ತಲ್ಲಾಣಿ: ೯೪ನೇ ಏಕಾಹ ಭಜನೆ ೨೯ರಿಂದ

ಕಾಸರಗೋಡು: ರಾಮರಾಜ ಕ್ಷತ್ರಿಯ ಭಜನಾ ಸಂಘದ 94 ನೇ ವರ್ಷದ ಏಕಾಹ ಭಜನಾ ಸಮಾರಂಭ ಬೇಕಲ ತಲ್ಲಾಣಿ ಶ್ರೀ ಗಣೇಶ ಶಾರದಾ ಮಂದಿರದಲ್ಲಿ ಡಿ.29 ರಿಂದ 31 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಡಿ.29 ರಂದು ಪ್ರಾತ:ಕಾಲ 5.45 ಕ್ಕೆ ಗಣಪತಿ ಹೋಮ, ದೀಪ ಪ್ರತಿಷ್ಠೆ, ಏಕಾಹ ಭಜನೆ ಪ್ರಾರಂಭ, ಪೂರ್ವಾಹ್ನ 11 ರಿಂದ 54 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾ ಯಣ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 6.15 …

ಮುಖ್ಯಮಂತ್ರಿಯ ಕ್ರಿಸ್ಮಸ್, ಹೊಸವರ್ಷದ ಔತಣಕೂಟ ಜ.೩ರಂದು: ರಾಜ್ಯಪಾಲರಿಗಿಲ್ಲ ಆಹ್ವಾನ

ತಿರುವನಂತಪುರ: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಲುವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನವರಿ ೩ರಂದು ಮಧ್ಯಾಹ್ನ ತಿರುವನಂತಪುರ ಮಸ್ಕತ್ ಹೋಟೆ ಲ್‌ನಲ್ಲಿ ಸಮಾಜದ ಗಣ್ಯರಿಗಾಗಿ ವಿಶೇ ಷ ಔತಣಕೂಟ ಏರ್ಪಡಿಸಿದ್ದಾರೆ. ಕಳದ ವರ್ಷವೂ ಇದೇ ರೀತಿ ಔತಣ ಕೂಟ ಏರ್ಪಡಿಸಲಾಗಿತ್ತು. ಆದರೆ  ಈ ವರ್ಷದ ಔತಣ ಕೂಟಕ್ಕೆ ರಾಜ್ಯಪಾಲ  ಆರೀಫ್ ಮೊಹಮ್ಮದ್ ಖಾನ್‌ರಿಗೆ ಆಹ್ವಾನ ನೀಡಲಾಗಿಲ್ಲ. ಈ ಔತಣ ಕೂಟ ಏರ್ಪಡಿಸಿದ ದಿನದಂದು ರಾಜ್ಯಪಾಲರು ಇತರ ಯಾ ವುದೇ ಕಾರ್ಯಕ್ರಮವನ್ನೂ ಹೊಂ ದಿಲ್ಲ. ಅವರು ಅಂದು ತಿರುವನಂ …

ಕೊಂಡೆವೂರು: ಕೊರಗ ಸಮಾಜ ಬಂಧುಗಳ ಕ್ರೀಡೋತ್ಸವ

ಉಪ್ಪಳ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೊರಗ ಸಮಾಜ ಬಂಧುಗಳ ಕ್ರೀಡೋತ್ಸವ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಶ್ರೀ ಯೋಗಾ ನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಭಾಸ್ಕರ ರೈ ಮಂಜಲ್ತೋಡಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಉದ್ಘಾಟಿಸಿದರು. ನಂತರ ಅವರು ಮÁತನಾಡಿ, ಕೀಳರಿಮೆ ತೊರೆದು ಒಂದಾಗಿ ಬಾಳೋಣ ಎಂದು ಕರೆನೀಡಿದರು. “ಕ್ರೀಡೆಯ ಮೂಲಕ ನಮ್ಮ ನಡುವೆ ಬಾಂಧವ್ಯ ಬೆಳೆಯುತ್ತದೆ, ಈ ಕ್ರೀಡೋತ್ಸವದ ಮೂಲಕ ನಾವು ಒಂದಾಗಿ ಬೆಳೆಯೋಣ” …

