ಮನೆಯೊಡೆಯ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಮನೆಯೊಡೆ ಯನ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾ ಯಿತು.  ಮಾವಿನಕಟ್ಟೆ ಕುಂಞಡ್ಕ ನಿವಾಸಿ ಇಸ್ಮಾಯಿಲ್ (೫೧) ಎಂಬವರು ನಿನ್ನೆ ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದರು.  ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಸಾವಿನ ಬಗ್ಗೆ ಉಂಟಾಗಬಹುದಾದ ಸಂಶಯ ನಿವಾರಣೆಗಾಗಿ ಮೃತದೇಹವನ್ನು ತಜ್ಞ ಮರಣೋತ್ತರ ಪರೀಕ್ಷೆ ನಡೆಸಲು ಪರಿಯಾರಂಗೆ ಕೊಂಡೊಯ್ಯಲಾ ಯಿತು. ಮರಣೋತ್ತರ ಪರೀಕ್ಷೆಯಲ್ಲಿ ನೇಣು …

ಭಯೋತ್ಪಾದಕ ದಾಳಿ ಬಗ್ಗೆ ಮುನ್ನೆಚ್ಚರಿಕೆ: ಮುಂಬೈಯಲ್ಲಿ ಜ. ೧೮ರ ತನಕ ನಿಷೇಧಾಜ್ಞೆ

ಮುಂಬೈ:  ಮುಂಬೈಯಲ್ಲಿ ವಿದೇಶ ಭಯೋತ್ಪಾದಕರು ದಾಳಿ  ನಡೆಸುವ ಸಾಧ್ಯತೆ ಇದೆಯೆಂದು ಕೇಂದ್ರ  ಗುಪ್ತಚರ ಸಂಸ್ಥೆಗಳು ಮುನ್ನೆ ಚ್ಚರಿಕೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಮುಂಬೈ ನಗರ ಮತ್ತು ಪರಿಸರ ಪ್ರದೇಶಗಳಲ್ಲಿ ಜನವರಿ ೧೮ರ ತನಕ ಪೊಲೀಸರು ನಿಷೇಧಾಜ್ಞೆ ಜ್ಯಾರಿಗೊಳಿಸಿದ್ದಾರೆ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ  ಮುಂಬೈಯಲ್ಲಿ ವಿಶೇಷ ಜಾಗ್ರತಾ ನಿರ್ದೇಶ ನೀಡಲಾಗಿದೆ.  ನಿಷೇಧಾಜ್ಞೆ ಪ್ರಕಾರ  ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದನ್ನು ತಡೆಯಲಾಗಿದೆ. ಭಯೋತ್ಪಾದಕರು ಡ್ರೋನ್‌ಗಳು, ರಿಮೋಟ್ ನಿಯಂತ್ರಿತ ಮೈಕ್ರೋ ಲೈಟ್ ಏರ್ ಕ್ರಾಫ್ಟ್‌ಗಳು, …

ಕೆಎಸ್‌ಆರ್‌ಟಿಸಿ ಬಸ್ ಶಾಲಾ ಬಸ್‌ಗೆ ಢಿಕ್ಕಿ: ವಿದ್ಯಾರ್ಥಿಗಳು ಸೇರಿ ಏಳು ಮಂದಿಗೆ ಗಾಯ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ ಶಾಲಾ ಬಸ್ಸಿಗೆ ಢಿಕ್ಕಿ ಹೊಡೆದು ವಿದ್ಯಾರ್ಥಿಗಳೂ ಸೇರಿ ಏಳು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಮೈಲಾಟಿ ಬಸ್ ತಂಗುದಾಣದ ಬಳಿ ನಿನ್ನೆ ಸಂಜೆ ನಡೆದಿದೆ. ಶಾಲಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚಟ್ಟಂಟಾಲ್ ಹೈಯರ್ ಸೆಕೆಂಡರಿ ತರಗತಿ ವಿದ್ಯಾರ್ಥಿಗಳಾದ ಪನಯಾಲ್‌ನ ದರ್ಶನ್ ಚಂದ್ರನ್, ಕೆ. ದೇವಾಂಗ್, ಕುಣಿಯಾದ ಅಲ್-ಅಮೀನ್, ೯ನೇ ತರಗತಿ ವಿದ್ಯಾರ್ಥಿನಿ ಕಣಿಯಾದ ಫಿದಾ ಶೆರೀನ್, ಅರೆಬಿಕ್ ಅಧ್ಯಾಪಿಕೆ ಮರಿಯಾಂಬಿ (೩೨), ಮತ್ತು ಕೆಎಸ್‌ಆರ್‌ಟಿಸಿ ಬಸ್ಸಿನ ಇಬ್ಬರು ಪ್ರಯಾಣಿಕರು ಈ ಅಪಘಾದಲ್ಲಿ ಗಾಯಗೊಂಡಿದ್ದಾರೆ. …

