ಪೆರ್ಮುದೆಯಲ್ಲಿ ಕ್ರಿಸ್ಮಸ್ ಕ್ಯಾರಲ್ಸ್

ಕುಂಬಳೆ: ಕ್ರಿಸ್ತಜಯಂತಿಯ ಸಂದೇಶವನ್ನು ಹಂಚಿಕೊಂಡು ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ಐಸಿವೈಎಂ ಘಟಕದ ನೇತೃತ್ವದಲ್ಲಿ ಇಗರ್ಜಿ ವ್ಯಾಪ್ತಿಯ ಮನೆಗಳಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ಗಾಯನ ನಡೆಯಿತು. ಮೂರು ದಿನಗಳ ಕಾಲ ನಡೆದ ಕ್ಯಾರಲ್ಸ್‌ನಲ್ಲಿ ಸಹಾಯಕ ಧರ್ಮಗುರು ವಂ| ಫಾ| ಕ್ಲೋಡ್ ಕೋರ್ಡಾ ಭಾಗವಹಿಸಿದ್ದರು.

ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಕಾಂಗ್ರೆಸ್ ಮಾರ್ಚ್

ಕಾಸರಗೋಡು: ಜಿಲ್ಲೆಯ ಕಾಂಗ್ರೆಸ್ ಮಂಡಲ ಸಮಿತಿಗಳ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ  ಬೆಳಿಗ್ಗೆ  ಮಾರ್ಚ್ ನಡೆಸಲಾಯಿತು.   ಮುಖ್ಯಮಂತ್ರಿಯ ಅಂಗರಕ್ಷಕರು ಮತ್ತು ಪೊಲೀಸರು ಸಿಪಿಎಂ ಗೂಂಡಾಗಳೊಂದಿಗೆ ಕೈಬೆಸೆದು ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯು ಕಾರ್ಯಕರ್ತರ ಮೇಲೆ ರಾಜ್ಯ ವ್ಯಾಪಕ ದೌರ್ಜನ್ಯವೆಸಗುತ್ತಿದ್ದಾರೆಂದೂ ಅದನ್ನು ಪ್ರತಿಭಟಿಸಿ ಮಾರ್ಚ್ ನಡೆಸಲಾಗಿದೆ. ಬದಿಯಡ್ಕ ಠಾಣೆಗೆ ನಡೆದ ಮಾರ್ಚನ್ನು ಎಣ್ಮಕಜೆ ಪಂ. ಅಧ್ಯಕ್ಷ ಜೆ.ಎಸ್. ಸೋಮಶೇಖರ್ ಉದ್ಘಾಟಿಸಿದರು. ಕುಂಬ್ಡಾಜೆ, ಬದಿಯಡ್ಕ, ಎಣ್ಮಕಜೆ ಪಂಚಾಯತ್‌ಗಳ ಜಂಟಿ ಆಶ್ರಯದಲ್ಲಿ  ಮಾರ್ಚ್ ನಡೆದಿದೆ. ಶ್ಯಾಂ ಪ್ರಸಾದ್ ಮಾನ್ಯ ಅಧ್ಯಕ್ಷತೆ …

ಸೊಳ್ಳೆ ನಾಶಕ ದ್ರಾವಕ ಸೇವಿಸಿ ಒಂದೂವರೆ ವರ್ಷದ ಮಗು ಮೃತ್ಯು

ಕಾಸರಗೋಡು: ಸೊಳ್ಳೆ ನಾಶಕ ದ್ರಾವಕ ಸೇವಿಸಿ ಒಂದೂವರೆ ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಹೊಸದುರ್ಗ ಬಾವಾನಗರದ ಜಿ.ಪಿ. ಜಂಶೀರ್-ಪಿ.ಕೆ. ಅನ್‌ಸಿಫಾ ದಂಪತಿ ಪುತ್ರ ಜಿಸಐರಿನ್ (ಒಂದೂವರೆ ವರ್ಷ) ಸಾವನ್ನಪ್ಪಿದ ಮಗು. ಜಂಶೀರ್‌ರ ೧೯ ದಿನ ಪ್ರಾಯ ದ ಪುತ್ರ ಜಹಾನ್ ಮಾಲೀಕ್‌ನ ಮೊದಲ ಕೇಶಮುಂಡನೆ ಕಾರ್ಯ ಕ್ರಮ ಕಳೆದ ಭಾನುವಾರ ಅವರ ಮನೆಯಲ್ಲಿ ನಡೆಯುತ್ತಿತ್ತು. ಆಗ ಜಂಶೀರ್‌ರ ಮೂರು ವರ್ಷದ ಇನ್ನೊಂದು ಮಗು ಮತ್ತು ಜಿಸ ಐರಿನ್ ಮನೆಯ ಕೊಠಡಿಯೊಂ ದರಲ್ಲಿ ಆಟವಾಡುತ್ತಿದ್ದರು. …

