ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ

ಶಬರಿಮಲೆ: ಶಬರಿಮಲೆ ಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಇಂದು ಬೆಳಿಗ್ಗೆ ತಂಗಅಂಗಿ ತೊಡಿಸಿ ಮಂಡಲಪೂಜೆ ನಡೆಸಲಾಯಿತು. ಬೆಳಿಗ್ಗೆ ೧೦.೩೦ರಿಂದ ೧೧.೩೦ರ ಮಧ್ಯೆಗಿನ ಮುಹೂರ್ತದಲ್ಲಿ ಮಂಡಲ ಪೂಜೆ ನಡೆದಿದ್ದು, ಈ ವೇಳೆ ಅಸಂಖ್ಯಾತ ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನ ೧ ಗಂಟೆಗೆ ನಡೆ ಮುಚ್ಚಿದರೆ ಸಂಜೆ ೫ಕ್ಕೆ ತೆರೆಯಲಾಗುವುದು. ರಾತ್ರಿ ೭ಕ್ಕೆ ಪುಷ್ಪಾಭಿಷೇಕ, ೧೦.೫೦ಕ್ಕೆ ಹರಿವರಾಸನಂ ಬಳಿಕ ೧೧ಕ್ಕೆ ಬಾಗಿಲು ಮುಚ್ಚಲಾಗುವುದು.

ರಾತ್ರಿ ಮರೆಯಲ್ಲಿ ಅಂಗಡಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಕಾಸರಗೋಡು: ಮೊಗ್ರಾಲ್ ಪುತ್ತೂರಿಗೆ ಸಮೀಪದ ಕೊರುವೈಲ್‌ನಲ್ಲಿರುವ ನಿವೃತ್ತ   ಬ್ಯಾಂಕ್ ಉದ್ಯೋಗಿ  ಸೋಮನಾಥ ಎಂಬವರ ಅಂಗಡಿಗೆ ದ್ವಿಚಕ್ರ ವಾಹನದಲ್ಲಿ   ಬಂದ ಅಕ್ರಮಿಗಳು  ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ನಿನ್ನೆ ಮಧ್ಯರಾತ್ರಿ  ಈ ಘಟನೆ ನಡೆದಿದೆ.  ಕಲ್ಲು ತೂರಾಟದಿಂದ ಅಂಗಡಿಯ ಗಾಜು ಪುಡಿಗೈಯ್ಯಲ್ಪಟ್ಟಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕೆಲವು ತಿಂಗಳ ಮೊದಲು ಕೂಡಾ ಇದೇ ಪರಿಸರದ ಎರಡು ಮನೆಗಳಿಗೂ  ಅಕ್ರಮಿಗಳು ಕಲ್ಲು ತೂರಾಟ ನಡೆಸಿದ್ದರು.  ಅಂದೂ ಆ ಬಗ್ಗೆ ಪೊಲೀಸರಿಗೆ ದೂರು …

ಅಧಿಕಾರಿಗಳು ಕೈಬಿಟ್ಟಾಗ ಸ್ಥಳೀಯರೇ ಮಣ್ಣು ತುಂಬಿಸಿ ಅಣೆಕಟ್ಟು ದುರಸ್ತಿ

ಪೈವಳಿಕೆ: ಅಧಿಕಾರಿ ವರ್ಗ ಕೈ ಬಿಟ್ಟ ಅಣೆಕಟ್ಟಿಗೆ ಸ್ಥಳೀಯರೇ ಸೇರಿ ಜೀವ ತುಂಬಿದರು. ಪೈವಳಿಕೆ ಪಂಚಾಯತ್‌ನ ೮ನೇ ವಾರ್ಡ್ ಬೆರಿಪದವುನಿಂದ ಸುದೆಂಬಳ ಹೊಳೆಗೆ ಸೇರುವ ತೋಡಿಗೆ ಸುಮಾರು ೪೦ ವರ್ಷದ ಹಿಂದೆ ಪಂಚಾಯತ್ ನಿರ್ಮಿಸಿದ ಅಣೆಕಟ್ಟಿಗೆ ಸ್ಥಳೀಯರು ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸುತ್ತಿದ್ದಾರೆ. ಈ ಪರಿಸರದ ಹಲವು ಪ್ರದೇಶದ ಕೃಷಿ ಕಾರ್ಯಗಳಿಗೂ ಬಾವಿಯಲ್ಲಿನ ನೀರಿನ ಒರತೆಗೂ ಈ ಅಣೆಕಟ್ಟಿನಲ್ಲಿ ನೀರು ಸಂಗ್ರಹಗೊಂಡರೆ ಪ್ರಯೋಜನವಾಗುತ್ತದೆ. ಅಣೆಕಟ್ಟಿಗೆ ಬೇಸಿಗೆಯಲ್ಲಿ ಹಲಗೆಯನ್ನು ಹಾಕಿ ಮಣ್ಣು ತುಂಬಿಸಲಾಗುತ್ತಿದ್ದರೆ ಈಗ ಈ ಹಲಗೆಗೆ ಬದಲಾಗಿ …