ದಿಢೀರ್ ಆಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಕಾಸರಗೋಡು: ದಿಢೀರ್ ಆಗಿ  ಸಂಭವಿಸುವ ಸಾವು ಪ್ರಕರಣಗಳು ದೇಶದಲ್ಲಿ ಇತ್ತೀಚೆಗಿನಿಂದ ಹೆಚ್ಚಾಗುತ್ತಿದೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ದ ವರದಿಯಲ್ಲಿ ಸೂಚಿಸಲಾಗಿದೆ. ಹಿಂದಿನ ವರ್ಷಗಳೊಂದಿಗೆ ಹೋಲಿಸಿದಲ್ಲಿ, ೨೦೨೨ರಲ್ಲಿ ದಿಢೀರ್ ಆಗಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಶೇ. ೧೨ರಷ್ಟು ಏರಿಕೆ ಉಂಟಾಗಿದೆ. ಇದರಲ್ಲಿ ಶೇ. ೫೭ರಷ್ಟು ಸಾವು ಹೃದಯಾ ಘಾತದಿಂದಲೇ ಉಂಟಾಗಿದೆ. ಕೋವಿಡ್ ಮಾನವ ದೇಹದಲ್ಲಿ ಉಂಟುಮಾಡಿರುವ ಬದಲಾವಣೆಗಳು, ಅನುವಂಶಿಕ ಕಾಯಿಲೆ, ಜೀವನ ಶೈಲಿ ಇತ್ಯಾದಿಗಳೇ ದಿಢೀರ್ ಆಗಿ ಸಾವು ಉಂಟಾಗಲಿರುವ ಪ್ರಧಾನ ಕಾರಣಗಳಾ ಗಿವೆ ಎಂದು ಹೇಳಲಾಗುತ್ತಿದೆ. …

ಕುಂಟಂಗೇರಡ್ಕದಲ್ಲಿ ಹುಚ್ಚು ನಾಯಿ ಕಡಿತ: ಮಹಿಳೆ ಸಹಿತ ೮ ಮಂದಿಗೆ ಗಾಯ

ಕುಂಬಳೆ: ಹುಚ್ಚು ಹಿಡಿದ ಬೀದಿನಾಯಿಯ ಕಡಿತದಿಂದ ಮಹಿಳೆ ಸಹಿತ ಎಂಟು ಮಂದಿ ಗಾಯಗೊಂ ಡಿದ್ದಾರೆ. ಕುಂಟಂಗೇರಡ್ಕ ವೆಲ್ಫೇರ್ ಸ್ಕೂಲ್ ಸಮೀಪದ ಎಸ್.ಸಿ. ಕಾಲನಿ ನಿವಾಸಿಗಳಾದ ಸುನಿತ (೪೩), ಬ್ರಿಜೇಶ್ (೨೧),  ಹರಿಶ್ರೀ (೨೧), ಸರಾಸ್ (೧೧) ಎಂಬಿವರ ಸಹಿತ ಎಂಟು ಮಂದಿಗೆ ಹುಚ್ಚುನಾಯಿ ಕಡಿತದಿಂದ ಗಾಯಗಳಾಗಿದೆ. ಈ ಪೈಕಿ ಸುನಿತಾ ಗಂಭೀರ ಗಾಯಗೊಂಡಿದ್ದಾರೆ. ಅವರಿಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.  ಆದರೆ ಅಲ್ಲಿ ಚುಚ್ಚು ಮದ್ದು ನೀಡಿದ …

