ಕೆಂಪುಕಲ್ಲಿನ ಕ್ವಾರೆಗಳಲ್ಲಿ ತುಂಬಿಕೊಳ್ಳುತ್ತಿರುವ ಮಳೆನೀರು: ಅಪಾಯಭೀತಿ
ಕುಂಬಳೆ: ಮಳೆಗಾಲ ಆರಂಭಗೊಂಡ ಬೆನ್ನಲ್ಲೇ ನಾಡಿನ ವಿವಿಧೆಡೆಗಳಲ್ಲಿ ಕೆಂಪು ಕಲ್ಲಿನ ಹೊಂಡಗಳಿಂದ ಅಪಾಯ ಭೀತಿ ಎದುರಾದ ಬಗ್ಗೆ ನಾಗರಿಕರು ಆರೋಪಿಸುತ್ತಿದ್ದಾರೆ. ಕಲ್ಲು ಕಡಿದು ತೆಗೆದ ಬಳಿಕ ಸೃಷ್ಟಿಯಾದ ಹೊಂಡದಲ್ಲಿ ನೀರು ತುಂಬಿಕೊಳ್ಳುತ್ತಿರುವುದು ಅಪಾಯ ಭೀತಿಗೆ ಕಾರಣವಾಗಿದೆ. ಕಲ್ಲಿನ ಕ್ವಾರೆಗಳಿಗೆ ಆವರಣ ನಿರ್ಮಿಸಬೇ ಕೆಂಬ ನಿಬಂಧನೆಯಿದ್ದರೂ ಸಂಬಂ ಧಪಟ್ಟವರು ಅದನ್ನು ಅವಗಣಿಸುತ್ತಿ ದ್ದಾರೆ. ಇದರಿಂದ ಕ್ವಾರೆಗಳಲ್ಲಿ ತುಂಬಿರುವ ನೀರಿಗೆ ಅಕಸ್ಮಾತ್ ಬಿದ್ದು ಸಾವುನೋವು ಸಂಭವಿಸುತ್ತಿರುವುದಾಗಿ ದೂರಲಾಗಿದೆ. ಕಯ್ಯಾರು ಗ್ರಾಮ ಕಚೇರಿ ವ್ಯಾಪ್ತಿಯಲ್ಲಿ ಮಾತ್ರ ೨೫ರಷ್ಟು ಕೆಂಪು ಕಲ್ಲಿನ ಕ್ವಾರೆಗಳಿವೆ. …
Read more “ಕೆಂಪುಕಲ್ಲಿನ ಕ್ವಾರೆಗಳಲ್ಲಿ ತುಂಬಿಕೊಳ್ಳುತ್ತಿರುವ ಮಳೆನೀರು: ಅಪಾಯಭೀತಿ”