ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ಅಪಘಾತ ವಿಮೆ ವಿತರಣೆ

ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಸದಸ್ಯ ರಿಗೆ ವಿತರಿಸುವ 2 ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನು ಇತ್ತೀಚೆಗೆ ಮೃತಪಟ್ಟಿರುವ ಬಪ್ಪಾಯಿತೊಟ್ಟಿ ನಿವಾಸಿ ಮೊಹಮ್ಮದ್ ಹಾರಿಸ್ ರವರ ಆಶ್ರಿತರಿಗೆ ಬ್ಯಾಂಕಿನ ಅಧ್ಯಕ್ಷರು ನಿರ್ದೇಶಕ ಮಂಡಳಿ ಮತ್ತು ಕಾರ್ಯದರ್ಶಿಯವರ ಸಮ್ಮುಖದಲ್ಲಿ ವಿತರಿಸಲಾಯಿತು

ಮವ್ವಾರಿನಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ  ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಮುಳ್ಳೇರಿಯ: ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಶ್ರೀ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾ ಭಿಷೇಕ ಹಾಗೂ ಪರಿವಾರ ದೇವರುಗಳಿಗೆ ಕಲಶಾಭಿಷೇಕ ಇಂದು ಬೆಳಿಗ್ಗೆ ನಡೆಯಿತು. ಇಂದು ಅಪರಾಹ್ನ ಗಂಟೆ ೨ರಿಂದ ಭಜನೆ, ೩.೩೦ಕ್ಕೆ ಮಾಣಿಲ ಶ್ರೀ  ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾ ಗುವುದು. ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಉದ್ಯಮಿ ಬಿ. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ರವೀಶ ತಂತ್ರಿ …

ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ದಿನಾಂಕ ಮುಂದೂಡಿಕೆ

ಕಾಸರಗೋಡು: ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಜನವರಿ 22ರಂದು ಪ್ರಕಟಿಸಲಾಗು ವುದು. ಭಾರತೀಯ ಚುನಾವಣಾ ಆಯೋಗವು ಪ್ರಕಟಣೆ ದಿನಾಂಕವನ್ನು ಜನವರಿ 5 ರಿಂದ ಜನವರಿ 22 ಕ್ಕೆ ಬದಲಾಯಿಸಿದೆ. ಕರಡು ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರು ಅಥವಾ ಶಾಶ್ವತವಾಗಿ ಸ್ಥಳಾಂತರಗೊAಡವರು ಇದ್ದಲ್ಲಿ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಯÁಗಿರುವ ಜಿಲ್ಲಾಧಿಕಾರಿ ಕೆ.ಇಂಬಶೇಖರ್ ತಿಳಿಸಿದ್ದಾರೆ. ಹೊಸತಾಗಿ ಹೆಸರು ಸೇರಿಸುವವರು ಫೋರಂ 6 ಸಲ್ಲಿಸುವಾಗ ಅರ್ಜಿಯೊಂದಿಗೆ ಮತದಾರರ ಪಟ್ಟಿಯಲ್ಲಿ …

ಎಂಡೋಸಲ್ಫಾನ್ ಬಾವಿಗೆ ಸುರಿದು ಮುಚ್ಚಿದ ಘಟನೆ: ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್‌ನಿಂದ ನೋಟೀಸು; ಕೇಂದ್ರ ತಂಡ ನಾಳೆ ಮಿಂಚಿಪದವಿಗೆ

ಮುಳ್ಳೇರಿಯ:  ಕಾರಡ್ಕ ಪಂಚಾಯತ್‌ನ ಮಿಂಚಿಪದವಿನಲ್ಲಿ ಮಾರಕವಾದ ಎಂಡೋಸಲ್ಫಾನ್ ವಿಷವನ್ನು ಪಾಳುಬಾವಿಗೆ ಸುರಿದು ಮುಚ್ಚಿದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ನೋಟೀಸು  ಜ್ಯಾರಿಗೊಳಿಸಿದೆ. ಕೇರಳ, ಕರ್ನಾಟಕ ಸರಕಾರಗಳಿಗೆ, ಕೇಂದ್ರ-ರಾಜ್ಯ ಮಲಿನೀಕರಣ ನಿಯಂತ್ರಣ ಮಂಡಳಿಗಳಿಗೆ ಹಾಗೂ ಪ್ಲಾಂಟೇಶನ್ ಕಾರ್ಪರೇಶನ್ ಆಫ್ ಕೇರಳಕ್ಕೆ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ನೋಟೀಸು ಕಳುಹಿಸಿದೆ. ಇದರ ಆಧಾರದಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಗಳ ತಂಡ ನಾಳೆ ಮಿಂಚಿಪದವಿಗೆ ಭೇಟಿ ನೀಡಲಿದೆ. ಉಡುಪಿ  ಕೇಂದ್ರವಾಗಿರುವ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್ ಎಂಬವರು ಎಂಡೋಸಲ್ಫಾನ್ …

