಾಜದ ಮಕ್ಕಳ ಕುಣಿತ ಭಜನೆ, ಕೊರಗ ನೃತ್ಯ, ಮುತ್ತುಕೊಡೆ, ಡೋಲು ಸಹಿತ ಹಲವು ಸಾಂಸ್ಕöÈತಿಕ ಕಾರ್ಯಕ್ರಮ …

ವಿದ್ಯುತ್ ಭವನ ಮುಂಭಾಗ ಬಿಎಂಎಸ್ ಧರಣಿ

ಕಾಸರಗೋಡು: ಕೇರಳ ವಿದ್ಯುತ್ ಮಜ್ದೂರ್ ಸಂಘ ಬಿಎಂಎಸ್ ಆಶ್ರಯದಲ್ಲಿ ಕಾಸರಗೋಡು ವಿದ್ಯುತ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕೆಎಸ್‌ಇಬಿ ನೌಕರರಿಗೆ ಲಭಿಸಬೇಕಾದ ಡಿ.ಎ, ರಜೆ ವೇತನ, ಭಡ್ತಿ ಎಂಬಿವು ನೀಡದಿರುವುದನ್ನು ಪ್ರತಿಭಟಿಸಿ ಈ ತಿಂಗಳ ೬ರಂದು ವಿದ್ಯುತ್ ಸಚಿವರ ಔದ್ಯೋಗಿಕ ವಸತಿಗೆ ಪ್ರತಿಭಟನೆ ಮಾರ್ಚ್ ನಡೆಸುವುದರಂಗವಾಗಿ ವಿದ್ಯುತ್ ಭವನಗಳ ಮುಂಭಾಗ ನಡೆಸುವ ಪ್ರತಿಭಟನೆ ಕಾರ್ಯಕ್ರಮದಂಗವಾಗಿ ಕಾಸರಗೋಡು  ವಿದ್ಯುತ್ ಭವನದ  ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು. ಕೆ.ಎಸ್.ಆರ್.ಟಿ.ಸಿಯ ಬಳಿಕ ಈಗ ಕೆ.ಎಸ್.ಇ.ಬಿ. ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಲು ರಾಜ್ಯ ಸರಕಾರ …

ವೈಕಂ ಸತ್ಯಾಗ್ರಹ ೧೦೦ನೇ ವಾರ್ಷಿಕ : ಪೆರ್ಲದಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಗ್ರಂಥಾಲಯಗಳ ವಿಚಾರ ಸಂಕಿರಣ

ಪೆರ್ಲ: ನವೋತ್ಥಾನ ಚರಿತ್ರೆಯನ್ನು ಬಿಂಬಿಸುವ ವೈಕಂ ಸತ್ಯಾಗ್ರಹದ 100ನೇ ವಾರ್ಷಿಕದಂಗವಾಗಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ವತಿಯಿಂದ ವಿಚಾರ ಸಂಕಿರಣ ಹಾಗೂ ವಾಚನಾ ಸ್ಪರ್ಧೆಗಳ ಬಹುಮಾನ ವಿತರಣೆ ಪೆರ್ಲದ ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರಗಿತು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ವಿಚಾರ ಸಂಕಿರಣ ಉದ್ಘಾಟಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ. ಅಧ್ಯಕ್ಷತೆವಹಿಸಿದ್ದರು. ಹೊಸದುರ್ಗ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ವೇಣು ಗೋಪಾಲ ವಿಚಾರ ಮಂಡಿಸಿದರು. ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ …

ನಾಗಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಾಳೆಯಿಂದ

ಕುಂಬಳೆ: ಆರಿಕ್ಕಾಡಿ ಶ್ರೀ ಮಲ್ಲಿ ಕಾರ್ಜುನ ಕುಟುಂಬ ನಾಗಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಾಳೆ, ೩ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ನಾಳೆ ಅಪರಾಹ್ನ ೨.೩೦ರಿಂದ ವಿವಿಧ ಸಂಘಸಂಸ್ಥೆಗಳಿಂದ ಭಜನೆ, ೫ರಿಂದ ತಂತ್ರಿವರೇಣ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಸ್ಥಳಶುದ್ಧಿ, ವಾಸ್ತು ಹೋಮ ಮೊದಲಾದ ವೈದಿಕ ಕಾರ್ಯಕ್ರಮ, ಜ. ೩ರಂದು ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ೮.೩೭ರಿಂದ ನಾಗಬಿಂಬ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, ೧೦ರಿಂದ ವಿವಿಧ ಸಂಘ ಂಸಸ್ಥೆಗಳಿಂದ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧ರಿಂದ …

