ಕೂಲಿ ಕಾರ್ಮಿಕ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ವರ್ಕಾಡಿ: ಆನೆಕಲ್ಲು ಹೊಳೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಕೂಲಿ ಕಾರ್ಮಿಕನಾದ ಆನೆಕಲ್ಲು ಬಾಡಿಗೆ ಕ್ವಾರ್ಟ ರ್ಸ್‌ನಲ್ಲಿ ವಾಸಿಸುತ್ತಿದ್ದ ಬಾಲಕೃಷ್ಣ ನಾಯ್ಕ (೩೯)ರ ಮೃತದೇಹ ನಿನ್ನೆ ರಾತ್ರಿ ಹೊಳೆಯಲ್ಲಿ ಪತ್ತೆಯಾಗಿದೆ.  ಕೂಲಿ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗಿದ ಬಳಿಕ ಹೊರಗೆ ಹೋಗುವುದಾಗಿ ತಿಳಿಸಿ ತೆರಳಿದ ಬಾಲಕೃಷ್ಣ ನಾಯ್ಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಹೊಳೆಯಲ್ಲಿ ಮೃತದೇಹ ಪತ್ತೆಯಾ ಗಿದೆ. ಕೂಡಲೇ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋ ಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಹೊಳೆ …

ಮವ್ವಾರು ಕ್ಷೇತ್ರ ಬ್ರಹ್ಮಕಲಶ: ಗರುಡ ದರ್ಶನದಿಂದ ಪುಳಕಿತರಾದ ಭಕ್ತ ಸಮೂಹ

ಮವ್ವಾರು: ಇಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ನಿನ್ನೆ ನಡೆದ ಬ್ರಹ್ಮಕಲಶೋತ್ಸವ ವೇಳೆ ಗರುಡ ಪ್ರತ್ಯಕ್ಷಗೊಂಡಿದ್ದು, ಭಕ್ತರಿಗೆ ಕ್ಷೇತ್ರದ ಮಹಿಮೆಯನ್ನು ಸಾರಿ ಹೇಳಿದೆ. ಬ್ರಹ್ಮಕಲಶೋತ್ಸವ ಅಭಿಷೇ ಕಗಳು ಎಲ್ಲಾ ಕಳೆದು ಗರ್ಭಗುಡಿಗೆ ಮುಗುಳಿ ಇಡುವ ವೇಳೆ ದಿಢೀರಾಗಿ ಕಾಣಿಸಿಕೊಂಡ ಗರುಡ ಕ್ಷೇತ್ರಕ್ಕೆ ಮೂರು ಸುತ್ತು ಬಂದು ಅಪ್ರತ್ಯಕ್ಷವಾ ಗಿದೆಯೆಂದು  ಇಲ್ಲಿ ಸೇರಿದ ಭಕ್ತರು ತಿಳಿಸುತ್ತಾರೆ. ಇದರ ಬಗ್ಗೆ ಕ್ಷೇತ್ರದ ತಂತ್ರಿ ಕೂಡಾ ಸಂದೇಶ ನೀಡಿ ಕ್ಷೇತ್ರದಲ್ಲಿ ನಡೆಸಿದ ಬ್ರಹ್ಮಕಲಶಾಧಿ ಕಾರ್ಯಗಳು ದೇವರಿಗೆ ವೆಚ್ಚಿಗೆಯಾಗಿದೆಯೆಂಬುದಕ್ಕೆ ಗರುಡ ದರ್ಶನ ಸಾಕ್ಷಿ ಎಂದ …

ಚಮಚ ನುಂಗಿದ ಯುವತಿ

ಕಲ್ಲಿಕೋಟೆ: ಮಾನಸಿಕ ಸವಾಲು ಎದುರಿಸುತ್ತಿದ್ದ ಯುವತಿ ಚಮಚವನ್ನು ನುಂಗಿದ ಘಟನೆ ನಡೆದಿದೆ. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆದರೂ ಯುವತಿ ಈಗಲೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಮಲ ಪ್ಪುರಂ ನಿವಾಸಿಯಾದ ೩೩ರ ಹರೆ ಯದ ಯುವತಿ ಚಮಚ ನುಂಗಿದ್ದಾರೆ. ಎದೆನೋವಿನ ಹಿನ್ನೆಲೆಯಲ್ಲಿ ಯುವತಿ ಯನ್ನು ಆಸ್ಪತ್ರೆಗೆ  ತಲುಪಿಸಲಾಗಿತ್ತು. ಖಾಸಗಿ ಆಸ್ಪತ್ರೆಯಿಂದ ನಿನ್ನೆ ಮುಂಜಾನೆ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಅಲ್ಲಿ ನಡೆಸಿದ ಎಕ್ಸ್‌ರೇ ತಪಾಸಣೆಯಲ್ಲಿ ಎದೆಯಲ್ಲಿ ಚಮಚ ಸಿಲುಕಿಕೊಂಡಿ ರುವುದು ಕಂಡುಬಂ ದಿದೆ. ಎರಡು ಗಂಟೆಗಳ …