ಜನವರಿ ೩೧ರೊಳಗೆ ಅಧಿಕಾರಿಗಳ ಸಾಮೂಹಿಕ ವರ್ಗಾವಣೆಗೆ ಚು. ಆಯೋಗ ನಿರ್ದೇಶ

ಕಾಸರಗೋಡು:  ಲೋಕಸಭಾ ಚುನಾವಣೆ ಮುಂದಿನ ಎಪ್ರಿಲ್-ಮೇ ತಿಂಗಳೊಳಗಾಗಿ ನಡೆಯಲಿರುವಂ ತೆಯೇ ಅದಕ್ಕೆ ಪೂರ್ವಭಾವಿಯಾಗಿ ಜನವರಿ ೩೧ರೊಳಗಾಗಿ  ಹಿರಿಯ ಅಧಿಕಾರಿಗಳ ವರ್ಗಾವಣೆ ಕ್ರಮ ಕೈಗೊಳ್ಳಲಾಗಿದೆ. ಇದರಂತೆ  ಒಂದೇ ಕಚೇರಿಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪೊಲೀಸರು, ಕಂದಾಯ ಇಲಾಖೆ   ಸೇರಿದಂತೆ ಇತರ ಎಲ್ಲಾ ಸರಕಾರಿ ಅಧಿಕಾರಿಗಳನ್ನು    ಸಾಮೂಹಿಕವಾಗಿ ಬೇರೆಡೆ ಜಿಲ್ಲೆಗೆ ವರ್ಗಾಯಿಸಲು ಕೇಂದ್ರ ಚುನಾವಣಾ ಆಯೋಗ ಕೇರಳದ ಮುಖ್ಯ  ಚುನಾವಣಾ ಅಧಿಕಾರಿಯಾ ಗಿರುವ  ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶ ನೀಡಿದೆ. ಇದರಂತೆ ಪೊಲೀಸ್ ಮತ್ತು …

ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ, ಬಸ್‌ಗೆ ಢಿಕ್ಕಿ ಹೊಡೆದು  ಪಲ್ಟಿ: ತಂದೆ, ಪುತ್ರ ಅಪಾಯದಿಂದ ಪಾರು

ಪೆರ್ಲ: ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಬಳಿಕ ನಿಲ್ಲಿಸಿದ್ದ ಬಸ್‌ಗೆ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ. ಪೆರ್ಲದಲ್ಲಿ ನಿನ್ನೆ ಸಂಜೆ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಅಯ್ಯಪ್ಪ ವ್ರತಧಾರಿಗಳಾದ ತಂದೆ ಹಾಗೂ ಪುತ್ರ ಅದೃಷ್ಟವಶಾತ್ ಅಪಾ ಯದಿಂದ ಪಾರಾಗಿದ್ದಾರೆ.  ಕಾಸರ ಗೋಡು ತಾಳಿಪಡ್ಪು ನಿವಾಸಿ ಜನಾರ್ದನ (೪೯), ಪುತ್ರ ಧನುಷ್ (೧೨) ಎಂಬಿವರು ಅಪಾಯದಿಂದ ಪಾರಾಗಿ ದ್ದಾರೆ.  ಶಬರಿ ಮಲೆ ಕ್ಷೇತ್ರ ದರ್ಶನಕ್ಕಾಗಿ ಮಾಲೆ ಧರಿಸಿರುವ ಇವರು ನಿನ್ನೆ ಪುತ್ತೂರಿಗೆ ತೆರಳಿದ್ದರು. ಅಲ್ಲಿಂದ …

ನಿಲಯ್ಕಲ್‌ನಲ್ಲಿ ಶಬರಿಮಲೆ ತೀರ್ಥಾಟಕರ ವಾಹನ ಮಗುಚಿ ೧೩ ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಶಬರಿಮಲೆ: ಶಬರಿಮಲೆ ಕ್ಷೇತ್ರ ದರ್ಶನ ನಡೆಸಿ ಹಿಂತಿರುಗುತ್ತಿದ್ದ ತೀರ್ಥಾಟಕ ಮಿನಿ ಬಸ್ ನಿಲಯ್ಕಲ್ ವಾಹನ ಪಾರ್ಕಿಂಗ್ ಗ್ರೌಂಡ್‌ನಿಂದ ಇಳಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅದರಲ್ಲಿದ್ದ ತಮಿಳುನಾಡಿನ ೧೩ ತೀರ್ಥಾಟಕರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಕೋಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು ನಾಲ್ಕೂವರೆ ಗಂಟೆ ವೇಳೆ ಈ ಘಟನೆ ನಡೆದಿದೆ. ಶಬರಿಮಲೆಯಲ್ಲಿ ಮಂಡಲ ಪೂಜಾದಿನ ಸಮೀಪಿಸುತ್ತಿರುವಂತೆಯೇ, ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿರುವ ತೀರ್ಥಾಟಕರ ಸಂಖ್ಯೆ ದಾಖಲೆ ಮೀರತೊಡಗಿದೆ. ನಿನ್ನೆ …