ಸಂಚರಿಸುತ್ತಿದ್ದ ಕಾರಿಗೆ ಬೆಂಕಿ

ಉಪ್ಪಳ: ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರು ನಡೆಸಿದ ರಕ್ಷಣಾ ಕಾರ್ಯಾಚರಣೆ ಯಿಂದ ಭಾರೀ ಅಪಾಯ ತಪ್ಪಿದೆ. ನಿನ್ನೆ ರಾತ್ರಿ ೮.೩೦ಕ್ಕೆ ಮುಟ್ಟಂಗೇಟ್ ಸಮೀಪ ಘಟನೆ ನಡೆದಿದೆ. ಉಪ್ಪಳ ಭಾಗದಿಂದ ಕಾಸರಗೋಡಿನತ್ತ ಸಂಚರಿಸುತ್ತಿದ್ದ ನ್ಯಾನೋ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಬೆಂಕಿ ನಂದಿಸಿದ್ದಾರೆ. ಇದರಿಂದ ಭಾರೀ ಅಪಾಯ ತಪ್ಪಿದೆ.

ಕಯ್ಯಾರು ಶಾಲೆಯ ನೂತನ ಕಟ್ಟಡ, ಪಾಕಶಾಲೆ ಉದ್ಘಾಟನೆ

ಉಪ್ಪಳ: ಶ್ರೀ ರಾಮಕೃಷ್ಣ ಅನುದಾ ನಿತ ಕಿರಿಯ ಪ್ರಾಥಮಿಕ ಶಾಲೆ ಕಯ್ಯಾರು, ಶ್ರೀ ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಆಧೀನ ಸಂಸ್ಥೆಗೆ ಕರ್ನಾಟಕ ಗಡಿ ಅಭಿ ವೃದ್ಧಿ ಪ್ರಾಧಿಕಾರದ ಅನುದಾನದಿಂದ ನಿರ್ಮಿಸಿದ ನೂತನ ಶಾಲಾ ಕಟ್ಟಡ ಮತ್ತು ಪ್ರಧಾನ ಮಂತ್ರಿ ಪೋಷಕ ಆಹಾರ ಯೋಜನೆಯ ಕೇರಳ ಸರಕಾರ ಬಿಡುಗಡೆ ಮಾಡಿದ ಪಾಕಶಾಲೆ ಹಾಗೂ ದಾಸ್ತಾನು ಕೋಣೆಯ ಉದ್ಘಾಟನಾ ಸಮಾರಂಭ ಶಾಲಾ ಮೆನೇಜರ್ ಭಾಸ್ಕರನ್ ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ ಪಾಕಶಾಲೆಯನ್ನು ಉದ್ಘಾಟಸಿ ಶುಭಹಾರೈಸಿದರು. …

ತಲೆಗೆ ಸುತ್ತಿಗೆಯಿಂದ ಬಡಿದು ತಂದೆಯ ಕೊಲೆ

ಕೊಲ್ಲಂ:  ಸುತ್ತಿಗೆಯಿಂದ ತಲೆಗೆ ಹೊಡೆದು ತಂದೆಯನ್ನು ಕೊಲೆಗೈದ ಪುತ್ರ ಸೆರೆಯಾಗಿದ್ದಾನೆ. ಮನ್ನಾಟ್ ನಿವಾಸಿ ರವೀಂದ್ರನ್ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿ ಪುತ್ರ ಅಖಿಲ್‌ನನ್ನು ಬಂಧಿಸಲಾಗಿದೆ. ರವೀಂದ್ರನ್‌ನ ಮಾಲಕತ್ವದಲ್ಲಿರುವ ಫ್ಯಾನ್ಸಿ ಅಂಗಡಿಯಲ್ಲಿ ಕೊಲೆ ನಡೆದಿದೆ. ಅಂಗಡಿಗೆ ತಲುಪಿದ ಪುತ್ರನೊಂದಿಗೆ ವಾಗ್ವಾದ ಉಂಟಾಗಿ ಬಳಿಕ ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ತಲೆಗೆ ಗಂಭೀರ ಗಾಯಗೊಂಡ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೂಡಂಗಡಿಗೆ ನುಗ್ಗಿದ ಲಾರಿ: ೫ ಮಂದಿ ಅಯ್ಯಪ್ಪ ವ್ರತಧಾರಿಗಳು ಮೃತ್ಯು