ಎಂ.ಡಿ.ಎಂ.ಎ: ಯುವಕನಿಗೆ ಹಲ್ಲೆಗೈದ ಆರು ಮಂದಿ ವಿರುದ್ಧ ಕೇಸು ದಾಖಲು

ಉಪ್ಪಳ: ಎಂಡಿಎಂಎ ಸಾಗಾಟ ಪ್ರಕರಣದ ವಾರಂಟ್ ಆರೋಪಿ ಯನ್ನು ಕರ್ನಾಟಕ ಪೊಲೀಸರು ಬಂಧಿಸಿದ ದ್ವೇಷದಿಂದ ಮಾರಕಾಯುಧಗಳೊಂದಿಗೆ ತಲುಪಿದ ತಂಡ ಯುವಕನಿಗೆ ಹಲ್ಲೆಗೈದ ಸಂಬಂಧ ಆರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಗೇಟ್  ಶಾಫಿ ನಗರ ಪರಿಸರ ನಿವಾಸಿಗಳಾದ ಸಿದ್ದಿಕ್, ಮುನೀರ್, ಆಶಿಫ್, ಬಾತಿಷ್ ಹಾಗೂ ಕಂಡರೆ ಗುರುತುಹಚ್ಚಬಹುದಾದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.  ಉಪ್ಪಳಗೇಟ್ ಶಾಫಿ ನಗರದ ಬಷೀರ್ ಅಬ್ಬಾಸ್ (೩೫)ರಿಗೆ ತಂಡ ಹಲ್ಲೆಗೈದಿತ್ತು. ಮೊನ್ನೆ ಸಂಜೆ ಮನೆ ಮುಂದೆ ನಿಂತಿದ್ದ ವೇಳೆ …

ಬೋವಿಕ್ಕಾನದಲ್ಲಿ ದೌರ್ಜನ್ಯ: ೧೭ರ ಹರೆಯದ ಬಾಲಕಿ  ಮಗುವಿಗೆ ಜನ್ಮ ನೀಡಿದ ಪ್ರಕರಣ ಆದೂರು ಠಾಣೆಗೆ ಹಸ್ತಾಂತರ

ಮುಳ್ಳೇರಿಯ: ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ಘಟನೆಯಲ್ಲಿ ಬದಿಯಡ್ಕ ಪೊಲೀಸರು ದಾಖಲಿಸಿದ ಪೋಕ್ಸೋ ಪ್ರಕರಣವನ್ನು ಆದೂರು ಠಾಣೆಗೆ ಹಸ್ತಾಂತರಿಸಿದರು. ಬಾಲಕಿಗೆ ದೌರ್ಜನ್ಯಗೈದಿರುವುದು ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನದಲ್ಲಿ ಆದುದರಿಂದ ಈ ಕೇಸನ್ನು ಆದೂರು ಠಾಣೆಗೆ ಹಸ್ತಾಂತರಿ ಸಲಾಗಿದೆ.  ಪ್ರಕರಣದಲ್ಲಿ ಈಶ್ವರಮಂ ಗಲ ನಿವಾಸಿಯಾದ ೨೨ರ ಹರೆಯದ ಯುವಕ ಆರೋಪಿಯಾಗಿದ್ದಾನೆ. ಈತ ಹಾಗೂ ೧೭ರ ಹರೆಯದ ಬಾಲಕಿ ಈ ಮೊದಲು  ಪ್ರೀತಿಸುತ್ತಿದ್ದ ರೆನ್ನಲಾಗಿದೆ. ಈ ಸಂಬಂಧವನ್ನು ಎರಡೂ ಮನೆಯವರು ಅಂಗೀಕರಿ ಸಲು ಸಿದ್ಧರಾಗದ ಹಿನ್ನೆಲೆಯಲ್ಲಿ ಇವರಿ ಬ್ಬರು …