ಬಳ್ಳೂರಿನಲ್ಲಿ ಕುಟುಂಬಶ್ರೀಯ ಡ್ರಾಗನ್ ಫ್ರೂಟ್ ಕೃಷಿ

ಪೈವಳಿಕೆ: ರಾಜ್ಯದಲ್ಲಿ ಅಷ್ಟಾಗಿ ಪ್ರಚಾರದಲ್ಲಿಲ್ಲದ ಆದರೆ ಅಲ್ಲಲ್ಲಿ ಈಗ ಕೃಷಿ ಆರಂಭಿಸಿರುವ ಡ್ರಾಗನ್ ಫ್ರೂಟ್ಸ್‌ನ್ನು ವ್ಯಾಪಕ ರೀತಿಯಲ್ಲಿ ನಡೆಸಿ ಬಳ್ಳೂರು ಕುಟುಂಬಶ್ರೀ ಗಮನಸೆಳೆದಿದೆ. ಇಲ್ಲಿ ಪ್ರಥಮವಾಗಿ ವೀಣಾ ಭಟ್‌ರ ನೇತೃತ್ವದಲ್ಲಿ ಕೃಷಿ ಆರಂಭಿಸಲಾಗಿದೆ. ಇವರಿಗೆ ಪತಿ  ಡಾ| ನಾರಾಯಣ ಭಟ್ ಸಹಕಾರ ನೀಡಿದ್ದಾರೆ. ಈಗ ಕುಟುಂಬಶ್ರೀಯು ಈ ಕೃಷಿಯನ್ನು ಮುನ್ನಡೆಸುತ್ತಿದ್ದು, ಒಂದೂವರೆ ಎಕ್ರೆ ಸ್ಥಳದಲ್ಲಿ ಕೃಷಿ ಕೈಗೊಳ್ಳಲಾಗಿದೆ. ಕುಟುಂಬಶ್ರೀ ಜಿಲ್ಲಾ ಮಿಶನ್ ಸಹಾಯ ನೀಡುತ್ತಿದೆ. ಉಷ್ಣ ಪ್ರದೇಶದಲ್ಲಿ ಬೆಳೆಯುವ ಡ್ರಾಗನ್ ಫ್ರೂಟ್ ಮಲೇಶ್ಯ, ಚೈನಾಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. …

ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೩೯.೫೦ ರೂ. ಇಳಿಕೆ

ನವದೆಹಲಿ: ಹೊಸ ವಷಕ್ಕೂ ಮುನ್ನ ದೇಶದ ಜನತೆಗೆ ಸಿಹಿಸುದ್ದಿ ಸಿಕ್ಕಿದ್ದು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಯಲ್ಲಿ ೩೯.೫೦ ರೂ. ಇಳಿಕೆಯಾ ಗಿದೆ.  ಈ ಕಡಿತವನ್ನು ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳಿಗೆ ಮಾತ್ರವಾಗಿ ಸೀಮಿತ ಗೊಳಿಸಲಾಗಿದೆ. ಆದರೆ ದೇಶೀಯ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಉಂಟುಮಾಡಿಲ್ಲ.  ಡಿಸೆಂಬರ್ ೧ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆ ಹೆಚ್ಚಿಸಲಾಗಿತ್ತು. ಅದಾದ ಬಳಿಕ ಆ ಬೆಲೆಯನ್ನು ಈಗ ಇಳಿಸಲಾಗಿದೆ.