ಚೆನ್ನೈ: ತಮಿಳುನಾಡು ಪುದುಕೋಟೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ೫ ಮಂದಿ ಅಯ್ಯಪ್ಪ ವ್ರತಧಾರಿಗಳು ಮೃತಪಟ್ಟರು. ನಿಯಂತ್ರಣ ತಪ್ಪಿದ ಲಾರಿ ಚಹದಂಗಡಿಗೆ ನುಗ್ಗಿದ್ದು, ಅಪಾಯಕ್ಕೆ ಕಾರಣವಾಗಿದೆ. ೧೯ ಮಂದಿಗೆ ಘಟನೆಯಲ್ಲಿ ಗಾಯ ಉಂಟಾಗಿದೆ. ಮುಂಜಾನೆ ವೇಳೆ  ಚಹ ಕುಡಿಯಲೆಂದು ವಾಹನವನ್ನು ನಿಲ್ಲಿಸಿ ರಸ್ತೆ ಬದಿಯ ಗೂಡಂಗಡಿಗೆ ತೆರಳಿದ್ದರು. ಈ ವೇಳೆ ಸಿಮೆಂಟು ಲಾರಿಯೊಂದು ನಿಯಂತ್ರಣ ತಪ್ಪಿ ವಾಹಗಳಿಗೆ  ಢಿಕ್ಕಿ ಹೊಡೆದ ಗೂಡಂಗಡಿಗೆ ನುಗ್ಗಿದೆ. ಪೊಲೀಸರು, ಅಗ್ನಿಶಾಮಕದಳ ತಲುಪಿ ಸಾಹಸದಿಂದ ಲಾರಿಯನ್ನು ಮುರಿದು ತೆಗೆದು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡ ವರನ್ನು …

ಬಾಲಡ್ಕದಲ್ಲಿ ಯುವಕನಿಗೆ ಇರಿತ, ಓರ್ವ ಸೆರೆ

ಬದಿಯಡ್ಕ: ನೆಕ್ರಾಜೆ ಗ್ರಾಮದ ಬಾಲಡ್ಕದ ಆಟೋರಿಕ್ಷಾ ಸ್ಟಾಂಡ್ ಬಳಿ ನೆಕ್ರಾಜೆ ಪೈಕ ಚಾಮುಂಡಿಮೂಲೆ ಹೌಸ್‌ನ ಬಾಲಕೃಷ್ಣನ್ ಎಂ. (೩೮) ಎಂಬಾತನನ್ನು ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಅರ್ಲಡ್ಕ ನಿವಾಸಿ ರಂಜಿತ್ ಬಂಧಿತನಾದ ಆರೋಪಿಯಾಗಿದ್ದು, ಆತನ ವಿರುದ್ಧ ನರಹತ್ಯಾ ಯತ್ನ ಪ್ರಕರಣ ದಾಖಲಿಸಲಾಗಿದೆ. ಡಿಸೆಂಬರ್ ೨೮ರಂದು ಬೆಳಿಗ್ಗೆ ಬಾಲಡ್ಕ ಆಟೋರಿಕ್ಷಾ ಸ್ಟಾಂಡ್ ಬಳಿ ವೈಯಕ್ತಿಕ ದ್ವೇಷದಿಂದ ಆರೋಪಿ ರಂಜಿತ್ ತನ್ನ ಅಂಗಿಯ ಕಾಲರ್ ಹಿಡಿದೆಳೆದು ಕೊಲೆ ಬೆದರಿಕೆ ಒಡ್ಡಿ ತನಗೆ ಚಾಕುವಿನಿಂದ ಇರಿದಿರುವುದಾಗಿ …