ಕೇಳುಗುಡ್ಡೆ ಶ್ರೀ ಅಯ್ಯಪ್ಪ ಮಂದಿರ ವಾರ್ಷಿಕ ಮಹೋತ್ಸವ ನಾಳೆಯಿಂದ

ಕಾಸರಗೋಡು: ಕೇಳುಗುಡ್ಡೆ ಅಯ್ಯಪ್ಪನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ವಾರ್ಷಿಕ ಮಹೋತ್ಸವ ನಾಳೆಯಿಂದ ೩೦ರ ವರೆಗೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ. ಇಂದು ಬೆಳಿಗ್ಗೆ ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನ ದಿಂದ ಹಸಿರುವಾಣಿ ಮೆರವಣಿಗೆ ಹೊರಟು ಉಗ್ರಾಣ ತುಂಬಿಸಲಾ ಯಿತು. ನಾಳೆ ಬೆಳಿಗ್ಗೆ ೮ಕ್ಕೆ ಗಣಹೋಮ, ಶುದ್ಧಿಕಲಶ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೪.೩೦ಕ್ಕೆ ಧಾರ್ಮಿಕ ಸಭೆ ನಡೆಯ ಲಿದ್ದು, ಮಂದಿರದ ಅಧ್ಯಕ್ಷ ಪವನ್ ಕುಮಾರ್ ಬಿ.ಕೆ ಅಧ್ಯಕ್ಷತೆ ವಹಿಸುವರು. ಹಿಂದೂ ಐಕ್ಯವೇದಿ ಕಾರ್ಯಕಾರಿ ಅಧ್ಯಕ್ಷ ವತ್ಸನ್ …

ಬಿಜೆಪಿ ಪಂಚಾಯತ್ ಯಾತ್ರೆ: ಹಿರಿಯ ಕಾರ್ಯಕರ್ತರ ಮನೆಗೆ ನೇತಾರರ ತಂಡ ಭೇಟಿ

ಉಪ್ಪಳ: ಬಿಜೆಪಿ ಪಂಚಾಯತ್ ಯಾತ್ರೆ ಯ ಅಂಗವಾಗಿ ಮಂಗಲ್ಪಾಡಿ ದಕ್ಷಿಣ ವಲಯದ ಸಂಘ ಪರಿವಾರದ ಹಿರಿಯ ಕಾರ್ಯಕರ್ತರ ಮನೆಗೆ ಭೇಟಿ ನೀಡಲಾಯಿತು. ಅಂಬಾರ್ ಶ್ರೀ ಸದಾಶಿವ ದೇವಸ್ಥಾನಕ್ಕೆ, ಪದ್ಮನಾಭ ಶೆಟ್ಟಿ ಮೀನಾರು, ರಾಮಚಂದ್ರ ಸಿ, ಬಾಬು ಪೂಜಾರಿ, ಬಾಬು ಪೂಜಾರಿ ಅಂಬಾರು, ಸಂಘದ ಹಿರಿಯರಾದ ಗೋಪಾಲ ಚೆಟ್ಟಿಯಾರ್, ಬಿ.ಎಂ. ಗುರುವ, ಸಿ ಟಿ ಹೆಬ್ಬಾರ್ ಹೇರೂರ್, ಜಯಲಕ್ಷ್ಮಿ ಮಯ್ಯ ತಾಡ, ಎಂ ಆರ್ ಕೊರಗಪ್ಪ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಕುಬಣೂರು ಹರೀಶ್ ಮಾಸ್ಟರ್, ವೀರ ನಗರದಲ್ಲಿ ಕ್ರೆÊಸ್ತ …

ರಜಾವಧಿ ಮುಗಿದ ಬಳಿಕ ರಾಜ್ಯದಲ್ಲಿ ಕೋವಿಡ್ ಹರಡುವಿಕೆಯಲ್ಲಿ ಹೆಚ್ಚಳ ಸಾಧ್ಯತೆ: ಜಾಗ್ರತಾ ನಿರ್ದೇಶ