ಅಸೌಖ್ಯ: ಲಾರಿ ಚಾಲಕ ನಿಧನ

ಕಾಸರಗೋಡು: ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಮೀಪದ ನಿವಾಸಿ ನಾರಾಯಣ ಪಾಟಾಳಿ ಟಿ. (೫೧) ಎಂಬವರ ನಿನ್ನೆ ಸಂಜೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಅಲ್ಪ ಕಾಲದಿಂದ ಅಸೌಖ್ಯದಿಂದಿದ್ದರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಲಾರಿ ಚಾಲಕನಾಗಿ ದುಡಿದಿದ್ದರು. ದಿವಂಗತರಾದ ಪೇರಪ್ಪ ಪಾಟಾಳಿ- ಅಮ್ಮು ದಂಪತಿಯ ಪುತ್ರನಾದ ಮೃತರು ಸಹೋದರ- ಸಹೋದರಿ ಯರಾದ ರಾಮ ಪಾಟಾಳಿ, ಬಾಬು ಪಾಟಾಳಿ, ರಾಜೇಶ್, ಸಂಜೀವಿ, ಸೀತಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

೧೦೦ ಗ್ರಾಂ ಗಾಂಜಾ ಪತ್ತೆ: ಓರ್ವ ಸೆರೆ

ನೀರ್ಚಾಲು: ನೀರ್ಚಾಲು ಪೆರ್ಲಡ್ಕದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ  ೧೦೦ ಗ್ರಾಂ ಗಾಂಜಾ ಪತ್ತೆ ಹಚ್ಚಿ ವಶಪಡಿಸಿಕೊಂ ಡಿದೆ. ಇದಕ್ಕೆ ಸಂಬಂಧಿಸಿ ಅಬ್ದುಲ್ ಸವಾದ್ ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಎನ್‌ಡಿಪಿಎಸ್ ಪ್ರಕ ರಣ ದಾಖಲಿಸಲಾಗಿದೆ. ಕಾಸರ ಗೋಡು ಎಕ್ಸೈಸ್ ಸರ್ಕಲ್ ಕಚೇ ರಿಯ ಸರ್ಕಲ್ ಇನ್ಸ್‌ಪೆಕ್ಟರ್ ಅಮಲ್‌ರಾಜ್ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ

ಎಬಿವಿಪಿ ಕಾರ್ಯಕರ್ತನ ಮನೆಗೆ ಆಕ್ರಮಣ

ಪತ್ತನಂತಿಟ್ಟ: ಪತ್ತನಂತಿಟ್ಟ ಏಳಂಕುಳದಲ್ಲಿ ಎಬಿವಿಪಿ ಕಾರ್ಯಕರ್ತನ ಮನೆಗೆ ದುಷ್ಕರ್ಮಿಗಳ ತಂಡವೊಂದು ಆಕ್ರಮಿಸಿ ಹಾನಿಗೊಳಿಸಿದೆ. ಎಬಿವಿಪಿ ಕಾರ್ಯಕರ್ತನೂ, ಕಾಲೇಜು ವಿದ್ಯಾರ್ಥಿ ಯಾದ ಶ್ರೀನಾಥ್ ಎಂಬವರ ಮನೆಗೆ ಇಂದು ಮುಂಜಾನೆ ವೇಳೆ ಆಕ್ರಮಣವುಂ ಟಾಗಿದೆ. ನಿನ್ನೆ  ಪಂದಳದ ಎನ್‌ಎಸ್ ಎಸ್ ಕಾಲೇಜಿನಲ್ಲಿ ಎಸ್‌ಎಫ್‌ಐ-ಎಬಿವಿಪಿ ಮಧ್ಯೆ ಘರ್ಷಣೆ ನಡೆದಿತ್ತು.