ಮಂಜೇಶ್ವರ ಠಾಣೆಯಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಯುವಕ ಸೆರೆ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಅಂಗಿಯನ್ನು ಹಿಡಿದೆಳೆದು ಅವರ ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟುಮಾಡಿದ ದೂರಿನಂತೆ ಮಂಗಲ್ಪಾಡಿ ಬಂದ್ಯೋಡು ಅಡ್ಕ ರಿಪಾಯಿ ಮಂಜಿಲ್‌ನ ಇಬ್ರಾಹಿಂ ಸೈಫ್ ಅಲಿ (೨೨) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸ್ ರುಮೇಶ್ ಸಿ ಎಂಬವರು ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ.  ನಿನ್ನೆ ಸಂಜೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರುಗಾರ ರುಮೇಶ್ (೩೫)ರ ಅಂಗಿಯನ್ನು ಹಿಡಿದು ಅವರನ್ನು ಹೊರಕ್ಕೆ ದೂಡಿ, ಅದನ್ನು ತಡೆಯಲು …

ಜಾಗತಿಕ ನಾಯಕರಲ್ಲಿ ಮೋದಿ ಪ್ರಥಮ: ಯೂ ಟ್ಯೂಬ್‌ನಲ್ಲಿ ೨ ಕೋಟಿ ಚಂದಾದಾರರು

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೂಟ್ಯೂಬ್ ಚ್ಯಾನೆಲ್ ಖಾತೆಯಲ್ಲಿ ಚಂದಾದಾರರ ಸಂಖ್ಯೆ ಎರಡು ಕೋಟಿಗೂ ಮೀರಿದೆ. ವಿಶ್ವ ನಾಯಕರಲ್ಲಿ ಮೋದಿ ಈ ವಿಷಯದಲ್ಲೂ ಬಹುದೂರ ಮುಂದಿ ದ್ದಾರೆ. ಜಾಗತಿಕ ನಾಯಕನೆಂಬ ನೆಲೆಯಲ್ಲಿ ಉಳಿದ ನಾಯಕರಿಗೆ ಇವರ ಮೂರನೇ ಒಂದು ಬೆಂಬಲವೂ ಇಲ್ಲ. ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಮಂಗಳವಾರ ಸಂಜೆವರೆಗೆ ೪,೫೩೩,,೫೧೩,೪೪೮ ಪ್ರೇಕ್ಷಕರು ಇದ್ದಾರೆ. ಮೋದಿಯ ಬಳಿಕದ ಸ್ಥಾನದಲ್ಲಿರುವ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್‌ಬೋಲ್ಸೆನಾರೋಗೆ ೬೪ ಲಕ್ಷ ಚಂದಾದಾರರು ಮಾತ್ರವಿರುವುದು. ತೃತೀಯ ಸ್ಥಾನದಲ್ಲಿ ಉಕ್ರೇನ್ ಅಧ್ಯಕ್ಷ ವಾಲ್ಡೀಮಿರ್ ಸೆಲೆನ್‌ಸ್ಕಿ ಇದ್ದು …

ಲಾರಿಯಲ್ಲಿ ಅಕ್ರಮ ಸಾಗಾಟ: ಮರದ ದಿಮ್ಮಿಗಳು ವಶ

ಕಾಸರಗೋಡು: ಮಿನಿ ಲಾರಿ ಯೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ೬೫ ಮರದ ದಿಮ್ಮಿಗಳನ್ನು ಅರಣ್ಯ ಇಲಾ ಖೆಯ ತಂಡ ವಶಕ್ಕೆ ತೆಗೆದು ಕೊಂಡಿದೆ. ಪೊಯಿನಾಚಿ- ಬಂದಡ್ಕ ರಸ್ತೆಯ ಪರಂಬಿನಲ್ಲಿ ಈ ಮಾಲು ಪತ್ತೆಹಚ್ಚಿ ವಶಪಡಿಸ ಲಾಗಿದೆ. ಅರಣ್ಯ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ ರೇಂಜ್ ಫೋರೆಸ್ಟ್ ಆಫೀಸರ್ ವಿ. ರತೀಶನ್‌ರ ನೇತೃತ್ವದ ತಂಡ ಈ ಕಾರ್ಯಾ ಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಮಿನಿ ಲಾರಿಯ ಮೂಲಕ ಬೇತೂರು ಪಾರ ಪಳ್ಳಂಜಿಯ ಕೆ.ಎಸ್. ನಿಝಾರ್‌ನ ವಿರುದ್ಧ ಕೇರಳ ಅರಣ್ಯ ಕಾನೂನು ಪ್ರಕಾರ …

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಗರ್ಭಧಾರಣೆ ಪ್ರಕರಣ: ಆರೋಪಿಗೆ ೨೦ ವರ್ಷ ಸಜೆ, ಜುಲ್ಮಾನೆ