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ೧೭.೨೮ ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಬದಿಯಡ್ಕ:   ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂ ಟಿವ್ ಆಫೀಸರ್ ಮೊಹಮ್ಮದ್ ಕಬೀರ್ ಬಿ.ಎಸ್  ನೇತೃತ್ವದ ತಂಡ ಬಳಕಿಲದಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ ಸ್ಕೂಟರೊಂದರಲ್ಲಿ ಸಾಗಿಸುತ್ತಿದ್ದ ೧೭.೨೮ ಲೀಟರ್ ಕರ್ನಾಟಕ ಮದ್ಯ (೧೮೦ ಎಂಎಲ್‌ನ ೯೬ ಪ್ಯಾಕೆಟ್) ಕರ್ನಾ ಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ.  ಸ್ಕೂಟರನ್ನೂ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿ ಅಡೂರು ಕೋಲತ್ತಿಲ ವೀಟಿಲ್‌ನ  ಬಾಲಕೃಷ್ಣ ಕೆ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ದಾಳಿ ಕಾರ್ಯಾಚರಣೆಯಲ್ಲಿ ಸಿಇಒಗಳಾದ ಮನೋಜ್ ಪಿ, ಮೋಹನ್ ಕುಮಾರ್ …

ಜಿಲ್ಲೆಯಲ್ಲಿ ವ್ಯಾಪಕಗೊಂಡ ಜುಗಾರಿ ದಂಧೆ: ಲಕ್ಷಾಂತರ ರೂಪಾಯಿಗಳ ವ್ಯವಹಾರ; ನಾಮಮಾತ್ರವಾಗುತ್ತಿರುವ ಪೊಲೀಸ್ ಕ್ರಮ

ಕಾಸರಗೋಡು: ಉತ್ಸವ ಕಾಲ ಆರಂಭಗೊಳ್ಳುವುದರೊಂದಿಗೆ ವಿವಿಧ ಕಡೆಗಳಲ್ಲಿ ಹಣವಿರಿಸಿ ಜುಗಾರಿ ದಂಧೆ ವ್ಯಾಪಕಗೊಂಡಿದೆ. ಪ್ರತೀ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿಗಳ ಜುಗಾರಿ ನಡೆಯುತ್ತಿ ದೆಯೆಂದು ತಿಳಿದುಬಂದಿದೆ. ಈ ಬಗ್ಗೆ ದೂರುಗಳು ಕೇಳಿಬಂದಿದ್ದರೂ ಸಂಬಂಧಪಟ್ಟವರ ಭಾಗದಿಂದ ಕ್ರಮ ಉಂಟಾಗುತ್ತಿಲ್ಲವೆಂಬ ಆರೋಪವುಂಟಾಗಿದೆ. ಉತ್ಸವ ಸ್ಥಳಗಳ ಸಮೀಪದ ಹಿತ್ತಿಲುಗಳಲ್ಲಿ ಜುಗಾರಿ ದಂಧೆ ಹಗಲು-ರಾತ್ರಿಯೆಂಬ  ವ್ಯತ್ಯಾಸವಿಲ್ಲದೆ ನಡೆಯುತ್ತಿದೆ. ಪ್ರತೀ ಕೇಂದ್ರದಲ್ಲೂ ಆಯಾ ಪ್ರದೇಶ ನಿವಾಸಿಗಳ ಬೆಂಬಲದೊಂದಿಗೆ ಈ ದಂಧೆ ನಡೆಯುತ್ತಿದೆ. ಇಂತಿಷ್ಟು ಮೊತ್ತ ನೀಡಿದರೆ  ಜುಗಾರಿಗೆ ಬೇಕಾದ ಸೌಕರ್ಯ ಒದಗಿಸಿಕೊಡುವುದಾಗಿ ಜುಗಾರಿ ದಂಧೆ ನಡೆಸುವವರಿಗೆ …