ಹಾನಿಗೊಂಡು ಪದೇ ಪದೇ ಮುಚ್ಚುಗಡೆಗೊಳ್ಳುತ್ತಿರುವ ಹೊಸಂಗಡಿ ರೈಲ್ವೇ ಗೇಟ್: ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ

ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಹಾನಿಗೀಡಾಗಿ ಪದೇ ಪದೇ ಗಂಟೆಗಳ ಕಾಲ ಮುಚ್ಚುತ್ತಿ ರುವುದರಿಂದ ಬಂಗ್ರಮAಜೇಶ್ವರ ರಸ್ತೆಯಲ್ಲಿ ತೆರಳುವ ನೂರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ಜನರು ತೊಂದರೆಗೀಡಾ ಗುತ್ತಿದ್ದಾರೆ. ಮೊನ್ನೆ ರಾತ್ರಿ ರೈಲು ಹಾದು ಹೋದ ಬಳಿಕ ಗೇಟ್ ತೆರೆಯಲು ಸಾಧ್ಯವಾಗದೆ ನಿನ್ನೆ ಬೆಳಿಗ್ಗೆ ತನಕ ಮುಚ್ಚಿಕೊಂಡಿದ್ದು, ಸುಮಾರು ೧೦ಗಂಟೆಗೆ ದುರಸ್ಥಿಗೊಳಿಸಿ ತೆರೆಯಲಾಗಿದೆ . ಈ ಹಿಂದೆ ಕೂಡಾ ಹಲವು ಭಾರಿ ಇದೇ ರೀತಿ ಮುಚ್ಚಿ ಕೊಂಡಿರುವುದಾಗಿ ಹೇಳಲಾಗುತ್ತಿದೆ. ಮುಚ್ಚುಗಡೆಗೊಂಡಲ್ಲಿ ಬಂಗ್ರ ಮಂಜೇಶ್ವರ ಪರಿಸರ ಪ್ರದೇಶಕ್ಕೆ …

ಮಂಡಲಪೂಜೆ ೨೭ರಂದು: ತಂಗಅಂಗಿ ಶೋಭಾಯಾತ್ರೆ ನಾಳೆಯಿಂದ

ಶಬರಿಮಲೆ: ಮಂಡಲ ಪೂಜೆ ವೇಳೆ ಶ್ರೀ ಅಯ್ಯಪ್ಪ ಸ್ವಾಮಿಗೆ ತೊಡಿಸಲಿರುವ ತಂಗ ಅಂಗಿ ಒಳಗೊಂಡ ರಥ ಶೋಭಾಯಾತ್ರೆ ನಾಳೆ ಬೆಳಿಗ್ಗೆ ೭ಕ್ಕೆ ಆರನ್ಮುಳ ಶ್ರೀ ಪಾರ್ಥಸಾರಥಿ ಕ್ಷೇತ್ರದಿಂದ ಹೊರಡಲಿದೆ. ವಿವಿಧ ಕ್ಷೇತ್ರಗಳಲ್ಲಿ ಸ್ವಾಗತ ನೀಡಿದ ಬಳಿಕ ೨೬ರಂದು ಮಧ್ಯಾಹ್ನ ೧.೩೦ಕ್ಕೆ ಪಂಪಾಕ್ಕೆ ತಲುಪಲಿದೆ. ಪಂಪಾದ ಶ್ರೀ ಗಣಪತಿ ಕ್ಷೇತ್ರದಲ್ಲಿ ಭಕ್ತರಿಗಾಗಿ ದರ್ಶನಕ್ಕಿರಿಸಲಾಗುವುದು. ೩ ಗಂಟೆಗೆ ಅಲ್ಲಿಂದ ಗುರುಸ್ವಾಮಿಗಳು ನೀಲಿಮಲೆ, ಅಪ್ಪಾಡಿಮೇಡು, ಶಬರಿಪೀಠ ಮೂಲಕ ಸಂಚರಿಸಿ ಸಂಜೆ ೫ಕ್ಕೆ ಶರಂಕುತ್ತಿಗೆ ತಲುಪಿಸುವರು. ಅಲ್ಲಿಂದ ದೇವಸ್ವಂ ಪೊಲೀಸ್ ಅಧಿಕಾರಿಗಳು ಪಡೆದು …