ಕೊಚ್ಚಿ: ಕ್ರಿಸ್ಮಸ್ ರಜಾವಧಿಯ ಬಳಿಕ ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗುವ ಸಾಧ್ಯತೆ ಇದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ರೂಪಾಂತರಿ ಬಗ್ಗೆ ಆತಂಕ ಅಗತ್ಯವಿಲ್ಲ. ಆದರೆ ಹೆಚ್ಚು ವಯಸ್ಸಾದವರು ಹಾಗೂ ಇತರ ರೋಗ ಬಾಧಿತರು ಜಾಗ್ರತೆ ಪಾಲಿಸಬೇಕೆಂದು ತಿಳಿಸಲಾಗಿದೆ. ಪ್ರತಿರೋಧ ಶಕ್ತಿ ಕಡಿಮೆಯಿರುವವರು ಕೋವಿಡ್ ವ್ಯಾಕ್ಸಿನ್ ಬೂಸ್ಟರ್ ಡೋಸ್ ಪಡೆಯಬೇಕೇ  ಎಂಬ ಕುರಿತಾಗಿ ಇನ್ನಷ್ಟೇ ಚರ್ಚೆ ನಡೆಸಿ ತೀರ್ಮಾನಿಸಬೇಕಾಗಿದೆ. ರಾಜ್ಯದಲ್ಲೂ, ದೇಶದಲ್ಲೂ, ಜಗತ್ತಿನಲ್ಲೂ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿದೆ. ತಪಾಸಣೆಯ ಸಂಖ್ಯೆ ಹೆಚ್ಚಿದಂತೆ ಹೆಚ್ಚೆಚ್ಚು ಪ್ರಕರಣಗಳು ರಾಜ್ಯದಲ್ಲಿ …

ಬಿಜೆಪಿ ಕುಂಬಳೆ ಮಂಡಲ ಕಚೇರಿಯಲ್ಲಿ ವಾಜಪೇಯಿ ಪುಣ್ಯಸ್ಮರಣೆ

ಬಿಜೆಪಿ ಕುಂಬಳೆ ಮಂಡಲ ಆಫೀಸಿನಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಯವರ ೯೯ನೇ ವಾರ್ಷಿಕ ಪುಣ್ಯ ಸ್ಮರಣೆ ಯನ್ನು ಅವರ ಜನ್ಮ ದಿನದಂದು ಆಚರಿಸಲÁಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೆ ಸತೀಶ್ ಚಂದ್ರ ಭಂಡಾರಿ ಪುಷ್ಪರ್ಚನೆ ಮಾಡಿದರು. ರಾಜ್ಯ ಪರಿಷತ್ ಸದಸ್ಯ ವಿ. ರವಿಂದ್ರನ್ ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆ ಮಾತನಾಡಿದರು. ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಮುರಳಿಧರ ಯÁದವ್, ಉದ್ಯಮಿ ವಿಕ್ರಮ್ ಪೈ, ಗೋಪಾಲಕೃಷ್ಣ …

ಕುಂಬಳೆ ಅಂಗಡಿ ವರಾಂಡದಲ್ಲಿದ್ದ ವ್ಯಕ್ತಿ ಆಸ್ಪತ್ರೆಗೆ

ಕುಂಬಳೆ: ಸ್ವಂತ ಪುತ್ರ ಮನೆ ಯಿಂದ ಹೊರದಬ್ಬಿದ ಹಿನ್ನೆಲೆಯಲ್ಲಿ ಬೀದಿಯಲ್ಲಿ ರೋಗ ಬಾಧಿತನಾಗಿ ಸಂಕಷ್ಟ ಜೀವನ ಸಾಗಿಸುತ್ತಿದ್ದ ವ್ಯಕ್ತಿಗೆ ತಾತ್ಕಾಲಿಕ ನೆಮ್ಮದಿ ಮೂಡಿದೆ. ಪಾಲಕ್ಕಾಡ್ ನಿವಾಸಿಯೂ ನೇಶ ನಲ್ ಪರ್ಮಿಟ್ ಲಾರಿಯಲ್ಲಿ ದೀರ್ಘಕಾಲ ಚಾಲಕನಾಗಿ ದುಡಿದ ಶರೀಫ್ (೬೨)ರಿಗೆ ಕಾಸರಗೋಡು ಸಿ.ಎಚ್. ಸೆಂಟರ್ ಆಸರೆ ವೊದಗಿಸಿದೆ. ಉಬ್ಬಿದ ಹೊಟ್ಟೆಯೊಂದಿಗೆ ಕುಂಬಳೆಯ ಅಂಗಡಿ ವರಾಂಡದಲ್ಲಿ  ವಾಸ್ತವ್ಯ ಹೂಡಿ, ಆಹಾರ ಸೇವಿಸಲಾಗದೆ ನರಕಯಾತನೆ ಅನುಭವಿಸುತ್ತಿದ್ದ ಶರೀಫ್‌ರ ಸಂಕಷ್ಟ ಜೀವನದ ಕುರಿತು ‘ಕಾರವಲ್’ ನಿನ್ನೆ ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ವರದಿ …