ಹೊಸ ವರ್ಷಾಚರಣೆ: ಜಿಲ್ಲೆಯಾದ್ಯಂತ ಅಲರ್ಟ್ ಕಂಟ್ರೋಲ್ ರೂಮ್ ಆರಂಭ

ಕಾಸರಗೋಡು: ಹೊಸ ವರ್ಷಾಚರಣೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ  ಜಿಲ್ಲೆಯಾದ್ಯಂತವಾಗಿ ಪೊಲೀಸ್ ಅಲರ್ಟ್ ಘೋಷಿಸಿದ್ದಾರೆ. ಇದರಂತೆ, ಜಿಲ್ಲೆಯ ಎಲ್ಲಾ ರೈಲು, ಬಸ್ ನಿಲ್ದಾಣಗಳು ಮತ್ತು ಜನನಿಬಿಡ ಕೇಂದ್ರಗಳಲ್ಲಿ ಪೊಲೀಸರು ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳಗಳನ್ನು ಬಳಸಿ ಬಿಗಿ ತಪಾಸಣೆ ಆರಂಭಿಸಿದ್ದಾರೆ. ಮಾತ್ರವಲ್ಲ ಜಿಲ್ಲೆಯ ಎಲ್ಲಾ ವಸತಿ ಗೃಹಗಳಿಗೂ ಪೊಲೀಸ್ ದಾಳಿ ನಡೆಸತೊಡಗಿದ್ದಾರೆ. ಅಲ್ಲಿ ಶಂಕಿತರು ತಂಗಿದ್ದಲ್ಲಿ ಅವರನ್ನು ವಶಕ್ಕೆ ತೆಗೆದು ವಿಚಾರಿಸಲಾಗುವುದು. ಹೊಸ ವರ್ಷಾಚರಣೆಗೆ ದಶಂಬರ್ ೩೧ರಂದು ರಾತ್ರಿ ೧೦ ಗಂಟೆ ತನಕ ಮಾತ್ರವೇ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗುವುದು. …

ಕಾಸರಗೋಡು- ತಿರುವನಂತಪುರ ವಂದೇ ಭಾರತ್ ರೈಲು ಸೇವೆ ಮಂಗಳೂರು ತನಕ ವಿಸ್ತರಣೆ ಜ. ೧ರಿಂದ

ಕಾಸರಗೋಡು: ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿದ ಕಾಸರಗೋಡು- ತಿರುವನಂತಪುರ ತನಕದ ವಂದೇ ಭಾರತ್ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಿಸಲಾಗಿದೆ. ಇದರಂತೆ ಜನವರಿ ೧ರಿಂದ ಈ ರೈಲು ಕಾಸರಗೋಡಿನ ಬದಲು ಮಂಗಳೂರಿನಿಂದ ಸೇವೆ ಆರಂಭಿಸಲಿದೆ. ಇದರ ಮೊದಲು ಈ ರೈಲು ಕಾಸರಗೋಡಿನಿಂದ ಮಂಗಳೂರು ತನಕದ ೪೬ ಕಿಲೋ ಮೀಟರ್ ಪರೀಕ್ಷಾರ್ಥ ಸೇವೆ ನಡೆಸಲಿದೆ. ಈಗ ಈ ರೈಲು ಕಾಸರಗೋಡಿ ನಿಂದ ಬೆಳಿಗ್ಗೆ ೭ ಗಂಟೆಗೆ ತಿರುವನಂ ತಪುರದತ್ತ ಸೇವೆ ಆರಂಭಿಸುತ್ತಿದ್ದು, ಇನ್ನು ಇದರ ಸೇವೆ ಮಂಗಳೂರು …