ಅಸೌಖ್ಯ ಬಾಧಿಸಿ ಕುಂಬಳೆಗೆ ತಲುಪಿದ ಪಾಲಕ್ಕಾಡ್ ನಿವಾಸಿಗೆ ಅಂಗಡಿ ವರಾಂಡವೇ ಆಸರೆ: ಸಹಾಯದ ನಿರೀಕ್ಷೆಯಲ್ಲಿ

ಕುಂಬಳೆ: ಮಗ ಮನೆಯಿಂದ ಹೊರದಬ್ಬಿದ ಪರಿಣಾಮ ಊರು ಬಿಟ್ಟು ಕುಂಬಳೆಗೆ ತಲುಪಿದ ವ್ಯಕ್ತಿ ಇದೀಗ ಇತರರ ಸಹಾಯ ಯಾಚಿಸುತ್ತಿದ್ದಾರೆ. ಪಾಲಕ್ಕಾಡ್ ನಿವಾಸಿ ಶರೀಫ್ (೬೩) ಎಂಬವರು ಕಳೆದ ಎರಡು ತಿಂಗಳಿಂದ ಕುಂಬಳೆ ಪೇಟೆಯಲ್ಲಿದ್ದು, ಅಂಗಡಿಗಳ ವರಾಂಡದಲ್ಲಿ ಕಾಲ ಕಳೆಯುತ್ತಿದ್ದಾರೆ.  ಎರಡು ವಾರಗಳ ಹಿಂದೆ  ಇವರ ದಯನೀಯ  ಸ್ಥಿತಿಯನ್ನು ಕಂಡ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನ ಚಾಲಕರೊಬ್ಬರು ಮಂಗಳೂರಿಗೆ ಕರೆದೊಯ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಕೆಲವು ದಿನಗಳ ಕಾಲ ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ …

ವಿವಿಧೆಡೆಗಳಲ್ಲಿ ಅಬಕಾರಿ ದಾಳಿ: ಮದ್ಯ, ತಂಬಾಕು ಉತ್ಪನ್ನ ವಶ

ಕಾಸರಗೋಡು: ಅಬಕಾರಿ ಇಲಾಖೆ ತಂಡ ಜಿಲ್ಲೆಯಲ್ಲಿ ನಡೆಸುತ್ತಿರುವ ದಾಳಿ ಇನ್ನೂ ಮುಂದುವರಿಯುತ್ತಿದ್ದು, ಅದರಂತೆ ನಿನ್ನೆ ವಿವಿಧೆಡೆಗಳಲ್ಲಾಗಿ ನಡೆಸಲಾದ ದಾಳಿಯಲ್ಲಿ ಮದ್ಯ, ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಇದರಂತೆ ಆದೂರು ತಪಾಸಣಾ ಕೇಂದ್ರದಲ್ಲಿ ಅಬಕಾರಿ ಪ್ರಿವೆಂಟಿವ್ ಆಫೀಸರ್ ಬಿ.ಎಂ. ಅಬ್ದುಲ್ಲ ಕುಂಞಿಯವರ ನೇತೃತ್ವದ ವಾಹನ ತಪಾಸಣೆಯಲ್ಲಿ ಕರ್ನಾಟಕ ನಿರ್ಮಿತ ೨.೨೫೦ ಲೀಟರ್ (೩೭೫ ಎಂ.ಎಲ್‌ನ ೬ ಬಾಟಲಿ) ಮದ್ಯವನ್ನು ಸುಳ್ಯದಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನೊಳಗಿನಿಂದ ಪತ್ತೆಹಚ್ಚಿ ವಶಪಡಿಸಲಾಗಿದೆ. ಆದರೆ ಈ ಮಾಲನ್ನು ಯಾರು ಸಾಗಿಸುತ್ತಿದ್ದರು ಎಂಬುದನ್ನು …