ಹುಚ್ಚುನಾಯಿ ಕಡಿತ: ಗಾಯಗೊಂಡ ಮಹಿಳೆಗೆ ಪರಿಯಾರಂನಲ್ಲಿ ಚಿಕಿತ್ಸೆ

ಕುಂಬಳೆ: ಹುಚ್ಚು ರೋಗ ಬಾಧಿಸಿದ ನಾಯಿಯ ಕಡಿತದಿಂದ ಗಾಯಗೊಂಡ ಮಹಿಳೆಗೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್‌ರ ಸೂಕ್ತ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ತಜ್ಞ ಚಿಕಿತ್ಸೆಯ ಏರ್ಪಾಡು ಮಾಡ ಲಾಗಿದೆ. ಇದರಂತೆ ಕುಂಟಂಗೇರಡ್ಕ ವೆಲ್ಫೇರ್ ಶಾಲೆ ಬಳಿಯ ಎಸ್.ಸಿ. ಕಾಲನಿ ನಿವಾಸಿ ಸುನಿತ (೪೩) ಅವರನ್ನು ಪರಿಯಾರಂ ಮೆಡಿಕಲಾ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಇವರಿಗೆ ಮೊನ್ನೆ ಮನೆ ಸಮೀಪ ಹುಚ್ಚು ನಾಯಿ ಕಡಿದಿತ್ತು. ಇದರಿಂದ ಮುಖ ಸಹಿತ ವಿವಿಧೆಡೆ ಗಂಭೀರ ಗಾಯಗೊಂಡ ಸುನಿತರನ್ನು ಕಾಸರಗೋ ಡಿನ ಜನರಲ್ ಆಸ್ಪತ್ರೆಯಲ್ಲಿ …

ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿಸಿ ಹಿಂದೂ ಯುವತಿ ಚುನಾವಣೆ ಸ್ಪರ್ಧೆಗೆ

ಇಸ್ಲಮಾಬಾದ್: ಪಾಕಿಸ್ತಾನದ ಇತಿಹಾಸದಲ್ಲೇ ಪ್ರಥಮವಾಗಿ ಹಿಂದೂ ಮಹಿಳೆಯೋರ್ವೆ  ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. ಖೈಬರ್ ಪಕ್ತೂನ್‌ಕ್ವ ವಲಯದಲ್ಲಿ ಮುನೇರ್ ಜಿಲ್ಲೆಯಲ್ಲಿ ಡಾ. ಸವೀರ ಪರ್ಕಾಶ್ ಎಂಬ ಯುವತಿ ನಾಮಪತ್ರಿಕೆ ಸಲ್ಲಿಸಿದ್ದಾರೆ. ೨೦೨೪ ಫೆಬ್ರವರಿ ೮ರಂದು ಇಲ್ಲಿ ಚುನಾವಣೆ ನಡೆಯಲಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯಿಂದ (ಪಿಪಿಪಿ) ಸವೀರ ಸ್ಪರ್ಧೆಗಿಳಿದಿದ್ದಾರೆ. ಇವರ ತಂದೆ ಡಾ. ಓಂ ಪರ್ಕಾಶ್ ೩೫ ವರ್ಷದಿಂದ ಪಿಪಿಪಿಯ ಸಕ್ರಿಯ ಕಾರ್ಯಕರ್ತ ರಾಗಿದ್ದಾರೆ. ಅಂಬೋ ಟ್‌ಬಾದ್ ಇಂಟರ್‌ನೇಶನಲ್ ಮೆಡಿಕಲ್ ಕಾಲೇಜಿನಲ್ಲಿ ೨೦೨೨ರಲ್ಲಿ  ಪದವಿ ಗಳಿಸಿದ ಸವೀರ ಪಿಪಿಪಿಯ …