ನೆರೆಮನೆಯ ದನ ಕದ್ದು ಕೊಂಡೊಯ್ದು ಮಾಂಸ ಮಾಡಿದ ಆರೋಪಿ ಸೆರೆ

ಕೊಲ್ಲಂ: ನೆರೆಮನೆ ನಿವಾಸಿಯ ಗಬ್ಬದ ಹಸುವನ್ನು ಕಳವುಗೈದು ಕೊಂಡುಹೋಗಿ ಕೊಂದು ಮಾಂಸ ಮಾಡಿದ ಯುವಕ ಸೆರೆಯಾಗಿದ್ದಾನೆ. ಚಿರಕ್ಕರ ಒಳುಕುಪ್ಪಾರ ಕಾಲನಿ ಯಲ್ಲಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಜಯಪ್ರಸಾದ್‌ರ ದನವನ್ನು ಆರೋಪಿ  ಜಯಕೃಷ್ಣನ್ ಸಾಗಿಸಿ ಕೊಂದಿದ್ದಾನೆ ಎಂದು ಗೆಳೆಯನಿಗೆ ತಿಳಿಸಿದ್ದಾನೆ. ಬಳಿಕ ಅದನ್ನು ಪದಾ ರ್ಥ ಮಾಡಲು ಸಹಾಯ ಯಾಚಿ ಸಿದ್ದು, ಆದರೆ ಗೆಳೆಯ ಅದನ್ನು ನಿರಾ ಕರಿಸಿದ್ದಾನೆ. ಬಳಿಕ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರಿಂದ ಈ ಘಟನೆಬಹಿರಂಗಗೊಂಡಿದೆ. ಪರವೂರ್ ಪೊಲೀಸರು ಸ್ಥಳಕ್ಕೆ ತಲುಪಿದರೂ ದನವನ್ನು …

ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ

ಪೈವಳಿಕೆ: ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರು. ಸುಬ್ರಹ್ಮಣ್ಯ ಭಟ್ ಅಧ್ಯಕ್ಷರಾಗಿರುವ ನಿರ್ದೇಶಕ ಮಂಡಳಿಗೆ ಪ್ರಮೋದ್ ಕುಮಾರ್, ಸಂದೀಪ್ ಬಿ.ಸಿ, ಮಿತೇಷ್ ಕುಮಾರ್, ಶ್ರೀಕಾಂತ್ ಭಟ್, ಪ್ರವೀಣ್ ಕುಮಾರ್, ಗೀತಾ ಲತಾ, ಜಲಜಾಕ್ಷಿ ಹಾಗೂ ಪರಮೇಶ್ವರಿ ಉಳುವಾನ ಆಯ್ಕೆ ಯಾದರು. ನಿಕಟಪೂರ್ವ ಅಧ್ಯಕ್ಷ ಸುಬ್ಬಣ್ಣ ಭಟ್, ನಿರ್ದೇಶಕ ಧರ್ಮ ಪಾಲ್, ಬ್ಯಾಂಕ್‌ನ ಪ್ರಭಾರಿಗಳಾದ ಬಾನೋಟ್ಟು ಬಾಲಕೃಷ್ಣ ಶೆಟ್ಟಿ, ಪ್ರೇಂ ಕುಮಾರ್ ಐಲ, ಸಹಕಾರ ಭಾರತಿ ನೇತಾರರಾದ …

ಉಪ್ಪಳ ಶ್ರೀ ಅಯ್ಯಪ್ಪ ದೀಪೋತ್ಸವ ಆರಂಭ

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ ಇಂದು ಬೆಳಿಗ್ಗೆ ಆರಂಭಗೊAಡಿತು. ಗಣಹೋಮ, ಹರಿನಾಮ ಕೀರ್ತನೆ, ಭಜನಾ ಸಂಕೀರ್ತನೆ, ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 4ರಿಂದ ಕುಣಿತ ಭಜನೆ, 6ರಿಂದ ಅಂಬಾರು ಶ್ರೀ ಸದಾಶಿವ ದೇವಸ್ಥಾನದಿಂದ ಪಾಲೆ ಕೊಂಬು ಮೆರವಣಿಗೆ, ನೃತ್ಯಸಂಗಮ, ರಾತ್ರಿ 8ರಿಂದ ಧಾರ್ಮಿಕ ಸಭೆ, 11ರಿಂದ ಶಬರಿಮಲೆ ಸ್ವಾಮಿ ಅಯ್ಯಪ್ಪ ಪೌರಾಣಿಕ ಯಕ್ಷಗಾನ,ರಾತ್ರಿ 12.30ರಿಂದ ದೀಪಾರಾಧನೆ, ಚೆಂಡೆಮೇಳ, 3ರಿಂದ ಶ್ರೀ ಅಯ್ಯಪ್ಪನ್ ಗೀತೆ, …