ಚಿನ್ನ ಕಳ್ಳಸಾಗಾಟದಲ್ಲಿ ಕೇರಳ ನಂ.೧

ಕಾಸರಗೋಡು: ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಾಟ ನಡೆಯುವ ರಾಜ್ಯಗಳ ಪೈಕಿ ಕೇರಳ ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದೆ.  ಕಂದಾಯ ಗುಪ್ತಚರ ವಿಭಾಗ (ರೆವೆನ್ಯೂ ಇಂಟೆಲಿಜೆನ್ಸ್) ತಯಾರಿಸಿ  ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದನ್ನು ಉಲ್ಲೇಖಿಸ ಲಾಗಿದೆ.  ಈ ವರದಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಾಗಿ ವಿದೇಶದಿಂದ ಕೇರಳಕ್ಕೆ ೨೨೯.೫೧ ಕಿಲೋ ಚಿನ್ನ ಕಳ್ಳ ಸಾಗಾಟ ಮೂಲಕ ತಲುಪಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಟ್ಟು ೩೧೭೩ ಪ್ರಕರಣ ಗಳನ್ನು ದಾಖಲಿಸಲಾಗಿದೆ. ವಿಮಾನ ಮಾರ್ಗ ಮತ್ತು ಸಮುದ್ರಮಾರ್ಗ ಮೂಲಕ ಭಾರತಕ್ಕೆ ಚಿನ್ನ …

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಜೆ.ಎನ್-೧: ನಿನ್ನೆ ಮಾತ್ರ ೨೯೨ ಮಂದಿಯಲ್ಲಿ ಸೋಂಕು ಪತ್ತೆ; ಎರಡು ಸಾವು

ತಿರುವನಂತಪುರ:  ಕೇರಳದಲ್ಲಿ ಕೊರೊನಾ ಉಪತಳಿ (ರೂಪಾಂತರ ವೈರಸ್ ಜೆ.ಎನ್-೧) ಸೋಂಕು ವ್ಯಾಪಕವಾಗಿ ಹರಡತೊಡಗಿದೆ. ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರಸಲಹೆ ಪಡೆಯುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ಇದಕ್ಕೆ ಹೊಂದಿಕೊಂಡು ರಾಜ್ಯದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಕೊರೊನಾ ವೈರಸ್‌ನ ಹೊಸ ತಳಿ ಜೆ.ಎನ್-೧ನ್ನು  ಆರ್‌ಟಿಪಿಸಿಆರ್ ಮೂಲಕ ಪರೀಕ್ಷಿಸಿ  ಸೋಂಕು ತಗಲಿದೆಯೇ ಎಂಬುವುದನ್ನು ಖಾತರಿಪಡಿಸಲಾಗುತ್ತಿದೆ.  ರೂಪಾಂತರಿ ಜೆ.ಎನ್-೧ನ್ನು  ವಿಶ್ವ ಆರೋಗ್ಯ ಸಂಸ್ಥೆ ಆಸಕ್ತಿಯ ರೂಪಾಂತರ ಎಂದು ವರ್ಗೀಕರಿಸಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಉಂಟುಮಾಡುವುದಿಲ್ಲವೆಂದು …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಪೆರ್ಮುದೆ ಪಳ್ಳದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಮಿಲ್ಲಿಯ ೧೬ ಪ್ಯಾಕೆಟ್ ಕರ್ನಾಟಕ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಿದೂರು ಕಳತ್ತೂರು ಪಂಜಿಕ್ಕಲ್‌ನ ಜೋನ್ ಪೋಲ್ ಡಿ (೩೬) ಎಂಬಾತನನ್ನು ಸೆರೆಹಿಡಿ ಯ ಲಾಗಿದೆ. ನಿನ್ನೆ ಸಂಜೆ ಕುಂಬಳೆ ರೇಂಜ್ ಅಬಕಾರಿ ಪ್ರಿವೆಂಟೀವ್ ಆಫೀಸರ್ ಮನಾಫ್ ಕೆ.ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೆರ್ಮುದೆ ಪಳ್ಳ ಸಹಿತ ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಕರ್ನಾಟಕ ಮದ್ಯ ಮಾರಾಟವಾಗು ತ್ತಿದೆಯೆಂಬ ದೂರಿನ ಹಿನ್ನೆಲೆಯಲ್ಲಿ  ಕಾರ್ಯಾ ಚರಣೆ ನಡೆಸ ಲಾಗಿದೆಯೆಂದು …