ಕಾಸರಗೋಡು:  ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ೨೦ ವರ್ಷ ಕಠಿಣ ಸಜೆ ಮತ್ತು ೧ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಾಸರಗೋಡು ತಳಂಗರೆ ನಿವಾಸಿ ದೀಕ್ಷಿತ್ ಟಿ.ಕೆ ಅಲಿಯಾಸ್ ವಾವಾ(೨೩) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ೨೦೧೬ ಮಾರ್ಚ್ ತಿಂಗಳಲ್ಲಿ ಮದುವೆಯಾಗುವುದಾಗಿ ನಂಬಿಸಿ ಆರೋಪಿ ಬಾಲಕಿಗೆ ಹಲವು ದಿನಗಳಲ್ಲಾಗಿ …

ಪಂಚಾಯತ್‌ಗೆ ನಿರ್ಲಕ್ಷ್ಯ: ಕುಂಬಳೆಯಲ್ಲಿ ಸೇವಾ ಭಾರತಿಯಿಂದ ಶೌಚಾಲಯ ಸೌಕರ್ಯ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಶೌಚಾಲಯವನ್ನು ಕೂಡಾ ಸ್ಥಾಪಿಸದ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ನಿಲುವನ್ನು ಕಂಡು ಸಹನೆಗೆಟ್ಟ ಸೇವಾ ಭಾರತಿ ವಿದ್ಯಾರ್ಥಿಗಳು, ವ್ಯಾಪಾರಿಗಳು,  ಸಾರ್ವಜನಿಕರಿಗಾಗಿ ಪೇಟೆಯಲ್ಲಿ ಶೌಚಾಲಯ ನಿರ್ಮಿಸಿ ಅದರ ಉದ್ಘಾಟನೆ ನಡೆಸಲಾಯಿತು.  ಪೂರ್ಣ ಸಜ್ಜೀಕರಣಗಳೊಂದಿಗೆ ಸ್ಥಾಪಿಸಿದ ಶೌಚಾಲಯ ಪೂರ್ಣ ಉಚಿತವಾಗಿ ಕಾರ್ಯಾಚರಿಸು ವುದು. ಶೌಚಾಲಯ ಉಪ ಯೋಗಿಸಿದ ಬಳಿಕ ಸಹಾಯ ನೀಡುವುದಾದಲ್ಲಿ ಅದಕ್ಕೆ  ಶೌಚಾಲಯ ಸಮೀಪ ಸಹಾಯ ಪೆಟ್ಟಿಗೆ ಸ್ಥಾಪಿಸಲಾಗಿದೆ.  ಶೌಚಾಲಯ ನಿರ್ವಹಣೆಯ ಪೂರ್ಣ ಖರ್ಚು ಸೇವಾ ಭಾರತಿ ವಹಿಸುತ್ತಿದೆ. ಶೌಚಾಲಯದ ಅಭಾವದಿಂದ …

ಏಳಿಮಲೆ ನೌಕಾ ಅಕಾಡೆಮಿಗೆ ಅಕ್ರಮವಾಗಿ ಪ್ರವೇಶಿಸಲೆತ್ನ, ಕಾಶ್ಮೀರಿ ಯುವಕನ ಸೆರೆ

ಕಾಸರಗೋಡು: ಪಯ್ಯನ್ನೂರು ಬಳಿ ಇರುವ ಏಳಿಮಲೆ ನೌಕಾ ಅಕಾಡೆಮಿಯೊಳಗೆ ಅಕ್ರಮವಾಗಿ ಪ್ರವೇಶಿಸಲೆತ್ನಿಸಿದ ಕಾಶ್ಮೀರಿ  ಯುವಕನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರ ಬಾರಾಮುಲ್ಲಾ ನಿವಾಸಿ ಮುಹಮ್ಮದ್ ಮುರ್ತಾಸ್ (೨೧) ಬಂಧಿತನಾದ ಯುವಕ. ಈತ ಮಧ್ಯಾಹ್ನ ೧೨ ಗಂಟೆ ವೇಳೆ ನೌಕಾ ಅಕಾಡೆಮಿಯ ಗೇಟ್‌ನ ಬಳಿ ಬಂದು ಅಕ್ರಮವಾಗಿ ಒಳಗೆ ಪ್ರವೇಶಿಸಲೆತ್ನಿಸಿದ್ದಾನೆ. ಅದನ್ನು ಕಂಡ ಅಲ್ಲಿನ  ಭದ್ರತಾ ಸಿಬ್ಬಂದಿಗಳು ಆ ಯತ್ನವನ್ನು ತಡೆದು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಆ ಬಗ್ಗೆ ಅವರು ನೀಡಿದ ಮಾಹಿತಿಯಂತೆ ಪಯ್ಯನ್ನೂರು ಪೊಲೀಸರು ತಕ್ಷಣ …