ಇಬ್ಬರು ಗೃಹಿಣಿಯರ ನಾಪತ್ತೆ

ಹೊಸದುರ್ಗ: ಎರಡು ವ್ಯತ್ಯಸ್ಥ ಸ್ಥಾನಗಳಿಂದ ಇಬ್ಬರು ಗೃಹಿಣಿಯರು ನಾಪತ್ತೆಯಾಗಿದ್ದಾರೆ. ಪನತ್ತಡಿ ಎರಿಂ ಞಿಲಂಕೋಡ್ ಪಿ.ಜಿ. ಅನೀಶ್‌ರ ಪತ್ನಿ ತ್ರೇಸ್ಯಮ್ಮ ಯಾನೆ ಮೇರಿ (೩೬) ನಿನ್ನೆ ಬೆಳಿಗ್ಗಿನಿಂದ ನಾಪತ್ತೆಯಾಗಿರುವುದಾಗಿ  ದೂರಲಾಗಿದೆ. ಪೂಡಂಕಲ್ಲ್‌ನ ತಾಲೂಕು ಆಸ್ಪತ್ರೆಗೆಂದು ತಿಳಿಸಿ ಮನೆ ಯಿಂದ ಈಕೆ ತೆರಳಿದ್ದರೆನ್ನಲಾಗಿದೆ. ಈ ಬಗ್ಗೆ ಪತಿ ನೀಡಿದ ದೂರಿಂತೆ ರಾಜಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅದೇ ರೀತಿ ವೆಳ್ಳರಿಕುಂಡ್ ಭೀಮನಡಿ ಕೂರಾಂಕುಂಡ್ ನಿವಾಸಿ ಉಂಡಚ್ಚಿ (೬೯) ಎಂಬವರು ನಿನ್ನೆ ಸಂಜೆ ೬ ಗಂಟೆ ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ …

ಮಲಬಾರ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕನ ಮೊಬೈಲ್ ಫೋನ್ ಕಳವು: ಕುಖ್ಯಾತ ಆರೋಪಿ ಸೆರೆ

ಕಣ್ಣೂರು: ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಮೊಬೈಲ್ ಫೋನ್ ಹಾಗೂ ನಗದು ಕಳವುಗೈಯ್ಯುವ ಕುಖ್ಯಾತನನ್ನು ಸೆರೆ ಹಿಡಿಯಲಾಗಿದೆ. ಬಿಹಾರ್ ನಿವಾಸಿ ಮುಹಮ್ಮದ್ ಅಜರುದ್ದೀನ್ (೩೦) ಎಂಬಾತನನ್ನು ರೈಲ್ವೇ ಪೊಲೀಸರು ತಿರೂರಿನಲ್ಲಿ ಸೆರೆ ಹಿಡಿದಿದ್ದಾರೆ. ಮಂಗಳೂರಿಗೆ ತೆರಳುತ್ತಿದ್ದ ಮಲ ಬಾರ್ ಎಕ್ಸ್‌ಪ್ರೆಸ್‌ನ ಪ್ರಯಾಣಿ ಕನಾದ ಅರ್ಜುನ್ ಎಂಬವರ ಜೇಬಿನಿಂದ ಮೊಬೈಲ್ ಫೋನ್ ಕಳವುಗೈದ ಪ್ರಕರಣದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ಈತನ ಬ್ಯಾಗ್ ಪರಿಶೀಲಿಸಿದಾಗ ಕಳವುಗೈದದ್ದೆಂದು ಶಂಕಿಸುವ ಐಫೋನ್ ಸಹಿತ ನಾಲ್ಕು ಫೋನ್‌ಗಳು ಹಾಗೂ ಚಾರ್ಜರ್‌ಗಳನ್ನು ಪತ್ತೆಹಚ್ಚಲಾಗಿದೆ. ಈತನನ್ನು ಕಲ್ಲಿಕೋಟೆ ರೈಲ್ವೇ …